ಡಬಲ್ ಕಾ ಮೀಠಾ[೧][೨] ಒಂದು ಭಾರತೀಯ ಬ್ರೆಡ್ ಪುಡಿಂಗ್ ಸಿಹಿ ತಿನಿಸಾಗಿದೆ. ಬ್ರೆಡ್‍ನ ತುಂಡುಗಳನ್ನು ಕರಿದು ಸೇರಿದಂತೆ ಕೇಸರಿ ಮತ್ತು ಏಲಕ್ಕಿ ಸೇರಿದಂತೆ ಸಂಬಾರ ಪದಾರ್ಥಗಳೊಂದಿಗೆ ಬಿಸಿ ಹಾಲಿನಲ್ಲಿ ನೆನೆಸಿ ಇದನ್ನು ತಯಾರಿಸಲಾಗುತ್ತದೆ.[೩] ಡಬಲ್ ಕಾ ಮೀಠಾ ತೆಲಂಗಾಣಾದ ಹೈದರಾಬಾದ್‌ನ ಒಂದು ಡಿಜ಼ರ್ಟ್ ಆಗಿದೆ.[೪] ಇದು ಹೈದರಾಬಾದಿ ಪಾಕಪದ್ಧತಿಯಲ್ಲಿ ಜನಪ್ರಿಯವಾಗಿದೆ ಮತ್ತು ಇದನ್ನು ಮದುವೆ ಸಮಾರಂಭಗಳು ಮತ್ತು ಪಾರ್ಟಿಗಳಲ್ಲಿ ಬಡಿಸಲಾಗುತ್ತದೆ. ಡಬಲ್ ಕಾ ಮೀಠಾ ಪದಗುಚ್ಛವು ಹಾಲಿನ್ ಬ್ರೆಡ್‍ನ್ನು ಸೂಚಿಸುತ್ತದೆ. ಇದನ್ನು ಸ್ಥಳೀಯ ಭಾರತೀಯ ಪ್ರಾಂತ ಭಾಷೆಯಲ್ಲಿ "ಡಬಲ್ ರೋಟಿ" ಎಂದು ಕರೆಯಲಾಗುತ್ತದೆ ಏಕೆಂದರೆ ಇದು ಬೇಕಿಂಗ್‍ನ ನಂತರ ತನ್ನ ಮೂಲ ಗಾತ್ರದ ದುಪ್ಪಟ್ಟು ಗಾತ್ರಕ್ಕೆ ಉಬ್ಬಿಕೊಳ್ಳುತ್ತದೆ.
The very sweet, ghee-rich fried bread pudding laced with almonds, in Hyderabad termed double-ka-meeta, the name stemming from the double-rod (bread loaf) that is used to make it.