ಜೇಮ್ಸ್ ರಾಬರ್ಟ್ ಬಿ. ಕ್ವಿನ್ಸಿ (೮ ಜನವರಿ ೧೯೬೫) ಯುನೈಟೆಡ್ ಸ್ಟೇಟ್ಸ್ ಮೂಲದ ಬ್ರಿಟಿಷ್ ಉದ್ಯಮಿ.[೨] ಬೈನ್ & ಕಂನಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ನಂತರ, ಅವರು ೧೯೯೬ ರಲ್ಲಿ ದಿ ಕೋಕಾ-ಕೋಲಾ ಕಂಪನಿಗೆ ಸೇರಿದರು. ನಂತರ ಇವರನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಒಒ) ಎಂದು ಹೆಸರಿಸಲಾಯಿತು. ಅವರು ಈಗ ಕೋಕಾ-ಕೋಲಾ ಕಂಪನಿಯ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿದ್ದಾರೆ.[೩]
ಜೇಮ್ಸ್ ರಾಬರ್ಟ್ ಬಿ. ಕ್ವಿನ್ಸಿ ೮ ಜನವರಿ ೧೯೬೫ ರಂದು ಲಂಡನ್, ಇಂಗ್ಲೆಂಡ್, ಯುಕೆ ನಲ್ಲಿ ಜನಿಸಿದರು. ಅವರ ತಂದೆ ಡಾರ್ಟ್ಮೌತ್ ಕಾಲೇಜಿನಲ್ಲಿ ಬಯೋಕೆಮಿಸ್ಟ್ರಿಯಲ್ಲಿ ಉಪನ್ಯಾಸಕರಾಗಿದ್ದಾಗ, ಮೂರು ವರ್ಷಗಳ ಕಾಲ ಯುಎಸ್ ನ ನ್ಯೂ ಹ್ಯಾಂಪ್‌ಶೈರ್‌ನ ಹ್ಯಾನೋವರ್‌ನಲ್ಲಿ ವಾಸವಾಗಿದ್ದರು.[೪] ಐದನೇ ವಯಸ್ಸಿನಲ್ಲಿ, ಅವರು ಇಂಗ್ಲೆಂಡ್‌ನ ಬರ್ಮಿಂಗ್ಹ್ಯಾಮ್‌ಗೆ ತೆರಳಿದರು. ಅವರು ಬರ್ಮಿಂಗ್ಹ್ಯಾಮ್‌ನ ಖಾಸಗಿ ಕಿಂಗ್ ಎಡ್ವರ್ಡ್ಸ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು ಮತ್ತು ಲಿವರ್‌ಪೂಲ್ ವಿಶ್ವವಿದ್ಯಾನಿಲಯದಿಂದ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು.[೪] ಅವರು ಸ್ಪ್ಯಾನಿಷ್ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ.
ಬೈನ್ & ಕೋ ಮತ್ತು ಸಣ್ಣ ಸಲಹಾ ಸಂಸ್ಥೆಯೊಂದಿಗೆ ಕೆಲಸ ಮಾಡಿದ ನಂತರ, ಅವರು ೧೯೯೬ ರಲ್ಲಿ ಕೋಕಾ-ಕೋಲಾಗೆ ಸೇರಿದರು. ಕೋಕ್ ಸಂಸ್ಥೆಯೊಂದಿಗೆ ಅವರು ಲ್ಯಾಟಿನ್ ಅಮೆರಿಕಾದಲ್ಲಿ ವಾಸಿಸುತ್ತಿದ್ದರು ಮತ್ತು ಮೆಕ್ಸಿಕೋದಲ್ಲಿ ಕೋಕ್‌ಗಾಗಿ ಕೆಲಸ ಮಾಡಿದರು, ಅಲ್ಲಿ ಅವರು ಜುಗೋಸ್ ಡೆಲ್ ವ್ಯಾಲೆಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾದರು.[೫][೬] ೨೦೧೫ ರಲ್ಲಿ, ಕ್ವಿನ್ಸಿ ಕೋಕಾ-ಕೋಲಾದ ಅಧ್ಯಕ್ಷರಾದರು.[೭][೮] ಕಂಪನಿಯಲ್ಲಿನ ಬ್ರ್ಯಾಂಡ್‌ಗಳಿಗಾಗಿ ಐದು ವರ್ಗದ ಕ್ಲಸ್ಟರ್‌ಗಳನ್ನು ಹೊಂದುವ ಯೋಜನೆಯನ್ನು ಅವರು ವಿವರಿಸಿದರು. ಅವರು ನಿರ್ವಹಣೆ ಮತ್ತು ಸಂಪೂರ್ಣ ಕೋಕ್ ಶ್ರೇಣಿಯನ್ನು ಬದಲಾಯಿಸಿದರು.[೯][೧೦]
ಅವರನ್ನು ಡಿಸೆಂಬರ್ ೨೦೧೬ ರಲ್ಲಿ ಸಿಇಒ ಆಗಿ ನೇಮಿಸಲಾಯಿತು.[೧೧][೧೨][೧೩][೧೪] ಮುಂದಿನ ಮೇ ತಿಂಗಳಲ್ಲಿ ಮುಹ್ತಾರ್ ಕೆಂಟ್ ನಿವೃತ್ತರಾದಾಗ ಅವರು ಸಿಇಒ ಆದರು. ಸಿಇಒ ಆಗಿ ಅವರ ಮೊದಲ ಕಾರ್ಯಗಳಲ್ಲಿ, ಅವರು ಹೊಸ ಉತ್ಪನ್ನಗಳು ಮತ್ತು ಮಾರ್ಕೆಟಿಂಗ್‌ನಲ್ಲಿ ಹೂಡಿಕೆ ಮಾಡುವ ಯೋಜನೆಯ ಭಾಗವಾಗಿ ೧,೨೦೦ ಕಾರ್ಪೊರೇಟ್ ಹುದ್ದೆಗಳನ್ನು ಕಡಿಮೆಗೊಳಿಸುವುದಾಗಿ ಘೋಷಿಸಿದರು ಮತ್ತು ವರ್ಷದ ಆದಾಯ ಮತ್ತು ಲಾಭದ ಬೆಳವಣಿಗೆಯನ್ನು ನಾಲ್ಕರಿಂದ ಆರು ಪ್ರತಿಶತಕ್ಕೆ ಮರುಸ್ಥಾಪಿಸಿದರು.[೬] ಕ್ವಿನ್ಸಿ ಅವರು ಕೋಕ್ ಕಂಪನಿಯ ಅಪಾಯದ ಬಗ್ಗೆ ಅತಿಯಾದ ಎಚ್ಚರಿಕೆಯ ಸಂಸ್ಕೃತಿಯನ್ನು ತೊಡೆದುಹಾಕಲು ಬಯಸಿದ್ದರು ಎಂದು ಸಂದರ್ಶನಗಳಲ್ಲಿ ಹೇಳಿದರು, ಮತ್ತು ಆರಂಭಿಕ ವ್ಯವಹಾರಗಳಲ್ಲಿ ಹೂಡಿಕೆಗಳನ್ನು ವೇಗಗೊಳಿಸುವ ಮೂಲಕ ಕೋಕ್‌ನ ಬಂಡವಾಳವನ್ನು ಮತ್ತಷ್ಟು ವೈವಿಧ್ಯಗೊಳಿಸಲು ಅವರು ಉದ್ದೇಶಿಸಿದ್ದರು.[೧೫][೧೬] ನಂತರ ಅವರು ೨೦೩೦ ರ ವೇಳೆಗೆ ಮಾರಾಟವಾಗುವ ಪ್ರತಿ ಬಾಟಲಿಗೆ ಒಂದು ಬಾಟಲಿಯನ್ನು ಮರುಬಳಕೆ ಮಾಡುವ ಯೋಜನೆಯನ್ನು ಪ್ರಾರಂಭಿಸಿದರು.[೧೭] ೨೪ ಏಪ್ರಿಲ್ ೨೦೧೯ ರಂದು, ಕ್ವಿನ್ಸಿ ಅವರು ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾದರು.[೧೮] ಡಿಸೆಂಬರ್ ೨೦೨೧ ರಲ್ಲಿ ಕ್ವಿನ್ಸಿ ತನ್ನ ನಿಧಾನಗತಿಯಲ್ಲಿ ಮಾರಾಟವಾಗುತ್ತಿರುವ ಉತ್ಪನ್ನಗಳಾದ ಟ್ಯಾಬ್ ಮತ್ತು ಜಿಕೊ ತೆಂಗಿನ ನೀರಿನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದರು.[೧೯]