ಜಿ.ಎಸ್ ಘುರ್ಯೆ | |
---|---|
ಜನನ | ಮಲ್ವನ್, ಮಹಾರಾಷ್ಟ್ರ, ಭಾರತ | ೧೨ ಡಿಸೆಂಬರ್ ೧೮೯೩
ಮರಣ | ೨೮ ಡಿಸೆಂಬರ್ ೧೯೮೩(ವಯಸ್ಸು ೯೦) ಮುಂಬಯಿ, ಮಹರಾಷ್ಟ್ರ, ಭಾರತ.[೧] |
ವಾಸಸ್ಥಳ | ಮುಂಬಯಿ |
ಪೌರತ್ವ | ಭಾರತೀಯ |
ರಾಷ್ಟ್ರೀಯತೆ | ಭಾರತೀಯ |
ಕಾರ್ಯಕ್ಷೇತ್ರ | ಸಮಾಜಶಾಸ್ತ್ರ, ಮಾನವಶಾಸ್ತ್ರ |
ಸಂಸ್ಥೆಗಳು | ಮುಂಬಯಿ ವಿಶ್ವವಿದ್ಯಾನಿಲಯ |
ಅಭ್ಯಸಿಸಿದ ವಿದ್ಯಾಪೀಠ | ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ |
ಡಾಕ್ಟರೇಟ್ ಸಲಹೆಗಾರರು | ಡಬ್ಲ್ಯೂ.ಹೆಚ್.ರ್ ರಿವೆರ್ಸ್ ಮತ್ತು ಎ.ಸಿ ಹಾಡ್ಡನ್ |
ಪ್ರಭಾವಗಳು | ಡಬ್ಲ್ಯೂ.ಎಚ್.ಆರ್ ರಿವರ್ಸ್ ಆಂಡ್ ಎ. ಸಿ |
ಸಂಗಾತಿ | ಸಾಜುಬೈ ಘುರ್ಯೆ |
ಗೋವಿಂದ ಸದಾಶಿವ ಘುರ್ಯೆ (೧೨ ಡಿಸೆಂಬರ್ ೧೮೯೩ - ೨೮ ಡಿಸೆಂಬರ್ ೧೯೮೩) ಅವರು ಭಾರತೀಯ ಶಿಕ್ಷಣತಜ್ಞರಾಗಿದ್ದರು. ಇವರು ಸಮಾಜಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು.[೨] ೧೯೨೪ ರಲ್ಲಿ, ಅವರು ಬಾಂಬೆ ವಿಶ್ವವಿದ್ಯಾನಿಲಯದಲ್ಲಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಎರಡನೇ ವ್ಯಕ್ತಿಯಾದರು. ಇವರನ್ನು ಸಮಾಜಶಾಸ್ತ್ರ ಮತ್ತು ಭಾರತೀಯ ಸಮಾಜಶಾಸ್ತ್ರದ ಸಂಸ್ಥಾಪಕ ಎಂದು ಪರಿಗಣಿಸಲಾಗಿದೆ.
ಜಿ. ಎಸ್. ಘುರ್ಯೆ ಅವರು ಸಾರಸ್ವತ ಬ್ರಾಹ್ಮಣ ಸಮುದಾಯದಲ್ಲಿ ೧೨ ಡಿಸೆಂಬರ್ ೧೮೯೩ ರಂದು ಮಾಲ್ವಾನ್ (ಇಂದಿನ ಮಹಾರಾಷ್ಟ್ರ) ನಲ್ಲಿ ಜನಿಸಿದರು.[೧][೩] ಅವರು ತಮ್ಮ ಅರಂಭಿಕ ಶಿಕ್ಷಣವನ್ನು ಮುಂಬಯಿಯಲ್ಲಿರುವ ಆರ್ಯನ್ ಎಜುಕೇಶನ್ ಸೊಸೈಟಿ ಪ್ರೌಢಶಾಲೆ, ಗಿರ್ಗಾಂವ್‌ನಲ್ಲಿ ಮಾಡಿದರು. ನಂತರ ಪ್ರೌಢ ಶಿಕ್ಷಣವನ್ನು ಗುಜರಾತಿನ ಬಹದ್ದೂರ್ ಖಾನ್‌ಜಿ ಪ್ರೌಢಶಾಲೆ, ಜುನಾಗಢದಲ್ಲಿ ಮಾಡಿದರು.[೧]. ಅವರು ೧೯೧೨ ರಲ್ಲಿ, ಜುನಗಢ್‌ನಲ್ಲಿನ ಬಹೌದ್ದಿನ್ ಕಾಲೇಜಿಗೆ ಸೇರಿದರು, ಆದರೆ ಒಂದು ವರ್ಷದ ನಂತರ ಎಲ್ಫಿನ್ಸ್ಟೋನ್ ಕಾಲೇಜಿಗೆ ಸ್ಥಳಾಂತರಗೊಂಡರು. ಅಲ್ಲಿಂದ ತಮ್ಮ ಬಿ. ಎ. (ಸಂಸ್ಕೃತ) ಮತ್ತು ಎಮ್. ಎ. (ಸಂಸ್ಕೃತ) ಪದವಿಗಳನ್ನು ಪಡೆದರು.[೪]ಅವರು ತಮ್ಮ ಬಿ. ಎ. ವ್ಯಾಸಂಗ ಮಾಡುತಿದ್ದಾಗ ಭೌ ದಾಜಿ ಪ್ರಶಸ್ತಿಯನ್ನು ಗೆದ್ದರು ಮತ್ತು ಎಮ್. ಎ. ವ್ಯಾಸಂಗ ಮಾಡುತ್ತಿದ್ದಾಗ ಕುಲಪತಿಗಳ ಚಿನ್ನದ ಪದಕವನ್ನು ಗೆದ್ದರು.[೪] ತಮ್ಮ ಎಮ್. ಎ. ಮುಗಿಸಿದ ನಂತರ, ಘುರ್ಯೆ ಇಂಗ್ಲೆಂಡ್‌ನಲ್ಲಿ ಹೆಚ್ಚಿನ ಅಧ್ಯಯನಕ್ಕಾಗಿ ವಿದ್ಯಾರ್ಥಿವೇತನವನ್ನು ಪಡೆದರು ಮತ್ತು ೧೯೨೨ ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ತಮ್ಮ ಪಿಎಚ್‌ಡಿ ಗಳಿಸಿದರು.[೧] ಘುರ್ಯೆ ಅವರು ತಮ್ಮ ಪಿಎಚ್‌ಡಿ ಮಾರ್ಗದರ್ಶಕರಾಗಿದ್ದ ಡಬ್ಲ್ಯೂ.ಎಚ್.ಆರ್. ರಿವರ್ಸ್‌ರಿಂದ ಆಳವಾಗಿ ಪ್ರಭಾವಿತರಾಗಿದ್ದರು.[೫] ೧೯೨೨ ರಲ್ಲಿ ರಿವರ್ಸ್ ಅವರ ಅಕಾಲಿಕ ಮರಣದ ನಂತರ, ಅವರು ಎ. ಸಿ. ಹ್ಯಾಡನ್ ಅವರ ಮುಂದಾಳತ್ವದಲ್ಲಿ ತಮ್ಮ ಪ್ರಬಂಧವನ್ನು ಪೂರ್ಣಗೊಳಿಸಿದರು.[೫]
ಘುರ್ಯೆ ಅವರು ಮಾಲ್ವಾನ್ ಬಳಿಯ ವೆಂಗುರ್ಲಾ ಪಟ್ಟಣದ, ಸಾಜುಬೈ ಅವರನ್ನು ವಿವಾಹವಾದರು.[೧] ಘುರ್ಯೆ ಅವರ ಮಗ, ಸುಧೀಶ್ ಘುರ್ಯೆ ಒಬ್ಬ ಗಣಿತಜ್ಞ ಹಾಗು ಸಂಖ್ಯಾಶಾಸ್ತ್ರಜ್ಞ. ಇವರ ಮಗಳು ಕುಮುದ್ ಜಿ. ಘುರ್ಯೆ ನ್ಯಾಯವಾದಿಯಾಗಿದ್ದರು.[೬]
ಘುರ್ಯೆ ಅವರನ್ನು ೧೯೨೪ ರಲ್ಲಿ ಬಾಂಬೆ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. [೭] ೧೯೧೯ ರಲ್ಲಿ ಪ್ಯಾಟ್ರಿಕ್ ಗೆಡೆಸ್ ಅವರು ಸಮಾಜಶಾಸ್ತ್ರ ವಿಭಾಗವನ್ನು ಸ್ಥಾಪಿಸಿದ್ದರು.[೮] ಅದರ ಹೊಣೆಗಾರಿಕೆಯನ್ನು ಘುರ್ಯೆ ಅವರು ವಹಿಸಿಕೊಂಡಾಗ ಅದು ಮುಚ್ಚುವ ಹಂತದಲ್ಲಿತ್ತು. ಘುರ್ಯೆಯೊಂದಿಗೆ ಸಮಾಜಶಾಸ್ತ್ರ ವಿಭಾಗ ಮತ್ತೊಮ್ಮೆ ಜೀವಂತವಾಯಿತು. ಈಗ, ಘುರ್ಯೆ ಅವರನ್ನು ಅದರ ನಿಜವಾದ ಸಂಸ್ಥಾಪಕ ಎಂದು ಪರಿಗಣಿಸಲಾಗುತ್ತದೆ. ೧೯೫೯ ರಲ್ಲಿ ಘುರ್ಯೆ ಅವರು ನಿವೃತ್ತರಾದರು.[೯][೧೦]
ಅವರು ಇಂಡಿಯನ್ ಸೋಶಿಯಾಲಾಜಿಕಲ್ ಸೊಸೈಟಿ ಮತ್ತು ಅದರ ಸುದ್ದಿಪತ್ರವಾದ ಸಮಾಜಶಾಸ್ತ್ರೀಯ ಬುಲೆಟಿನ್ ಅನ್ನು ಸ್ಥಾಪಿಸಿದರು ಮತ್ತು ಎರಡಕ್ಕೂ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು.[೧೧] ಅವರು ಕೆಲವು ವರ್ಷಗಳ ಕಾಲ ಬಾಂಬೆ ಆಂಥ್ರೊಪೊಲಾಜಿಕಲ್ ಸೊಸೈಟಿಯ ಮುಖ್ಯಸ್ಥರಾಗಿದ್ದರು.[೧೨]
ನಿವೃತ್ತಿಯ ನಂತರ, ಅವರು ಬಾಂಬೆ ವಿಶ್ವವಿದ್ಯಾನಿಲಯದಲ್ಲಿ ಗೌರವಾನ್ವಿತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು ಮತ್ತು ಕನಿಷ್ಠ ಮೂರು ಅಭಿನಂದನಾ ಗ್ರಂಥಗಳನ್ನು ಅವರ ಗೌರವಾರ್ಥವಾಗಿ ತಯಾರಿಸಲಾಯಿತು, ಅವುಗಳಲ್ಲಿ ಎರಡು ಅವರ ಜೀವಿತಾವಧಿಯಲ್ಲಿ ತಯಾರಿಸಲಾಯಿತು.[೧೩] ಅವರು ಒಟ್ಟು ೮೦ ಸಂಶೋಧನಾ ಪ್ರಬಂಧಗಳಿಗೆ ಮಾರ್ಗದರ್ಶನ ನೀಡಿದರು ಮತ್ತು ೩೨ ಪುಸ್ತಕಗಳು ಮತ್ತು ಹಲವಾರು ಇತರ ಪ್ರಬಂಧಗಳನ್ನು ಬರೆದಿದ್ದಾರೆ.[೧೪] ನಂತರ, ಅವರ ಬಗ್ಗೆ ಎರಡು ಪ್ರಬಂಧಗಳನ್ನು ಬರೆಯಲಾಯಿತು.[೧೫]
ಅವರ ವಿದ್ಯಾರ್ಥಿಗಳಲ್ಲಿ ಡಾ. ಉತ್ತಮರಾವ್ ಕೆ. ಜಾಧವ್,[೧೬] ಎ. ಜೆ. ಅಗರ್ಕರ್, ವೈ. ಎಮ್. ರೇಗೆ, ಎಲ್. ಎನ್. ಚಾಪೇಕರ್, ಎಮ್. ಜಿ. ಕುಲಕರ್ಣಿ, ಎಮ್. ಎಸ್. ಎ. ರಾವ್, ಇರಾವತಿ ಕರವೇ, ಸಿ. ರಾಜಗೋಪಾಲನ್, ವೈ. ಬಿ. ದಾಮ್ಲೆ, ಎಂ. ಎನ್.ಶ್ರೀನಿವಾಸ್, ಎ.ಆರ್.ದೇಸಾಯಿ, ಡಿ.ನರೇನ್, ಐ.ಪಿ.ದೇಸಾಯಿ, ಎಂ.ಎಸ್.ಗೋರ್, ಸುಮಾ ಚಿಟ್ನಿಸ್ ಮತ್ತು ವಿಕ್ಟರ್ ಡಿಸೋಜಾ ಸಮಾಜ ಸುಧಾರಕ ಮತ್ತು ಬುದ್ಧಿಜೀವಿಗಳಾಗಿದ್ದರು.[೧೭] ಅವರ ಗೌರವಾರ್ಥವಾಗಿ ರಚಿಸಿದ "ಡಾ. ಜಿ. ಎಸ್. ಘುರ್ಯೆ ಪ್ರಶಸ್ತಿ"ಯನ್ನು ನೋಡುವ ಅವಕಾಶವೂ ಅವರಿಗೆ ಸಿಕ್ಕಿತು.[೧೮] ಕಾಸ್ಟ್ ಆಂಡ್ ರೇಸ್ ಇನ್ ಇಂಡಿಯಾ ಎಂಬ ಅವರ ಪುಸ್ತಕವನ್ನು ಸಮಾಜಶಾಸ್ತ್ರ ಕ್ಷೇತ್ರದಲ್ಲಿ ಶ್ರೇಷ್ಠವೆಂದು ಪರಿಗಣಿಸಲಾಗಿದೆ.[೧೯]
{{cite journal}}
: CS1 maint: date format (link)