ತಾಂಡೂರ್
తాండూరు Tandur | |
---|---|
ಪಟ್ಟಣ | |
ದೇಶ | ಭಾರತ |
ರಾಜ್ಯ | ತೆಲಂಗಾಣ |
ಜಿಲ್ಲೆ | ರಂಗಾರೆಡ್ಡಿ |
Elevation | ೪೫೦ m m (Bad rounding hereFormatting error: invalid input when rounding ft) |
Population (2011) | |
• Total | ೬೫,೧೧೫[೧] |
ಭಾಷೆಗಳು | |
• ಅಧಿಕೃತ | ತೆಲುಗು |
Time zone | UTC+5:30 (IST) |
ಪಿನ್ ಕೋಡ್ | 501141 |
ತಾಂಡೂರ್ (తాండూరు ,Tandur) ತೆಲಂಗಾಣ ರಾಜ್ಯದ,ವಿಕಾರಾಬಾದ್[೨] ಜಿಲ್ಲೆಯ ಪಟ್ಟಣ ಪಂಚಾಯತಿ ಮತ್ತು ಮಂಡಲ್ ಕೇಂದ್ರವಾಗಿದೆ.ಇ ಪಟ್ಟಣ ರಾಜ್ಯ ರಾಜಧಾನಿ ಹೈದ್ರಾಬಾದ್ ನಿಂದ ೧೨೦ ಕಿ.ಮೀ ದೂರದಲ್ಲಿದೆ .ಇದು ಕರ್ನಾಟಕ ರಾಜ್ಯದ ಚಿಂಚೋಳಿ, ಸೇಡಮ್ ತಾಲ್ಲೂಕುಗಳ ಗಡಿಯನ್ನು ಹಂಚಿಕೊಂಡಿದೆ.
೨೦೧೧ರ ಭಾರತದ ಜನಗಣತಿಯ ಪ್ರಕಾರ ತಾಂಡೂರ್ 65,115 ಜನಸಂಖ್ಯೆಯನ್ನು ಹೊಂದಿದ್ದು, 32,595 ಪುರುಷರು ಮತ್ತು 32,520 ಮಹಿಳೆಯರು.[೧]
ತಾಂಡೂರ್ 17°14′N 77°35′E / 17.23°N 77.58°E ನಲ್ಲಿ ಇದೆ. ಇದು 450 ಮೀ ಎತ್ತರದಲ್ಲಿದೆ. ತೆಲಂಗಾಣ ರಾಜ್ಯ ರಾಜಧಾನಿ ಹೈದರಾಬಾದ್ ನಿಂದ ೧೧೦ ಕಿ, ಮೀ ದೂರದಲ್ಲಿದೆ ಮತ್ತು ಜಹೀರಾಬಾದ್ ನಿಂದ (60 ಕಿಮೀ), ಸಂಗಾರೆಡ್ಡಿ ಇಂದ (95 ಕಿಮೀ), ಮೆಹಬೂಬ್ ನಗರದಿಂದ (80 ಕಿಮೀ), ವಿಕಾರಾಬಾದ್ ದಿಂದ (40 ಕಿಮೀ) ಮತ್ತು ಚಿಂಚೋಳಿ ಯಿಂದ (40 ಕಿಮೀ) ದೂರದಲ್ಲಿದೆ.
ಈ ಬ್ಯಾಂಕುಗಳು ತಮ್ಮ ಶಾಖೆಯನ್ನು ತಾಂಡೂರ ನಲ್ಲಿ ಹೊಂದಿವೆ . 1) ಆಂಧ್ರ ಬ್ಯಾಂಕ್,2) ಡೆಕ್ಕನ್ ಗ್ರಾಮೀಣ ಬ್ಯಾಂಕ್,3) ದೇನಾ ಬ್ಯಾಂಕ್,4)ಎಚ್ಡಿಎಫ್ಸಿ ಬ್ಯಾಂಕ್, 5) ಹೈದರಾಬಾದ್ ಜಿಲ್ಲೆ ಸಹಕಾರ ಕೇಂದ್ರ ಬ್ಯಾಂಕ್ ಲಿಮಿಟೆಡ್, 7) ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ 6) KBS ಬ್ಯಾಂಕ್.[೫],[೬] 9)axisbank
ಇಲ್ಲಿನ ಮಣ್ಣು ಕಪ್ಪು ಮಣ್ಣಾಗಿದ್ದು ಇಲ್ಲಿನ ಮುಖ್ಯ ಬೆಳೆಗಳು ಜೋಳ, ತೊಗರಿ, ನೆಲಗಡಲೆ ,ಭತ್ತ.[೧೫]
ನೀಲಿ ಮತ್ತು ಹಳದಿ ಬಣ್ಣದ ಸುಣ್ಣದ ಕಲ್ಲು ಇಲ್ಲಿ ಹೇರಳವಾಗಿ ದೋರೆಯುತ್ತವೆ. ಇದು ಮನೆ ಕಟ್ಟಲು, ಗೋಡೆಯ ಲೋಹಲೇಪನ ತಯಾರೀಸಲು ಮತ್ತು ಚಪ್ಪಡಿಗಳನ್ನು ತಯಾರೀಸಲು ಬಳಸಲಾಗುತ್ತದೆ. ನೀಲಿ ಸುಣ್ಣದ ಮತ್ತು ಕಲ್ಲಿನ ಕೈಗಾರಿಕೆಗಳು ಕೌಶಲ್ಯರಹಿತ ಜನರಿಗೆ ಉದ್ಯೋಗ ಒದಗಿಸುತ್ತಿವೆ. ನಗರದ ಸುತ್ತಮುತ್ತ ಸಣ್ಣ ಪ್ರಮಾಣದ ಕೈಗಾರಿಕೆಗಳು ಸ್ಟೋನ್ ಹೊಳಪು ಮಾಡುವ ಘಟಕಗಳ ಮೂಲಕ ನೇರವಾಗಿ ಮತ್ತು ಪರೋಕ್ಷವಾಗಿ ಜನರಿಗೆ ಉದ್ಯೋಗ ಸ್ರೃಷ್ಠೀಯಾಗುತ್ತಿದೆ. ಇಂತಹ ಸಣ್ಣ ಪ್ರಮಾಣದ ಕೈಗಾರಿಕೆಗಳು ನೂರಾರು ಇವೆ.ಇದಕ್ಕೆ ಕಾರಣ ಸ್ಥಳದ ನೈಸರ್ಗಿಕ ನೆಲದ ಸಂಪನ್ಮೂಲಗಳು ಮತ್ತು ಕೃಷಿ ಭೂಮಿಯನ್ನು ಲಭ್ಯತೆಯೆ ಇದಕ್ಕೆ ಕಾರಣ. ಕಲ್ಲುಗಣಿಗಳು ವರ್ಷದುದ್ದಕ್ಕೂ ಕೇಲಸವನ್ನು ನಿಡುತ್ತವೆ.ಇಲ್ಲಿ ಸಿಮೆಂಟ್ ಕಾರ್ಖಾನೆಗಳಿವೆ.[೧೬]