ಗಾಂಧಿವಾದಿ ಹಾಗೂ ಜಯಪ್ರಕಾಶ್ ನಾರಾಯಣ ಅವರ ಸಹಾಯಕರಾಗಿದ್ದ ಕನ್ನಡಿಗ ಮೇಲುಕೋಟೆಯ ಸುರೇಂದ್ರ ಕೌಲಗಿ ಅವರಿಗೆ ಶುಕ್ರವಾರ ಪ್ರತಿಷ್ಠಿತ ಜಮ್ನಾಲಾಲ್ ಬಜಾಜ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನೊಬೆಲ್ ಪಾರಿತೋಷಕ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಅವರು ಹತ್ತು ಲಕ್ಷ ರೂಪಾಯಿ ನಗದು ಒಳಗೊಂಡಿರುವ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕೌಲಗಿ, ರಾಜಕೀಯ ಕ್ಷೇತ್ರದ ಕೊಳೆ ತೊಳೆಯಲು ಸ್ವಚ್ಛ ಭಾರತ ಅಭಿಯಾನವನ್ನು ರಾಜಕೀಯದಲ್ಲೂ ಜಾರಿಗೆ ತರಬೇಕು ಎಂದು ಅಭಿಪ್ರಾಯಪಟ್ಟರು.
ಗಾಂಧಿ ಮೌಲ್ಯಗಳನ್ನು ಎತ್ತಿ ಹಿಡಿದ ಸುಲಕ್ ಶ್ರೀನಿವಾಸ್, ಗ್ರಾಮೀಣಾಭಿವೃದ್ಧಿಗಾಗಿ ಗುಜರಾತ್ನ ರಾಮ್ ಕುಮಾರ್ ಸಿಂಗ್, ಮಧ್ಯ ಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಚೆನ್ನುಪತಿ ವಿದ್ಯಾ ಅವರಿಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು.