ಛಿನ್ನಮಸ್ತಿಕಾ ದೇವಾಲಯವು ಒಂದು ಹಿಂದೂ ತೀರ್ಥಯಾತ್ರಾ ಕೇಂದ್ರವಾಗಿದ್ದು ಛಿನ್ನಮಸ್ತ ದೇವಿಗೆ ಸಮರ್ಪಿತವಾಗಿದೆ. ಇದು ಭಾರತದ ಝಾರ್ಖಂಡ್ ರಾಜ್ಯದ ರಾಮ್ಗಢ್ ಜಿಲ್ಲೆಯ ರಜರಪ್ಪಾದಲ್ಲಿ ಸ್ಥಿತವಾಗಿದೆ.[೧][೨] ಈ ಸ್ಥಳವು ಬಿಹಾರ, ಝಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ ಎಲ್ಲ ಭಾಗಗಳಿಂದ ಜನರನ್ನು ಆಕರ್ಷಿಸುತ್ತದೆ.[೩]
(ಛಿನ್ನಮಸ್ತಿಕಾ ಎಂದೂ ಪರಿಚಿತವಾಗಿರುವ) ಛಿನ್ನಮಸ್ತ ದೇವಾಲಯದ ಮುಖ್ಯ ಆಕರ್ಷಣೆಯೆಂದರೆ ರುಂಡವಿಲ್ಲದ ದೇವಿ ಛಿನ್ನಮಸ್ತ. ಇವಳ ವಿಗ್ರಹವು ಕಮಲದ ತಳಪಾಯದಲ್ಲಿ ಕಾಮದೇವ ಮತ್ತು ರತಿಯರ ದೇಹದ ಮೇಲೆ ನಿಂತಿದೆ. ಛಿನ್ನಮಸ್ತ ದೇವಾಲಯವು ಅದರ ತಾಂತ್ರಿಕ ಶೈಲಿಯ ವಾಸ್ತುಕಲಾ ವಿನ್ಯಾಸಕ್ಕೆ ಜನಪ್ರಿಯವಾಗಿದೆ. ಮುಖ್ಯ ದೇವಾಲಯವಲ್ಲದೇ, ಸೂರ್ಯ, ಹನುಮಂತ ಮತ್ತು ಶಿವನಂತಹ ವಿವಿಧ ದೇವ ದೇವಿಯರ ಹತ್ತು ದೇವಾಲಯಗಳಿವೆ.[೩]