ಪಂಜಾಬಿನ ಚಿತ್ರ ನಿರ್ಮಾಪ(೩, ಮಾರ್ಚ್,೧೯೫೫– ೨೫ ಅಕ್ಟೋಬರ್, ೨೦೧೨) ನಿರ್ದೇಶಕ, ವ್ಯಂಗ್ಯಚಿತ್ರ ಲೇಖಕ, ಜಸ್ಪಾಲ್ ಭಟ್ಟಿಯವರು, ಸಾಮಾನ್ಯ ಮನುಷ್ಯನ ಭಾವನೆಗಳಿಗೆ ಸ್ಪಂದಿಸಿ ಹಾಸ್ಯದ ಮೂಲಕ ನಿತ್ಯಜೀವನದಲ್ಲಿ ಕಾಣುವ ಲಂಚ ಮೊದಲಾದ ಹಲವಾರು ಅನಿಷ್ಟ ಸಂಪ್ರದಾಯಗಳನ್ನು ವಿರೋಧಿಸಿ, ವೀಕ್ಷಕರ ಹೃದಯವನ್ನು ಮೀಟುವ ಸನ್ನಿವೇಶಗಳನ್ನು ಕಿರುತೆರೆಯಮೇಲೆ ಸಮರ್ಥವಾಗಿ ತಂದ ಒಬ್ಬ ವಿಶೇಷ ವ್ಯಕ್ತಿ.[೧]
ಜಸ್ಪಾಲ್ ಭಟ್ಟಿ ಯವರು ಅಮೃತ್ಸರ್ ನಲ್ಲಿ, ರಾಜ್ಪುತ್ ಸಿಖ್ ಪರಿವಾರದಲ್ಲಿ, ೩, ಮಾರ್ಚ್ ೧೯೫೫ ರಲ್ಲಿ ಜನಿಸಿದರು. ಚಂದೀಘಡದ, ಪಂಜಾಬ್ ಇಂಜಿನಿಯರಿಂಗ್ ಕಾಲೇಜ್ ನ ಇಲೆಕ್ಟಿಕಲ್ ಇಂಜನಿಯರಿಂಗ್ ಪದವೀಧರ. ಬಾಲ್ಯದಿಂದಲೂ ನಾಟಕ ಕಲೆಯಲ್ಲಿ ಆಸಕ್ತರು. ಕಾಲೇಜಿನ ದಿನಗಳಲ್ಲೂ ಲಂಚದ ವಿರುದ್ಧ ತಮ್ಮ ವಿರೋಧವನ್ನು ವ್ಯಕ್ತಪಡಿಸುವ ಎಲ್ಲಾ ವಲಯಗಳಲ್ಲೂ ಪ್ರಮುಖಪಾತ್ರ ವಹಿಸಿ ದುಡಿದರು. ಫ್ಲಾಪ್ ಶೊ ಎಂಬ ಅತ್ಯಂತ ಜನಪ್ರಿಯ ಧಾರಾವಾಹಿಯಿಂದ ರಾಷ್ಟ್ರದ ಜನತೆಗೆ ಪರಿಚಿತರಾದರು. ಅವರ ಜೊತೆ ನಟಿಸಿದ ವಿವೇಕ್ ಶೌಕ್ ಎಂಬ ಕಲಾವಿದರು, ಮುಂದೆ ಹಿಂದಿ ಸಿನಿಮಾದಲ್ಲೂ ನಟಿಸಿ ಹೆಸರುಗಳಿಸಿದರು. ಆದರೆ ಅವರು ಅನಾರೋಗ್ಯದಿಂದ ಬಳಲಿ, ಸನ್. ೨೦೦೧ ರ, ಜನವರಿ, ೧೦ ರಂದು ವಿಧಿವಶರಾದರು.
'ಸವಿತ'ರವರನ್ನು ಜಸ್ಪಾಲ್ ಭಟ್ಟಿಯವರು, ೨೪, ಮಾರ್ಚ್, ೧೯೮೫ ರಲ್ಲಿ ವಿವಾಹವಾದರು. 'ಸವಿತಾ', ಜಸ್ಪಾಲ್ ಭಟ್ಟಿಯವರ ಹಲವಾರು ಧಾರಾವಾಹಿಗಳಲ್ಲಿ ಪ್ರಮುಖ ಭೂ,ಮಿಕೆಯಲ್ಲಿ ಅಭಿನಯಿಸಿದ್ದಾರೆ
ಭಾಟಿಂಡ-ಜಲಂಧರ್ ದಾರಿಯಲ್ಲಿ ಕಾರ್ ನಲ್ಲಿ 'ಜಸ್ಪಾಲ್ ಭಟ್ಟಿ,ಮಗ ಜಸ್ರಾಜ್,ಹಾಗೂ'ಸುರಿಲಿ ಗೌತಮ್ 'ಸಹಿತ ಕಾರ್ ನಲ್ಲಿ ಪ್ರಯಾಣಿಸುತ್ತಿದ್ದರು. ೨-೩೦ ಬೆಳಿಗ್ಯೆ ಅವರ ಕಾರು ಒಂದು ಮರಕ್ಕೆ ಡಿಕ್ಕಿ ಹೊಡೆದಪರಿಣಾಮವಾಗಿ, ತಲೆಗೆ ತೀವ್ರವಾಗಿ ಗಾಯವಾಗಿ ಸಾವನ್ನಪ್ಪಿದರು.
೫೭ ವರ್ಷ ಪ್ರಾಯದ ಜಸ್ಪಾಲ್ ಭಟ್ಟಿಯವರು,ಹೆಂಡತಿ ಸವಿತ ,ಮಗ ಜಸ್ರಾಜ್, ಮತ್ತು ಮಗಳು ರಾಬಿಯವರನ್ನು ಅಗಲಿ ಸಾಗಿದ್ದಾರೆ.
ದೂರದರ್ಶನದಲ್ಲಿ ಇವರ ಕೆಳಗೆ ಕಂಡ ಧಾರಾವಾಹಿಗಳು ಪ್ರಚಂಡ ಜನಪ್ರಿಯತೆಯನ್ನು ಹಾಸಿಲ್ ಮಾಡಿದ್ದವು.