ಜೆನ್ನಿಫರ್ ಇ. ಜೋನ್ಸ್ (ಜನನ ೧೯೬೭) ಕೆನಡಾದ ಸಂವಹನ ಕಾರ್ಯನಿರ್ವಾಹಕ. ಅವರು ೨೦೨೨-೨೩ ರ ರೋಟರಿ ಇಂಟರ್‌ನ್ಯಾಶನಲ್‌ನ ಅಧ್ಯಕ್ಷರಾಗಿದ್ದಾರೆ. ಅಲ್ಲದೆ ಸಂಸ್ಥೆಯ ೧೧೭ ವರ್ಷಗಳ ಇತಿಹಾಸದಲ್ಲಿ ಆಯ್ಕೆಯಾದ ಮೊದಲ ಮಹಿಳೆ. [೧] [೨]
ಜೋನ್ಸ್ ಅವರು ಈ ಹಿಂದೆ ರೋಟರಿ ಅಂತಾರಾಷ್ಟ್ರೀಯದ ಉಪಾಧ್ಯಕ್ಷರಾಗಿ, ನಿರ್ದೇಶಕರಾಗಿ, ತರಬೇತಿ ನಾಯಕರಾಗಿ, ಸಮಿತಿ ಅಧ್ಯಕ್ಷರಾಗಿ, ಮಾಡರೇಟರ್ ಮತ್ತು ಜಿಲ್ಲಾ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು. ರೋಟರಿ ಅಂತಾರಾಷ್ಟ್ರೀಯದ ಅಧ್ಯಕ್ಷರಾಗಿ ೪೦ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳಾ ರೋಟೇರಿಯನ್‌ಗಳು ಮತ್ತು ರೋಟೇರಿಯನ್‌ಗಳ ಸಂಖ್ಯೆಯಲ್ಲಿ ಎರಡಂಕಿಯ ಬೆಳವಣಿಗೆಯನ್ನು ಹೊಂದುವುದು ತನ್ನ ಗುರಿಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು. [೩]
ಕೋವಿಡ್-೧೯ ಸಾಂಕ್ರಾಮಿಕ ರೋಗಕ್ಕೆ ಪ್ರತಿಕ್ರಿಯೆಯಾಗಿ ರೋಟರಿ ಮಾಡಿದ ಕೆಲಸದ ಬಗ್ಗೆ ತುಂಬಾ ಹೆಮ್ಮೆಯಿದೆ ಎಂದು ಜೋನ್ಸ್ ಹೇಳಿದರು. ಸ್ಥಳೀಯ ಕ್ಲಬ್‌ಗಳು ಈ ಪ್ರತಿಕ್ರಿಯೆಗೆ ಸಹಾಯ ಮಾಡಲು $ ೨೯.೭ ದಶಲಕ್ಷ ಒದಗಿಸಿದ್ದಾರೆ.[೪]
ಜೋನ್ಸ್ ಒಂಟಾರಿಯೊದ ವಿಂಡ್ಸರ್‌ನಲ್ಲಿರುವ ಮೀಡಿಯಾ ಸ್ಟ್ರೀಟ್ ಪ್ರೊಡಕ್ಷನ್ಸ್‌ನ ಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದಾರೆ. ಅವಳು ಮತ್ತು ಅವಳ ಪತಿ ನಿಕ್ ಕ್ರಯಾಸಿಚ್ ಇಲಿನಾಯ್ಸ್‌ನ ಇವಾನ್‌ಸ್ಟನ್‌ನಲ್ಲಿರುವ ರೋಟರಿ ಅಂತಾರಾಷ್ಟ್ರೀಯದ ಪ್ರಧಾನ ಕಛೇರಿಯ ಬಳಿ ವಾಸಿಸುತ್ತಿರುವಾಗ ಆ ಕಂಪನಿಯ ದೈನಂದಿನ ಕಾರ್ಯಾಚರಣೆಗಳನ್ನು ಮೀಡಿಯಾ ಸ್ಟ್ರೀಟ್ ಸಿಇಒ ಕೆಲ್ಲಿ ಬ್ಲೇಸ್‌ನವರಿಗೆ ವಹಿಸಿ ಕೊಡಬೇಕೆಂದು ನಿರೀಕ್ಷಿಸುತ್ತಾಳೆ. [೫]
ಜೋನ್ಸ್ ರೋಟರಿ ಕ್ಲಬ್ ಆಫ್ ವಿಂಡ್ಸರ್-ರೋಸ್‌ಲ್ಯಾಂಡ್‌ನ ಸದಸ್ಯರಾಗಿದ್ದಾರೆ.[೫]