ಜಗಮೋಹನ್ ದಾಲ್ಮಿಯಾ

(Jagmohan Dalmiya), ಜಗಮೋಹನ್ ದಾಲ್ಮಿಯಾ
ಅಧ್ಯಕ್ಷರು, BCCI
Assumed office
2015
Preceded byಶಿವಲಾಲ್ ಯಾದವ್
In office
2013–2013
Preceded byಎನ್.ಸ್ರೀನಿವಾಸನ್ (ಸ್ರೀನಿ)
Succeeded byಶಿವಲಾಲ್ ಯಾದವ್
In office
2001–2004
Preceded byಎ.ಸಿ.ಮುತ್ತಯ್ಯ
Succeeded byರನ್ಬೀರ್ ಸಿಂಗ್ ಮಹೇಂದ್ರ
Personal details
Born1983:
(1940-05-30) May 30, 1940 (age 84)
ಕೊಲ್ಕತ್ತಾ, ಬ್ರಿಟಿಷ್ ಭಾರತ
Died1983:
Resting place1983:
Nationalityಭಾರತೀಯ
Spouseಚಂದ್ರಲೇಖ ದಾಲ್ಮಿಯ
Childrenಇಬ್ಬರು.
Parent
  • 1983:
Residence(s)ಕೊಲ್ಕತ್ತ, ಭಾರತ
OccupationCo-owner of M. L. Dalmiya & Co.

ಜಗ್ಗು ದಾದ , ಎಂದು ತಮ್ಮ ಆಪ್ತವರ್ಗದಲ್ಲಿ ಹೆಸರಾಂತ, ಜಗಮೋಹನ್ ದಾಲ್ಮಿಯಾ,[] ಬಿ.ಸಿ.ಸಿ.ಐ.ನ ಹೊಸ ಬಾಸ್ ಆಗಿ, ಅವಿರೋಧವಾಗಿ ಚುನಾಯಿತರಾಗಿದ್ದಾರೆ. ಕೊಲ್ಕತ್ತಾದ ಪ್ರತಿಷ್ಠಿತ 'ದಾಲ್ಮಿಯ ಕನ್ ಸ್ಟ್ರ ಕ್ಷನ್ ಕಂಪೆನಿ' ಯ ಮಾಲಿಕ. ಮೊದಲಿನಿಂದಲೂ ಕ್ರಿಕೆಟ್ ಆಟದ ಬಗ್ಗೆ ಸೆಳೆತವಿತ್ತು. ಕಾಲೇಜ್ ದಿನಗಳಿಂದ ಕ್ರಿಕೆಟ್ ಆಟಗಾರನಾಗಿದ್ದ ದಾಲ್ಮಿಯ, ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ ಮನ್, ಆಗಿದ್ದ್ರು.ಕ್ರಿಕೆಟ್ ಆಟದಲ್ಲಿ ಸಿದ್ಧಿಸಿಗಲಿಲ್ಲ. ಆದರೆ ಕ್ರಿಕೆಟ್ ಆಡಳಿತಗಾರನಾಗುವ ಕನಸು ಒಲಿಯಿತು. ಪಶ್ಚಿಮ ಬಂಗಾಳದ ಕ್ರಿಕೆಟ್ ಬೋರ್ಡ್ ಅವರನ್ನು ಆಹ್ವಾನಿಸಿತು. ೧೯೭೯ ರಲ್ಲಿ ಬಿ.ಸಿ.ಸಿ.ಐ.ಚಾವಡಿಗೆ ಪಾದಾರ್ಪಣೆ. ೧೯೮೩ ರಲ್ಲಿ ಕೋಶಾಧಿಕಾರಿ, ನಂತರ ಹಾಗೆಯೇ ಎತ್ತರಕ್ಕೆ ಬೆಳೆಯುತ್ತಾ ಸಾಗಿದರು. ಕ್ರಿಕೆಟ್ ಆಟದ ಜೊತೆಗೆ, ಒಳ್ಳೆಯ ಮನರಂಜನೆಯ ಸಾಧನ ಮತ್ತು ವ್ಯವಹಾರ. ಇದರಜೊತೆಗೆ ಸಂಪತ್ತೂ ಹರಿದುಬರುತ್ತದೆ. ಐ.ಎಸ್.ಬಿಂದ್ರಾ ಜೊತೆಗೂಡಿ ಭಾರತೀಯ ಕ್ರಿಕೆಟ್ ಗೆ ಒಂದು 'ಕಾಯಕಲ್ಪ' ಬರೆಯಲು ಮುಂದಾದರು. ೧೯೮೭ ರ ವಿಶ್ವಕಪ್ ಟೂರ್ನಿಯನ್ನು ಆಯೋಜಿಸುವಲ್ಲಿ ಮಹತ್ವದ ಪಾತ್ರವಿತ್ತು. ಅವಕಾಶಕ್ಕಾಗಿ ನಿರಂತರ ಕಾಯುತ್ತಿದ್ದ ದಾಲ್ಮಿಯ, ಸಮಯ ಕೈಗೆ ಬಂದಾಗ ೧೯೯೧ ರಲ್ಲಿ ಕಾರ್ಯದರ್ಶಿಯಾದರು. ಆಗ ಬಿ.ಸಿ.ಸಿ.ಐ. ೮೦ ಲಕ್ಷ ರೂಪಾಯಿಗಳ ನಷ್ಟದಲ್ಲಿತ್ತು. ಅವರ ನಾಯಕತ್ವದಲ್ಲಿ ಒಂದು ವರ್ಷದಲ್ಲಿ ಲಾಭಬರುವಂತೆ ನಡೆಸಿದರು. ಮುಂದೆ ಹೆಚ್ಚು ಹೆಚ್ಚು ಹಣ ಹರಿದಾಡುವಂತೆ ನೋಡಿ ವ್ಯವಸ್ಥೆಮಾಡಿದರು. ಕ್ರಿಕೆಟ್ ಆಟದಲ್ಲಿ ವೃತ್ತಿಪರತೆ ಕಾಪಾಡಿಕೊಂಡು ಬರುತ್ತಾ ವಿಶ್ವವೆಲ್ಲಾ ಭಾರತದತ್ತ ನೋಡುವಂತೆ ಮಾಡಿದರು.

೧೯೯೬,ವಿಶ್ವಕಪ್

[ಬದಲಾಯಿಸಿ]

೧೯೯೬ ರ ವಿಶ್ವಕಪ್ ಇಂಗ್ಲೆಂಡ್ ನಲ್ಲಿ ಜರುಗಿತು. ಆಗಿನ ಬಿ.ಸಿ.ಐ ಅಧ್ಯಕ್ಷ 'ಮಾದವರಾವ್ ಸಿಂಧಿಯ' ಭಾರತದಲ್ಲೇ ಆಯೋಜಿಸುವ ಮನಸ್ಸುಹೊಂದಿದ್ದರು. ಆಗ ಕಾರ್ಯದರ್ಶಿಯಾಗಿದ್ದ ದಾಲ್ಮಿಯ, ಸಿಂಧಿಯಗೆ ನೆರವಾದರು. ಸಂಪತ್ತಿನ ಬಲದಿಂದ ಇಂಗ್ಲೆಂಡಿನ ಕ್ರಿಕೆಟ್ ಮಂಡಳಿಯ ಮನಒಲಿಸಿ, ಭಾರತ ಶ್ರೀಲಂಕ, ಮತ್ತು ಪಾಕೀಸ್ಥಾನದಲ್ಲಿ ನಡೆಸಲು ವ್ಯವಸ್ಥೆ ಮಾಡಿದರು.ಆಸ್ತ್ರೇಲಿಯ ಇಂಗ್ಲೆಂಡ್,ನ್ಯೂಸಿದೆಂಡ್ ಕ್ರಿಕೆಟ್ ಮಂದಲಿಗಳು ಐ.ಸಿ.ಸಿನಲ್ಲಿ ಪ್ರಭುತ್ವ ಸಾಧಿಸಿದವು. ಸೂಕ್ಷ್ಮಗ್ರಾಹಿಯಾದ ದಾಲ್ಮಿಯ ಈ ಬೆಳವಣಿಗೆ ಗಳನ್ನು ಹತ್ತಿರದಿಂದ ಗಮನಿಸಿ, ದಕ್ಷಿಣ ಆಫ್ರಿಕ, ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಗಳ ಜೊತೆ ಸ್ನೇಹ ಬೆಳೆಸಿಕೊಂಡರುಏಷ್ಯಾನ್ ಕ್ರಿಕೆಟ್ ಸಮಿತಿ ರಚಿಸಿ,ಏಷ್ಯಾದ ರಾಷ್ಟ್ರಗಳ ಪ್ರಭುತ್ವ ಸಂಪಾದಿಸಿದರು.ಏಷ್ಯದ ಕ್ರಿಕೆಟ್ ರಾಷ್ಟ್ರಗಳಾದ ಪಾಕೀಸ್ಥಾನ ಶ್ರೀಲಂಕದ ಜೊತೆಗೆ ಬಂಗ್ಲಾದೇಶ್ ಮತ್ತು ಯು.ಎ.ಇ ರಾಷ್ಟ್ರಗಳೂ ಅಡುವಂತೆ ಆಯಿತು. ದಾಲ್ಮಿಯರ ತಂತ್ರಗಾರಿಕೆಯಿಂದ ಆ ರಾಷ್ಟ್ರಗಳೂ ಅಂತಾರಾಷ್ಟ್ರೀಯ ತಂಡಗಳಾಗಿ ರೂಪುಗೊಳ್ಳಲು ಅನುಕೂಲವಾಯಿತು.೧೯೯೭ ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಅಧ್ಯಕ್ಷರಾದರು. ಅವರ ಅವಧಿಯಲ್ಲಿ ಕ್ರಿಕೆಟ್ ಆಟದ ಚಿತ್ರಣವನ್ನೇ ಬದಲಾಯಿಸಿದರು. ಹಣ ಕೇವಲ ಮಂಡಳಿಗೂ ಸಿಗಬೇಕಲ್ಲದೆ ಆಟಗಾರರಿಗೂ ಸಿಗಬೇಕೆಂದು ಆಯೋಜಿಸಿ, ಮಾರುಕಟ್ಟೆಯ ಮೌಲ್ಯವನ್ನು ಹೆಚ್ಚಿಸಿದರು. 'ಮ್ಯಾಚ್ ಫಿಕ್ಸಿಂಗ್' ಎನ್ನುವ ಪೆಡಂಭೂತ, ಅವರ ಕಾಲದಲ್ಲಿಯೇ ಕಾಣಿಸಿಕೊಂಡಿತು. ಪ್ರತ್ಯೇಕ ಸಮಿತಿಯೊಂದನ್ನು ರಚಿಸಿ, ಮ್ಯಾಚ್ ಫಿಕ್ಸಿಂಗ್ ನಲ್ಲಿ ಭಾಗಿಯಾದ ವ್ಯಕ್ತಿಗೆ ಶಿಕ್ಷೆ ವಿಧಿಸುವುದರಲ್ಲಿ ಸಫಲರಾದರು. ಕ್ರಿಕೆಟ್ ಆಟದ ಜನಪ್ರಿಯತೆ ಅವರ ಅವಧಿಯಲ್ಲಿ ಹೆಚ್ಚಾಯಿತು. ವಿವಿಧ ದೇಶಗಳಲ್ಲಿ ಕ್ರಿಕೆಟ್ ಪರಿಚಯಿಸಿದರು. ಸಮಿತಿಯ ಬೊಕ್ಕಸ ತುಂಬಿತು. ೧೯೯೯ ರಲ್ಲಿ ವಿಶ್ವಕಪ್ ಟೂರ್ನಿ, ಐಸಿಸಿಯೇ ವಿವಿಧ ಕಂಪೆನಿಗಳ ಪ್ರಾಯೋಜಕತ್ವ ಗಳಿಸಿ ಸಂಘಟಿಸಿತ್ತು. ಇದೇ ಸಂಪ್ರದಾಯ ಮುಂದುವರೆಯುತ್ತಿದೆ.

ಚೆಂಡು ವಿರೋಪಗೊಳಿಸಿದ ಆರೋಪ

[ಬದಲಾಯಿಸಿ]

೨೦೦೧ ರಲ್ಲಿ ದಕ್ಷಿಣ ಆಫ್ರಿಕ ಪ್ರವಾಸ ಮಾಡಿದ ಭಾರತತಂಡ ಚೆಂಡು ವಿರೂಪಗೊಳಿಸುವ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿತ್ತು. ಆಗ ಟೀಮ್ ಇಂಡಿದ ಕಾವಲಿಗೆ ಬಂದವರು ದಾಲ್ಮಿಯ. ತಮ್ಮ ಅಧಿಕಾರಪ್ರಯೋಗಮಾಡಿ ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹವಾಗ್ ಸೇರಿದಂತ ಐವರು ಆರೋಪಿ ಆಟಗಾರರನ್ನು ರಕ್ಷಿಸಿದರು. ಐಸಿಸಿಯ ಕಾರ್ಯಕಾರಿ ನಿರ್ವಾಹಕ,'ಮಲ್ಕಂ ಸ್ಪೀಡ್' ಆರೋಪಿಸಿದ್ದರು. 'ಮೈಕ್ ಡೆನ್ನಿಸ್' ಪರ ನಿಂತಿದ್ದರು. ಮೈಕ್ ಡೆನ್ನಿಸ್ ರನ್ನು ಐಸಿಸಿ ಅಂಪೈರ್ ತಂಡದಿಂದ ಹೊರಗೆ ಹೋಗುವಂತೆ ಮಾಡಿದರು.ಜಗಮೋಹನ್ ದಾಲ್ಮಿಯಾ, ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಪರಿಹಾರ ಕಂಡುಕೊಳ್ಳುವಲ್ಲಿ ಸಮರ್ಥರಾಗಿದ್ದರು. ಚುಟುಕು ಕ್ರಿಕೆತ್ ಕ್ರೀಡೆಯನ್ನುವಿಶ್ವಕ್ರಿಕೆಟ್ ಗೆ ಪರಿಚಯಿಸುವ ಮನಸ್ಸಿತ್ತು. ಲಲಿತ್ ಮೋದಿ, ಚುಟುಕು ಕ್ರಿಕೆಟ್ ನ್ನು ತಂದು ದೇಸೀಪ್ರತಿಭೆಗಳನ್ನು ಅನಾವರಣಗೊಳಿಸಿದರು. ದಾಲ್ಮಿಯ, ರಣಜಿ ಆಟಗಾರರ ವೇತನ, ಮಾಜೀ ಆಟಗಾರರಿಗೆ ಪ್ರೋತ್ಸಾಹ ಧನ, ಆಟಗಾರರ ಸಂಭಾವನೆಯನ್ನು ವರ್ಧಿಸಲು ಕ್ರಮಗಳನ್ನು ಕೈಗೊಂಡರು.

ಕಾಲಕ್ರಮದಲ್ಲಿ

[ಬದಲಾಯಿಸಿ]

'ದಾಲ್ಮಿಯ', ಕಾಲಕ್ರಮದಲ್ಲಿ ಬದಲಾದ ಸಮಯದಲ್ಲಿ, ಅವರ ಹತ್ತಿರದ ಒಡನಾಡಿಗಳು ವಿರೋಧಿಸಿದರು. 'ಸ್ರೀನಿವಾಸನ್', 'ಶಶಾಂಕ್ ಮನೋಹರ್', 'ಲಲಿತ್ ಮೋದಿ,ಯಂತಹ ಶಿಷ್ಯರು ಹೊರನಡೆದರು. ಬಿ.ಸಿ.ಸಿ.ಐ. ಚಾವಡಿಯಿಂದ ಹೊರಗೆಹಾಕಲು 'ಶರದ್ ಪವಾರ್' ಗೆ ಬೆಂಬಲಿಸಿದರು. ರಣ್ಬೀರ್ ಸಿಂಗ್ ರವರನ್ನು ತಮ್ಮ ಮುಂದಿನ ಅಭ್ಯರ್ಥಿಯಾಗಿ ತರಲು ಪ್ರಯತ್ನಿಸಿದರು. ಮುಂದಿನ ಚುನಾವಣೆಯಲ್ಲಿ ದಾಲ್ಮಿಯಾ ಏಕಾಂಗಿಯಾಗಿ ಸೆಣೆಸಬೇಕಾಯಿತು. ಬಿ.ಸಿ.ಸಿ.ಐ. ಗದ್ದುಗೆ 'ಶರದ್ ಪವಾರ್' ಪಂಗಡಕ್ಕೆ ಹೋಗಿತ್ತು. 'ದಾಲ್ಮಿಯಾ' ವಿರುದ್ಧ ಹಣದ ದುರುಪಯೋಗವಾಗಿದೆಯೆಂಬ ಆರೋಪದಮೇಲೆ ಅವರನ್ನು ಹೊರಕ್ಕೆ ದೂಡಲಾಯಿತು. ೨೦೦೭ ರಲ್ಲಿ ದಾಲ್ಮಿಯಾ ಸುಪ್ರೀಮ್ ಕೋರ್ಟ್ ನಲ್ಲಿ ಹೋರಾಡಿ, ಕೇಸ್ ಗೆದ್ದು, ಪಶ್ಚಿಮ ಬಂಗಾಳದ ಕ್ರಿಕೆಟ್ ಸಂಸ್ಥೆಯಲ್ಲಿ ತಮ್ಮ ಪ್ರಭಾವವನ್ನು ಉಳಿಸಿಕೊಂಡರು. ೮ ವರ್ಷಗಳ ಕಾಲ ಮೌನವಾಗಿ ಶರದ್ ಪವಾರ್, ಶಶಾಂಕ್ ಮನೋಹರ್, ಸ್ರೀನಿವಾಸನ್ ರ ನಾಟಕೀಯ ಬೆಳವಣಿಗೆಗಳನ್ನು ತತ್ಪರತೆಯಿಂದ ಅವಲೋಕಿಸುತ್ತಿದ್ದರು. '೨೦೧೩ ರ, ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ', ಸ್ರೀನಿವಾಸನ್ ಗೆ ಕಂಟಕ ಪ್ರಾಯವಾಗಿತ್ತು. ಹಿಂದಿನ ಕಟು ಅನುಭವಗಳನ್ನು ಮರೆತು ಎಲ್ಲಾ ಪದಾಧಿಕಾರಿಗಳು ಒಂದಾದರು.

ದಾಲ್ಮಿಯಾ ಮುಂದಿರುವ ಸವಾಲುಗಳು

[ಬದಲಾಯಿಸಿ]

ಪ್ರತಿಷ್ಠಿತ ಐಪಿಎಲ್ ಟೂರ್ನಿಗೆ ರಂಗು ತುಂಬುವ ಕೆಲಸದ ಜೊತೆಗೆ, ಸ್ಪಾಟ್ ಫಿಕ್ಸಿಂಗ್, ಮ್ಯಾಚ್ ಫಿಕ್ಸಿಂಗ್, ಮೊದಲಾದ ರಗಳೆಗಳನ್ನು ತಡೆಗಟ್ಟುವ ಗುರುತರ ಜವಾಬ್ದಾರಿಯಿತ್ತು. ದೇಸೀ ಕಾಯಕಲ್ಪ ಸರಿಪಡಿಸಬೇಕು. ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣಬೇಕು. ಇನ್ನೂ ಹಲವಾರು ಸಮಸ್ಯೆಗಳು ಮುಂದಿವೆ. ರಾಷ್ಟ್ರದ ಐದು ವಲಯಗಳ ಕ್ರಿಕೆಟ್ ಮಂಡಳಿಗಳನ್ನು ತಮ್ಮ ಅಧೀನದಲ್ಲಿಟ್ಟುಕೊಂಡು ದಾಲ್ಮಿಯಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

೨೦೧೫ ರಲ್ಲಿ

[ಬದಲಾಯಿಸಿ]

೭೪ ವರ್ಷ ಹರೆಯದ, ಮಾಜಿ ಬಿ.ಸಿ.ಸಿ.ಐ, ಮತ್ತು ಐ.ಸಿ.ಸಿ. ಅಧ್ಯಕ್ಷರಾಗಿದ್ದ, ಜಗಮೋಹನ್ ದಾಲ್ಮಿಯಾ,[] ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯ ಸಮಿತಿಗೆ ಅವಿರೋಧವಾಗಿ 'ವಾರ್ಷಿಕ ಜನರಲ್ ಬಾಡಿ ಸಭೆ'ಯಲ್ಲಿ ಆಯ್ಕೆಯಾದರು. ಮಾಜಿ ಅಧ್ಯಕ್ಷ, ಎನ್. ಸ್ರೀನಿವಾಸನ್, ದಾಲ್ಮಿಯಾರನ್ನು ಸಮರ್ಥಿಸಿದರು.[] ಜಗಮೋಹನ್ ದಾಲ್ಮಿಯಾ ಅವರು ೨೦-೦೯-೨೦೧೫ರಂದು ರಾತ್ರಿ ೯:೩೦ರ ಸುಮಾರಿಗೆ ಕೋಲ್ಕತ್ತಾದ ಬಿ.ಎಂ. ಬಿರ್ಲಾ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು.ಅವರಿಗೆ ಆಗ ೭೫ ವರ್ಷ ವಯಸ್ಸಾಗಿತ್ತು.

ಉಲ್ಲೇಖಗಳು

[ಬದಲಾಯಿಸಿ]
  1. ESPN Criciinfo, Jagmohan Dalmiya India,
  2. 'THE HINDU', March 3, 2015,'Dalmiya back at BCCI helm'
  3. "IBN Live, Cricket next, Mar 02, 2015, Jagmohan Dalmiya elected BCCI president for the second time". Archived from the original on ಮಾರ್ಚ್ 4, 2015. Retrieved ಮಾರ್ಚ್ 12, 2015.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]