ಜಾಲ್‍ಫ಼್ರೇಜ಼ಿ (ಝಾಲ್ ಫ಼್ರೇಜ಼ಿ, ಜಾಫ಼್ರಾಜ಼ಿ, ಮತ್ತು ಅನೇಕ ಇತರ ಪರ್ಯಾಯ ಉಚ್ಚಾರಗಳು) ಬಂಗಾಳದಲ್ಲಿ ಹುಟ್ಟಿಕೊಂಡ ಒಂದು ಮೇಲೋಗರ ಖಾದ್ಯವಾಗಿದೆ. ಇದು ಭಾರತೀಯ ಉಪಖಂಡದಾದ್ಯಂತ ಮತ್ತು ಅದರಾಚೆಗೆ ಜನಪ್ರಿಯವಾಗಿದೆ. ಇದು ಮಾಂಸ, ಮೀನು, ಪನೀರ್ ಅಥವಾ ತರಕಾರಿಗಳಂತಹ ಒಂದು ಮುಖ್ಯ ಘಟಕಾಂಶವನ್ನು ಹೊಂದಿರುತ್ತದೆ. ಇದನ್ನು ಬಿರುಸಾಗಿ ಕಲಕಿ ಕರಿದು ಹಸಿರು ಮೆಣಸಿನಕಾಯಿ ಸೇರಿರುವ ಗಟ್ಟಿಯಾದ ಖಾರವಾಗಿರುವ ಸಾಸ್‍ನಲ್ಲಿ ಬಡಿಸಲಾಗುತ್ತದೆ. ಸಾಮಾನ್ಯವಾದ ಹೆಚ್ಚಿನ ಘಟಕಾಂಶಗಳಲ್ಲಿ ದಪ್ಪ ಮೆಣಸಿನಕಾಯಿ, ಈರುಳ್ಳಿ ಮತ್ತು ಟೊಮೇಟೊ ಸೇರಿರುತ್ತವೆ.
ಉಳಿದುಕೊಂಡಿರುವ ಆಹಾರವನ್ನು ಮೆಣಸಿನಕಾಯಿ ಮತ್ತು ಈರುಳ್ಳಿಯೊಂದಿಗೆ ಕರಿದು ಬಳಸಿಬಿಡುವ ಬಗೆಯಾಗಿ ಜಾಲ್‍ಫ಼್ರೇಜ಼ಿಯ ಪಾಕವಿಧಾನಗಳು ಬ್ರಿಟಿಷ್ ಭಾರತದ ಅಡುಗೆ ಪುಸ್ತಕಗಳಲ್ಲಿ ಕಾಣಿಸಿಕೊಂಡವು.[೧] ಈ ಆಂಗ್ಲ ಭಾಷೆಯ ಬಳಕೆಯು ಆಡುಭಾಷೆಯ ಬಂಗಾಳಿ ಪದವಾದ ಝಾಲ್ ಪೊರ್ಹೇಜ಼ಿ ಇಂದ ವ್ಯುತ್ಪನ್ನವಾಯಿತು: ಝಾಲ್ ಎಂದರೆ ಖಾರವಾಗಿರುವ ಆಹಾರ; ಪೊರ್ಹೇಜ಼ಿ ಎಂದರೆ ತಿನ್ನಲು ಸೂಕ್ತವಾದದ್ದು.[೨][೩] ಜಾಲ್‍ಫ಼್ರೇಜ಼ಿಯನ್ನು ಸಾಮಾನ್ಯವಾಗಿ ಘಟಕಾಂಶಗಳನ್ನು ಬಿರುಸಾಗಿ ಕಲಕಿ ಕರಿದು ತಯಾರಿಸಲಾಗುತ್ತದೆ. ಈ ತಂತ್ರವು ಚೈನಾದ ಪಾಕಪದ್ಧತಿಯಿಂದ ಪ್ರದೇಶದಲ್ಲಿ ಪರಿಚಯಿಸಲ್ಪಟ್ಟಿತು.
{{cite book}}
: External link in |chapterurl=
(help); Unknown parameter |chapterurl=
ignored (help); Unknown parameter |month=
ignored (help)