ಜಿಪುಣನು (ಕೃಪಣ) ಹಣ ಅಥವಾ ಇತರ ಸ್ವತ್ತುಗಳನ್ನು ಕೂಡಿಡುವ ಸಲುವಾಗಿ ಖರ್ಚುಮಾಡಲು ಇಷ್ಟಪಡದಿರುವ ವ್ಯಕ್ತಿ, ಎಷ್ಟರ ಮಟ್ಟಿಗೆ ಎಂದರೆ ಮೂಲಭೂತ ಸೌಕರ್ಯಗಳು ಮತ್ತು ಕೆಲವು ಅಗತ್ಯಗಳನ್ನು ಕೂಡ ವರ್ಜಿಸುವನು.[೧] ಈ ಶಬ್ದವನ್ನು ಕೆಲವೊಮ್ಮೆ ವಿಶಾಲ ಅರ್ಥದಲ್ಲಿ ತಮ್ಮ ಹಣದ ಬಗ್ಗೆ ಜುಗ್ಗನಾಗಿರುವ ಯಾರನ್ನಾದರೂ ವರ್ಣಿಸಲು ಬಳಸಲಾಗುತ್ತದಾದರೂ, ಅಂತಹ ವರ್ತನೆಯ ಜೊತೆಗೆ ಉಳಿಸಿದ್ದರಲ್ಲಿ ಆನಂದಪಡದಿದ್ದರೆ, ಅದು ಸರಿಯಾದ ಅರ್ಥದಲ್ಲಿ ಜಿಪುಣತನವಲ್ಲ.
ಒಂದು ಪ್ರಕಾರವಾಗಿ ಜಿಪುಣರು ದೀರ್ಘಕಾಲದಿಂದ ಜನಪ್ರಿಯ ಆಕರ್ಷಣೆಯ ವಸ್ತುವಾಗಿದ್ದಾರೆ ಮತ್ತು ಅನೇಕ ಸಂಸ್ಕೃತಿಗಳಲ್ಲಿ ಬರಹಗಾರರು ಹಾಗೂ ಕಲಾವಿದರಿಗೆ ಫಲಪ್ರದ ಮೂಲವಾಗಿದ್ದಾರೆ.
ಜಿಪುಣತನದ ವರ್ತನೆಗೆ ಕಾರಣ ನೀಡುವ ಒಂದು ಪ್ರಯತ್ನವೆಂದರೆ ಸಿಗ್ಮಂಡ್ ಫ್ರಾಯ್ಡ್‌ನ ಗುದ ಧಾರಣ ಸಿದ್ಧಾಂತ. ಇದು ಜಿಪುಣತನದ ವರ್ತನೆಯ ಬೆಳವಣಿಗೆಯನ್ನು ಬಾಲ್ಯದಲ್ಲಿನ ಶೌಚಾಲಯ ತರಬೇತಿಗೆ ಆರೋಪಿಸುತ್ತದೆ. ಆದರೆ ಈ ವಿವರಣೆಯನ್ನು ಆಧುನಿಕ ಸಾಕ್ಷ್ಯಾಧಾರಿತ ಮನೋವಿಜ್ಞಾನವು ಸ್ವೀಕರಿಸುವುದಿಲ್ಲ.[೨]