ಜಯರಾಮನ್ ಗೌರಿಶಂಕರ್ | |
---|---|
ಜನನ | 1956 (ವಯಸ್ಸು 67–68) ಚೆನ್ನೈ, ಭಾರತ |
ರಾಷ್ಟ್ರೀಯತೆ | File:Flag of India.svg |
ಕಾರ್ಯಕ್ಷೇತ್ರಗಳು | Biology |
ಸಂಸ್ಥೆಗಳು | ಸೆಂಟರ್ ಫಾರ್ ಸೆಲ್ಯುಲಾರ್ ಅಂಡ್ ಮಾಲಿಕ್ಯುಲಾರ್ ಬಯಾಲಜಿ
ಡಿಎನ್ಎ ಫಿಂಗರ್ಪ್ರಿಂಟಿಂಗ್ ಮತ್ತು ಡಯಾಗ್ನೋಸ್ಟಿಕ್ಸ್ ಸೆಂಟರ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಷನ್ ಅಂಡ್ ರಿಸರ್ಚ್, ಮೊಹಾಲಿ [೧] |
ಅಭ್ಯಸಿಸಿದ ಸಂಸ್ಥೆ | ಮದ್ರಾಸ್ ವಿಶ್ವವಿದ್ಯಾಲಯ, ಮೆಲ್ಬೋರ್ನ್ ವಿಶ್ವವಿದ್ಯಾಲಯ |
ಗಮನಾರ್ಹ ಪ್ರಶಸ್ತಿಗಳು | ಪದ್ಮಶ್ರೀ (2013) |
ಜಯರಾಮನ್ ಗೌರಿಶಂಕರ್ (ಜನನ ೧೯೫೬) ಇವರು ಭಾರತೀಯ ವೈದ್ಯಕೀಯ ಸೂಕ್ಷ್ಮ ಜೀವಶಾಸ್ತ್ರಜ್ಞ. ಗೌರಿಶಂಕರ್ ಇವರು ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದರು ಮತ್ತು ಮೆಲ್ಬೋರ್ನ್ ವಿಶ್ವವಿದ್ಯಾನಿಲಯದಿಂದ ಬ್ಯಾಕ್ಟೀರಿಯಾದ ತಳಿಶಾಸ್ತ್ರದಲ್ಲಿ ಡಾಕ್ಟರ್ ಆಫ್ ಫಿಲಾಸಫಿಯನ್ನು ಹೊಂದಿದ್ದಾರೆ.
ಅವರು ಹೈದರಾಬಾದ್‌ನಲ್ಲಿರುವ ಸೆಲ್ಯುಲಾರ್ ಮತ್ತು ಮಾಲಿಕ್ಯುಲರ್ ಬಯಾಲಜಿ ಕೇಂದ್ರದಲ್ಲಿ ವಿಜ್ಞಾನಿ ಹಾಗೂ ತಂಡದ ನಾಯಕರಾಗಿದ್ದರು. ೨೦೦೦ ರಲ್ಲಿ, ಅವರು ಡಿಎನ್‌ಎ ಫಿಂಗರ್ಪ್ರಿಂಟಿಂಗ್ ಮತ್ತು ಡಯಾಗ್ನೋಸ್ಟಿಕ್ಸ್ ಕೇಂದ್ರದ ನಿರ್ದೇಶಕರಾದರು. [೨] ಪ್ರಸ್ತುತ, ಅವರು ಮೊಹಾಲಿಯ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. [೩]
ಅವರಿಗೆ ೧೯೯೧ ರಲ್ಲಿ, ಜೈವಿಕ ವಿಜ್ಞಾನ ವಿಭಾಗದಲ್ಲಿ ಭಾರತದ ಅತ್ಯುನ್ನತ ವಿಜ್ಞಾನ ಪ್ರಶಸ್ತಿಯಾದ ವಿಜ್ಞಾನ ಮತ್ತು ತಂತ್ರಜ್ಞಾನಕ್ಕಾಗಿ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿಯನ್ನು ನೀಡಲಾಯಿತು. [೪] ೨೦೧೩ ರಲ್ಲಿ ಅವರಿಗೆ, ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪದ್ಮಶ್ರೀ ಗೌರವ ದೊರೆತಿದೆ, ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ನೀಡಲಾಯಿತು. [೫]