ಛತ್ರಪತಿ ಶಿವಾಜಿ ಮಹಾರಾಜ್ ವಸ್ತುಸಂಗ್ರಹಾಲಯ, ಮುಂಬಯಿ

ಛತ್ರಪತಿ ಶಿವಾಜಿ ಮಹಾರಾಜ ವಸ್ತು ಸಂಗ್ರಹಾಲಯ
(formerly Prince of Wales Museum of Western India)[]
छत्रपती शिवाजी महाराज वस्तुसंग्रहालय
[[File:
CSMVS building of Mumbai
|250px|alt=]]
Lua error in ಮಾಡ್ಯೂಲ್:Location_map/multi at line 27: Unable to find the specified location map definition: "Module:Location map/data/India Mumbai" does not exist.
ಸ್ಥಾಪನೆ೧೦ ಜನವರಿ, ೧೯೨೨
ಸ್ಥಳಮಹಾತ್ಮ ಗಾಂಧಿ ಮಾರ್ಗ್, ಕೋಟೆ, ಮುಂಬಯಿ, ಮಹಾರಾಷ್ಟ್ರ
ನಿರ್ದೇಶಾಂಕಗಳು18°55′36″N 72°49′56″E / 18.926667°N 72.832222°E / 18.926667; 72.832222
ಸಂಗ್ರಹದ ಗಾತ್ರapprox. 50,000 artefacts []
ನಿರ್ದೇಶಕಸಬ್ಯಸಾಚಿ ಮುಖರ್ಜಿ []
ಜಾಲತಾಣChhatrapati Shivaji Maharaj, Vastu Sangrahalaya ;formerly prince of wales museum of western india
'ಪುಥಳಿಯ ಒಂದು ಪಾರ್ಶ್ವದಲ್ಲಿ ಮ್ಯೂಸಿಯಮ್ ಕಟ್ಟಡಕ್ಕೆ ಪ್ರಿನ್ಸ್ ಆಫ್ ವೇಲ್ಸ್ ಶಿಲಾನ್ಯಾಸ ಮಾಡುತ್ತಿರುವ ಉಬ್ಬುಶಿಲ್ಪ (ಮುಂದೆ ಅವರು ೫ ನೇ ಜಾರ್ಜ್ ಚಕ್ರವರ್ತಿಗಳಾದರು'
'ಮ್ಯೂಸಿಯಮ್ ಮುಂದೆ, ೫ ನೇ ಜಾರ್ಜ್ ಚಕ್ರವರ್ತಿಯ ಪುಥಳಿ'(ಆಗ ಅವರು ಪ್ರಿನ್ಸ್ ಆಫ್ ವೇಲ್ಸ್ ಪದವಿಯಲ್ಲಿದ್ದರು)
'ಛತ್ರಪತಿ ಶಿವಾಜಿ ಮಹಾರಾಜ್ ಮ್ಯೂಸಿಯೆಮ್ ನ ಮುಂಭಾಗ'
'ವಸ್ತುಸಂಗ್ರಹಾಲಯದ ಮತ್ತೊಂದು ಪಾರ್ಶ್ವ'

ಛತ್ರಪತಿ ಶಿವಾಜಿ ಮಹಾರಾಜ್ ಮ್ಯೂಸಿಯೆಮ್ [] ಎಂದು ಕರೆಯಲ್ಪಡುವ, '(The Prince of Wales Museum of Western India', Mumbai, India) , ೨೦ ನೆಯ ಶತಮಾನದ ಮೊದಲ ಹಂತದಲ್ಲೇ ಸ್ಥಾಪಿಸಲ್ಪಟ್ಟಿತು. ಮುಂಬಯಿನ ಪ್ರತಿಶ್ಠಿತವ್ಯಕ್ತಿಗಳಿಂದ ಹಾಗೂ ಮುಂಬಯಿ ಸರ್ಕಾರದ ಸಹಾಯದಿಂದ, 'ಪ್ರಿನ್ಸ್ ಆಫ್ ವೇಲ್ಸ್' (Prince of Wales), ಭಾವಿ ಇಂಗ್ಲೆಂಡ್ ಅರಸ, 'King George ೫ of the United Kingdom', ರವರ ಸ್ಮರಣಾರ್ಥವಾಗಿ ನಿರ್ಮಿಸಲಾಯಿತು. ಈದು ದಕ್ಷಿಣ ಮುಂಬಯಿ ನ ಪ್ರಮುಖತಾಣಗಳಾದ, ಎಲ್ಫಿನ್ ಸ್ಟನ್ ಕಾಲೇಜ್, ಮುಂಬಯಿ, ಡೇವಿಡ್ ಸಸೂನ್ ಲೈಬ್ರೆರಿ, ರಿದಮ್ ಹೌಸ್, ಜೆಹಾಂಗೀರ್ ಆರ್ಟ್ ಗ್ಯಾಲರಿ, ಮುಂಬಯಿ, ಪೋಲೀಸ್ ಆಯುಕ್ತ, ರೀಗಲ್ ಸಿನೆಮಾ ಹಾಗೂ "ಗೇಟ್ ವೆ ಆಫ್ ಇಂಡಿಯ," ಸ್ಮಾರಕದ ಬಳಿ ಇದೆ.[]

ಮುಂಬಯಿನಗರದ ಸ್ಥಳೀಯರ ಒಪ್ಪಿಗೆ ಸಿಕ್ಕಿತು

[ಬದಲಾಯಿಸಿ]

ವಸ್ತುಸಂಗ್ರಹಲಯವನ್ನು ಕಟ್ಟಲು, ಹಾಗೂ ಅದರ ವಿನ್ಯಾಸವನ್ನು ಸಮರ್ಥಿಸಲು, ಸಲಹೆಗಳಿಗಾಗಿ ಸಾರ್ವಜನಿಕರ ಸಭೆಸೇರಿಸಲಾಗಿತ್ತು. ಬ್ರಿಟಿಷ್ ಅಧಿಕಾರಿಗಳಲ್ಲಿ ಕೆಲವರನ್ನು ಬಿಟ್ಟರೆ, ಮಿಕ್ಕವರು ಸಾರ್ವಜನಿಕರ ಮನವೊಲಸಿಕೊಂಡಿದ್ದರು. ಜೂನ್ ೨೨, ೧೯೦೪ ರಂದು, ಕರೆಯಲಾದ ತುರ್ತು ಸಮಿತಿಯಲ್ಲಿ ತೆಗೆದುಕೊಂಡ ಕೆಲವು ತೀರ್ಮಾನಗಳ ವಿವಿರಗಳು ಹೀಗಿವೆ : ೧. ಕಟ್ಟಡವು ಒಳ್ಳೆಯ ಭವ್ಯ ಮುಖದ್ವಾರ, ಹಾಗೂ ಸುಂದರವಾದ ನಿರ್ಮಾಣ ಶೈಲಿಯಲ್ಲಿರಬೇಕು. ಈದು ಅತ್ಯಂತ ಬೆಲೆಬಾಳುವ 'ಅರ್ಥಚಂದ್ರಾಕೃತಿ,' ಯ ಪ್ರಮುಖವಾದ ಸ್ಥಳದಲ್ಲಿದೆ. ೨. ಇದರ ನಿರ್ಮಾಣಕಾರ್ಯ ಸ್ಥಳೀಯ ಶಿಲ್ಪ ಕಲೆಯ ಪ್ರತಿಭೆಯಲ್ಲಿ ಕಾಲಕಾಲದಲ್ಲಿ ಆದ ಬದಲಾವಣೆಗಳನ್ನು ಪ್ರತಿಬಿಂಬಿಸುವಂತಿರಬೇಕು. ಸಮಿತಿ ಇದನ್ನು ಸಾಧಿಸುವಲ್ಲಿ ವಿಳಂಬಮಾಡಲಿಲ್ಲ. ಮಾರ್ಚ್ ೧, ೧೯೦೭, ರಂದು, ಆಗಿನ ಮುಂಬಯಿನ ಬ್ರಿಟಿಷ್ ಸರ್ಕಾರ ಮ್ಯೂಸಿಯಮ್ ಕಮಿಟಿಗೆ, 'ಅರ್ಥಚಂದ್ರಾಕೃತಿಯ ಜಾಗ,' ವನ್ನು ಬಿಟ್ಟುಕೊಟ್ಟರು. "Crescent Site ಇದು ದಕ್ಷಿಣಮುಂಬಯಿ ನ ದಕ್ಷಿಣದ ಕೊನೆಯಲ್ಲಿ, ಈಗಿನ 'ಮಹಾತ್ಮಾಗಾಂಧಿ ರಸ್ತೆ',ಯಲ್ಲಿದೆ.

'ವಸ್ತುಸಂಗ್ರಹಾಲಯಕ್ಕೆ ಗೋಲ್ ಗುಂಬಝ್' ಶೈಲಿಯ ಕಮಾನುಗಳು

[ಬದಲಾಯಿಸಿ]

ಈ ಕಟ್ಟಡ ನಿರ್ಮಾಣಕ್ಕೆ ಬೇಕಾದ ನಕ್ಷೆಯನ್ನು ತಯಾರಿಸಲು, ಸ್ಥಳೀಯ ಪ್ರಮುಖ ನಾಗರಿಕರಿಗೆ ಮನವಿ ಸಲ್ಲಿಸಲಾಯಿತು. ಒಂದು ಸಭೆಯನ್ನು ಕರೆದು ಅದರಲ್ಲಿ ಮುಕ್ತವಾಗಿ ಎಲ್ಲರೂ ತಮ್ಮ-ತಮ್ಮ ಉತ್ತಮವಾದ ನಕ್ಷೆಯನ್ನು ಕೊಡಲು ಕರೆನೀಡಲಾಯಿತು. ಆಗಿನ ಕಾಲದ ಸುಪ್ರಸಿದ್ಧ, ಬ್ರಿಟಿಷ್ ಕಟ್ಟಡ ನಿರ್ಮಾಪಕ, '(George Wittet)' ಜಾರ್ಜ್ ವಿಟೆಟ್, ರವರಿಗೆ ಈ ಕಟ್ಟಡ ನಿರ್ಮಾಣದ ಕಾರ್ಯವನ್ನು, ೧೯೦೯ ರಲ್ಲಿ ಒಪ್ಪಿಸಲಾಯಿತು.[]

'ಜಾರ್ಜ್ ವಿಟೆಟ್ ಒಬ್ಬ ಕುಶಲ ಹಾಗೂ ಪ್ರಭಾವಿ ಕಟ್ಟಡ ನಿರ್ಮಾಪಕ'

[ಬದಲಾಯಿಸಿ]

'ಜಾರ್ಜ್ ವಿಟೆಟ್' ರವರು, ತಮ್ಮ ಹಿರಿಯ ಅಧಿಕಾರಿ, ಹಾಗೂ ಗೆಳೆಯ, '(John Begg)' ರವರ ಜೊತೆಗೂಡಿ, 'ಜನರಲ್ ಪೋಸ್ಟ್ ಆಫೀಸ್ ಕಟ್ಟಡ,' ವನ್ನು ಕಟ್ಟಿದ್ದರು. ಇವರು, 'ಟಾಟಾರವರ ಬಾಂಬೆ ಹೌಸ್,' 'ಕೋರ್ಟ್ ಆಫ್ ಸ್ಮಾಲ್ ಕಾಸೆಸ್, ಆಫ್ ಇಂಡಿಯ' ಮುಂತಾದ ಹಲವು ಇಮಾರತ್ ಗಳ ನಿರ್ಮಾಪಕರು ಸಹಿತ. ವಸ್ತುಸಂಗ್ರಹಾಲಯದಲ್ಲಿ, ಪುರಾತನ ಕಾಲದ ಚಾರಿತ್ರಿಕ ವಸ್ತುಗಳ ಪ್ರದರ್ಶನವಿದೆ. ವಿದೇಶದ ವಸ್ತುಗಳೂ ಇವೆ. 'Indus Valley Civilization' ನ ಕುಶಲಕೆಲಸಗಾರಿಕೆ ನಮೂನೆಗಳು, 'ಭಗ್ನಾವಶೇಷಗಳು (ರೆಲಿಕ್ಸ್),' ಪುರಾತನ ಭಾರತದ, ಗುಪ್ತರಕಾಲದ, ಮತ್ತು ಮೌರ್ಯರಕಾಲದ ಕಲಾಸಂಗ್ರಹಗಳು, ಸುಂದರವಾಗಿ ಪ್ರದರ್ಶನಗೊಂಡಿವೆ.

೫ ನೇ ಜಾರ್ಜ್ ಚಕ್ರವರ್ತಿಯ ಕನಸಿನ ಮಂದಿರ

[ಬದಲಾಯಿಸಿ]

'Prince of Wales Museum of Western India,' ಕಟ್ಟಡದ ಶಿಲಾನ್ಯಾಸವನ್ನು ಜಾರ್ಜ್ ೫ ನೆಯ ದೊರೆ, ಡಿಸೆಂಬರ್ ೧೯೦೫ ರಲ್ಲಿ, ಮಾಡಿದರು. ಕಟ್ಟಡ ನಿರ್ಮಾಣದ ಕೆಲಸ ಕೂಡಲೇ ಶುರುವಾಯಿತು. ಪುರಾತನ ಹಾಗೂ ಮಧ್ಯಕಾಲದ 'ಬಾಸಾಲ್ಟ್' ಕಲ್ಲಿನಿಂದ ಕಟ್ಟಿದೆ. ಕಟ್ಟಡದ ಮಧ್ಯಭಾಗದ ವರ್ತುಲಾಕೃತಿ, 'ಬಿಜಾಪುರ್ ನ ಗೋಲ್ ಗುಂಬಝ್,' ನಿಂದ ಪ್ರೇರಣೆ, ಸಿಕ್ಕಿದೆ. 'ಗೋಲ್ಕೊಂಡ ಕೋಟೆಯ ಮಾದರಿ'ಯನ್ನು ಸಮಯೋಚಿತವಾಗಿ ಬಳಸಿಕೊಳ್ಳಲಾಗಿದೆ.

ಮ್ಯೂಸಿಯಮ್ ಗೆ ಅರ್ಧ ಚಂದ್ರಾಕೃತಿಯ ಸ್ಥಳವನ್ನು ಕೊಡಲಾಯಿತು

[ಬದಲಾಯಿಸಿ]

ಸುಂದರವಾದ ಉದ್ಯಾನವನ್ನು ನಿರ್ಮಿಸಿ, ಅರ್ಥಚಂದ್ರಾಕೃತಿಯ ಭೂಮಿಯಲ್ಲಿ ಕಲೆಯ ವಿಭಾಗದಲ್ಲಿ ಹಲವಾರು ಹೊಸ-ಹೊಸ ಸಂಗ್ರಹಗಳನ್ನು ಕಲೆಹಾಕಿದೆ. ಭಾರತದ ಕಲಾ ಚಿತ್ರಗಳು, ಅವುಗಳಲ್ಲಿನ ವ್ಯತ್ಯಾಸ,ನಡೆದುಬಂದ ರೀತಿ. ಭಾರತೀಯ ವರ್ಣಚಿತ್ರಕಲೆ ಬೆಳೆದುಬಂದ ರೂಪವನ್ನು ಕಾಣಬಹುದು.

  • '೧೧-೧೨ ನೆಯ ಶತಮಾನದ ತಾಳೆಯ ಗರಿಯಲ್ಲಿ ಕೈಬರಹಗಳು',
  • '೧೯ ನೆಯ ಶತಮಾನದ ಪೂರ್ವಕಾಲದ,'ಪಹಾರಿ ವರ್ಣಚಿತ್ರಕಲೆಗಳು',
  • 'ಮೀನಿಯೇಚರ್ ವರ್ಣಚಿತ್ರಕಲೆ' ಯ ಎಲ್ಲ ಪ್ರಕಾರಗಳನ್ನು ನಾವು ವೀಕ್ಷಿಸಬಹುದು.
  • 'ರಾಜ್ಕೋಟ್', 'ಮುಘಲ್', 'ಪಹಾರಿ', ಮತ್ತು 'ಧಕ್ಕನಿ ಶೈಲಿ', ಪ್ರತಿ ಶೈಲಿಯ ವರ್ಣಚಿತ್ರಕಲೆಯಲ್ಲೂ ಬಣ್ಣ ಹಾಗೂ ವಿನ್ಯಾಸಗಳಲ್ಲಿ ಇರುವ ವೈವಿಧ್ಯತೆಗಳು ಗಮನಾರ್ಹವಾಗಿವೆ.
  • 'ಛತ್ರಪತಿ ಶಿವಾಜಿ ಮಹಾರಾಜ್ ಮ್ಯೂಸಿಯೆಂ ಕಟ್ಟಡ', ಬೆಳೆದುಬಂದ ಬಗೆ.[]

'ಸರ್ ರತನ್ ಟಾಟಾ'ರವರು ಸಂಗ್ರಹಿಸಿ ಸಮರ್ಪಿಸಿದ ಭವ್ಯಕಲಾಕೃತಿಗಳು

[ಬದಲಾಯಿಸಿ]

'ಸರ್. ರತನ್ ಟಾಟಾ' ರವರ 'ಮುಘಲ್','ರಾಜಾಸ್ಥಾನಿ', ಮತ್ತು ವಿದೇಶಗಳ ವಸ್ತುಗಳ ಅಮೂಲ್ಯ ಕಲಾಸಂಗ್ರಹಗಳು 'ವಸ್ತುಸಂಗ್ರಹಾಲಯ'ದ ಘನತೆಯನ್ನು ಹೆಚ್ಚಿಸಿದವು. ೧೬-ರಿಂದ ೧೯ ನೆಯ ಶತಮಾನದ, ಮುಘಲ್ ಹಾಗೂ ರಾಜಾಸ್ಥಾನಿ ಶೈಲಿಯ ವರ್ಣಚಿತ್ರಗಳ ಪರಂಪರೆಯನ್ನು ನೋಡಿ ಅನಂದಿಸಬಹುದು. ಪುರಾತನ ಶೈಲಿಯ ಪ್ರಭಾವದೊಡನೆ, ಸ್ಥಳೀಯ ಭಾರತೀಯ ಚಿತ್ರಕಲೆ, ಹಾಗೂ ಪರ್ಶಿಯನ್, ಟರ್ಕಿಶ್, ಮತ್ತು ಮಧ್ಯ ಏಶಿಯಾದ ಕಲಾ-ವಸ್ತುಗಳ ಭಂಡಾರವಿದೆ.

ಒಳಭಾಗದ ಮೇಲೆ ಕಾಣಿಸುವ ಸೂರಿನ ಮನಮೋಹಕ ದೃಶ್ಯ

[ಬದಲಾಯಿಸಿ]

'ಮ್ಯೂಸಿಯೆಮ್,' ಒಳಗೆ ತಲೆಯೆತ್ತಿ ನೋಡಿದರೆ, 'ಭವ್ಯವಾದ ಗೋಳಾಕೃತಿಯ ಭಾರಿ-ಸೂರು,' ಗೋಚರಿಸುತ್ತದೆ.'ಮ್ಯೂಸಿಯೆಮ್,' ನ ಪ್ರವೇಶದ್ವಾರದಲ್ಲೇ, ಬೃಹದಾಕಾರದ ಎರಡು ಗಡಿಯಾರಗಳು ಕಲಾರಸಿಕರನ್ನು ಆಕರ್ಷಿಸುತ್ತವೆ. ಅವುಗಳನ್ನು 'ಸರ್. ರತನ್ ಟಾಟಾ' ದಾನಮಾಡಿದ್ದಾರೆ. ಗಡಿಯಾರಗಳ ನಮೂನೆ, ಅವುಗಳ ಘಂಟಾನಾದ, ಹಾಗೂ ಅತ್ಯುತ್ತಮ, 'ಟೀಕ್,' ಮರದ ಹೊರಕವಚದಲ್ಲಿನ ಕೆತ್ತನೆಕೆಲಸ ಎಲ್ಲರಮನಸ್ಸನ್ನು ಸೆಳೆಯುತ್ತದೆ. ಈ ಗಡಿಯಾರಗಳನ್ನು 'ಮದ್ರಾಸ್,' ನಿಂದ ಅವರು ಕೊಂಡು ತಂದಿದ್ದರು. ಆರ್ಟ್ಸ್ ವರ್ಗದಲ್ಲಿ, ಭಾರತೀಯ ಕರ-ಕುಶಲಕಲೆಗಳ ಅಪಾರಸಂಗ್ರಹವಿದೆ. ಮರದಕೆತ್ತನೆ, ಕಲ್ಲಿನ ಕೆತ್ತನೆ, ಶಾಸನಗಳು, ಉಡುಪುಗಳು, ಆನೆದಂತ, ಕಂಚು ಮತ್ತು ಮಿಶ್ರಲೋಹಗಳಲ್ಲಿ ಕೆತ್ತನೆಕೆಲಸಗಳು, ಪಿಂಗಾಣಿ ಮಣ್ಣಿನ ಭಾರಿ ಭರಣಿಗಳು, ಹೂಜಿಗಳು, ಚೈನ, ದೇಶದ ವೈವಿಧ್ಯಮಯ ಉಪಕರಣಗಳನ್ನು ಕಾಣಬಹುದು.

'ವೀನಸ್ ಕನ್ಯೆಯ ಸುಂದರ ಶಿಲ್ಪಕೃತಿ'

[ಬದಲಾಯಿಸಿ]

ವಿವಿಧ ಆಕಾರಗಳ, ಅತಿಚಿಕ್ಕ, ಹಾಗೂ ಭಾರಿ ಪ್ರಮಾಣದ ಮಿಂಗ್ ಹೂಜಿಗಳು, ಒಂದು ಕೊಠಡಿಯತುಂಬಾ ಕಾಣಿಸುತ್ತವೆ. 'ಮುಖ್ಯಹಾಲ್' ನಲ್ಲಿ ಒಂದು ಚಿಕ್ಕ 'ನೀರಿನ ಕಾರಂಜಿ 'ಇದೆ. ಮಧ್ಯಭಾಗದಲ್ಲಿ 'ವೀನಸ್ ಕನ್ಯೆ'ಯ, 'ಅಮೃತಶಿಲೆಯ, ನಗ್ನಪ್ರತಿಮೆ' ಯಿದೆ. ಈ ಕಲಾಕೃತಿಯ ಸೌಂದರ್ಯ, ಮೆಚ್ಚುಗೆಗಳಿಸಿದೆ. ಅಲ್ಲಿಂದ, ನೇರವಾಗಿ, ಮೆಟ್ಟಿಲುಗಳನ್ನು ಹತ್ತಿ, ಮೇಲಿನಮಹಡಿಗಳಲ್ಲಿ 'ಸಜಾವಟ್,' ಮಾಡಿರುವ ವೈವಿಧ್ಯಮಯ ಕಲಾಕೃತಿಗಳನ್ನು ನೋಡುತ್ತಾ ಸಾಗಬಹುದು.

ದಲ್ಲಿ, ಭಾರತದ ತಮಿಳುನಾಡಿನಿಂದ, ಕಾಶ್ಮೀರದವರೆಗೆ ಮತ್ತು ಪಶ್ಚಿಮಭಾರತದ ಸೋಮನಾಥ್ ದೇವಾಲಯದಿಂದ, ಪೂರ್ವಭಾರತದ ಒರಿಸ್ಸ, ಬೆಂಗಾಲ್ ನ ಎಲ್ಲ ಕರಕುಶಲ ವಸ್ತುಗಳನ್ನು ನೋಡಬಹುದು. ನೇಪಾಳ್, ಭೂತಾನ್, ಮತ್ತು ಉತ್ತರಪೂರ್ವ ರಾಜ್ಯಗಳ ಭವ್ಯ ಕಲಾವಸ್ತುಗಳು, ಸಾಮಗ್ರಿಗಳನ್ನು ನೋಡಬಹುದು. ರಾಜ-ಮಹಾರಾಜರ ಕತ್ತಿ, ಗುರಾಣಿ, ಈಟಿ, ಬಿಲ್ಲು-ಬಾಣ, ಕವಚಗಳು, ತಲೆಟೋಪಿಗಳು, ಖಡ್ಗಗಳು, ಮತ್ತು ಇನ್ನಿತರ ಆಯುಧಗಳನ್ನು ಜೋಡಿಸಿ ಇಟ್ಟಿದ್ದಾರೆ. ಅನೇಕ ಭಾರತೀಯ ಮತ್ತು ಬ್ರಿಟಿಷ್ ಪ್ರಮುಖ ವ್ಯಕ್ತಿಗಳ, ಬ್ರಿಟಿಷ್ ಅಧಿಕಾರಿಗಳ, ಬಾಂಬೆ ಗವರ್ನರ್ ಗಳ, ಪುಟ್ಟ ಅಮೃತಶಿಲೆಯ ಪ್ರತಿಮೆಗಳನ್ನು ಅಲ್ಲಲ್ಲಿ ಕಾಣಬಹುದು.

ಈ ವಿಭಾಗದಲ್ಲಿ, ನೂರಾರು ನಮೂನೆಯ ಚಿಟ್ಟೆಗಳು, ಹುಲಿ, ಸಿಂಹ, ಜಿಂಕೆ, ಕಾಡುನಾಯಿ, ತಿಮಿಂಗಿಲ, ಭಾರಿ ಸ್ಟಾರ್ ಮೀನುಗಳು, ವೈವಿಧ್ಯಮಯ ಪಕ್ಷಿಗಳು, ವೈವಿಧ್ಯಮಯ ಹಾವುಗಳು, ಪಕ್ಷಿಗಳನ್ನು, ಅತ್ಯಂತ ಕಲಾತ್ಮಕವಾಗಿ ಓರಣಮಾಡಿದ್ದಾರೆ.

ಈ ವಿಭಾಗದಲ್ಲಿ, 'ರಾಜಾರವಿವರ್ಮ' ರ, ಅತ್ಯಂತ ಸುಪ್ರಸಿದ್ಧ ವರ್ಣಚಿತ್ರಗಳು, ರೇಖಾಚಿತ್ರಗಳು, ಹಾಗೂ 'ಸರ್. ರತನ್ ಟಾಟಾ', ರವರ ಯೂರೋಪಿಯನ್ ಕಲಾಸಂಗ್ರಹಗಳಿವೆ. ಇವುಗಳು ಅತಿಭಾರಿ ಪ್ರಮಾಣದ ರೋಚಕ 'ಮುರಾಲ್' ತರಹದ ಚಿತ್ರಗಳಿಗೆ, ರಂಗುರಂಗಿನ ಕಟ್ಟು ಹಾಕಿ ಆಕರ್ಷಕ ರೀತಿಯಲ್ಲಿ ರಸಿಕರ ಮುಂದಿಟ್ಟಿದ್ದಾರೆ 'ರತನ್', ಕಲಾರಾಧಕರು. ಧಾರಾಳಿಗಳು. ಇವರು, 'ಜಮ್ ಶೆಟ್ ಜಿ. ನುಝರ್ ವಾನ್ ಟಾಟ', ರವರ ಎರಡನೆಯ ಪುತ್ರರು. ರತನ್ ಟಾಟರವರ ವಸ್ತುಗಳು, ಅತ್ಯಂತ ಹೆಚ್ಚು ಮಾತ್ರದಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ. ಅವರು ವಿಶ್ವದಲ್ಲೆಲ್ಲಾ ಸುತ್ತಿ, ಮುಂಬಯಿನ ವಸ್ತುಸಂಗ್ರಹಾಲಯಕ್ಕೆಂದೇ ಚುನಾಯಿಸಿ, ಖರೀದಿಸಿ ತಂದು ಉಡುಗೊರೆಯಾಗಿ ಕೊಟ್ಟ ಹಲವಾರು 'ವಿಶೇಷಸಂಗ್ರಹಗಳು,' ಮನಮೋಹಕವಾಗಿವೆ.

'ಮ್ಯೂಸಿಯೆಮ್ ನ ಧೋರಣೆಗಳು'

[ಬದಲಾಯಿಸಿ]

ವಸ್ತುಸಂಗ್ರಹಾಲಯದ ಧೋರಣೆಯಮೇರೆಗೆ, ಈ ತಾಣವನ್ನು ಅತ್ಯಂತ ಹೆಚ್ಚಿನ ಪ್ರಮುಖ ಭಾರತೀಯಕಲೆ,ಸಂಸ್ಕೃತಿ, ಹಾಗೂ, ಶೈಕ್ಷಣಿಕ ಕ್ಷೇತ್ರವಾಗಿರಲು ಪ್ರಯತ್ನವನ್ನು ಕಾಣಬಹುದು.

  • ೧. Art, (ಕಲೆ),
  • ೨. Archaeology, (ಶಿಲ್ಪಶಾಸ್ತ್ರ).
  • ೩. Natural history. (ನೈಸರ್ಗಿಕ ಚರಿತ್ರೆ).
  • ೪.'Picture gallery' (ಪಿಕ್ಚರ್ ಗ್ಯಾಲರಿ).

ಈ ವಿಭಾಗದಲ್ಲಿ, ಮೊಘಲ್ ಮತ್ತು ರಾಜಾಸ್ಥಾನಿ, ಪೇಂಟಿಗ್ ಗಳು ಮತ್ತು ಆ ಸಮಯದ ಭಾರತೀಯ ಚಿತ್ರಕಾರರು, 'ಮೀನಿಯೆಚರ್ ಚಿತ್ರಗಳು', 'ಯೂರೋಪಿಯನ್', ಹಾಗೂ ಸಮಕಾಲೀನ ಭಾರತೀಯ ಚಿತ್ರಕಾರರು, ಅಮೋಘವಾದ, 'ಅಜಂತ ಗುಹಾಂತರ್ದೇವಾಲಯ', ಭಿತ್ತಿಚಿತ್ರಗಳ ಪ್ರತಿಗಳು, ಇತ್ಯಾದಿ.

ಮ್ಯೂಸಿಯೆಂ ನಾಗರಿಕರಿಗೆ ಲಭ್ಯವಾದದ್ದು ೧೯೨೨ ರಲ್ಲಿ

[ಬದಲಾಯಿಸಿ]

ಜನವರಿ, ೧೦, ೧೯೨೨ ರಲ್ಲಿ, 'ಮ್ಯೂಸಿಯೆಮ್,' ಸಾರ್ವಜನಿಕರಿಗೆ ವೀಕ್ಷಿಸಲು ಲಭ್ಯವಾಯಿತು. ಮುಂಬಯಿನ ಗವರ್ನರ್, ಲಾರ್ಡ್ ಲಾಯ್ಡ್ ರವರ ಪತ್ನಿ, ಲೇಡಿ ಲಾಯ್ಡ್ ರವರು, ಜನವರಿ, ೧೦, ೧೯೨೨ ರ ಸಾಯಂಕಾಲ ೫-೧೫ ಕ್ಕೆ, ಮುಂಬಯಿ ಮಹಾನಗರದ ಸಾರ್ವಜನಿಕರಿಗೆ ವೀಕ್ಷಿಸಲು ಬಿಡುಗಡೆ ಮಾಡಿದರು.

ಛತ್ರಪತಿ ವಸ್ತುಸಂಗ್ರಹಾಲಯ ತಲುಪಲು

[ಬದಲಾಯಿಸಿ]

ಸಿ.ಎಸ್.ಟಿ.ರೈಲ್ವೆ ನಿಲ್ದಾಣದಿಂದ ಬಸ್ ಇಲ್ಲವೇ ಟ್ಯಾಕ್ಸಿಯಲ್ಲಿ, ಅಥವಾ ಕುದುರೆಗಾಡಿಯಲ್ಲಿ ಬರಬಹುದು. ಈ ಜಾಗದಲ್ಲಿ ರಿಕ್ಷಾ ವ್ಯವಸ್ಥೆ ಇಲ್ಲ. ವಸ್ತುಸಂಗ್ರಹಾಲಯ ಅತ್ಯಂತ ಪ್ರಮುಖ ಜಾಗದಲ್ಲಿದೆ. ಹುಡುಕುವುದು ಅತಿ ಸುಲಭ. ಎದುರಿಗೆ 'ಎಲ್ಫಿನ್ ಸ್ಟನ್ ಕಾಲೇಜ್', 'ಡೇವಿಡ್ ಸಸೂನ್ ಲೈಬ್ರರಿ, ಮುಂಬಯಿ',ಮತ್ತು 'ವ್ಯಾಟ್ಸನ್ ಹೋಟೆಲ್' ಕಟ್ಟಡಗಳಿವೆ. ಎಡ ಬದಿಯಲ್ಲಿ 'ರಿದಮ್ ಹೌಸ್', ಮತ್ತು ಜೆಹಾಂಗೀರ್_ಆರ್ಟ್_ಗ್ಯಾಲರಿ, ಮುಂಬಯಿ' ಕಟ್ಟಡಗಳಿವೆ. ಬಲಭಾಗದಲ್ಲಿ 'ಪೋಲೀಸ್ ಆಯುಕ್ತ', ಮತ್ತು ಸುಪ್ರಸಿದ್ಧ 'ರೀಗಲ್ ಸಿನೆಮಾ ಥಿಯೇಟರ್' ಇದೆ. ಸ್ವಲ್ಪ ಮುಂದ ನಡೆದು ಹೋದರೆ, 'ಗೇಟ್‍ವೇ ಆಫ್ ಇಂಡಿಯ, ಮುಂಬಯಿ', ಮತ್ತು 'ತಾಜ್ ಮಹಲ್ ಹೋಟೆಲ್, ಮುಂಬಯಿ' ಗಳನ್ನು (ಹೊಸ ಮತ್ತು ಹಳೆಯ ಹೋಟೆಲ್ ಗಳು)ವೀಕ್ಷಿಸಬಹುದು.

CSMVS ನ ಶತಮಾನೋತ್ಸವದ ಆಚರಣೆ

[ಬದಲಾಯಿಸಿ]
  • ೨೦೨೨ ರಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ವಸ್ತುಸಂಗ್ರಹಾಲಯವು ಶತಮಾನೋತ್ಸವವನ್ನು ಆಚರಿಸಿತು. ವಿದುಷಿ.ಶುಭ ಮುಡ್ಗಲ್ ಹಿಂದೂಸ್ತಾನಿ ಗಾಯನವನ್ನು ಪ್ರಸ್ತುತಪಡಿಸಿದರು.
    CSMVS, Mumbai, is celebrating its centenary year.

ಉಲ್ಲೇಖಗಳು

[ಬದಲಾಯಿಸಿ]
  1. The name is given in this form on the museum's official site. (See under "MUSEUM ADDRESS")
  2. Press Information Bureau: Union Ministry of Culture (September 5, 2008). releaseId=E2008PR703 "Union Ministry of Culture give Administrative approval for 124.3 million Rupees for Modernization of Chhatrapati Shivaji Maharaj vastu Sangrahalaya, Mumbai". {{cite web}}: Check |url= value (help)
  3. ಉಲ್ಲೇಖ ದೋಷ: Invalid <ref> tag; no text was provided for refs named MM
  4. (The Prince of Wales Museum of Western India', Mumbai, India)
  5. "AYEBEESEES, 31-07-2013, 'Facts about Chhatrapati Shivaji Maharaj Vastu Sangrahalaya,ertstwhile Prince of Wales Museum'". Archived from the original on 2013-12-25. Retrieved 2014-03-03.
  6. 'gateway-to-india-five-museums-to-visit-in-mumbai'
  7. "Milestones Time line". Archived from the original on 2015-04-13. Retrieved 2015-04-14.

ಹೆಚ್ಚಿನ ಮಾಹಿತಿ

[ಬದಲಾಯಿಸಿ]
  1. ವಸ್ತು ಸಂಗ್ರಹಾಲಯ Archived 2011-06-27 ವೇಬ್ಯಾಕ್ ಮೆಷಿನ್ ನಲ್ಲಿ.
  2. ವಸ್ತು ಸಂಗ್ರಹಾಲಯ Archived 2013-06-24 ವೇಬ್ಯಾಕ್ ಮೆಷಿನ್ ನಲ್ಲಿ.
  3. facts-about-chhatrapati-shivaji-museum-mumba Archived 2013-12-25 ವೇಬ್ಯಾಕ್ ಮೆಷಿನ್ ನಲ್ಲಿ.
  4. ವಸ್ತು ಸಂಗ್ರಹಾಲಯ
  5. -museums visit