ತರೀಕೆರೆ | |
---|---|
ತಾಲೂಕು | |
ದೇಶ | India |
ರಾಜ್ಯ | ಕರ್ನಾಟಕ |
ಜಿಲ್ಲೆ | ಚಿಕ್ಕಮಗಳೂರು |
Elevation | ೬೯೭ m (೨,೨೮೭ ft) |
Population (2001) | |
• Total | ೩೪,೦೭೩ |
ಭಾಷೆಗಳು | |
• ಅಧಿಕೃತ | ಕನ್ನಡ |
• ಬಳಕೆಯ ಭಾಷೆಗಳು | ಕನ್ನಡ, ಉರ್ದು, ಇಂಗ್ಲಿಷ್ |
ಸಮಯದ ವಲಯ | |
ಸಮಯ ವಲಯ | ಯುಟಿಸಿ+5:30 (IST) |
ಪಿನ್ | 577228 |
ದೂರವಾಣಿ ಕೋಡ್ | 08261 |
ತರೀಕೆರೆ - ಚಿಕ್ಕಮಗಳೂರು ಜಿಲ್ಲೆಯ ಒಂದು ತಾಲೂಕು ಕೇಂದ್ರವಾಗಿದೆ.
ತರೀಕೆರೆ ಚಿಕ್ಕಮಗಳೂರು ಜಿಲ್ಲೆಯ ಒಂದು ಪ್ರಮುಖವಾದ ತಾಲ್ಲೂಕು ಕೇಂದ್ರವಾಗಿದ್ದು, ಬಯಲುನಾಡು ಮತ್ತು ಮಲೆನಾಡಿನ ಅಪೂರ್ವ ಸಂಗಮದಿಂದ ಕೂಡಿದೆ . ಪ್ರಾರಂಭದ ದಿನಗಳಲ್ಲಿ ತರೀಕೆರೆಗೆ ಮಲೆನಾಡಿನ ಹೆಬ್ಬಾಗಿಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತ ಮಲೆನಾಡು ಪ್ರಾರಂಭವಾಗುತ್ತದೆ. ತಾಲೂಕಿನ ಮುಖ್ಯ ವಾಣಿಜ್ಯ ಬೆಳೆಯಾಗಿ ಅಡಿಕೆ ಕಂಡುಬಂದರೆ, ಗಣನೀಯ ಪ್ರಮಾಣದಲ್ಲಿ ತೆಂಗು,ಬಾಳೆ,ನೆಲಗಡಲೆ, ಸೂರ್ಯಕಾಂತಿ,ಮೆಕ್ಕೆಜೋಳ ... ಇತ್ಯಾದಿಗಳು ಪ್ರಮುಖ ವಾಣಿಜ್ಯ ಬೆಳೆಗಳು. ಮುಖ್ಯ ಆಹಾರ ಬೆಳೆಗಳಾಗಿ ಭತ್ತ ಮತ್ತು ರಾಗಿಯನ್ನು ಬೆಳೆಗಳಾಗಿ ಬೆಳೆಯಲಾಗುತ್ತದೆ.
ಚಿಕ್ಕಮಗಳೂರು ಜಿಲ್ಲಾ ಕೆಂದ್ರವಾದರು,ಶಿವಮೊಗ್ಗ ಮತ್ತು ಭದ್ರಾವತಿ ಪಟ್ಟಣಗಳು ತುಂಬ ಹತ್ತಿರವಾದ್ದರಿಂದ, ಜನರ ಸಂಪರ್ಕ ಹೆಚ್ಚಾಗಿ ಈ ಎರಡು ಪಟ್ಟಣಗಳಿಗೆ ಇರುತ್ತದೆ. ತರೀಕೆರೆಯು ಬೆಂಗಳೂರಿನಿಂದ ಸುಮಾರು 235 ಕಿ.ಮಿ.ದೂರದಲ್ಲಿದೆ. ರಾಷ್ಟ್ರೀಯ ಹೆದ್ದಾರಿ ೨೦೬ ತರೀಕೆರೆಯ ಮಧ್ಯೆ ಹಾದುಹೋಗುತ್ತದೆ. ಇಲ್ಲಿಗೆ ಬೆಂಗಳೂರು ಮತ್ತು ಮೈಸೂರಿನಿಂದಲೂ ರೈಲಿನ ಸಂಪರ್ಕ ಇದೆ.
ಈ ಊರಿಗೆ ಅಂಟಿಕೊಂಡಂತೆ ಬೆಮಲ್ ಸಂಸ್ಥೆಗೆ ಸೇರಿದ ಒಂದು ಕೈಗಾರಿಕಾ ಘಟಕವಿದೆ.
ಇಲ್ಲಿನ ಪ್ರಮುಖವಾದ ಆಕರ್ಶಣೆಯೆಂದರೆ, ಹತ್ತಿರವಿರುವ ಕೆಮ್ಮಣ್ಣುಗುಂಡಿ ಗಿರಿಧಾಮ. ಇದು ಕರ್ನಾಟಕದ ಒಂದು ಪ್ರಸಿದ್ದ ಪ್ರವಾಸಿತಾಣವಾಗಿದೆ. ಈ ಗಿರಿಧಾಮಕ್ಕೆ ಹತ್ತಿರದಲ್ಲೆ ಆಕರ್ಷಕವಾದ ಕಲ್ಲತ್ತಿ ಜಲಪಾತವಿದೆ. ಇಲ್ಲಿನ ಜನರಿಗೆ ಇದು ಕಲ್ಹತ್ತಿಗಿರಿ ಜಲಪಾತ ಎಂದೆ ಪ್ರಸಿದ್ಡಿ.
ಇದಲ್ಲದೆ ತರೀಕೆರೆಗೆ ಸಮೀಪವಿರುವ ಅಮೃತಾಪುರದಲ್ಲಿ ಹೊಯ್ಸಳರ ೨ ನೇ ವೀರಬಲ್ಲಾಳ ದೊರೆಯ ಸೇನಾ ದಂಡನಾಯಕರಾದ ಅಮೃತ ದಂಡನಾಯಕರಿಂದ ನಿರ್ಮಿಸಿದ ಶಿಲ್ಪಕಲೆಯ ವೈಭವಕ್ಕೆ ಪ್ರತೀಕವಾದ ಒಂದು ಅದ್ಭುತ ಶ್ರೀ ಅಮೃತೇಶ್ವರ ದೇವಲಯವಿದೆ ಇಲ್ಲಿಯೇ ಶ್ರೀ ಶಾರದಾಂಭೆ ದೇವಿಯವರ ಸುಂದರ ವಿಗ್ರಹವಿದೆ ಹಾಗೂ ಇಲ್ಲಿಯ ನಂದಾ ದೀಪವು ಸುಮಾರು ೮೦೦ ವರ್ಷಗಳಿಂದ ಬೆಳಗುತ್ತಿದೆ.ಇಲ್ಲಿಯ ವಿಶೇಷವೆಂದರೆ ಪ್ರತೀ ವರ್ಷ ಮಕರ ಸಂಕ್ರಾಂತಿಯಂದು ಉದಯ ಕಾಲದ ಸೂರ್ಯ ಕಿರಣವು ಶಿವಲಿಂಗದ ಮೇಲೆ ಬೀಳುವುದು ನೋಡಲು ವರದಾನವಾಗಿದೆ. ತರೀಕೆರೆಯಿಂದ ಆಜ್ಜಂಪುರಕ್ಕೆ ಹೋಗುವ ರಸ್ತೆಯಲ್ಲಿ ಸುಮಾರು 12 ಕಿ.ಮಿ ದೂರದಲ್ಲಿದೆ.
ಇಲ್ಲಿಗೆ ಸಮೀಪವಿರುವ ಲಕ್ಕವಳ್ಳಿಯಲ್ಲಿ ಭದ್ರಾ ನದಿಗೆ ಅಡ್ಡಲಾಗಿ ಅಣಿಕಟ್ಟು ನಿರ್ಮಿಸಲಾಗಿದ್ದು, ಅದು ಕೂಡ ಒಂದು ಪ್ರವಾಸಿ ತಾಣವಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ, ತರೀಕೆರೆ ಎಲ್ಲಾ ತರಹದ ಅಕರ್ಶಣೆಗಳನ್ನು ಹೊಂದಿದ್ದು ಒಂದು ಅಪರೂಪದ ಪ್ರಾದೆಶಿಕ ಸಂಪತ್ತನ್ನು ತನ್ನಾದಾಗಿಸಿಕೊಂಡಿದೆ.
ನೆನಪಿರಬೇಕಲ್ವೆ ? ಹಳೆಯ ಚಲನಚಿತ್ರದ ಪ್ರಸಿದ್ದವಾದ ಹಾಡೊಂದು... ತರೀಕೆರೆ ಏರಿಮೇಲೆ ಮೂರು ಕರಿ ಕುರಿಮರಿ.....
ಆಜ್ಜಂಪುರದಲ್ಲಿ ಅಮೃತಮಹಲ್ ತಳಿಯ ಹಸು, ಎತ್ತುಗಳಿದ್ದು ಇವು ತುಂಬಾ ಪ್ರಸಿದ್ದವಾವಿವೆ. ಈ ತಳಿಯ ರಾಸುಗಳ ಅಭಿವೃದ್ದಿಪಡಿಸಲು ಪಶು ಪಾಲನಾ ಇಲಾಖೆಯು ಇಲ್ಲಿ ಕಾರ್ಯವಹಿಸುತ್ತಿದೆ. ಹಾಗೂ ಈ ತಳಿಗಳನ್ನು ಅಬಿವೃದ್ದಿ ಪಡಿಸಲು ಚಿತ್ರದುರ್ಗ, ಹಾಸನ ಜಿಲ್ಲೆಗಳಲ್ಲಿಯೂ ಉಪ ಸಂಸ್ಠೆಗಳು ಕಾರ್ಯನಿರ್ವಹಿಸುತ್ತಿವೆ. ಈ ತಳಿಯ ಹೊರಿಗಳು ವ್ಯವಸಾಯಕ್ಕೆ ತುಂಬಾ ಯೋಗ್ಯವಾದವು, ಮುಖ್ಯವಾಗಿ ಇವುಗಳು ದಿನದ ೨೪ ಗಂಟೆಗಳ ಕಾಲ ಸತತವಾಗಿ ಕಾರ್ಯಾನಿರ್ವಹಿಸುವ ಸಾಮರ್ಥ್ಯವನ್ನು ಹೊದಿವೆ. ಅಜ್ಜಂಪುರ ಕೇಂದ್ರದಲ್ಲಿ ಸುಮಾರು ೨೭೫ ಜಾನುವಾರುಗಳನ್ನು ಹೊಂದಿದೆ, ಈ ತಳಿಯ ರಾಸುಗಳನ್ನು ಸ್ವಭಾವಿಕ ರೀತಿಯಲ್ಲಿ ಸ್ವಚ್ಛತೆಯಲ್ಲಿ ಬಿಟ್ಟು ಬೆಳೆಸಲಾಗುವುದು. ಅಲ್ಲದೆ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು,ಹಾಸನ, ಮಂಡ್ಯ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಅಮೃತ್ ಮಹಲ್ ಕಾವಲುಗಳನ್ನು ಹೊದಿದ್ದು, ಸುಮಾರು ೫೩,೦೦೦ ಎಕರೆ ಪ್ರದೇಶ ಹೊಂದಿದೆ. ಈ ರಾಸುಗಳನ್ನು ಸಮಾನ್ಯವಾಗಿ ಡಿಸೆಂಬರ್ ಅಥಾವ ಜನವರಿ ಮಾಹೆಯಲ್ಲಿ ಬಹಿರಂಗ ಹರಾಜುಮಾಡಲಾಗುವುದು. ಹೀಗೆ ಹರಾಜಾದ ಒಂದು ಜೊತೆಗೆ ೨೦೧೦ರಲ್ಲಿ ರೂ ೧,೧೬,೦೦೦ ಗಳಿಗೆ ರೈತರು ಪಡೆದಿದ್ದಾರೆ
ತರೀಕೆರೆಯ ಇನ್ನೊಂದು ವಿಶೇಷ ಎಂದರೆ ಶರಣ ಬಸವಣ್ಣ
ಕಸಬಾ,ಲಿಂಗದಹಳ್ಳಿ,ಲಕ್ಕವಳ್ಳಿ. ಕಸಬಾ ಹೋಬಳಿಕೇಂದ್ರದಲ್ಲಿ ಅಮೃತಾಪುರ ಮುಖ್ಯ ಪ್ರೇಕ್ಷಣೀಯ ತಾಣ. ಲಕ್ಕವಳ್ಳಿ ಹೋಬಳಿಯಲ್ಲಿ ಭದ್ರ ಜಲಾಶಯವಿದೆ. ಅಜ್ಜಂಪುರ ಹೋಬಳಿಯು ಅಮೃತಮಹಲ್ ಎತ್ತಿನ ತಳಿಗೆ ಪ್ರಸಿದ್ದವಾಗಿದೆ.ಇಲ್ಲಿನ ಬಗ್ಗವಳ್ಳಿಯಲ್ಲಿ ಇತಿಹಾಸ ಪ್ರಸಿದ್ಧ ಹೊಯ್ಸಳ ಯೋಗಾನರಸಿಂಹ ದೇಗುಲವಿದೆ.
ಸಂತೆಮೇರಿ ಗ್ರಾಮದ ಮೊದಲ ಹೆಸರು ಕಾಮನದುರ್ಗ ಆದರೆ ಈಗ ಕೆಲವು ಕಡೆ ಸಂತಮೇರಿ ಎಂದು ಕರೆಯುತ್ತಾರೆ. ಮೊದಲು ಕಾಮನ ಎಂಬ ಪಾಳೆ ಯಗಾರ ಇದನ್ನ ಆಳುತ್ತಿದ್ದನೆಂದು, ನಂತರ ಅವನ ಹೆಸರಿನಿಂದು ಈ ಗ್ರಾಮಕ್ಕೆ ಕಾಮನದುರ್ಗ ಎಂಬ ಹೆಸರು ಬಂದಿತೆಂದು ಹೇಳುತ್ತಾರೆ. ನಂತರ ಅವನ ಹೆಸರಿನಿಂದ ಈ ಗ್ರಾಮಕ್ಕೆ ಕಾಮನದುರ್ಗ ಎಂಬ ಹೆಸರು ಬಂದಿತೆಂದು ಹೇಳುತ್ತಾರೆ. ನಂತರ ಅಲ್ಲಿ ಬ್ರಿಟಿಷರ ಆಳ್ವಿಕೆ ಬಂದು ಸಂತಮೇರಿ ಎಂಬ ಕ್ರಿಶ್ಚಿಯನ್ ಪಾದ್ರು ವಾಸ ಮಾಡುತ್ತಿದ್ದುದರಿಂದ ಸಂತವೇರಿ ಎಂಬ ಹೆಸರು ಬಂದಿತು.
ಇದು ಗುಡ್ಡಗಾಡು ಪ್ರದೇಶವಾ ಗಿದರೂ ಕರ್ನಾಟಕದ ಸಂಪದ್ಬರಿತವಾದ ಪ್ರಾಕೃತಿಕ ವಿಭಾಗವಾಗಿದೆ. ಇಲ್ಲಿ ಬೆಳೆಯುವ ಕಾಫೀ ರಫ್ತು ಆಗುವ ಸರಕುಗಳಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದ್ದು ವಿಶ್ವಾದ ಮಾರುಕಟ್ಟೆಯಲ್ಲಿ ಕರ್ನಾಟಕಕ್ಕೆ ಕೀರ್ತಿ ತಂದಿದೆ. ಈ ಗ್ರಾಮವು ಬ್ಲೂಮೌಂಟೀನ್ ಎಂಬ ಕಾಫೀ ಎಸ್ಟೇಟ್ ಅನ್ನು ಹೊಂದಿದೆ.ಈ ಗ್ರಾಮವು ತರೀಕೆರೆ ತಾಲ್ಲೂಕುನಿಂದ 30km ದೂರದಲ್ಲಿದೆ.ಅದೇ ಅಂತರದಲ್ಲಿ ಚಿಕ್ಕಮಗಳೂರು ಸಹ ಇವೆ. ಗ್ರಾಮಕ್ಕೆ ಕುಡಿಯುವ ನೀರು ಕಲತ್ತಿ ಜಲಪಾತದಿಂದ ಪೂರೈಕೆಯಾಗುತ್ತಿದೆ.ಇದನ್ನು ಗ್ರಾವಿಟಿ ವಾಟರ್ ಎಂದು ಕರೆಯುತ್ತಾರೆ.ಕಲತ್ತಿ ಫಾಲ್ಸ್ ನಿಂದ ಈ ಗ್ರಾಮವು ಸುಮಾರು 5km ಅಂತರದಲ್ಲಿದೆ.