ತರುಣದೀಪ್ ರೈ ಭಾರತದ ಸಿಕ್ಕಿಂ ರಾಜ್ಯದ ನಾಮ್ಚಿಯಲ್ಲಿ ೨೨ ಫೆಬ್ರವರಿ ೧೯೮೪ ರಲ್ಲಿ ಜನಿಸಿದರು. [೧] ಒಬ್ಬ ಭಾರತೀಯ ವೃತ್ತಿಪರ ಬಿಲ್ಲುಗಾರರು . [೨] [೩] ಬಿಲ್ಲುಗಾರಿಕೆ ಕ್ರೀಡೆಯಲ್ಲಿ ಇವರ ಕೊಡುಗೆಗಾಗಿ ಭಾರತ ಸರ್ಕಾರದಿಂದ ೨೦೨೧ ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿದೆ. ಇದಕ್ಕೂ ಮೊದಲು ೨೦೧೮ ರಲ್ಲಿ ಇವರಿಗೆ ಖೇಲ್ ರತನ್ ಪ್ರಶಸ್ತಿಯನ್ನು ನೀಡಲಾಯಿತು.
ತರುಣ್‌ದೀಪ್ ಅವರು ತಮ್ಮ ೧೯ ನೇ ವಯಸ್ಸಿನಲ್ಲಿ ಮ್ಯಾನ್ಮಾರ್‌ನ ಯಾಂಗೋನ್‌ನಲ್ಲಿ ನಡೆದ ಏಷ್ಯನ್ ಆರ್ಚರಿ ಚಾಂಪಿಯನ್‌ಶಿಪ್ ೨೦೦೩ ನಲ್ಲಿ ಆಡಿದಾಗ ಅಂತರರಾಷ್ಟ್ರೀಯ ಬಿಲ್ಲುಗಾರಿಕೆಗೆ ಪಾದಾರ್ಪಣೆ ಮಾಡಿದರು. [೪] ತರುಣ್‌ದೀಪ್ ರೈ ೨೪ ನವೆಂಬರ್ ೨೦೧೦ ರಂದು ಚೀನಾದ ಗುವಾಂಗ್‌ಝೌನಲ್ಲಿ ನಡೆದ ೧೬ ನೇ ಏಷ್ಯನ್ ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ತಮ್ಮ ಮೊದಲ ವೈಯಕ್ತಿಕ ಬೆಳ್ಳಿ ಪದಕವನ್ನು ಗೆದ್ದರು. [೫]ಅವರು ೨೦೦೬ ರಲ್ಲಿ ದೋಹಾದಲ್ಲಿ ನಡೆದ ನೇ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕವನ್ನು ಗೆದ್ದ ಭಾರತೀಯ ಬಿಲ್ಲುಗಾರಿಕೆ ತಂಡದ ಸದಸ್ಯರಾಗಿದ್ದರು.[೬] ೨೦೦೪ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ, ತರುಣ್‌ದೀಪ್ ಪುರುಷರ ವೈಯಕ್ತಿಕ ೭೨ ಶ್ರೇಯಾಂಕದ ಸುತ್ತಿನಲ್ಲಿ ೬೪೭ -ಬಾಣದ ಸ್ಕೋರ್‌ನೊಂದಿಗೆ ೩೨ ನೇ ಸ್ಥಾನ ಪಡೆದರು.[೭] ಅವರು ಮೊದಲ ಎಲಿಮಿನೇಷನ್ ಸುತ್ತಿನಲ್ಲಿ ಗ್ರೀಸ್‌ನ ಅಲೆಕ್ಸಾಂಡ್ರೊಸ್ ಕರಾಗೊರ್ಗಿಯೊ ಅವರನ್ನು ಎದುರಿಸಿದರು, ೧೪೭-೧೪೩ ರಲ್ಲಿ ಸೋತರು. ಈ ಅಂಕವು ರೈಗೆ ೪೩ ನೇ ಶ್ರೇಯಾಂಕವನ್ನು ನೀಡಿತು. ೨೦೦೪ ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ೧೧ ನೇ ಸ್ಥಾನದಲ್ಲಿರುವ ಭಾರತೀಯ ಪುರುಷರ ಬಿಲ್ಲುಗಾರಿಕೆ ತಂಡದ ಸದಸ್ಯರಾಗಿದ್ದರು. ವೃತ್ತಿಜೀವನದಲ್ಲಿ - ಭುಜದ ಗಾಯವನ್ನು ಎರಡು ವರ್ಷಗಳ ಕಾಲ ಅನುಭವಿಸಿದ್ದರು. ಮಿತಿಮೀರಿದ ಅಭ್ಯಾಸದಿಂದಾಗಿ ಅವರು ಬಲ ಭುಜದ ಗಾಯವನ್ನು ಅನುಭವಿಸಿದರು ಮತ್ತು ೨೦೦೭ ಮತ್ತು ೨೦೦೮ ಆಟದಿಂದ ಹೊರಗುಳಿದಿದ್ದರು. ತರುಣ್‌ದೀಪ್ ರೈ ೨೦೧೦ ರ ಗುವಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ವೈಯಕ್ತಿಕ ಸ್ಪರ್ಧೆಯಲ್ಲಿ ಮಾತ್ರ ಸ್ಪರ್ಧಿಸಿದ್ದರು. ಅವರು ಆ ಸ್ವರ್ಧೆಯಲ್ಲಿ ಯಾರೂ ನಿರೀಕ್ಷಿಸದ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡರು. ತರುಣ್‌ದೀಪ್ ೨೦೧೨ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ಪುರುಷರ ರಿಕರ್ವ್ ತಂಡದ ಸದಸ್ಯರಾಗಿದ್ದರು. [೮] ತರುಣದೀಪ್ ರೈ ಅವರು 2012 USನ ಆಗ್ಡೆನ್‌ನಲ್ಲಿ ನಡೆದ ಲಂಡನ್ ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲಿ ದೇಶಕ್ಕೆ ಮೂರನೇ ಸ್ಥಾನವನ್ನು ನೀಡಿದರು. ತರುಣ್‌ದೀಪ್ ೨೦೦೩ ರಲ್ಲಿ ನ್ಯೂಯಾರ್ಕ್ ನಗರದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ೪ ನೇ ಸ್ಥಾನ ಗಳಿಸಿದ ಭಾರತೀಯ ಬಿಲ್ಲುಗಾರಿಕೆ ತಂಡದ ಭಾಗವಾಗಿದ್ದರು. [೯] 2005 ರಲ್ಲಿ ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅವರ ತಂಡ ಬೆಳ್ಳಿ ಪದಕವನ್ನು ಗೆದ್ದುಕೊಂಡಿತು. ಅವರು ೨೦೦೫ ರಲ್ಲಿ ವಿಶ್ವ ಆರ್ಚರಿ ಚಾಂಪಿಯನ್‌ಶಿಪ್‌ನ ಸೆಮಿಫೈನಲ್ ಸುತ್ತಿಗೆ ಪ್ರವೇಶಿಸಿದ ಮೊದಲ ಭಾರತೀಯರಾದರು, ಅಲ್ಲಿ ಅವರು ಕಂಚಿನ ಪದಕದ ಪ್ಲೇ-ಆಫ್‌ಗಾಗಿ ದಕ್ಷಿಣ ಕೊರಿಯಾದ ವಾನ್ ಜೊಂಗ್ ಚೋಯ್ ವಿರುದ್ಧ ೧೦೬-೧೧೨ ಅಂತರದಲ್ಲಿ ಸೋತರು. [೯]ತರುಣ್‌ದೀಪ್ ರೈ ಗುವಾಹಟಿ ಮತ್ತು ಶಿಲ್ಲಾಂಗ್‌ನಲ್ಲಿ ನಡೆದ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಭಾರತದ ಪ್ರಾಬಲ್ಯದಲ್ಲಿ ತರುಣ್ ಕೂಡ ಪ್ರಮುಖ ಪಾತ್ರ ವಹಿಸಿದ್ದರು.
ತರುಣ್‌ದೀಪ್ ರೈ ಅವರು ಅತಾನು ದಾಸ್ ಮತ್ತು ಪ್ರವೀಣ್ ಜಾಧವ್ ಅವರೊಂದಿಗೆ ಟೋಕಿಯೊ ಒಲಿಂಪಿಕ್ಸ್‌ನ ಕೋಟಾವನ್ನು ಪಡೆದರು. [೧೨] ಲಾಕ್‌ಡೌನ್ ಸಂಭವಿಸಿದಾಗಿನಿಂದ ಅವರು ಎಎಸ್‌ಐ ಕ್ಯಾಂಪಸ್‌ನಲ್ಲಿ ಇರಲು ಆಯ್ಕೆ ಮಾಡಿಕೊಂಡರು ಮತ್ತು ಅವರ ಕೊನೆಯ ಒಲಿಂಪಿಕ್ಸ್‌ಗಾಗಿ ತರಬೇತಿ ಪಡೆದರು. [೧೩] [೧೪] ಆ ತರಬೇತಿಯಲ್ಲಿ ೬ ತಿಂಗಳಲ್ಲಿ ೧೪ ಕೆಜಿ ತೂಕ ಕಡಿಮೆ ಮಾಡಿದ್ದರು. [೧೫] [೧೬]