ಟೊರಾಂಟೋ ಐಲೆಂಡ್ಸ್ [೧]ಇರುವ ಜಾಗ,ಅನೇಕ ದ್ವೀಪಗಳ ಸಮೂಹ, ಈಜು, ಮೊದಲಾದ ನೀರಿನಮೇಲೆ ತೇಲುವ ಅಥವಾ ಕ್ರೀಡೆಯ 'ಪಿಕ್ ನಿಕ್' ಪ್ರಿಯರ ಮನ ಮೆಚ್ಚುವ ತಾಣ.'ಜಿಬ್ರಾಲ್ಟರ್ ಪಾಯಿಂಟ್ ಲೈಟ್ ಹೌಸ್, ಫ್ರಾಂಕ್ಲಿನ್ ಮಕ್ಕಳ ಉದ್ಯಾನ, ಮತ್ತು ಸೆಂಟರ್ ವಿಲ್ಲೆ ತಾಣಗಳನ್ನು ಮನರಂಜನೆಯ ಜಾಗಗಳೆಂದು ಗುರುತಿಸಿದ್ದಾರೆ. ಇಲ್ಲಿ ವಾಲೀಬಾಲ್ ನೆಟ್ಸ್ ಕೋರ್ಟ್ ಗಳು, ಬೀಚುಗಳಿವೆ, ಬೋಟ್ ಹಾಗೂ ಸೈಕಲ್ಸವಾರಿಗೆ ಅನುಕೂಲವಿದೆ. ಕೆಫೆ, ಸ್ನಾಕ್ ಬಾರ್, ಹಾಗೂ ರೆಸ್ಟಾರೆಂಟ್ ಗಳು ಸಾಕಷ್ಟಿದ್ದು ಎಲ್ಲಾ ತರಹದ ಖಾದ್ಯಪದಾರ್ಥಗಳು ಸವಿಯಲು ದೊರೆಯುತ್ತವೆ. 'ಟೊರಾಂಟೋನಗರದ ರಾಣಿ' ಎಂದು ಹೆಸರಾದ,ಸಿ. ಎನ್. ಟವರ್, ಟೊರಾಂಟೋ, ಇಲ್ಲಿಗೆ ತೀರ ಸಮೀಪ; ಎದುರಿಗೇ ಗೋಚರಿಸುತ್ತದೆ. ಹಾಗೆಯೇ 'ಸಿ.ಎನ್.ಟವರ್' ಮೇಲಿನಿಂದ ನೋಡಿದಾಗ ಕೇವಲ ಮರಗಳ ದಟ್ಟ ಹಸಿರು ಬಣ್ಣ ಮಾತ್ರ ಕಾಣಿಸುತ್ತದೆ. 'ಐಲೆಂಡ್ ಏರ್ಪೋರ್ಟ್' ಮತ್ತು ಚಿಕ್ಕ ವಿಮಾನಗಳು ಬಂದಿಳಿಯುವ, ಹಾಗೂ ಹೊರಡುವ ದೃಶ್ಯವನ್ನು ವೀಕ್ಷಿಸಬಹುದು.
ಟೊರಾಂಟೋನಗರದ 'ಸಬ್ವೇ'ನಲ್ಲಿ ಪ್ರಯಾಣಿಸಿ, 'ಯೂನಿಯನ್ ಸ್ಟೇಶನ್'ನಲ್ಲಿ ಇಳಿದು 'ಫೆರ್ರಿ'[೨] ಕಡೆಗೆ ನಡದೇ ತಲುಪಬಹುದು. ಅಲ್ಲಿಂದ ಐಲೆಂಡ್ ಕಡೆಗೆ 'ಫೆರ್ರಿ ಸರ್ವೀಸ್' ಉಪಲಬ್ಧವಿದೆ.