ಜಗ್‍ಜಿತ್ ಸಿಂಗ್ | |
---|---|
ಜನನ | ಅಕ್ಟೋಬರ್ ೨,೧೯೬೬ ಜಲ್ಲಾಹ್, ಇಂಡಿಯಾ |
ವೃತ್ತಿ | ಇಂಡಿಯನ್ ಮಿಲಿಟರಿ,ಪಂಜಾಬ್ ಪೊಲೀಸ್ |
ರಾಷ್ಟ್ರೀಯತೆ | ಭಾರತೀಯ |
ಪ್ರಮುಖ ಪ್ರಶಸ್ತಿ(ಗಳು) | ಅರ್ಜುನ ಅವಾರ್ಡ್ , ಲೈಫ್ ಟೈಮ್ ಅಚಿವೆಮೆಂಟ್ ಅವಾರ್ಡ್ |
ಜಗ್‍ಜಿತ್ ಸಿಂಗ್‌ರವರು ಪಂಜಾಬ್ ರಾಜ್ಯದ ಬಹಳ ಪ್ರಸಿದ್ದವಾದ ರೋವರ್. ಇವರು ಪಂಜಾಬಿನ ಲುಧಿಯಾನ ಪ್ರದೇಶದಲ್ಲಿರುವ ಜಲ್ಲಾಹ್ ಗ್ರಾಮದಲ್ಲಿ ಜನಿಸಿದರು. ಇವರು ಪಂಜಾಬ್ ರಾಜ್ಯದ ಮೊಟ್ಟ ಮೊದಲ ಅರ್ಜುನ ಪ್ರಶಸ್ತಿಯನ್ನು ಜಯಿಸಿದ ರೋವರ್.
ಇವರ ಜೀವನ ಚರಿತ್ರೆ ಬಹಳ ಜನರಿಗೆ ಸ್ಫೂರ್ತಿದಾಯಕವಾದದ್ದು. ಇವರದು ಸರಳ, ಸಾಧಾರಣ ಸ್ವಭಾವ ಮತ್ತು ಅತ್ಯಾಕರ್ಶಕ ಗುಣ. ಇವರ ಸಹಾಯ ಗುಣಗಳನ್ನು ನೋಡಿ ಪ್ರತಿಯೊಬ್ಬ ಮನುಷ್ಯನಿಗೂ ಆನಂದವಾಗುತ್ತುದೆ. ಅವರ ಗಮನಾರ್ಹ ಕ್ರೀಡಾ ಪಯಣವು ದೇಶಾದ್ಯಂತ ಸಾವಿರಾರು ಕ್ರೀಡಾ ಪಟುಗಳಿಗೆ ಸ್ಫೂರ್ತಿ ನೀಡಿತು.
ಕ್ರೀಡೆಗಳಲ್ಲಿ ಬಹಳ ಆಸಕ್ತಿಯಿದ್ದ ಕಾರಣ, ೧೭ನೇ ವಯಸ್ಸಿನಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾದಾಗ ಅವರಿಗೆ ಮೊದಲು ರೋಯಿಂಗ್‌ನಲ್ಲಿ ಆಸಕ್ತಿ ಉಂಟಾಯಿತು. ಮದ್ರಾಸ್ನಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‍ಶಿಪ್‌ನಲ್ಲಿ ಅವರ ಪಾದ ಗಾಯಗೊಂಡಿತು.ಇದರ ನಡುವೆಯೂ ಅವರು ಸ್ಪರ್ಧಿಸಿ ಗೆದ್ದಾಗ ರೋಯಿಂಗ್ ಕಡೆಯಿನ ಪ್ರೀತಿ ಹೆಚ್ಚಾಯಿತು. ತಮ್ಮ ಮೊದಲ ಏಷ್ಯನ್ ಕ್ರೀಡಾಕೂಟದಲ್ಲೇ ಪದಕವನ್ನು ಗೆದ್ದಾಗ ಅವರ ವೃತ್ತಿಜೀವನವು ಶುಭಾರಂಭ ಪಡೆಯಿತು. ಅವರ ಪಯಣ ಸ್ವಯಂ ಚಾಲಿತ ಮತ್ತು ಸ್ವಯಂ ಪ್ರೇರಿತವಾಗಿದ್ದು ತಾನು ಕಂಡ ದೊಡ್ಡ ಕನಸುಗಳನ್ನು ಸಾಧಿಸುವುದಕ್ಕಾಗಿ ಬಹಳ ಶ್ರಮಪಟ್ಟರು. ಇವರ ಈ ಪರಿಶ್ರಮವೇ ಇವರನ್ನು ಅರ್ಜುನ ಪ್ರಶಸ್ತಿಗೆ ಅರ್ಹರನ್ನಾಗಿಸಿತು.೧೯೯೪ರ ಏಷ್ಯನ್ ಗೇಮ್ಸ್‌ನಲ್ಲಿ ಇವರು ಮಾಡಿದ ದಾಖಲೆಯೊಂದನ್ನು ಯಾವುದೇ ಭಾರತೀಯರಿಂದಲೂ ಈಗಿನ ತನಕ ಮುರಿಯಲು ಸಾಧ್ಯವಾಗಿಲ್ಲ. ಅವರು ತಮ್ಮ ಅತ್ಯುತ್ತಮ ಸಾಧನೆಗಾಗಿ ರಾಷ್ಟೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ಗಣನೀಯ ಪ್ರಮಾಣದ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ನಂತರ ಅವರು ಪಂಜಾಬ್ ಪೋಲಿಸ್ ಇಲಾಖೆ ಸೇರಿಕೊಂಡರು. ಇವರು ಪ್ರಸ್ತುತ ಪಂಜಾಬ್ ಪೋಲಿಸ್ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ. ಜಗ್‍ಜಿತ್ ಸಿಂಗ್ ಅವರಿಗೆ ಮೂರು ಮಕ್ಕಳು. ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ. ಅವರೆಲ್ಲರು ರೋಯಿಂಗ್ ಕ್ರೀಡೆಯಲ್ಲಿ ರಾಷ್ಟ್ರೀಯ ಚಾಂಪಿಯನ್‍ಗಳಾಗಿದ್ದಾರೆ.
ಕ್ರಿಕೆಟ್‌ಗೆ ಜನರು ಹೆಚ್ಚು ಪ್ರಾಮುಖ್ಯತೆ ನೀಡುವ ರಾಷ್ಟ್ರವಾದ ಭಾರತದಲ್ಲಿ ರೋಯಿಂಗ್ ನಂತಹ ಕ್ರೀಡೆಯಲ್ಲಿ ಶ್ರೇಷ್ಠತೆ ಪಡೆಯುವುದು ಸುಲಭವಲ್ಲ, ಇದಕ್ಕೆ ತಕ್ಕ ಬೆಂಬಲವೂ ಕೂಡ ಸರಿಯಾಗಿ ಸಿಗಲಿಲ್ಲ. ಇಂದು ಯುವಕರಿಗೆ ಹಲವಾರು ಅವಕಾಶಗಳು ದೊರೆಯುತ್ತವೆ, ಆದರೆ ಜಗ್‍ಜಿತ್ ಸಿಂಗ್‌ರವರ ಕಾಲದಲ್ಲಿ ಇದು ಸುಲಭವಾಗಿರಲಿಲ್ಲ. ಸರ್ಕಾರಿ ನಿಧಿ ಲಭ್ಯವಿಲ್ಲದಿದ್ದಾಗ ಸ್ವಂತ ಖರ್ಚುಗಳನ್ನು ತಾವೇ ನಿರ್ವಹಿಸಬೇಕಾಗಿತ್ತು. ಆದರೆ ಒಮ್ಮೆ ನಾವು ನಮ್ಮ ಕಣ್ಣನ್ನು ಗುರಿಯ ಮೇಲೆ ಇಟ್ಟುಕೊಂಡು ಅದನ್ನು ಸಾಧಿಸಲು ಶ್ರಮಪಟ್ಟರೆ ಯಾರೂ ಕೂಡ ನಮ್ಮನ್ನು ಗುರಿ ಸಾಧಿಸುವುದ ಆಗುವುದರಿಂದ ಸಾಧ್ಯವಿಲ್ಲ ಎಂಬುದು ಅವರ ನಂಬಿಕೆ. ೧೯೯೯ರಲ್ಲಿ ಜಪಾನ್‌ನಲ್ಲಿ ಏಷಿಯನ್ ಗೇಮ್ಸ್ ನಡೆಯುತ್ತಿತ್ತು, ಅಲ್ಲಿಗೆ ಹೊರಡಬೇಕಾದ ಕೆಲವೇ ದಿನಗಳಲ್ಲಿ ಶತ್ರುಗಳು ಅವರ ಪಾಸ್ಪೋರ್ಟ್ ಅನ್ನು ನಾಶಮಾಡಿದರು. ಏಷಿಯನ್ ಗೇಮ್ಸ್‌ನಲ್ಲಿ ಭಾಗವಹಿಸುವವರ ತಂಡವು ಜಪಾನ್‌ಗೆ ತೆರಳಿದರೂ ಇವರು ಭಾರತದಲ್ಲೇ ಉಳಿದುಕೊಂಡರು. ಪ್ರಭಾವಶಾಲಿ ವ್ಯಕ್ತಿಗಳ ಸಹಾಯದಿಂದ ಅವರು ಹೊಸ ವೀಸಾಪಡೆದು ಜಪಾನ್‍ಗೆ ತೆರಳಿದರು.ಅವರ ಪಂದ್ಯಕ್ಕೆ ಕೇವಲ ನಾಲ್ಕು ಗಂಟೆ ಇರುವಾಗ ತಮ್ಮ ಅಟದ ಸ್ಥಳ ತಲುಪಿದರು. ಯಾವುದೇ ಪೂರ್ವ ತಯಾರಿ ಇಲ್ಲದೆ ಅವರು ಸ್ಪರ್ಧೆಯಲ್ಲಿ ಭಾಗವಹಿಸಿದರು. ಆದರೆ ಇವೆಲ್ಲಾ ತೊಂದರೆಗಳಿಂದ ಅವರ ಆತ್ಮ ವಿಶ್ವಾಸ ಕಿಂಚಿತ್ತೂ ಕಡಿಮೆಯಾಗಲಿಲ್ಲ.ಈ ದಿಟ್ಟ ಮನಸ್ಸು ಅವರನ್ನು ಶ್ರೇಷ್ಠ ಕ್ರೀಡಾಪಟುವಾಗಲು ಸಹಾಯ ಮಾಡಿತು.[೧]
ಭಾರತ ಸರ್ಕಾರವು ಇವರ ಅಭೂತಪೂರ್ವ ಸಾಧನೆಗಾಗಿ ೧೯೯೯ರಲ್ಲಿ ಅರ್ಜುನ ಪ್ರಶಸ್ತಿ ಹಾಗು ೨೦೦೭ರಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ.[೨]