ಡಾಕಿ ಅಥವಾ ಡೌಕಿ ಭಾರತದ ಮೇಘಾಲಯ ರಾಜ್ಯದ ಪಶ್ಚಿಮ ಜೈಂಟಿಯಾ ಗುಡ್ಡಗಳ ಜಿಲ್ಲೆಯಲ್ಲಿರುವ ಒಂದು ಪಟ್ಟಣವಾಗಿದೆ.
ಡಾಕಿ ಜಕಾತಿ ಕಟ್ಟೆ ಅಥವಾ ಡಾಕಿ ಗಡಿ ದಾಟು ಸ್ಥಳವು ಡಾಕಿ-ಟಾಮಾಬಿಲ್ ಮೇಲಿದೆ. ಇದು ಭಾರತದ ಮೇಘಾಲಯ ರಾಜ್ಯದ ಪಶ್ಚಿಮ ಜೈಂಟಿಯಾ ಗುಡ್ಡಗಳ ಜಿಲ್ಲೆಯಲ್ಲಿರುವ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಕೆಲವು ರಸ್ತೆ ಗಡಿ ದಾಟು ಸ್ಥಳಗಳಲ್ಲಿ ಒಂದು. ಡಾಕಿ ಐಸಿಪಿಯ ಅಡಿಗಲ್ಲನ್ನು ಜನೆವರಿ ೨೦೧೭ರಲ್ಲಿ ಸ್ಥಾಪಿಸಲಾಯಿತು. ಇದನ್ನು ಮುಖ್ಯವಾಗಿ ಬಾಂಗ್ಲಾದೇಶಕ್ಕೆ ಕಲ್ಲಿದ್ದಲು ಸಾಗಾಣಿಕೆಗೆ ಬಳಸಲಾಗುತ್ತದೆ. ಅತ್ಯುಚ್ಛ್ರಾಯ ಋತುವಿನಲ್ಲಿ ಪ್ರತಿದಿನ ಸುಮಾರು ೫೦೦ ಟ್ರಕ್‍ಗಳು ಗಡಿರೇಖೆಯನ್ನು ದಾಟುತ್ತವೆ.[೧][೨][೩]