ಡೈಸಿ ಶಾ (ಜನನ : ೨೫ ಆಗಸ್ಟ್ ೧೯೮೪[೨]) ಇವರು ಭಾರತೀಯ ಚಲನಚಿತ್ರ ನಟಿ, ರೂಪದರ್ಶಿ ಮತ್ತು ನರ್ತಕಿ. ಇವರು ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಅವರ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಇವರು ೨೦೧೦ ರ ದ್ವಿಭಾಷಾ ಆಕ್ಷನ್ ಥ್ರಿಲ್ಲರ್ ವಂದೇ ಮಾಥರಂನಲ್ಲಿ ವಿಶೇಷ ಪಾತ್ರದಲ್ಲಿ ಅತಿಥಿಯಾಗಿ ಪಾದಾರ್ಪಣೆ ಮಾಡಿದರು, ಆದರೆ ೨೦೧೧ ರ ಕನ್ನಡ ಚಲನಚಿತ್ರ ಬಾಡಿಗಾರ್ಡ್[೩] ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದರು .ನಂತರ ಅವರು ೨೦೧೪ ರ ಬಾಲಿವುಡ್ ಚಲನಚಿತ್ರ ಜೈ ಹೋ[೪] ಚಿತ್ರದಲ್ಲಿ ಸಲ್ಮಾನ್ ಖಾನ್ ಎದುರು ಕಾಣಿಸಿಕೊಂಡರು. ೨೦೧೫ ರಲ್ಲಿ, ಅವರು ಹೇಟ್ ಸ್ಟೋರಿ ೩[೫] ರ ಭಾಗವಾಗಿದ್ದರು.
ಷಾ ಇವರು ಗುಜರಾತಿ ಕುಟುಂಬಕ್ಕೆ ಸೇರಿದವರು, ಆದರೆ ಮಹಾರಾಷ್ಟ್ರದ ಮುಂಬೈನಲ್ಲಿ ಹುಟ್ಟಿ ಬೆಳೆದರು.[೬] ಇವರು ಜಮೀನ್ ಮತ್ತು ಖಾಕೀ ನಂತಹ ಚಿತ್ರಗಳಲ್ಲಿ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಅವರ ಸಹಾಯಕರಾಗಿ ಕೆಲಸ ಮಾಡಿದರು, ನಂತರ ಮಾಡೆಲಿಂಗ್ ಪ್ರಾರಂಭಿಸಿದರು, ಫೋಟೋ ಶೂಟ್ ಮತ್ತು ಮುದ್ರಣ ಜಾಹೀರಾತುಗಳನ್ನೂ ಸಹ ಮಾಡಿದರು.