ಛಿಛೋರೆ | |
---|---|
ನಿರ್ದೇಶನ | ನಿತೇಶ್ ತಿವಾರಿ |
ನಿರ್ಮಾಪಕ | ಸಾಜಿದ್ ನಾಡಿಯಾಡ್‍ವಾಲಾ |
ಲೇಖಕ |
|
ಪಾತ್ರವರ್ಗ |
|
ಸಂಗೀತ | ಹಾಡುಗಳು: ಪ್ರೀತಮ್ ಹಿನ್ನೆಲೆ ಸಂಗೀತ: ಸಮೀರ್ ಉದ್ದೀನ್ |
ಛಾಯಾಗ್ರಹಣ | ಅಮಲೇಂದು ಚೌಧರಿ |
ಸಂಕಲನ | ಚಾರು ಶ್ರೀ ರಾಯ್ |
ಸ್ಟುಡಿಯೋ | ನಾಡಿಯಾಡ್‍ವಾಲಾ ಗ್ರ್ಯಾಂಡ್‍ಸನ್ ಎಂಟರ್ಟೇನ್‍ಮಂಟ್ |
ವಿತರಕರು | ಫ಼ಾಕ್ಸ್ ಸ್ಟಾರ್ ಸ್ಟೂಡಿಯೋಸ್ |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
ಅವಧಿ | 143 ನಿಮಿಷಗಳು [೨] |
ದೇಶ | ಭಾರತ |
ಭಾಷೆ | ಹಿಂದಿ |
ಬಂಡವಾಳ | ₹45–58 ಕೋಟಿ[೩] |
ಬಾಕ್ಸ್ ಆಫೀಸ್ | est. ₹215.41 ಕೋಟಿ[೪] |
ಛಿಛೋರೆ (ಅನುವಾದ: ಹುಡುಗಾಟಿಕೆಯ) ೨೦೧೯ರ ಒಂದು ಹಿಂದಿ ಹಾಸ್ಯಪ್ರಧಾನ ನಾಟಕೀಯ ಚಲನಚಿತ್ರವಾಗಿದೆ. ಈ ಚಿತ್ರವನ್ನು ನಿತೇಶ್ ತಿವಾರಿ ನಿರ್ದೇಶಿಸಿದ್ದಾರೆ ಮತ್ತು ಫ಼ಾಕ್ಸ್ ಸ್ಟಾರ್ ಸ್ಟೂಡಿಯೋಸ್ ಮತ್ತು ನಾಡಿಯಾಡ್‍ವಾಲಾ ಗ್ರ್ಯಾಂಡ್‍ಸನ್ ಎಂಟರ್ಟೇನ್‍ಮಂಟ್ ಲಾಂಛನದಡಿ ಸಾಜಿದ್ ನಾಡಿಯಾಡ್‍ವಾಲಾ ನಿರ್ಮಾಣ ಮಾಡಿದ್ದಾರೆ. ಮುಖ್ಯ ಪಾತ್ರಗಳಲ್ಲಿ ಸುಶಾಂತ್ ಸಿಂಗ್ ರಾಜ್‍ಪೂತ್ ಮತ್ತು ಶ್ರದ್ದಾ ಕಪೂರ್ ನಟಿಸಿದ್ದಾರೆ. ಪ್ರಧಾನ ಛಾಯಗ್ರಹಣವು ಸೆಪ್ಟೆಂಬರ್ ೨೦೧೮ರಲ್ಲಿ ಆರಂಭವಾಯಿತು.[೫]
ಈ ಚಿತ್ರವು ೬ ಸೆಪ್ಟೆಂಬರ್ ೨೦೧೯ರಂದು ಬಿಡುಗಡೆಯಾಯಿತು. ಚಿತ್ರವು ಭಾರತದ ಕಾಲೇಜುಗಳಲ್ಲಿನ ವಿದ್ಯಾರ್ಥಿ ನಿಲಯದ ಚಿತ್ರಣಕ್ಕಾಗಿ ಸಕಾರಾತ್ಮಕ ಪ್ರತಿಕ್ರಿಯೆಯ ಜೊತೆಗೆ ವಿಮರ್ಶಾತ್ಮಕ ಮೆಚ್ಚುಗೆಯನ್ನೂ ಪಡೆಯಿತು. ಇದು ವಾಣಿಜ್ಯಿಕವಾಗಿ ಯಶಸ್ವಿಯಾಯಿತು ಮತ್ತು ಇದನ್ನು ಬ್ಲಾಕ್‍ಬಸ್ಟರ್ ಎಂದು ಘೋಷಿಸಲಾಯಿತು.[೬] ಈ ಚಿತ್ರವು ವಿಶ್ವಾದ್ಯಂತ ₹215 ಕೋಟಿಯಷ್ಟು ಗಳಿಸಿತು ಮತ್ತು ೬೫ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಐದು ನಾಮನಿರ್ದೇಶನಗಳನ್ನು ಪಡೆಯಿತು – ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ಸಂಕಲನ, ಅತ್ಯುತ್ತಮ ಕಥೆ, ಮತ್ತು ಅತ್ಯುತ್ತಮ ಸಂಭಾಷಣೆ.[೧]
ವರ್ತಮಾನದಲ್ಲಿ, ಅನಿರುದ್ಧ್ "ಅನ್ನಿ" ಪಾಠಕ್ ತನ್ನ ಹದಿಹರೆಯದ ಮಗ ರಾಘವ್‍ನೊಂದಿಗೆ ವಿಚ್ಛೇದನ ಹೊಂದಿರುವ ಮಧ್ಯವಯಸ್ಸಿನ ವ್ಯಕ್ತಿಯಾಗಿರುತ್ತಾನೆ. ಎಂಜಿನಿಯರ್ ಆಗಲು ಬಯಸುತ್ತಿರುವ ರಾಘವ್ ಭಾರತೀಯ ತಂತ್ರಜ್ಞಾನ ಸಂಸ್ಥೆಗೆ (ಐಐಟಿ) ದಾಖಲಾಗುವ ಭರವಸೆಯಲ್ಲಿ, ತನ್ನ ಪ್ರವೇಶ ಪರೀಕ್ಷೆಯ ಫಲಿತಾಂಶಗಳನ್ನು ನಿರೀಕ್ಷಿಸುತ್ತಿರುತ್ತಾನೆ. ಫಲಿತಾಂಶಗಳ ಮುನ್ನಾ ದಿನ, ಅನಿರುದ್ಧ್ ರಾಘವ್‍ಗೆ ಷ್ಯಾಂಪೇನ್‍ನ ಬಾಟಲಿಯನ್ನು ಉಡುಗೊರೆಯಾಗಿ ನೀಡಿ ಅವನ ಯಶಸ್ಸನ್ನು ಒಟ್ಟಾಗಿ ಆಚರಿಸೋಣ ಎಂದು ಮಾತುಕೊಡುತ್ತಾನೆ. ಆದರೆ ಅವನಿಗೆ ರಾಘವ್ ತೀವ್ರ ಒತ್ತಡದಲ್ಲಿರುವುದರ ಅರಿವಿರುವುದಿಲ್ಲ. ಷ್ಯಾಂಪೇನ್‍ನ ಬಾಟಲಿಯು ತಾನು ಪಾಸಾಗದಿದ್ದರೆ ಏನಾಗುವುದು ಎಂದು ಕೇವಲ ರಾಘವ್‍ನ ಚಿಂತೆಗಳಿಗೆ ಇಂಧನವಾಗುತ್ತದೆ. ಮರುದಿನ, ತನ್ನ ಅಪಾರ್ಟ್‌ಮಂಟ್‍ನಲ್ಲಿ ಫಲಿತಾಂಶಗಳನ್ನು ನೋಡುತ್ತಿರುವಾಗ, ರಾಘವ್‍ಗೆ ತಾನು ಐಐಟಿ ಜೆಇಇ ಅಡ್ವಾನ್ಸ್‌ಡ್ ಫಲಿತಾಂಶಗಳಲ್ಲಿ ಅರ್ಹತೆಗಳಿಸಿಲ್ಲ ಎಂದು ಗೊತ್ತಾಗುತ್ತದೆ. "ಸೋತವ"ನೆಂದು ಕರೆಯಲ್ಪಡುವ ಭಯದಿಂದ, ಅವನು ಬಾಲ್ಕನಿಯಿಂದ ಕೆಳ ಜಿಗಿಯುತ್ತಾನೆ. ಅನಿರುದ್ಧ್ ಆಸ್ಪತ್ರೆಗೆ ಅವಸವಸರವಾಗಿ ಹೋಗಿ ತನ್ನ ಮಾಜಿ ಹೆಂಡತಿ, ರಾಘವ್‍ನ ತಾಯಿ ಮಾಯಾಳನ್ನು ಸಾಂತ್ವನಗೊಳಿಸಲು ಪ್ರಯತ್ನಿಸುತ್ತಾನೆ. ರಾಘವ್‍ಗೆ ಬಾಳಲು ಇಚ್ಛೆ ಇಲ್ಲದಿರುವ ಕಾರಣ ಅವನ ಸ್ಥಿತಿಯು ಹದಗೆಡುತ್ತಿದೆ ಎಂದು ವೈದ್ಯನು ಮಾಯಾ ಮತ್ತು ಅನಿರುದ್ಧ್‌ರಿಗೆ ತಿಳಿಸುತ್ತಾನೆ. ಹತಾಶನಾಗಿ, ರಾಘವ್‍ನಲ್ಲಿ ಭರವಸೆಯನ್ನು ಮತ್ತೆ ಪ್ರಚೋದಿಸುವ ಪ್ರಯತ್ನವಾಗಿ, ಅನಿರುದ್ಧ್ ಕಾಲೇಜಿನಲ್ಲಿ ತನ್ನ ಸಮಯದ ಕಥೆಗಳನ್ನು ಹೇಳಲು ಆರಂಭಿಸುತ್ತಾನೆ. ಆ ಕಥೆಗಳು ನಿಜವೇ ಎಂದು ರಾಘವ್ ಸಂದೇಹಿಸುತ್ತಾನೆ. ರಾಘವ್‍ನಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವಾಗಿ ಅನಿರುದ್ಧ್ ತನ್ನ ಕಾಲೇಜಿನ ಎಲ್ಲ ಸ್ನೇಹಿತರನ್ನು ರಾಘವ್‍ನನ್ನು ಭೇಟಿಯಾಗಲು ಆಹ್ವಾನಿಸುತ್ತಾನೆ. ಅವರು ಒಟ್ಟಾಗಿ ತಮ್ಮ ಕಥೆಯನ್ನು ಆರಂಭಿಸುತ್ತಾರೆ.
೧೯೯೨ರಲ್ಲಿ, ಕಾಲೇಜ್‍ನ ಮೊದಲ ದಿನದಂದು, ಅನಿರುದ್ಧ್‌ನಿಗೆ ಎಚ್4 ಹಾಸ್ಟೆಲ್‍ನಲ್ಲಿ ಕೋಣೆಯನ್ನು ಗೊತ್ತುಪಡಿಸಲಾಗಿರುತ್ತದೆ. ಎಚ್4 "ಸೋತವ"ರನ್ನು ಹೊಂದಿರುವ ಹಾಸ್ಟಲ್ ಎಂದು ಕುಪ್ರಸಿದ್ಧಿ ಪಡೆದಿರುತ್ತದೆ. ಅವರು ವಾರ್ಷಿಕ ಮುಖ್ಯ ಕ್ರೀಡಾ ಚ್ಯಾಂಪಿಯನ್‍ಷಿಪ್‍ನಲ್ಲಿ (ಜಿಸಿ) ಪದೇ ಪದೇ ಕಳಪೆಯಾಗಿ ಪ್ರದರ್ಶನ ನೀಡುತ್ತಿದ್ದಿದ್ದರಿಂದ ಎಚ್4 ವಿಭಾಗದ ನಿವಾಸಿಗಳು ಈ ಹೆಸರನ್ನು ಪಡೆದಿರುತ್ತಾರೆ. ಅತೃಪ್ತನಾದ ಅನಿರುದ್ಧ್ ತನ್ನ ಹಾಸ್ಟಲ್‍ನ್ನು ಬದಲಾಯಿಸಲು ಅರ್ಜಿ ನೀಡುತ್ತಾನೆ. ಆದರೆ ಅವನ ಅರ್ಜಿಯು ಸಮಯ ತೆಗೆದುಕೊಳ್ಳಬಹುದು ಎಂದು ಗುಮಾಸ್ತನು ಹೇಳುತ್ತಾನೆ. ಈ ನಡುವೆ, ಅನಿರುದ್ಧ್ ಐವರು ಹಾಸ್ಟಲ್ ನಿವಾಸಿಗಳ ಸ್ನೇಹ ಬೆಳೆಸುತ್ತಾನೆ. ಇವರು ಇವನೊಂದಿಗೆ ನಿಕಟ ಗೆಳೆತನವನ್ನು ಬೆಳೆಸಿಕೊಳ್ಳುತ್ತಾರೆ:
ಮುಂದಿನ ಎರಡು ತಿಂಗಳುಗಳ ಅವಧಿಯಲ್ಲಿ, ಅನಿರುದ್ಧ್ ಆ ಐವರೊಂದಿಗೆ ನಿಕಟ ಗೆಳೆತನವನ್ನು ಬೆಳೆಸಿಕೊಳ್ಳುತ್ತಾನೆ ಮತ್ತು ಮಾಯಾಳೊಂದಿಗೆ ಸಮಯ ಕಳೆಯುವುದನ್ನೂ ಆರಂಭಿಸುತ್ತಾನೆ. ಈ ನಡುವೆ, ಅತಿ ಹೆಚ್ಚು ಬಾರಿ ಗೆದ್ದ ವಿದ್ಯಾರ್ಥಿಗಳ ನಿಲಯವೆಂದು ಪರಿಗಣಿತವಾದ ಎಚ್3 ಯ ಒಬ್ಬ ಸೀನಿಯರ್ ಆದ ರ್‍ಯಾಗಿ, ಅನಿರುದ್ಧ್‌ನ ಕ್ರೀಡಾಪಟುತ್ವದ ಕಾರಣ ಅನಿರುದ್ಧ್‌ನ ಅರ್ಜಿಯನ್ನು ವೇಗವಾಗಿ ಮುನ್ನಡೆಸುತ್ತಾನೆ ಮತ್ತು ಐಷಾರಾಮಿ ಹಾಗೂ ಸೊಗಸಾಗಿರುವ, ಎಚ್4 ಗಿಂತ ಬಹಳಮಟ್ಟಿಗೆ ಉತ್ತಮವಾದ ವಿದ್ಯಾರ್ಥಿ ನಿಲಯವಾದ ಎಚ್3ಗೆ ಸ್ಥಳಾಂತರವಾಗುವಂತೆ ಕೇಳಿಕೊಳ್ಳುತ್ತಾನೆ. ಆದರೆ ತನ್ನ ಗೆಳೆಯರೊಂದಿಗೆ ಇರಲು ಬಯಸಿದ ಅನಿರುದ್ಧ್ ಆ ಪ್ರಸ್ತಾಪವನ್ನು ನಿರಾಕರಿಸುತ್ತಾನೆ. ಇದರಿಂದ ರ್‍ಯಾಗಿ ಪ್ರಚೋದಿತವಾಗಿ ಸಿಟ್ಟಿನಿಂದ ಅನಿರುದ್ಧ್‌ಗೆ ಸೋತವನೆಂದು ಕರೆಯುತ್ತಾನೆ. ತಾನು ಹಿಂದೊಮ್ಮೆ ಡೆರೆಕ್‍ಗೂ ಇಂಥದ್ದೇ ಪ್ರಸ್ತಾಪ ಮಾಡಿದ್ದೆ ಆದರೆ ಅವನು ಕೂಡ ಪ್ರಸ್ತಾಪವನ್ನು ಮೂರ್ಖತನದಿಂದ ನಿರಾಕರಿಸಿದ್ದನು ಎಂದು ರ್‍ಯಾಗಿ ಹೇಳುತ್ತಾನೆ. ಸೋತವನೆಂದು ಕರೆಯಲ್ಪಟ್ಟಿದ್ದಕ್ಕೆ ಅತಿ ಸಿಟ್ಟಾದ ಅನಿರುದ್ಧ್ "ಸೋತವರು" ಎಂಬ ಹೆಸರುಪಟ್ಟಿ ಎಂದೆಂದಿಗೂ ತೆಗೆಯಲ್ಪಡುವುದು ಎಂಬ ಉದ್ದೇಶದಿಂದ ತನ್ನ ಹಾಸ್ಟಲ್ ಬಯಕೆಯ ಜಿಸಿ ಟ್ರೋಫಿಯನ್ನು ಗೆಲ್ಲುವುದು ಎಂದು ನಿರ್ಧರಿಸುತ್ತಾನೆ. ಅವನು ಸಂಶಯ ಹೊಂದಿದ ಡೆರೆಕ್‍ನ ಜೊತೆಗೂಡುತ್ತಾನೆ. ಆಮೇಲೆ ಡೆರೆಕ್ ತನ್ನ ಹಾಸ್ಟಲ್ ನಿವಾಸಿಗಳಿಗೆ ತರಬೇತಿ ನೀಡಲು ಅನಿರುದ್ಧ್‌ನ ವಿಧಾನಗಳನ್ನು ಒಪ್ಪಿಕೊಳ್ಳುತ್ತಾನೆ. ಆದರೆ, ತನ್ನ ತಂಡದ ಸದಸ್ಯರು ಗೆಲ್ಲುವ ಅವಕಾಶವನ್ನು ಹೊಂದಲು ಕ್ರೀಡೆಯಲ್ಲಿ ಬಹಳ ದುರ್ಬಲರಾಗಿದ್ದಾರೆಂದು ಬೇಗನೇ ಅರಿತುಕೊಳ್ಳುತ್ತಾನೆ. ಅವರನ್ನು ಪ್ರೇರೇಪಿಸುವ ಮಾರ್ಗವಾಗಿ, ಅವರೆಲ್ಲರೂ ಜಿಸಿ ಕಪ್ ಗೆಲ್ಲುವವರೆಗೆ ತಾವು ಅತಿ ಹೆಚ್ಚು ಪ್ರೀತಿಸುವ ಯಾವುದನ್ನಾದರೂ ಬಿಟ್ಟುಬಿಡುವಂತೆ ಅವರನ್ನು ಬೇಡಿಕೊಳ್ಳುತ್ತಾನೆ. ತಾವು ಫ಼ೈನಲ್ಸ್‌ಗೆ ಅರ್ಹತೆಗಳಿಸಲು ಆಗುವಂತೆ ಇತರ ಭಾಗೀದಾರರ ಚಿತ್ತ ವಿಕ್ಷೇಪಗೊಳಿಸಲು ಅವರಿಗಾಗಿ ಯೋಜನೆಗಳ ಒಂದು ಸರಣಿಯನ್ನೂ ಕಂಡುಹಿಡಿಯುತ್ತಾನೆ. ಅವನ ಯೋಜನೆಗಳು ಕೆಲಸಮಾಡುತ್ತವೆ ಮತ್ತು ಕಾಲೇಜಿನ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಎಚ್4 ಅಂಕಪಟ್ಟಿಯಲ್ಲಿ ಎಚ್3 ನಂತರ ಎರಡನೇ ಸ್ಥಾನ ಮುಟ್ಟಿ ಅಂತಿಮ ಸುತ್ತುಗಳಿಗೆ ಅರ್ಹತೆಗಳಿಸುತ್ತದೆ. ಎಚ್3ಯನ್ನು ಸೋಲಿಸಿ ಜಿಸಿಯನ್ನು ಗೆಲ್ಲಲು ಅವರು ಅಂತಿಮ ಸುತ್ತಿನಲ್ಲಿ 4x400 ಮಿ. ರೀಲೇ ಓಟ, ಬಾಸ್ಕೆಟ್‌ಬಾಲ್ ಪಂದ್ಯಾವಳಿ ಮತ್ತು ಚದುರಂಗದ ಸ್ಪರ್ಧೆಯನ್ನು ಗೆಲ್ಲಬೇಕಾಗಿರುತ್ತದೆ. ಎಚ್3 "ಸೋತವರ" ಒಂದು ಗುಂಪಿಗೆ ಸೋಲಬಹುದೆಂದು ಈಗ ಚಿಂತಿತನಾದ ರ್‍ಯಾಗಿ ಡೆರೆಕ್ ಮತ್ತು ಬೇವ್ಡಾರಿಗೆ ಹಾನಿಮಾಡಲು ಪ್ರಯತ್ನಿಸುತ್ತಾನೆ. ಇದರ ಹೊರತಾಗಿಯೂ, ಅವರಿಬ್ಬರೂ ತಮ್ಮತಮ್ಮ ರೀಲೆ ಮತ್ತು ಚದುರಂಗದ ಫೈನಲ್‍ನ್ನು ಗೆಲ್ಲುತ್ತಾರೆ. ಬಾಸ್ಕೆಟ್‌ಬಾಲ್ ಫ಼ೈನಲ್‍ನಲ್ಲಿ ಅನಿರುದ್ಧ್ ಒಂದು ಕೊನೆ ಅಂಕವನ್ನು ಗಳಿಸಲು ಪ್ರಯತ್ನಿಸಿ ವಿಫಲವಾಗುತ್ತಾನೆ. ಎಚ್3 ಗೆದ್ದರೂ, ಉತ್ತಮ ಹೋರಾಟ ನೀಡಿದ್ದಕ್ಕಾಗಿ ರ್‍ಯಾಗಿ ಪ್ರಾಮಾಣಿಕವಾಗಿ ಎಚ್4 ನ್ನು ಅಭಿನಂದಿಸುತ್ತಾನೆ.
ಮತ್ತೆ ವರ್ತಮಾನದಲ್ಲಿ, ಸ್ಪರ್ಧೆಯಲ್ಲಿ ಸೋತರೂ, ಎಚ್4 ನಿವಾಸಿಗಳನ್ನು ಮತ್ತೆಂದೂ "ಸೋತವರು" ಎಂದು ಕರೆಯಲಿಲ್ಲ ಏಕೆಂದರೆ ಅವರು ಸೋಲುವ ಭಯದಿಂದಾಗಿ ಸ್ಪರ್ಧೆಯಿಂದ ಹೊರಹೋಗುವ ಬದಲು ಗೆಲ್ಲಲು ಪ್ರಯತ್ನಿಸಿದರು ಮತ್ತು ಬಹಳಷ್ಟು ಪ್ರಯತ್ನ ಮತ್ತು ಹೋರಾಟ ಮಾಡಿದರು ಎಂದು ಅನಿರುದ್ಧ್ ಮತ್ತು ಅವನ ಸ್ನೇಹಿತರು ರಾಘವ್‍ಗೆ ಹೇಳುತ್ತಾರೆ. ರಾಘವ್ ತನ್ನ ಶಸ್ತ್ರಚಿಕಿತ್ಸೆ ಮತ್ತು ಮುಂಬರುವ ಜೀವನವನ್ನು ಗೆದ್ದವನು ಅಥವಾ ಸೋತವನು ಎಂಬ ಹೆಸರುಪಟ್ಟಿಗಳನ್ನು ಮರೆತು ಹೋರಾಡುವವನಾಗಿ ಎದುರಿಸಬೇಕು ಎಂದು ಅನ್ನಿ ಮತ್ತು ಅವನ ಸ್ನೇಹಿತರು ಕೇಳಿಕೊಂಡರು. ಒಂದು ವರ್ಷದ ನಂತರ, ಸಂಪೂರ್ಣವಾಗಿ ಗುಣಮುಖನಾದ ರಾಘವ್ ಕಾಲೇಜ್‍ನ ತನ್ನ ಮೊದಲ ದಿನಕ್ಕೆ ಹಾಜರಾಗುತ್ತಾನೆ ಮತ್ತು ತನ್ನ ಕಾಲೇಜಿನ ಹೆಸರೇನು ಅಥವಾ ತನ್ನ ರ್‍ಯಾಂಕ್ ಎಷ್ಟು ಎಂದು ಎಂದೂ ಕೇಳಬಾರದು ಏಕೆಂದರೆ ತನಗೆ ಜೀವನವನ್ನು ಜೀವಿಸಲು ಸಿಗುತ್ತಿದೆ ಎಂದು ವೀಕ್ಷಕರನ್ನು ವಿನಂತಿಸಿಕೊಳ್ಳುತ್ತಾನೆ.
ಚಿತ್ರೀಕರಣವು ಸೆಪ್ಟೆಂಬರ್ ೩೦ ೨೦೧೮ರಂದು ಆರಂಭವಾಯಿತು ಮತ್ತು ಡಿಸೆಂಬರ್ ೧೫, ೨೦೧೮ರಂದು ಅಂತ್ಯವಾಯಿತು.[೭][೮] ಚಿತ್ರದ ಸ್ವಲ್ಪ ಭಾಗವನ್ನು ಭಾರತೀಯ ತಂತ್ರಜ್ಞಾನ ಸಂಸ್ಥೆ ಬಾಂಬೆಯಲ್ಲಿ ಚಿತ್ರೀಕರಿಸಲಾಯಿತು.[೯] ಬಾಸ್ಕೊ-ಸೀಜ಼ರ್ ಚಿತ್ರದ ನೃತ್ಯ ಸಂಯೋಜಕರಾಗಿದ್ದಾರೆ.[೧೦]
ಫ಼ೆಬ್ರುವರಿ ೨೦೧೯ರಲ್ಲಿ, ಚಿತ್ರದ ನಟರು ತಮ್ಮ ಪಾತ್ರಗಳ ಉಡುಪುಗಳನ್ನು ಧರಿಸಿ ಕೃತಕ ಅವಯವ ಕಲಾಕಾರನ ಸಹಾಯದಿಂದ ಚಿತ್ರದಲ್ಲಿನ ತಮ್ಮ ರೂಪವನ್ನು ಪ್ರಸ್ತುತಪಡಿಸಿದರು. ಚಿತ್ರದ ಟ್ರೇಲರ್‌ನ್ನು ಫ಼ಾಕ್ಸ್ ಸ್ಟಾರ್ ಸ್ಟೂಡಿಯೋಸ್ ಆಗಸ್ಟ್ ೪, ೨೦೧೯ರಂದು ಬಿಡುಗಡೆಮಾಡಿತು.[೧೧]
ಚಿತ್ರವನ್ನು ಚಿತ್ರಮಂದಿರಗಳಲ್ಲಿ ಸೆಪ್ಟೆಂಬರ್ ೬, ೨೦೧೯ರಂದು ಬಿಡುಗಡೆ ಮಾಡಲಾಯಿತು.[೧] ನಂತರ, ನವೆಂಬರ್ ೧, ೨೦೧೯ ರಂದು ಚಿತ್ರವನ್ನು ಬೇಡಿಕೆ ಮೇಲಿನ ವೀಡಿಯೊ ಜಾಲತಾಣವಾದ ಹಾಟ್‍ಸ್ಟಾರ್‌ನಲ್ಲಿ ಬಿಡುಗಡೆ ಮಾಡಲಾಯಿತು.[೧೨]
ಚಿತ್ರದ ಧ್ವನಿವಾಹಿನಿಯನ್ನು ಪ್ರೀತಮ್ ಸಂಯೋಜಿಸಿದ್ದಾರೆ. ಹಾಡುಗಳಿಗೆ ಸಾಹಿತ್ಯವನ್ನು ಅಮಿತಾಭ್ ಭಟ್ಟಾಚಾರ್ಯ ಬರೆದಿದ್ದಾರೆ.
ಹಾಡುಗಳ ಪಟ್ಟಿ | |||
---|---|---|---|
ಸಂ. | ಹಾಡು | ಗಾಯಕ(ರು) | ಸಮಯ |
1. | "ವೋ ದಿನ್" | ಅರಿಜೀತ್ ಸಿಂಗ್ | 4:18 |
2. | "ಖೆಯ್ರಿಯತ್" | ಅರಿಜೀತ್ ಸಿಂಗ್ | 4:40 |
3. | "ಕಲ್ ಕೀ ಹೀ ಬಾತ್ ಹೆ" | ಕೆಕೆ | 4:00 |
4. | "ಫ಼ಿಕರ್ ನಾಟ್" | ನಕಾಶ್ ಅಜ಼ೀಜ಼್, ದೇವ್ ನೇಗಿ, ಅಂತರಾ ಮಿತ್ರಾ, ಅಮಿತ್ ಮಿಶ್ರಾ, ಶ್ರೀರಾಮ ಚಂದ್ರ, ಅಮಿತಾಭ್ ಭಟ್ಟಾಚಾರ್ಯ | 3:09 |
5. | "ಕಂಟ್ರೋಲ್" | ನಕಾಶ್ ಅಜ಼ೀಜ಼್, ಮನೀಶ್ ಜೆ. ಟೀಪು, ಗೀತ್ ಸಾಗರ್, ಶ್ರೀರಾಮ ಚಂದ್ರ, ಅಮಿತಾಭ್ ಭಟ್ಟಾಚಾರ್ಯ | 3:36 |
6. | "ವೋ ದಿನ್" (ಚಲನಚಿತ್ರ ಆವೃತ್ತಿ) | ತುಷಾರ್ ಜೋಶಿ | 5:12 |
7. | "ಖೆಯ್ರಿಯತ್" (ಉಚಿತ ಹಾಡು) | ಅರಿಜೀತ್ ಸಿಂಗ್ | 4:30 |
ಒಟ್ಟು ಸಮಯ: | 29:25 |
ಛಿಛೋರೆ ವಿಮರ್ಶಕರಿಂದ ಬಹುಮಟ್ಟಿಗೆ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು.[೧೩]
ಈ ಚಿತ್ರವು ಭಾರತದಲ್ಲಿ ₹182.25 ಕೋಟಿ ಮತ್ತು ವಿದೇಶದಲ್ಲಿ ₹33.16 ಕೋಟಿ ಮತ್ತು ಹಾಗಾಗಿ ಒಟ್ಟಾರೆಯಾಗಿ ವಿಶ್ವಾದ್ಯಂತ ₹215.41 ಕೋಟಿ ಹಣ ಗಳಿಸಿತು.