ಡೇವಿ ಡಿ ಬ್ಯೂಲ್ (ಜನನ 7 ನವೆಂಬರ್ 1981) ಅವರು ಬೆಲ್ಜಿಯಂನ ಮಾಜಿ ವೃತ್ತಿಪರ ಫುಟ್ಬಾಲ್ ಆಟಗಾರ. ಅವರು ಬೆಲ್ಜಿಯಂನ ಫುಟ್‌ಬಾಲ್ ತಂಡದಲ್ಲಿ ಬಲ ಮಿಡ್‌ಫೀಲ್ಡರ್ ಆಗಿ ಆಡುತ್ತಿದ್ದರು.
ಡಿ ಬ್ಯೂಲ್ ಅವರು ಬೆಲ್ಜಿಯಂನ ಹ್ಯಾಮೆ ಎಂಬಲ್ಲಿ ಜನಿಸಿದರು. ಅವರು 6 ನೇ ವಯಸ್ಸಿನಲ್ಲಿ ಹ್ಯಾಮೆಯನ್ನು ತೊರೆದರು ಮತ್ತು 1992 ರಲ್ಲಿ ಲೋಕರೆನ್ ಗೆ ತೆರಳಿದರು. ಆರು ವರ್ಷಗಳ ನಂತರ ಅವರು ಫುಟ್‌ಬಾಲ್ ಕ್ಲಬ್‌ನ ಮೊದಲ ತಂಡವನ್ನು ಪ್ರವೇಶಿಸಿದರು. ಅವರು ಲೋಕರೆನ್‌ಗಾಗಿ ಒಟ್ಟು 128 ಪಂದ್ಯಗಳನ್ನು ಆಡಿದ್ದಾರೆ. 2002-03 ಸಾಲಿನಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಅವರ ಕ್ಲಬ್ ಮೂರನೇ ಸ್ಥಾನದ ಸಾಧನೆಯನ್ನು ಮಾಡುವಲ್ಲಿ ಡಿ ಬ್ಯೂಲ್ ರವರು ಪರಮುಖ ಪಾತ್ರವನ್ನು ವಹಿಸಿದ್ದರು. ಮತ್ತು ಅವರು ಆ ವರ್ಷದ ಬೆಲ್ಜಿಯನ್ ಯುವ ವೃತ್ತಿಪರ ಫುಟ್ಬಾಲ್ ಆಟಗಾರ ಎಂದು ಗುರುತಿಸಲ್ಪಟ್ಟರು.[೧] ಅವರು 2004 ರವರೆಗೆ ಲೋಕರೆನ್‌ನಲ್ಲಿಯೇ ಇದ್ದರು, ತದನಂತರ ಜೆಂಟ್‌ಗೆ ತೆರಳಿದರು. ಜೆಂಟ್ ಫುಟ್‌ಬಾಲ್ ಕ್ಲಬ್ ಮೂಲಕ ಅವರು 2007-08ರ ಬೆಲ್ಜಿಯನ್ ಫುಟ್‌ಬಾಲ್ ಕಪ್ ಚಾಂಪಿಯನ್ಶಿಪ್ನ ಫೈನಲ್ ಸುತ್ತನ್ನು ಪ್ರವೇಶಿಸಿದರು. 2006 ಮತ್ತು 2007 ರಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕನೇ ಸ್ಥಾನ ಪಡೆದರು. 2009 ರಲ್ಲಿ Kortrijk ಗೆ ತೆರಳಿದ ಅವರು, 2011 ರವರೆಗೆ ಅಲ್ಲಿಯೇ ಇದ್ದರು. [೨] ಮುಂದೆ, ಅವರು ಎರೆಡಿವಿಸಿಯ ರೋಡಾಗೆ ಸೇರಿದರು. [೨] ರೋಡಾದಲ್ಲಿ ಅವರು ಮೊದಲ ವರ್ಷದಲ್ಲಿ 24 ಪಂದ್ಯಗಳನ್ನು ಆಡಿದರು ಮತ್ತು 4 ಗೋಲುಗಳನ್ನು ಗಳಿಸಿದರು. [೩] ತದನಂತರ 2014 ರಲ್ಲಿ ಅವರು ಬೀರ್‌ಶಾಟ್ ವಿಲ್ರಿಜ್‌ಗೆ ತೆರಳಿದರು. 2017 ರಲ್ಲಿ ಡಿ ಬ್ಯೂಲ್ ರವರು ಆಟಗಾರರಾಗಿ ತಮ್ಮ ವೃತ್ತಿಪರ ವೃತ್ತಿಜೀವನವನ್ನು ಕೊನೆಗೊಳಿಸಿದರು.
ಲೊಕೆರೆನ್‌ನಲ್ಲಿ ಅವರ ವೃತ್ತಿ ಜೀವನದ ಉತ್ತುಂಗದಲ್ಲಿ ಅವರು ಬೆಲ್ಜಿಯಂನ ರಾಷ್ಟ್ರೀಯ ಫುಟ್‌ಬಾಲ್ ತಂಡಕ್ಕೆ ಆಯ್ಕೆಯಾದರು, [೪] ಆದರೆ ತರಬೇತಿಯ ಸಮಯದಲ್ಲಿ ಗಾಯಗೊಂಡರು ಮತ್ತು ಆದ್ದರಿಂದ ರಾಷ್ಟ್ರೀಯ ತಂಡದೊಂದಿಗೆ ಚೊಚ್ಚಲ ಪ್ರವೇಶ ಮಾಡಲು ಸಾಧ್ಯವಾಗಲಿಲ್ಲ. [೫]