ಜೇಮ್ಸ್ ಅಗಸ್ಟಸ್ ಹಿಕ್ಕಿ | |
---|---|
"ಹಿಕ್ಕಿಸ್ ಬೆಂಗಾಲ್ ಗೆಝೆಟ್" ನ ಸಂಸ್ಥಾಪಕ ಹಾಗೂ ಸಂಪಾದಕ | |
In office ೨೯ ಜನವರಿ ೧೭೮೦ – ೨೩ ಮಾರ್ಚ್ ೧೭೮೨ | |
Personal details | |
Born | ೧೭೪೦ ಐರ್ಲ್ಯಾಂಡ್ |
Died | ಅಕ್ಟೋಬರ್ ೧೮೦೨ |
Nationality | ಐರಿಶ್ |
Residence(s) | ಕೊಲ್ಕೊತ್ತ, ಭಾರತ |
ಜೇಮ್ಸ್ ಅಗಸ್ಟಸ್ ಹಿಕ್ಕಿ ಭಾರತದ ಮೊತ್ತ ಮೊದಲ ಮುದ್ರಿತ ಪತ್ರಿಕೆ "ಹಿಕ್ಕಿಸ್ ಬೆಂಗಾಲ್ ಗೆಝೆಟ್" ನ ಸಂಸ್ಥಾಪಕನಾಗಿದ್ದ. ಈತನನ್ನು ಭಾರತೀಯ ಪತ್ರಿಕೋದ್ಯಮದ ಮೊದಲ ಪತ್ರಕರ್ತ ಎಂದು ಪರಿಗಣಿಸಲಾಗಿದೆ.[೧]
೧೭೪೦ರ ಆಸುಪಾಸಿನಲ್ಲಿ ಐರ್ಲೆಂಡ್‍ನಲ್ಲಿ ಜನಿಸಿದನು. ತನ್ನ ಯವ್ವನದಲ್ಲಿ ಲಂಡನ್‍ಗೆ ತೆರಳಿ ಅಂದಿನ ದಿನಗಳಲ್ಲಿ ಖ್ಯಾತನಾಗಿದ್ದ ಮುದ್ರಕ ವಿಲಿಯಂ ಫೇಡನ್‍ನೊಂದಿಗೆ ಕೆಲಸಕ್ಕೆ ಸೇರಿದ. ಆದರೆ ಹಿಕ್ಕಿ ಮುದ್ರಣ ಕಾರ್ಯವನನು ಮುಂದುವೆರಸದೇ ವಿಲಿಯಂ ಡೇವಿ ಎಂಬ ವಕೀಲನಲ್ಲಿ ಗುಮಾಸ್ತನಾಗಿ ವೃತ್ತಿ ಮುಂದುವರೆಸಿದ. ಇದೊರೊಂದಿ ವೈದ್ಯಕೀಯ ವೃತ್ತಿಯ ಅಭ್ಯಾಸವನ್ನು ಮಾಡತೊಡಗಿದ. ನಂತರ ೧೯೭೭೨ರಲ್ಲಿ ಶಸ್ತ್ರಚಿಕಿತ್ಸಕರೊಬ್ಬರ ಸಹಾಯಕನಾಗಿ ಈಸ್ಟ್ ಇಂಡಿಯಾ ಕಂಪೆನಿಯ ಹಡಗಿನಲ್ಲಿ ಕಲ್ಕತ್ತೆಗೆ ಬಂದು ನೆಲೆಸಿದ. ಕಲ್ಕತ್ತೆಯಲ್ಲಿ ವೈದ್ಯಕೀಯ ವೃತ್ತಿಯೊಂದಿಗೆ ಸಮುದ್ರ ವ್ಯಾಪಾರದಲ್ಲೂ ತನ್ನನ್ನು ತೊಡಗಿಸಿಕೊಂಡ.೧೯೭೭೬ರ ಹೊತ್ತಿಗೆ, ಅವನ ಆತ ಬಾಡಿಗೆಗ ಪಡೆದಿದ್ದ ಹಡಗು ತನ್ನ ಸರಕುಗಳೊಂದಿಗೆ ಮುಳುಗಿದ ಕಾರಣ ತೀವ್ರ ನಷ್ಟಕ್ಕೆ ಈಡಾದ. ಇದರಿಂದ ತನ್ನ ಸಾಲಗಾರರಿಗೆ ಸಕಾಲದಲ್ಲಿ ಪಾವತಿಸಲು ಸಾಧ್ಯವಾಗಲಿಲ್ಲ, ಹಿಕಿ ಅಕ್ಟೋಬರ್ ೧೭೭೬ರಲ್ಲಿ ಸಾಲಗಾರರ ಸೆರೆಮನೆಗೆ ಪ್ರವೇಶಿಸಿದನು. ಸೆರೆಮನೆಯಲ್ಲಿ ಇದ್ದ ಸಂದರ್ಭದಲ್ಲಿಯೇ ಆತ ಮುದ್ರಣ ಯಂತ್ರಗಳನ್ನು ಹೊಂದಿಸಿಕೊಂಡು ತನ್ನ ೧೭೭೭ರಲ್ಲಿ ಮುದ್ರಣ ವೃತ್ತಿ ಪ್ರಾರಂಭಿಸಿದನು. ೧೭೭೮ರಲ್ಲಿ ವಿಲಿಯಂ ಹಿಕ್ಕಿ ಎಂಬ ವಕೀಲನನ್ನು ತನ್ನ ಮೇಲಿರುವ ಸಾಲದ ಮೊಕದ್ದಮೆಗಳನ್ನು ನಿಭಾಯಿಸಲು ನೇಮಿಸಿದ.
ಹಿಕಿ ೨೯ ಜನವರಿ ೧೭೮೦ರಂದು "ಹಿಕ್ಕಿಸ್ ಬೆಂಗಾಲ್ ಗೆಝೆಟ್" ನ ಪ್ರಕಟಣೆಯನ್ನು ಪ್ರಾರಂಭಿಸಿದನು. ಹಿಕಿ ಮೊದಲು ತಟಸ್ಥ ನೀತಿಯನ್ನು ಉಳಿಸಿಕೊಂಡು ಪತ್ರಿಯನ್ನು ನಡೆಸುತ್ತಿದ್ದನು.ಒಂದು ರೂ. ಬೆಲೆಯ ಈ ಸಾಪ್ತಾಹಿಕವಾಗಿ ೪೦೦ ಪ್ರತಿಗಳಂತೆ ತಿಂಗಳಿಗೆ ೧೬೦೦ ಪ್ರತಿಗಳು ಮುದ್ರಿತವಾಗುತ್ತಿತ್ತು ಆದರೆ ಈಸ್ಟ್ ಇಂಡಿಯಾ ಕಂಪೆನಿಯು ತನ್ನ ಪತ್ರಿಕೆಗೆ ಸ್ಪರ್ಧಿಯಾಗಿ ದಿ ಇಂಡಿಯಾ ಗೆಜೆಟ್ ಅನ್ನು ಮಾರುಕಟ್ಟೆಗೆ ತರಲು ಹೊರಟಿದ್ದಾರೆ ಎಂದು ತಿಳಿದ ನಂತರ, ಈಸ್ಟ್ ಇಂಡಿಯಾ ಕಂಪನಿ ಉದ್ಯೋಗಿ ಸಿಮಿಯೋನ್ ಡ್ರೋಝ್ ಹಾಗೂ ವಾರೆನ್ ಹೇಸ್ಟಿಂಗ್ಸ್ ಅವರ ಪತ್ನಿ ಡ್ರೋಜ್ ಮತ್ತು ಮರಿಯನ್ ಹೇಸ್ಟಿಂಗ್ಸ್‌ಗೆ ಲಂಚ ನೀಡಲು ನಿರಾಕರಿಸಿದ ಕಾರಣ ಇಂಡಿಯಾ ಗೆಜೆಟ್‌ನ ಸಂಪಾದಕರನ್ನು ಬೆಂಬಲಿಸುತ್ತಾ ಇದ್ದಾರೆ ಎಂದು ಆರೋಪಿಸಿದನು.[೨]
೧೭೮೦ ಜನವರಿ ಮಾಹೆಯಿಂದ ಸತತವಾಗಿ ೨೬ ತಿಂಗಳ ಕಾಲ ಪ್ರಕಟಣೆ ಕಂಡ ಈ ಪತ್ರಿಕೆಯು ೧೭೮೨ ಮಾರ್ಚ್ ತಿಂಗಳಲ್ಲಿ ತನ್ನ ಪ್ರಕಟಣೆಯನ್ನು ಸ್ಥಗಿತಗೊಳಿಸಿತು, ಈಸ್ಟ ಇಂಡಿಯಾ ಕಂಪೆನಿಯ ವಿರುದ್ದ ಪ್ರಕಟಸಿಲಾದ ವರದಿಗಳನ್ನು ಆಧರಿಸಿ ಸಾಕಷ್ಟು ಮೊಕದ್ದಮೆಗಳು ಹಿಕ್ಕಿಯ ಮೇಲೆ ದಾಖಲಾದವು. ಸುಮಾರು ೪೦,೦೦೦ ರೂಪಾಯಿಗಳ ಜಾಮಿನು ದಂಡ ತೇರವು ಆದೇಶ ನ್ಯಾಯಾಲಯದಿಂದ ನೀಡಲಾಯಿತು. ದಂಡ ತೇರಲು ವಿಫಲನಾದ ಹಿಕ್ಕಿ ಜೈಲಿನಲ್ಲಿಯೆ ಇರಬೇಕಾಯಿತು. ೧೭೮೫ರಲ್ಲಿ ವಾರೆನ್ ಹೇಸ್ಟಿಂಗ್ಸ್ ಮರಳಿ ಇಂಗ್ಲಂಡ್‍ಗೆ ತೆರಳಿದ ಮೇಳೆ ಹಿಕ್ಕಿಗೆ ಶರತ್ತುಬದ್ದ ಕ್ಷಮಾದಾನ ದೊರೆಯಿತು
೧೮೦೨ ಅಕ್ಟೋಬರ್ ನಲ್ಲಿ ಹಿಕ್ಕಿ ನಿಧನರಾದರೆಂದು ಅಂದಾಜಿಸಲಾಗಿದೆ. ಹಿಕ್ಕಿಯ ಭಾವಚಿತ್ರಗಳು ಲಭ್ಯವಿಲ್ಲ. ಅಂತರ್ಜಾಲದಲ್ಲಿ ಇರುವ ಹಿಕ್ಕಿ ನಾಂದ ಚಿತ್ರಗಳ ಆತನಿಗೆ ಸಂಬಂಧಿಸಿದವಲ್ಲ ಎನ್ನಲಾಗಿದೆ.[೩]