ಜಾರ್ಜ್ ವಿಟೆಟ್ (೧೮೪೭ - ೧೯೨೬, ಆಂಗ್ಲದಲ್ಲಿ: George Wittet) ಬಾಂಬೆ ನಗರದಲ್ಲಿ ಕೆಲಸ ಮಾಡಿದ ಸ್ಕಾಟಿಷ್ ವಾಸ್ತುಶಿಲ್ಪಿಯಾಗಿದ್ದರು. [೧]
ವಿಟೆಟ್ ರವರು ೨೬ನೇ ನವೆಂಬರ್ ೧೮೪೭ರಂದು ಸ್ಕಾಟ್ಲ್ಯಾಂಡ್ ದೇಶದ ಬ್ಲೇರ್ ಅಠೋಲ್ ಗ್ರಾಮದಲ್ಲಿ ಜನಿಸಿದರು.
ಪರ್ತ್ ನಗರದಲ್ಲಿ ಆಂಡ್ರೂ ಹೈಟನ್ ರವರ ಬಳಿ ವಾಸ್ತುಶಿಲ್ಪವನ್ನು ಕಲಿತರು. ಮೊದಲಾಗಿ ಸ್ಕಾಟ್ಲ್ಯಾಂಡ್‍ನ ಎಡಿನ್ಬರ್ಗ್ ಮತ್ತು ಇಂಗ್ಲೆಂಡ್‍ನ ಯಾರ್ಕ್ ನಗರಗಳಲ್ಲಿ ಕೆಲಸ ಮಾಡಿದರು. ಆನಂತರ ೧೯೦೪ರಲ್ಲಿ ಬಾಂಬೆ (ಈಗಿನ ಮುಂಬೈ) ನಗರದ ಕನ್ಸಲ್ಟಿಂಗ್ ಆರ್ಕಿಟೆಕ್ಟ್ ಆಗಿದ್ದ ಜಾನ್ ಬೆಗ್ ರವರ ಬಳಿ ಕೆಲಸ ಮಾಡಲು ಭಾರತಕ್ಕೆ ಬಂದು ಸೇರಿದರು. ಇವರಿಬ್ಬರೂ ಜೊತೆಸೇರಿ ಬಾಂಬೇಯಿನಲ್ಲಿ ಇಂಡೋ-ಸರೆಸೆನಿಕ್ ಶೈಲಿ ಪದ್ಧತಿಯಲ್ಲಿ ಅನೇಕ ಕಟ್ಟಡಗಳನ್ನು ನಿರ್ಮಿಸಿದ್ದರು. ಇವುಗಳಲ್ಲಿ ಸುಮಾರು ಕಟ್ಟಡಗಳು ಈಗ ಮುಂಬೈ ನಗರದ ವಿಶೇಷ ಹೆಗ್ಗುರುತುಗಳಾಗಿ ಪರಿಗಣಿಸಲಾಗಿವೆ.
ವಿಟೆಟ್ ರವರು ತೀವ್ರವಾದ ಭೇದಿ ರೋಗದಿಂದ ನರಳಿ ಬೊಂಬಾಯಿನಲ್ಲೇ ೧೧ನೇ ಸೆಪ್ಟೆಂಬರ್ ೧೯೨೬ ರಂದು ಮರಣ ಹೊಂದಿದರು. ಅವರ ದೇಹವನ್ನು 'ಸಿವ್ರಿಯ ಸ್ಮಶಾನ'ದಲ್ಲಿ ದಫನು ಮಾಡಲಾಯಿತು. ಇಂಡೊ-ಸಾರ್ಸನಿಕ್ ಪದ್ಧತಿಯ ಕಟ್ಟಡ ನಿರ್ಮಾಣವನ್ನು ಹೆಚ್ಚು ಜನಪ್ರಿಯ ಮಾಡಲು ಜಾನ್ ಬೆಗ್ ಜೊತೆ ಸೇರಿ ಹಲವು ಮಹತ್ವದ ಕಟ್ಟಡಗಳ ನಿರ್ಮಾಣಕ್ಕೆ ನಾಂದಿಯಾದವರು.[೨]
ಬಾಂಬೆ ನಗರದಲ್ಲಿ ವಿಟೆಟ್‍ರವರು ಈ ಕೆಳಗಿನ ಕಟ್ಟಡಗಳ ವಿನ್ಯಾಸದಲ್ಲಿ ತೊಡಗಿಸಿಕೊಂಡಿದ್ದರು:
ಇವತ್ತು ಪಾಕಿಸ್ತಾನಲ್ಲಿರುವ ಕರಾಚಿ ನಗರದಲ್ಲಿ ಕರಾಚಿ ಪೋರ್ಟ್ ಟ್ರಸ್ಟ್ ಸಂಸ್ಥೆಯ ಪ್ರಧಾನ ಕಛೇರಿಯ ಕಟ್ಟಡವನ್ನೂ ವಿನ್ಯಾಸಗೊಳಿಸಿದರು.[೩]