ತಲಕಾಡು,[೧][೨]ಮೈಸೂರು ಜಿಲ್ಲೆಯಲ್ಲಿನ ಪ್ರಮುಖ ಯಾತ್ರಾಸ್ಥಳಗಳಲ್ಲಿ ಒಂದಾಗಿದೆ. ಇದು ಮೈಸೂರಿನಿಂದ ಸುಮಾರು ೪೫ ಕಿ.ಮೀ ದೂರದಲ್ಲಿದೆ. ಇಲ್ಲಿನ ಅತಿ ಸುಂದರವಾದ ಕಾವೇರಿ ನದಿ, ಮರಳು ಮತ್ತು ಇಲ್ಲಿನ ಪುರಾತನ ದೇವಸ್ಥಾನಗಳು ಜನರನ್ನು ಆಕರ್ಷಿಸುವಲ್ಲಿ ಯಶಸ್ವೀಯಾಗಿವೆ. ಇಲ್ಲಿರುವ ದೇವಾಲಯಗಳು ಗಂಗರ ಕಾಲದ ದೇವಾಲಯಗಳು. ಇಲ್ಲಿ ನಡೆಯುವ ಪಂಚಲಿಂಗ ದರ್ಶನ ವಿಶೇಷವಾದದ್ದು. ಪಂಚಲಿಂಗ ದರ್ಶನವು ೧೨ ಅಥವಾ ೧೩ ವರ್ಷಗಳಿಗೊಮ್ಮೆ ನಡೆಯುತ್ತದೆ. ಇದು ಐತಿಹಾಸಿಕವಾಗಿ ಹಾಗೂ ಧಾರ್ಮಿಕವಾಗಿ ಪ್ರಸಿದ್ದ ಸ್ಥಳವಾಗಿದೆ. ತಲಕಾಡು ಒಂದು ಕಾಲದಲ್ಲಿ ೩೦ ದೇವಾಲಯಗಳಿಂದ ಕೂಡಿದ ಭವ್ಯ ನಗರವಾಗಿತ್ತು. ಆದರೆ ೧೬ನೇ ಶತಮಾನದಲ್ಲಿ ಇವುಗಳೆಲ್ಲವು ಮರಳಿನಲ್ಲಿ ಮುಚ್ಚಿ ಹೋದವು. ಪವಿತ್ರವಾದ ತಲಕಾಡು ಕ್ಷೇತ್ರದಲ್ಲಿ ಪಂಚಲಿಂಗ ಸ್ವರೂಪಿಯಾಗಿ ಈಶ್ವರನು ನೆಲಸಿದ್ದಾನೆ. ತಲಕಾಡು ದಕ್ಷಿಣಕಾಶಿ ಎಂದು ಹೆಸರುವಾಸಿಯಾಗಿದೆ.ಎಲ್ಲಿನ ಕಲ್ಲುಗಳ ಚಿತ್ರಣ ಇತಿಹಾಸವನ್ನು ಹೇಳುತ್ತವೆ.
ಈ ಪಟ್ಟಣದ ಹೆಸರು ಒಂದು ಸಂಪ್ರದಾಯದ ಪ್ರಕಾರ ಇಬ್ಬರು ಬೇಡರ ಅವಳಿ ಸಹೋದರರ ಹೆಸರು ತಲಾ ಮತ್ತು ಕಾಡು. ಒಂದು ಮರವನ್ನು ಕಡಿಯುತ್ತಿರುವಾಗ ಅವರು ಒಂದು ಆನೆಯನ್ನು ನೋಡಿದರು, ಆನೆಯಲ್ಲಿ ಶಿವನ ಪ್ರತಿಮೆಯನ್ನು ಕಂಡರು. ಆ ಮರವು ಪುನಃ ಮರು ಪ್ರತಿಷ್ಟಾಪನೆ ಆಯಿತು. ಎಲ್ಲರಿಗೂ ಮೋಕ್ಷ ಸಿಕ್ಕಿತು. ಅಂದಿನಿಂದ ಆ ಜಾಗಕ್ಕೆ ತಲಕಾಡು ಎಂದು ಹೆಸರು ಬಂತು. ಎರಡು ಕಲ್ಲುಗಳಲ್ಲಿ ಅವಳಿ ಜವಳಿಯ ಚಿತ್ರವೂ ಬಂತು. ಆ ಕಲ್ಲುಗಳು ವೀರಭದ್ರಸ್ವಾಮಿಯ ದೇವಸ್ಥಾನದ ಮುಂದೆ ಇಟ್ಟಿದ್ದಾರೆ.
ಕೆಲವು ವರ್ಷ ನಂತರ ಶ್ರೀರಾಮ ಅಲ್ಲಿ ಬಂದು ವಿಶ್ರಾಂತಿಯನ್ನು ಪಡೆದನು. ಮೊದಲಿನ ಅಧಿಕೃತದಲ್ಲಿ ತಲಕಾಡು ಗಂಗರ ವಂಶದಲ್ಲಿ ಸೇರಿತು. ಹರಿವರ್ಮ ಜಾಗವನ್ನು ಹುಡುಕಲು ಸಹಾಯ ಪಡೆದಿದ್ದರು. ಕಾಲಕ್ರಮದ ಪ್ರಕಾರ ಇದು ಸ್ಕಂಧ ಪುರಾಣದಲ್ಲಿ ಅಳವಡಿಸಲಾಗಿದೆ. ಆದರೆ ಅವರು ದಲವಂತ್ ಪುರದಲ್ಲಿ ವಾಸಿಸುತ್ತಿದ್ದರು. ಅಂದಿನಿಂದ ತಲಕಾಡು ರಾಜಧಾನಿ ಆಯಿತು. ೧೧ನೇ ಶತಮಾನದಲ್ಲಿ ಗಂಗಾರಾಜರಿಂದ ಚೋಳರಾಜರು ವಶಪಡಿಸಿಕೊಂಡರು.
ಅಂದಿನಿಂದ ಆ ಸ್ಥಳವನ್ನು ರಾಜರಾಜಪುರ ಎಂದು ಹೆಸರಿಟ್ಟರು. ಸುಮಾರು ೧೦೦ ವರ್ಷಗಳ ಮುಂದೆ ಹೊಯ್ಸಳ ರಾಜ ವಿಷ್ಣು ವರ್ಧನ ಚೋಳ ರಾಜ ವಂಶವನ್ನು ಮೈಸೂರಿನಿಂದ ಹೊರಹಾಕಿದರು. ಆಗ ತಲಕಾಡುವಿನಲ್ಲಿ ೭ ಪಟ್ಟಣಗಳು ಮತ್ತು ೫ ಮತಾಸ್‍ನ್ನು ವಶಪಡಿಸಿಕೊಂಡರು. ಮಾಲಂಗಿಯ ಪಟ್ಟಣವು ನದಿಯ ಎದರು ಇತ್ತು. ಅದು ಒಂದು ದೊಡ್ಡ ಪಟ್ಟಣವಾಗಿತ್ತು. ಅದರ ಹೆಸರು ಜನಾರ್ಧನಪುರ. ೧೪ನೇ ಶತಮಾನದ ಮಧ್ಯದಲ್ಲಿ ಹೊಯ್ಸಳ ರಾಜ್ಯಕ್ಕೆ ಸ್ವಾಧಿನಕ್ಕೆ ಬಂತು. ವಿಜಯ ನಗರ ಸೋಮರಾಜರಿಗೆ ಸೇರಿತ್ತು.
ಹಿಂದೆ ವಸಿಷ್ಠ ಕುಲದ ಸೋಮದತ್ತನೆಂಬ ಬ್ರಾಹ್ಮಣನಿದ್ದನು. ಅವನು ಸಂಸಾರದಲ್ಲಿ ಜಿಗುಪ್ಸೆಹೊಂದಿ ವಾರಣಾಸಿಗೆ ಹೋಗಿ ವಿಶ್ವೇಶ್ವರನನ್ನು ಕುರಿತು ತಪಸ್ಸನ್ನಾಚರಿಸಿದನು. ಕಾಶಿ ವಿಶ್ವೇಶ್ವರನು ಅವನ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷನಾದನು. ತಮಗೆ ಮತ್ತು ತನ್ನ ಶಿಷ್ಯರಿಗೆ ಸಶರೀರ ಮುಕ್ತಿಯನ್ನು ಕರುಣಿಸಬೇಕೆಂದು ಸೋಮದತ್ತನು ಬೇಡಿಕೊಂಡನು.
ಆದರೆ ಆ ಸ್ವಾಮಿಯು ಸೋಮದತ್ತನಿಗೆ ಅಲ್ಲಿ ಮುಕ್ತಿ ದೊರೆಯಲಾರದೆಂದೂ, ಆತನು ತನ್ನ ಶಿಷ್ಯರೊಡನೆ ದಕ್ಷಿಣಕ್ಕೆ ಪ್ರಯಾಣ ಮಾಡಿ ದಕ್ಷಿಣ ಗಂಗೆ ಎಂದು ಹೆಸರಾಗಿರುವ ಪವಿತ್ರ ಕಾವೇರಿಯ ತೀರದಲ್ಲಿನ ಗಜಾರಣ್ಯ ಕ್ಷೇತ್ರಕ್ಕೆ ಹೋಗಬೇಕೆಂದು ತಿಳಿಸುತ್ತ ಆ ಕ್ಷೇತ್ರ ಕಾವೇರಿ ಮತ್ತು ಕಪಿಲ ಸಂಗಮದಿಂದ ಕೆಲವೇ ಹರಿದಾರಿಗಳಲ್ಲಿ ಮುಂದೆ ಆ ಕ್ಷೇತ್ರದಲ್ಲಿ ನಾನು ವೈಧ್ಯೇಶ್ವರನೆಂದು ಕಾಣಿಸಿಕೊಳ್ಳುತ್ತೇನೆ.
ಅಲ್ಲಿನ ಋಚೀಕ ಋಷಿಯ ಆಶ್ರಮದಲ್ಲಿದ್ದುಕೊಂಡು ನೀನು ತಪಸ್ಸನ್ನಾಚರಿಸು, ಕಾಶಿಗಿಂತಲೂ ಮಿಗಿಲಾದ ಮಹಿಮೆಯಿಂದ ಕೂಡಿದ ಆ ಸ್ಥಳದಲ್ಲಿ ನಿನಗೆ ಸಾಯುಜ್ಯ ಸುಲಭವಾಗಿ ಪ್ರಾಪ್ತವಾಗುತ್ತದೆ ಎಂದು ತಿಳಿಸಿದನು. ಸೋಮದತ್ತನು ವಿಶ್ವೇಶ್ವರನ ನುಡಿಯಂತೆ ತನ್ನ ಶಿಷ್ಯ ಪರಿವಾರದೊಡನೆ ದಕ್ಷಿಣ ದಿಕ್ಕಿಗೆ ಪ್ರಯಾಣವನ್ನು ಕೈಗೊಂಡನು. ಅವರು ವಿಂಧ್ಯ ಪರ್ವತದ ದಟ್ಟವಾದ ಕಾಡುಗಳನ್ನು ದಾಟುತ್ತಿದ್ದರು.
ಆಗ ಇದ್ದಕಿದ್ದ ಹಾಗೆಯೇ ದೊಡ್ಡ ಆನೆಗಳ ಹಿಂಡೊಂದು ಅವರ ಮೇಲೆ ಎರಗಿ ಬಂತು. ಗಾಬರಿಗೊಂಡ ಸೋಮದತ್ತ ಮತ್ತು ಅವನ ಶಿಷ್ಯರು ಆನೆ ಆನೆ ಎಂದು ಕೂಗುತ್ತಲೇ ಆ ಮದ್ದಾನೆಗಳಿಗೆ ಬಲಿಯಾಗಿ ಪ್ರಾಣ ನೀಗಿದರು. ಅವರು ಸಾಯವ ಸಂದರ್ಭದಲ್ಲಿ ಅನೆಯ ಸ್ವರೂಪವನ್ನೆ ಕಲ್ಪಿಸಿಕೊಂಡು ಹೆದರಿದ್ದರಿಂದ ಮುಂದೆ ಅವರಿಗೆ ಆನೆಯ ಜನ್ಮವೇ ಪ್ರಾಪ್ತವಾಯಿತು. ವಿಶ್ವೇಶ್ವರನು ತಿಳಿಸಿದ್ದ ಪವಿತ್ರ ಗಜಾರಣ್ಯ ಕ್ಷೇತ್ರದಲ್ಲಿ ಕಾವೇರಿಯ ತೀರದಲ್ಲಿ ಅವರು ಆನೆಯಾಗಿಯೇ ಹುಟ್ಟಿದರು.
ಗಜಾರಣ್ಯ ಕ್ಷೇತ್ರದಲ್ಲಿ ಒಂದು ಸೊಂಪಾಗಿ ಬೆಳೆದ ಬೂರುಗದ ಮರ, ಆ ಮರದ ಬುಡದಲ್ಲಿ ದಟ್ಟವಾಗಿ ಕವಿದ ಪೊದೆಗಳು, ಆನೆಗಳು ಅಲ್ಲಿನ ಗೋಕರ್ಣ ಸರೋವರದಲ್ಲಿ ಮಿಂದು, ಸೊಂಡಿಲಲ್ಲಿ ನೀರನ್ನು ತುಂಬಿಕೊಂಡು ಕಮಲವನ್ನು ಕಚ್ಚಿ ಆ ಮರದ ಬುಡದ ಪೊದೆಯ ಕಡೆ ಬರುತ್ತಿದ್ದವು. ಬಂದು ಸೊಂಡಿಲ ನೀರನ್ನು ಚುಮುಕಿಸಿ ಆ ಪೊದೆಯ ಮೇಲೆ ಹೂವಿಟ್ಟು ನಮಿಸಿ ಹೋಗುತ್ತಿದ್ದವು. ಆ ದೃಶ್ಯವನ್ನು 'ತಲ' 'ಕಾಡ' ಎಂಬ ಇಬ್ಬರು ಬೇಡರು ನಿತ್ಯವೂ ನೋಡುತ್ತಿದ್ದರು.
ಆಶ್ಚರ್ಯಗೊಂಡ ಅವರು ಅದೇನು ಎಂಬುದನ್ನು ಪರೀಕ್ಷಿಸಬೇಕೆಂದು ಎರಡು ಕೊಡಲಿಗಳನ್ನು ತೆಗೆದುಕೊಂಡು ಬಂದರು. ಪೊದೆಗಳನ್ನು ಕಡಿದರು. ಕಡಿಯುವಾಗ ಅವರ ಕೊಡಲಿ ಯಾವುದೋ ವಸ್ತುವಿಗೆ ತಾಕಿದಂತಾಯಿತು. ರಕ್ತ ಚಿಮ್ಮಿತು. ಅದೇನೆಂದು ನೋಡುವಲ್ಲಿ ಅದೊಂದು ಶಿವಲಿಂಗ. ಅದರ ನೆತ್ತಿಯಿಂದ ರಕ್ತ ಹರಿಯುತ್ತಿದೆ. ಇದನ್ನು ನೋಡಿದ ಅವರು ಹೆದರಿ ನಡುಗತೊಡಗಿದರು. ಆಗ ಅಶರೀರವಾಣಿಯೊಂದಾಯಿತು.
"ಎಲೈ ಕಿರಾತಕರೆ, ನಿಮಗೆ ಒಳ್ಳೆಯದನ್ನು ಮಾಡುವುದಕ್ಕಾಗಿಯೇ ನಾನಿಲ್ಲಿ ಕಾಣಿಸಿಕೊಂಡಿದ್ದೇನೆ. ಈ ಬೂರುಗದ ಮರದ ಎಲೆಯನ್ನು ಹಣ್ಣನ್ನೂ ಅರೆದು ಗಾಯವಾದ ಜಾಗಕ್ಕೆ ಬಳಿಯಿರಿ, ಸುರಿಯುವ ರಕ್ತ ನಿಲ್ಲುತ್ತದೆ. ಅಷ್ಟೇ ಅಲ್ಲ, ರಕ್ತ ಹಾಲಾಗುತ್ತದೆ, ಆ ಹಾಲನ್ನು ನೀವು ಸೇವಿಸಿದರೆ ನಿಮಗೆ ಗಣಪದವಿ ದೊರೆಯುತ್ತದೆ".
ದೇವವಾಣಿಗೆ ಬೇಡರು ತಲೆಬಾಗಿದರು. ಕೂಡಲೇ ಬೂರುಗದ ಮರದ ಎಲೆಯನ್ನು ಹಣ್ಣನ್ನು ತೇದು ಗಾಯಕ್ಕೆ ಹಚ್ಚಿದರು. ರಕ್ತ ಹರಿಯುವುದಕ್ಕೆ ಬದಲಾಗಿ ಹಾಲು ಹರಿಯಿತು. ಅದನ್ನು ಸೇವಿಸಿದ ಬೇಡರಿಗೆ ಗಣಪದವಿ ದೊರೆಯಿತು. ಆ ತಲ ಕಾಡ ಎನ್ನುವ ಬೇಡರಿಗೆ ಅಲ್ಲಿ ಮೊದಲ ಬಾರಿಗೆ ಮೋಕ್ಷ ಪ್ರಾಪ್ತವಾದ್ದರಿಂದ ಆ ಸ್ಥಳಕ್ಕೆ "ತಲಕಾಡು" ಎನ್ನುವ ಹೆಸರನ್ನು ಹೊತ್ತಿತ್ತು. ಅದೇ ಈಗಿನ ತಲಕಾಡು.
ಆನೆಯ ರೂಪಿನ ಸೋಮದತ್ತನೂ ಹಾಲನ್ನು ಸೇವಿಸಿ ಶರೀರವನ್ನು ಪಡೆದು ಸಶರೀರಿಯಾಗಿ ಮೋಕ್ಷವನ್ನು ಪಡೆದನು. ತನ್ನ ಗಾಯಕ್ಕೆ ತಾನೇ ವೈದ್ಯವನ್ನು ಸೂಚಿಸಿದವನಲ್ಲವೆ? ಆದುದರಿಂದಲೇ ವೈದ್ಯನಾಥ ಅಥವಾ ವೈಧ್ಯೇಶ್ವರನೆಂದು ಹೆಸರಾಯಿತು. ಮೊದಲಿಗೆ ಸಿದ್ಧಾರಣ್ಯ ಕ್ಷೇತ್ರವಾಗಿದ್ದ ಈ ನೆಲೆ ಅನೆಗಳು ಮೋಕ್ಷವನ್ನು ಪಡೆದ ಮೇಲೆ ಗಜಾರಣ್ಯಕ್ಷೇತ್ರವಾಯಿತು.
೧೧೧೬ ರಲ್ಲಿ ಹೊಯ್ಸಳ ಚಕ್ರವರ್ತಿ ವಿಷ್ಣುವರ್ಧನನ ದಂಡನಾಯಕನಾದ ಗಂಗರಾಜನು, ಚೋಳರ ವಿರುದ್ಧ ಹೋರಾಟ ಮಾಡಿ ಅವರನ್ನು ಸೋಲಿಸಿ ತಲಕಾಡನ್ನು ವಶಪಡಿಸಿಕೊಂಡನು. ಈ ಗೆಲುವಿನ ಕಾರಣದಿಂದ ತಲಕಾಡುಗೊಂಡ ಎಂಬ ಬಿರುದನ್ನು ವಿಷ್ಣುವರ್ಧನನಿಗೆ ಲಭಿಸಿತು. ಅವನೂ, ಅವನ ನಂತರ ಬಂದ ರಾಜರುಗಳು ತಲಕಾಡನ್ನು ೧೪ನೆಯ ಶತಮಾನದ ಮಧ್ಯಭಾಗದವರೆಗೆ ತಮ್ಮ ವಶದಲ್ಲಿಟ್ಟುಕೊಂಡಿದ್ದರು. ತಲಕಾಡು ಈ ಸಮಯದಲ್ಲಿ ಪ್ರಖ್ಯಾತಿ ಮತ್ತು ಹೆಸರನ್ನು ಪಡೆದು,ಏಳು ಪುರಗಳನ್ನೂ ಐದು ಮಠಗಳನ್ನೂ ಒಳಗೊಂಡು ಹೊಯ್ಸಳರ ಉಪರಾಜಧಾನಿಯಾಗಿ ಮೆರೆಯಿತು. ೧೩ನೆಯ ಬಲ್ಲಾಳನ ಕಾಲದಲ್ಲಿ (೧೨೯೧-೧೩೪೨) ಅವನ ಮುಖ್ಯಮಂತ್ರಿಯಾದ ಪೆರುಮಾಳ್ ಡಣಾಯಕ ತಲಕಾಡಿನ ಆಚೆಯ ದಡದ ಮೇಲಿರುವ ಒಂದು ಪಾಠಶಾಲೆಯನ್ನು ಕಟ್ಟಿಸಿ ಅದಕ್ಕೆ ಜಹಗೀರುಗಳನ್ನು ಹಾಕಿಕೊಟ್ಟ. ಹೊಯ್ಸಳ ಚಕ್ರವರ್ತಿಗಳು ಶಿವ ಮತ್ತು ವಿಷ್ಣು ದೇವಾಲಯಗಳೆರಡಕ್ಕೂ ಸಹಾಯ ಸಲ್ಲಿಸುತ್ತಿದ್ದರು. ೧೧೧೭ರಲ್ಲಿ ವಿಷ್ಣುವರ್ಧನ ತಲಕಾಡಿನಲ್ಲಿ ಕೀರ್ತಿನಾರಾಯಣ ದೇವಾಲಯವನ್ನು ಕಟ್ಟಿಸಿದ. ಅನಂತರ ಬಂದ ರಾಜರು ಅದಕ್ಕೆ ಅನೇಕ ಕಾಣಿಕೆಗಳನ್ನು ನೀಡಿದರು.
೧೪ನೆಯ ಶತಮಾನದ ಉತ್ತರಾರ್ಧದಲ್ಲಿ ತಲಕಾಡು ವಿಜಯನಗರದ ಅರಸರಿಗೆ ಸೇರಿತು. ೧೩೮೪ರಲ್ಲಿ ಸಾಳ್ವ ಮನೆತನಕ್ಕೆ ಸೇರಿದ ರಾಮದೇವ ತಲಕಾಡಿನಲ್ಲಿ ಅಧಿಕಾರಿಯಾಗಿ ರಾಜ್ಯಭಾರ ಮಾಡುತ್ತಿದ್ದನೆಂದೂ ಅವನು ಮುಸ್ಲಿಮರೊಂದಿಗೆ ಯುದ್ಧಮಾಡಿ ತೋತಕೊಂಡ ಎಂಬಲ್ಲಿ ಸತ್ತನೆಂದೂ ತಿಳಿಯುತ್ತದೆ. ಅಲ್ಲದೆ ೨ನೆಯ ದೇವರಾಯನ ಆಳ್ವಿಕೆಯಲ್ಲಿ ಇಲ್ಲಿಯ ಅಧಿಕಾರಿಯಾಗಿದ್ದ ಪೆರುಮಾಳ ದೇವರಸ ಕೀರ್ತಿನಾರಾಯಣ ದೇವಾಲಯಕ್ಕೆ ಧನಸಹಾಯ ಮಾಡಿದಂತೆ ತಿಳಿದುಬಂದಿದೆ. ವಿಜಯನಗರದ ಅಧಿಕಾರಿಗಳು ೧೭ನೆಯ ಶತಮಾನದ ಆರಂಭದ ವರೆಗೆ ತಲಕಾಡಿನಲ್ಲಿ ಆಳಿದರು. ಅವರು ಇಲ್ಲಿಯ ದೇವಾಲಯಗಳಿಗೆ ಕಾಣಿಕೆ ಮತ್ತು ಜಹಗೀರುಗಳನ್ನು ಕೊಡುವ ಸಂಪ್ರದಾಯವನ್ನಿಟ್ಟುಕೊಂಡಿದ್ದದು ಆ ಕಾಲದ ಶಾಸನಗಳಿಂದ ತಿಳಿಯುತ್ತದೆ. ವಿಜಯನಗರದ ಮಂತ್ರಿಗಳಲ್ಲೊಬ್ಬನಾದ ಮಾಧವಮಂತ್ರಿ ತಲಕಾಡಿನವನಾಗಿದ್ದ. ಆತ ತಲಕಾಡಿನ ಬಳಿಯಲ್ಲಿ ತನ್ನ ಹೆಸರಿನಲ್ಲಿ ಒಂದು ಅಣೆಕಟ್ಟೆಯನ್ನು ನಿರ್ಮಿಸಿದನಲ್ಲದೆ, ಪೂರ್ವದ ಚೋಳಲಿಂಗದ ಮೇಲೆ ಬಹುಶಃ ಈಗಿನ ವೈದ್ಯೇಶ್ವರ ದೇವಾಲಯವನ್ನು ಕಟ್ಟಿಸಿದ.
೧೬೧೦ರಲ್ಲಿ ತಿರುಮಲರಾಜ (ಇವನಿಗೆ ಶ್ರೀರಂಗರಾಯನೆಂದೂ ಹೆಸರಿತ್ತು) ಶ್ರೀರಂಗಪಟ್ಟಣದಲ್ಲಿ ವಿಜಯನಗರದ ಪ್ರತಿನಿಧಿಯಾಗಿದ್ದ. ಆಗ ಮೈಸೂರಿನ ಬೆಟ್ಟದ ಚಾಮರಾಜ ಒಡೆಯನ ತಮ್ಮ ರಾಜ ಒಡೆಯನಿಗೂ ತಿರುಮಲ ರಾಜನಿಗೂ ವೈರವಿತ್ತೆಂದು ಚಿಕ್ಕದೇವರಾಜ ವಂಶಾವಳಿಯಿಂದ ತಿಳಿದು ಬರುತ್ತದೆ. ಆದರೆ ಪೆನುಕೊಂಡೆಯಲ್ಲಿ ಆಳುತ್ತಿದ್ದ ವಿಜಯನಗರ ದೊರೆ ವೆಂಕಟಪತಿರಾಯನ ಬೆಂಬಲ ರಾಜಒಡೆಯನಿಗಿತ್ತು. ರಾಜಒಡೆಯರ ಪ್ರಭಾವದಿಂದ ತಿರುಮಲರಾಜನು ಭೀತನಾದ. ಗುಣಪಡಿಸಲಸಾಧ್ಯವಾದ ರೋಗದಿಂದ ಬಳಲುತ್ತಿದ್ದ ತಿರುಮಲರಾಜ ತಾನು ಜೀವಿಸುವುದು ಕಷ್ಟವೆಂದು ತಿಳಿದು, ಸ್ವಪ್ರೀತಿಯಿಂದ ರಾಜ ಒಡೆಯನನ್ನು ಕರೆಸಿ ಶ್ರೀರಂಗಪಟ್ಟಣವನ್ನೂ ಸಿಂಹಾಸನವನ್ನೂ ವಹಿಸಿಕೊಟ್ಟು ಅಲಮೇಲಮ್ಮ, ರಂಗಮ್ಮ ಎಂಬ ಪತ್ನಿಯರ ಸಹಿತ ತಲಕಾಡಿನ ಬಳಿಯಿದ್ದ ಮಾಲಿಂಗಿಗೆ ಹೋಗಿ ಅಲ್ಲಿ ಕೆಲವು ದಿನಗಳಿದ್ದು ಮರಣ ಹೊಂದಿದನೆಂದು ಮೈಸೂರು ರಾಜವಂಶದ ಚರಿತ್ರೆ ತಿಳಿಸುತ್ತದೆ.[೩] ಆದರೆ ಅವರಿಬ್ಬರ ನಡುವೆ ಇದ್ದ ಸಂಬಂಧವನ್ನು ಲಕ್ಷ್ಯಕ್ಕೆ ತೆಗೆದುಕೊಂಡರೆ ಇದು ಅಸಂಭವವೆಂದೂ ತಿರುಮಲರಾಯ ರಾಜ ಒಡೆಯನಿಗೆ ಹೆದರಿ ಅಥವಾ ಅವನ ಒತ್ತಾಯದಿಂದ ಹಾಗೆ ಓಡಿಹೋಗಿರಬಹುದೆಂದೂ ತೋರುತ್ತದೆ.
ರಾಜ್ಯದಲ್ಲಿ ದೊರೆತ ಶಾಸನವೊಂದರ ಪ್ರಕಾರ ೧೬೧೨ರಲ್ಲಿ ರಾಜ ಒಡೆಯರ್ ಶ್ರೀರಂಗಪಟ್ಟಣವನ್ನು ವೆಂಕಟಪತಿರಾಯನಿಂದ ಕೊಡುಗೆಯಾಗಿ ಸ್ವೀಕರಿಸಿದನೆಂದು ತಿಳಿದು ಬಂದರೂ ನಿಜವಾಗಿ ಮೈಸೂರು ಅರಸ ಅದನ್ನು ಆಗಲೇ ತನ್ನದನ್ನಾಗಿ ಮಾಡಿಕೊಂಡಿದ್ದಕ್ಕೆ ವೆಂಕಟಪತಿರಾಯನ ಔಪಚಾರಿಕ ಒಪ್ಪಿಗೆ ದೊರೆತಿತ್ತು ಎಂದು ಕೆಲವು ವಿದ್ವಾಂಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶ್ರೀರಂಗಪಟ್ಟಣದ ಶ್ರೀರಂಗನಾಯಕಿ ದೇವಿಗೆ ಅಲಂಕಾರ ಮಾಡಲು ವಾರಕ್ಕೆರಡು ಸಲ ತಾನು ಕೊಡುತ್ತಿದ್ದ ಕೆಲವು ರತ್ಮಾಭರಣಗಳನ್ನು ಅಲಮೇಲಮ್ಮ ಮಾಲಿಂಗಿಯ ಮಡುವಿಗೆ ತೆಗೆದುಕೊಂಡು ಹೋಗಿದ್ದಳು. ಕೆಲವು ದಿನಗಳ ಅನಂತರ ರಾಜ ಒಡೆಯರ್ ಆ ಆಭರಣಗಳನ್ನು ವಶಪಡಿಸಿಕೊಳ್ಳಲು ಪ್ರಯತ್ನ ಮಾಡಿದರು. ಆದರೆ ಅಲಮೇಲಮ್ಮ ಅವನ್ನು ರಾಜ ಒಡೆಯರ್ ರಿಗೆ ಒಪ್ಪಿಸಲಿಲ್ಲ. ಆಲಮೇಲಮ್ಮ ಮಹಾರಾಣಿಯ ಮೇಲೆ ದಂಡು-ದಾಳಿಯ ಸಹಿತ ರಾಜ ಒಡೆಯರ್ ಆಕ್ರಮಣ ಮಾಡಿದರು ಎಂದೂ, ಸಿಟ್ಟಿನಿಂದ ಅವಳು ತಲಕಾಡು ಮರಳಾಗಲಿ, ಮಾಲಿಂಗಿ ಮಡುವಾಗಲಿ, ಮೈಸೂರು ದೊರೆಗಳಿಗೆ ಮಕ್ಕಳು ಇಲ್ಲದೆ ಹೋಗಲಿ, ಎಂದು ಶಪಿಸಿ, ಆಭರಣಗಳನ್ನು ಸೆರಗಿನಲ್ಲಿ ಕಟ್ಟಿಕೊಂಡು ಮಾಲಿಂಗಿಯ ಮಡುವಿನಲ್ಲಿ ದುಮುಕಿ ಪ್ರಾಣ ನೀಗಿದಳು ಎಂಬುದು ಪ್ರತೀತಿ. ತಮ್ಮ ಅಚಾತುರ್ಯದಿಂದ ಸಂಭವಿಸಿದ ಈ ದುರಂತದಿಂದ ರಾಜ ಒಡೆಯರ್ ಪಶ್ಚಾತ್ತಾಪಪಟ್ಟು ಅಲಮೇಲಮ್ಮನ ರೂಪದ ಚಿನ್ನದ ಪ್ರತಿಮೆಯೊಂದನ್ನು ಮಾಡಿಸಿ ನಿತ್ಯವೂ ಅದಕ್ಕೆ ಪೂಜೆ ನಡೆಸುವಂತೆ ಏರ್ಪಡಿಸಿದ್ದು ಅಲ್ಲದೆ, ಆ ಪ್ರತಿಮೆಗೆ ಮಹಾನವಮಿಯ ದಿನ ಅರಮನೆಯಲ್ಲಿ ವಿಶೇಷ ಪೂಜೆ ನಡೆಸುವಂತೆ ಏರ್ಪಡಿಸಿದರು. ಈ ಪದ್ದತಿಯನ್ನು ಅನಂತರ ಮೈಸೂರಿನ ಅರಸರು ಅನುಸರಿಕೊಂಡು ಬಂದರು. ಅಂದಿನಿಂದ ತಲಕಾಡು ಮೈಸೂರು ರಾಜರ ವಶದಲ್ಲಿತ್ತು.
ಪ್ರಚಲಿತವಿರುವ ಇನ್ನೊಂದು ಕಥೆಯ ಪ್ರಕಾರ, ಶ್ರೀರಂಗರಾಯನಿಗೆ ತೀವ್ರವಾದ ಬೇನೆಯಾಗಲು ಅವನು ಶ್ರೀರಂಗಪಟ್ಟಣದ ರಾಜ್ಯಭಾರವನ್ನು ಹೆಂಡತಿ ರಂಗಮ್ಮನಿಗೆ ವಹಿಸಿ, ತಲಕಾಡಿನ ವೈದ್ಯೇಶ್ವರನಿಗೆ ಪೂಜೆ ಸಲ್ಲಿಸುವ ಉದ್ದೇಶದಿಂದ ಅಲ್ಲಿಗೆ ಹೋದ. ಗಂಡನಿಗೆ ಮರಣ ಸನ್ನಿಹಿತವಾಗಿದೆಯೆಂಬುದನ್ನು ತಿಳಿದ ರಂಗಮ್ಮ, ಶ್ರೀರಂಗಪಟ್ಟಣದ ಮತ್ತು ಅದರ ಆಧೀನ ಪ್ರದೇಶಗಳ ರಾಜ್ಯಭಾರವನ್ನು ರಾಜ ಒಡೆಯರ್ ರಿಗೆ ವಹಿಸಿ, ತಾನೂ ತಲಕಾಡಿಗೆ ಹೋದಳು. ಅವಳು ಧರಿಸಿದ್ದ ಮೂಗುತಿಯನ್ನು ಪಡೆದುಕೊಳ್ಳಬೇಕೆಂಬ ದುರಾಸೆಯಿಂದ ರಾಜ ಒಡೆಯರ್ ಸೈನ್ಯದೊಂದಿಗೆ ತಲಕಾಡಿಗೆ ಹೋಗಿ ತಲಕಾಡನ್ನು ಗೆದ್ದುಕೊಂಡರು, ರಂಗಮ್ಮ ಕಾವೇರಿಯ ದಡಕ್ಕೆ ಹೋಗಿ, ಮೂಗುತಿಯನ್ನು ನೀರಿನಲ್ಲಿ ಎಸೆದು ಮೇಲೆ ಹೇಳಿದಂತೆ ಶಾಪಕೊಟ್ಟು ತಾನೂ ಹೊಳೆಗೆ ಹಾರಿಕೊಂಡಳು. ತಲಕಾಡಿನ ಹಳೆಯ ಊರಿನ ಬಹುಭಾಗ ಮರಳಿನಲ್ಲಿ ಹೂತುಹೋಗಿದೆ. ಹೊಳೆಯ ಮೇಲಿನಿಂದ ಬೀಸುವ ಗಾಳಿಯಲ್ಲಿ ತೂರಿಬರುವ ಮರಳಿನಿಂದ ಊರಿಗೆ ಆ ಪರಿಸ್ಥಿತಿ ಬಂದಿದೆ. ಮಾಧವಮಂತ್ರಿ ಆಣೆಕಟ್ಟನ್ನು ನಿರ್ಮಿಸಿದ ಅನಂತರ ಅಲ್ಲಿ ಶೇಖರವಾದ ಮರಳಿನಿಂದ ಈ ಅನಾಹುತವಾಗಿದೆಯೆಂದು ಭಾವಿಸಲಾಗಿದೆ. ಏರಿಬರುತ್ತಿರುವ ಮರಳಿನ ಆಕ್ರಮಣವನ್ನು ತಡೆಗಟ್ಟಲು ಸರ್ಕಾರದವರು ಗೇರುಮರಗಳನ್ನು ನೆಡುವುದೇ ಮುಂತಾದ ಅನೇಕ ಕಾರ್ಯಗಳನ್ನು ಕೈಗೊಂಡಿದ್ದಾರೆ.
ವಿಜಯನಗರದ ರಾಜಪ್ರತಿನಿಧಿಯಾದ ಶ್ರೀರಂಗರಾಯ ಎಂಬಾತ ಶ್ರೀರಂಗಪಟ್ಟಣವನ್ನಾಳುತ್ತಿದ್ದ. ಅವನಿಗೆ ಬೆನ್ನುಪಣಿರೋಗ ಬಂದು ಯಾವ ಔಷಧದಿಂದಲೂ ಗುಣವಾಗದಿದ್ದಾಗ ವೈದ್ಯನಾಥೇಶ್ವರನಿಗೆ ಪೂಜೆ ಮಾಡಿ ತನ್ನ ರೋಗದಿಂದ ಮುಕ್ತಿಪಡೆಯಲು ತಲಕಾಡಿಗೆ ಆಗಮಿಸಿದ. ಪತಿ ಮರಣಾವಸ್ಥೆಯಲ್ಲಿರುವನೆಂದು ತಿಳಿದ ರಾಣಿ ತಾನೂ ಜೊತೆಗೆ ಬಂದಳು. ರಾಜ ತಲಕಾಡಿನಲ್ಲಿ ತನ್ನ ಕೊನೆಯುಸಿರೆಳೆದ. ಆತನ ಪತ್ನಿ ಅಲಮೇಲಮ್ಮ[೪] ತಲಕಾಡಿನ ಸನಿಹದ ಮಾಲಂಗಿ ಗ್ರಾಮದಲ್ಲಿ ನೆಲೆಸಿದಳು.
ತಲಕಾಡು ಮರಳಾಗಿ;
ಮಾಲಿಂಗಿ ಮಡುವಾಗಿ
ಮೈಸೂರು ಒಡೆಯರಿಗೆ ಮಕ್ಕಳಾಗದೆ ಹೋಗಲಿ -ಅಂದಿನಿಂದಲೂ ಅಲುಮೇಲಮ್ಮನ ಶಾಪ ಎಂದೇ ಜನಜಿನತವಾಗುತ್ತದೆ.[೫]
ಹಳೆಯ ನಗರ ತಲಕಾಡು ಸಂಪೂರ್ಣವಾಗಿ ಮರಳುಗಾಡಾಯಿತು, ಅಂದರೆ ಸುಮಾರು ೧ ಮೈಲಿನಷ್ಟು. ಕೇವಲ ಮೇಲಿನ ಎರಡು ಪಗೋಡಗಳು ಕಾಣಿಸುತ್ತದೆ. ಪ್ರಮುಖವಾಗಿ ನೈಋತ್ಯ ಮುಂಗಾರು ಅವಧಿಯಲ್ಲಿ ಅಲ್ಲಿನ ನಿವಾಸಿಗಳು ತಮ್ಮ ಮನೆಯನ್ನು ತ್ಯಜಿಸುತ್ತಾರೆ, ಕಾರಣ ಅಲ್ಲಿ ೯ ರಿಂದ ೧೦ ಅಡಿಗಳಷ್ಟು ಮರಳು ಸಂಗ್ರಹವಾಗುತ್ತದೆ. ಅದಾಗ್ಯೂ ಮಾಧನಮಂತ್ರಿ ಅಣೆಕಟ್ಟು ಮತ್ತು ಚಾನಲ್ ಗಳ ಪ್ರಭಾವದಿಂದ ಶ್ರೀಮಂತ ತೇವ ಕೃಷಿಯಿಂದ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
೩೦ ದೇವಾಲಯಗಳು ಮರಳಿನಲ್ಲಿ ಅಡಗಿದೆ, ಆದರೆ ಕೀರ್ತಿ ನಾರಾಯಣ ದೇವಸ್ಥಾನವನ್ನು ಮಾತ್ರ ಯಶಸ್ವಿಯಾಗಿ ,ಉತ್ಖನನ ಪ್ರಕ್ರಿಯೆಯಿಂದ ಹೊರತೆಗೆಯಲಾಗಿದೆ. ಮರಳು ಮೂಲಕ ತೆರೆದ ಅತ್ಯಂತ ಭವ್ಯವಾದ ದೇವಾಲಯ ವೈಧ್ಯನಾಥೇಶ್ವರ ಲಿಂಗದ್ದು.ಕಳೆದ ಶತಮಾನದ ಆರಂಭದಲ್ಲಿ ಎರಡು ದೇವಾಲಯಗಳು ಆನಂದೇಶ್ವರ ಮತ್ತು ಗೌರಿ ಶಂಕರ, ಇವನ್ನು ಅಗೆದು ತೆಗೆಯಲಾಯಿತು.
ನಾಲ್ಕು ತುಣುಕು ದಾಖಲೆಗಳು ಪಟಾಲೇಶ್ವರ ದೇವಾಲಯದ ಹೊರಭಾಗದಲ್ಲಿ ಕಾಣಬಹುದು.
ಹಲವಾರು ಇತರ ಆಸಕ್ತಿಕರ ದಂತಕಥೆಗಳು ಈ ದೇವಾಲಯವನ್ನು ಸುತ್ತುವರಿದಿದೆ. ಇದು ತಪಸ್ವಿ ಸೋಮದತ್ತರು ಶಿವಪೂಜೆಯನ್ನು ಮಾಡಲು ಸಿದ್ದಾರಣ್ಯ ಕ್ಷೇತ್ರಕ್ಕೆ ಮುಖ್ಯಸ್ಥರಾಗಿರುತ್ತಾರೆ ಎಂದು ನಂಬಲಾಗಿದೆ. ಆದರೆ ಮಾರ್ಗಮಧ್ಯದಲ್ಲಿ ಕಾಡಾನೆಗಳಿಗೆ ಈಡಾಗಿ ಕೊಲ್ಲಲ್ಪಟ್ಟರು ಎಂಬುದು ಐತಿಹ್ಯ. ನಂತರ ಸೋಮದತ್ತರು ಮತ್ತು ಅವರ ಅನುಯಾಯಿಗಳು ಮರು ಅವತರಿಸಿದ್ದಾರೆಂದು ಮತ್ತು ತಲಕಾಡು ಕ್ಷೇತ್ರದಲ್ಲಿ, ಒಂದು ಮರದ ರೂಪದಲ್ಲಿ ಶಿವನಿಗೆ ಪೂಜೆಯನ್ನು ಸಲ್ಲಿಸುತ್ತಿದ್ದಾರೆಂದು ನಂಬಲಾಗಿದೆ.
ತಲಾ ಮತ್ತು ಕಾಡ, ಎಂಬ ಇಬ್ಬರು ಬೇಟೆಗಾರರು ಮರ ಕಡಿಯುವಾಗ ಕೊಡಲಿಯ ಘಾತಕ್ಕೆ ಮರದ ದೊಡ್ಡ ಕೊಂಬೆ ಅಪ್ಪಳಿಸಿ ಅವರ ಮೇಲೆ ಬಿತ್ತು. ಅವರು ರಕ್ತ ಸುರಿಸುತ್ತಾ ಮುಂದಕ್ಕೆ ಹುಡುಕಲು ಒಬ್ಬ ಮರದ ಎಲೆಗಳು ಮತ್ತು ಹಣ್ಣುಗಳ ಜೊತೆಗೆ ಮರದ ಗಾಯ ಧರಿಸಿದ್ದ. ಅವನಿಂದ ಇವರಿಬ್ಬರು ಅಮರರಾದರು. ಶಿವನು ಈ ಘಟನೆಯ ಮೂಲಕ ಸ್ವತಃ ಅ ಸ್ಠಳದಲ್ಲಿ ವಾಸಿಯಾದ ಎಂದು ನಂಬಲಾಗಿದೆ. ಆತನನ್ನು ವೈಧ್ಯನಾಥೇಶ‍್ವರ ಎಂದು ಕರೆಯಲಾಗುತ್ತದೆ. ಇಲ್ಲಿ ಎಲ್ಲಾ ಪಂಚಲಿಂಗಗಳ ಬಗ್ಗೆ ದಂತೆಕಥೆಗಳಿವೆ.
ತಲಕಾಡಿನ ಶಿವನಿಗೆ ಗಜಾರಣ್ಯನಾಥ ಎಂದೂ ಕರೆಯುತ್ತಾರೆ. ಇದಕ್ಕೂ ಒಂದು ಕಥೆಯಿದೆ. ಆನೆಯ ಜನ್ಮ ಪಡೆದಿದ್ದ ಸೋಮದತ್ತನೆಂಬ ಋಷಿ ಮತ್ತು ಆತನ ಶಿಷ್ಯರು ಇಲ್ಲಿ ಮೋಕ್ಷ ಪಡೆದಿದ್ದರಿಂದ ಇದು ಗಜಾರಣ್ಯ ಕ್ಷೇತ್ರವೆಂದು ಪ್ರಸಿದ್ಧವಾಗಿದೆ[೬]. ಇಂದಿಗೂ ತಲಕಾಡು[೭] ತನ್ನ ಪ್ರಾಚೀನ ಸಂಪತ್ತನ್ನು ಉಳಿಸಿಕೊಂಡು8ಬಂದಿದ್ದು ಸುಮಾರು ಇಪ್ಪತ್ತು ಸಾವಿರ ಜನಸಂಖ್ಯೆಯನ್ನು ಹೊಂದಿದೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿನೀಡುತ್ತಾರೆ .
ತಲಕಾಡು[೮]ದೇವಾಲಯಗಳನ್ನು ಮರಳು ಆವರಿಸುತ್ತದೆ. ೨೦೦೯ರಲ್ಲಿ ನಡೆದ ಪಂಚಲಿಂಗ ದರ್ಶನ ಹಾಗೂ ಪ್ರತಿ ೧೨ ವರ್ಷಕ್ಕೊಮ್ಮೆ ನಡೆಯುವ ಪಂಚಲಿಂಗ ದರ್ಶನವು ಪ್ರಸಿದ್ಧಿಯಾಗಿದೆ.
ಎರಡು ನಕ್ಷತ್ರಗಳು ಒಂದುಗೂಡಲು ಅಂದರೆ ಪಂಚಲಿಂಗ ದರ್ಶನ ಕಾರ್ತಿಕ ಮಾಸದಲ್ಲಿ ಅಮವಾಸ್ಯೆಯ ದಿನ ಆಚರಿಸಲಾಗುತ್ತದೆ[೯]. ಸಂಪ್ರದಾಯಸ್ಥರು ಮೊದಲು ಗೋಕರ್ಣ ತೀರ್ಥದಲ್ಲಿ ಸ್ನಾನ ಮಾಡಬೇಕು. ನಂತರ ಗೋಕರ್ಣೇಶ್ವರ ಮತ್ತು ಚಂಡಿಕಾ ದೇವಿ ಪೂಜೆ, ತದನಂತರ ವೈಧ್ಯನಾಥೇಶ್ವರನ ಪೂಜೆ, ನಂತರ ಕ್ರಮವಾಗಿ ಅರ್ಕೇಶ್ವರ, ಪಾತಾಳೇಶ್ವರ, ಮರುಳೇಶ್ವರ ಮತ್ತು ಮಲ್ಲಿಕಾರ್ಜುನರಿಗೆ ಪೂಜೆ.
ಅಂತಿಮವಾಗಿ ಕೀರ್ತಿ ನಾರಾಯಣ ಪೂಜೆ. ಸ್ಥಳೀಯ ದಂತ ಕಥೆಯ ಪ್ರಕಾರ, ರಾಮಾನುಜಾಚಾರ್ಯರು ಕರ್ನಾಟಕದಲ್ಲಿ ಬಿಡಾರ ಹೂಡಿ ದಾಗ ಅವರು ಪಂಚ ನಾರಾಯಣ ದೇವಾಲಯವನ್ನು ಸ್ಥಾಪಿಸಿದರು. ಅಂದೇ ಕೀರ್ತಿ ನಾರಾಯಣ ದೇವಾಲಯವನ್ನು ಪ್ರತಿಷ್ಠಾಪಿಸಲಾಯಿತು.
ತಲಕಾಡು ಪಾತಾಳೇಶ್ವರ,
ಮರುಳೇಶ್ವರ,
ಅರ್ಕೇಶ್ವರ,
ವೈದ್ಯನಾಥೇಶ್ವರ
ಮಲ್ಲಿಕಾರ್ಜುನ. ದೇವಾಲಯಗಳು ಐದು ಲಿಂಗಗಳನ್ನು ಪ್ರತಿನಿಧಿಸಿಲು, ಶಿವನ ೫ ಮುಖಗಳನ್ನು ಪಂಚಪತಿ ಎಂದು ರೂಪಿಸಲು ಸಾಧ್ಯವಾಯಿತು. ಈ ದೇವಾಲಯದಲ್ಲಿ ಕೀರ್ತಿ ನಾರಾಯಣ ದೇವಾಲಯವೂ ಕೂಡ ಪಂಚ ನಾರಾಯಣದಲ್ಲಿ ಒಂದಾಗಿದೆ. ಇಲ್ಲಿ ಸುಮಾರು ಕ್ರಿ.ಶ ೧೮೮೦ ರಲ್ಲಿ ಕ್ರೈಸ್ತ ಮಿಷನರಿಗಳು ಈ ಸ್ಥಳದಲ್ಲಿ ಕ್ರೈಸ್ತ ಧರ್ಮವನ್ನೂ ಸಹ ಪ್ರಾರಂಭಿಸಿರುತ್ತಾರೆ.