ಟ್ರ್ಯಾಂಟರ್ ಎಂಬುದು ಐಸಾಕ್ ಅಸಿಮೋವ್ ಹೆಸರಿಸಿದ ಕ್ಷೀರ ಪಥದ ನಡುವಿನ ಸಮೀಪದಲ್ಲಿರುವ ಕಾಲ್ಪನಿಕ ಗ್ರಹ. ಇದು ಅವರ ಪ್ರತಿಷ್ಠಾನ ಸರಣಿ ಕಾದಂಬರಿಗಳಲ್ಲಿ ಮತ್ತು ಸಾಮ್ರಾಜ್ಯ ಸರಣಿ ಕಾದಂಬರಿಗಳಲ್ಲಿ ಬರುವ ಕ್ಷೀರಪಥ ಸಾಮ್ರಾಜ್ಯದ ಕೇಂದ್ರ ಸರ್ಕಾರವಿರುವ ಗ್ರಹ.
ಕಾದಂಬರಿಗಳಲ್ಲಿ ದೊರಕುವ ಗ್ರಹದ ಬಗೆಗಿನ ಮಾಹಿತಿ
[ಬದಲಾಯಿಸಿ]
- ಗ್ರಹವು ೮೦೦ ವಿಭಾಗ (ಸೆಕ್ಟರ್)ಗಳಾಗಿ ವಿಂಗಡಿತವಾಗಿದೆ: ಉದಾಹರಣೆಗೆ ಸ್ಟ್ರೀಲಿಂಗ್, ಡಾಃಲ್, ಮೈಕೊಜೆನ್
- ಗ್ರಹದ ಜನಸಂಖ್ಯೆ ೪೦ ಬಿಲಿಯನ್
- ಈ ಗ್ರಹದಲ್ಲಿ ರಾಜಕೀಯ ಸಂಸ್ಥೆಗಳು ಮತ್ತು ಆಡಳಿತ ಕಛೇರಿಗಳನ್ನು ಬಿಟ್ಟರೆ ಬೇರಾವ ಕೈಗಾರಿಕೆಯೂ ಇಲ್ಲ. ಹಲವಾರು ಕೃಷಿಕಾರ ಗ್ರಹಗಳಿಂದ ಇಲ್ಲಿನ ನಿವಾಸಿಗಳಿಗೆ ಆಹಾರ ಸರಬರಾಜು
- ಗ್ರಹದ ಬಹುತೇಕ ಮೇಲ್ಮೈಯನ್ನು ಅರ್ಧಗೋಳಗಳಿಂದ ಮುಚ್ಚಿದ್ದು, ಹವಾಮಾನವನ್ನು ಕೃತಕವಾಗಿ ನಿಯಂತ್ರಿಸಲಾಗುವುದು. ಟ್ರ್ಯಾಂಟರ್ ನಿವಾಸಿಗಳು ಬಹಳ ಅಪರೂಪವಾಗಿ ತಮ್ಮನ್ನು ಅನಿಯಂತ್ರಿತ ನೈಸರ್ಗಿಕ ಬಿಸಿಲು-ಮಳೆ-ಗಾಳಿಗಳಿಗೆ ಒಡ್ಡುತ್ತಾರೆ
- ಗ್ರಹದ ಮೇಲ್ಮೈನಿಂದ ಹಲವು ಕಿಲೋಮೀಟರ್ ಗಳಷ್ಟು ಆಳದ ವರೆಗೂ ಕಂದಕಗಳನ್ನು ಕೊರೆದು ಅದನ್ನು ವಾಸಯೋಗ್ಯಗೊಳಿಸಲಾಗಿರುವುದು.