ತುಳಜಾ ಭವಾನಿ

 

ಭವಾನಿ
ಶಕ್ತಿ
ಸಿಂಹದ ಮೇಲೆ ಕುಳಿತ ಎಂಟು ಕೈಗಳುಳ್ಳ ಭವಾನಿ
ದೇವನಾಗರಿभवानी
ಸಂಲಗ್ನತೆಪಾರ್ವತಿ, ದೇವಿ, ಆದಿ ಪರಾಶಕ್ತಿ, ಮಹಾದೇವಿ, ದುರ್ಗೆ
ನೆಲೆದೇವಿ ಲೋಕ
ಆಯುಧಬಿಲ್ಲು ಬಾಣ, ಖಡ್ಗ, ಗದೆ, ಗುರಾಣಿ, ಶಂಖ
ಸಂಗಾತಿಭಾವ (ಶಿವ)[]
ವಾಹನಹುಲಿ/ಸಿಂಹ

ಭವಾನಿ ( ಭವ್ಯ, ತುಳಜಾ, ತುರಜಾ, ತ್ವರಿತಾ, ಅಂಬಾ, ಜಗದಂಬಾ, ಮತ್ತು ಅಂಬೆ ಎಂದು ಸಹ ಪ್ರಸಿದ್ಧಿ ಪಡೆದಿದ್ದಾಳೆ) ಅವಳು ಪರಾಶಕ್ತಿಯ ಒಂದು ರೂಪ. ಅವಳು ಮಹಾರಾಷ್ಟ್ರದಲ್ಲಿ ಅಗ್ರಿ ಸಮಾಜದ ಭೋಯರ್ ಜನರಿಂದ ಪೂಜಿಸಲ್ಪಡುವುದಲ್ಲದೇ ಉತ್ತರ ಗುಜರಾತದ ರಜಪೂತರು, ಉತ್ತರ ಕರ್ನಾಟಕ, ಪಶ್ಚಿಮ ರಾಜಸ್ಥಾನ ಮತ್ತು ಪಂಜಾಬ್ ರಾಜ್ಯದ ಜನರಿಂದಲೂ ಪೂಜಿಸಲ್ಪಡುತ್ತಾಳೆ. [] ಭವಾನಿ ಪದವು "ಜೀವದಾಯಿನಿ" ಎಂಬ ಅರ್ಥವನ್ನು ನೀಡುತ್ತದೆ. ಅಂದರೆ ಪ್ರಕೃತಿಯ ಶಕ್ತಿ ಅಥವಾ ಸೃಜನಶೀಲ ಶಕ್ತಿಯ ಮೂಲ. ಅವಳನ್ನು ತನ್ನ ಭಕ್ತರಿಗೆ ಶಕ್ತಿಯನ್ನು ಒದಗಿಸುವ ತಾಯಿಯೆಂದು ಮತ್ತು ಅಸುರರನ್ನು ಕೊಲ್ಲುವ ಮೂಲಕ ನ್ಯಾಯವನ್ನು ನೀಡುವ ದೇವತೆಯೆಂದು ಪರಿಗಣಿಸಲಾಗುತ್ತದೆ.

ಭವಾನಿಯು ಮರಾಠ ರಾಜನಾಗಿದ್ದ ಶಿವಾಜಿ ರಾಜನ ರಕ್ಷಕ ದೇವತೆಯಾಗಿದ್ದು, ಅವನು ದೇವಿ ಭವಾನಿಯ ಭಕ್ತಿ ಪಾರಮ್ಯತೆಯಲ್ಲಿ ತನ್ನ ಖಡ್ಗವಾದ ಭವಾನಿ ತಲ್ವಾರ್ ಅನ್ನು ಅರ್ಪಿಸಿದನು. ಅನೇಕ ಮರಾಠಿ ಜಾನಪದ ಕಥೆಗಳು ತುಳಜಾ ಭವಾನಿಯ ಮಹಿಮೆಯನ್ನು ಬಣ್ಣಿಸುತ್ತವೆ. ಶಿವಾಜಿಯ ತಾಯಿ ಭವಾನಿಯ ಮಹಾನ್ ಭಕ್ತೆಯಾಗಿದ್ದಳು ಎಂದು ಹೇಳಲಾಗುತ್ತದೆ. ಮಹಾರಾಷ್ಟ್ರದ ತುಳಜಾಪುರ ಪಟ್ಟಣವು ನವರಾತ್ರಿಯ ಸಮಯದಲ್ಲಿ (ಸೆಪ್ಟೆಂಬರ್ ನಿಂದ ಅಕ್ಟೋಬರ್) ವಾರ್ಷಿಕ ತುಳಜಾ ಭವಾನಿ ಜಾತ್ರೆಯ ಸ್ಥಳವಾಗಿದೆ ಮತ್ತು ೧೨ ನೇ ಶತಮಾನದಿಂದಲೂ ತುಳಜಾ ಭವಾನಿ ದೇವಾಲಯದ ನೆಲೆಯಾಗಿದೆ. ದೇವಸ್ಥಾನವು ಬೆಣಚು ಕಲ್ಲಿನಿಂದ (ಗ್ರಾನೈಟ್) ಕೆತ್ತಲ್ಪಟ್ಟ ಮೂರ್ತಿಯನ್ನು ಹೊಂದಿದ್ದು, ಈ ಮೂರ್ತಿಯು ಒಂದು ಮೀಟರ್ (ಸರಿಸುಮಾರು ೩ ಅಡಿ) ಎತ್ತರವಾಗಿದೆ, ಆಯುಧಗಳನ್ನು ಹಾಗೂ ಹತನಾದ ರಾಕ್ಷಸ ಮಹಿಷಾಸುರನ ತಲೆಯನ್ನು ಹಿಡಿದಿರುವ ಎಂಟು ಕೈಗಳು ಈ ಮೂರ್ತಿಗೆ ಇವೆ.

ವ್ಯುತ್ಪತ್ತಿ

[ಬದಲಾಯಿಸಿ]

ಭವಾನಿ ಎಂಬ ಪದವು "ಜೀವದಾಯಿನಿ" ಎಂಬ ಅರ್ಥವನ್ನು ನೀಡುತ್ತದೆ. ಅಂದರೆ ಪ್ರಕೃತಿಯ ಶಕ್ತಿ ಅಥವಾ ಸೃಜನಶೀಲ ಶಕ್ತಿಯ ಮೂಲ. ಅವಳು ಪಾರ್ವತಿಯ ಒಂದು ಅಂಶವಾಗಿದ್ದು, ತನ್ನ ಭಕ್ತರಿಗೆ ಶಕ್ತಿಯನ್ನು ನೀಡುವ ತಾಯಿಯೆಂದು ಪರಿಗಣಿಸಲ್ಪಡುತ್ತಾಳೆ ಹಾಗೂ ಅಸುರರನ್ನು ಕೊಲ್ಲುವ ಮೂಲಕ ನ್ಯಾಯದೇವತೆಯ ಪಾತ್ರವನ್ನೂ ನಿರ್ವಹಿಸುತ್ತಾಳೆ. ಶಿವಪುರಾಣದ ಪ್ರಕಾರ, ಭವಾನಿಯು ಪರಮ ದೇವತೆ ಮತ್ತು ಭಗವಂತನಾದ ಭವ ( ಸದಾಶಿವ ) ನ ಸಂಗಾತಿಯಾಗಿದ್ದಾಳೆ. ಭವಾನಿ ( "ಅಸ್ತಿತ್ವವನ್ನು ನೀಡುವವಳು") ಎಂಬುದು ದೇವಿಯ ಹಲವಾರು ಹೆಸರುಗಳಲ್ಲಿ ಒಂದು, ದೇವಿ ಎಂದರೆ ದೈವಿಕ ಸ್ತ್ರೀ ತತ್ವವೆಂದು ಪರಿಗಣಿಸಲಾಗಿದೆ; ಇವಳು ಸರ್ವ ದೇವತೆಗಳ ಶಕ್ತಿಯ ಸಾಕಾರ ರೂಪ. ಶಿವಪುರಾಣ ೨.೨.೧೪ರ ಪ್ರಕಾರ ಭವಾನಿ ಎಂದರೆ ಸತಿಯಾಗಿ ಅವತರಿಸಿದ ದೇವಿಯ (ದೇವಿ) ವಿಶೇಷಣವಾಗಿದೆ. ಅದರಂತೆ, ಬ್ರಹ್ಮನು ನಾರದನಿಗೆ ಹೇಳಿದಂತೆ: - “[. . . ] ವಿರಿಣಿಯಿಂದ ಜನಿಸಿದ ಬ್ರಹ್ಮಾಂಡದ ಜನನಿಯನ್ನು ನೋಡಿದ ನಂತರ, ದಕ್ಷನು ತನ್ನ ಅಂಗೈಗಳನ್ನು ಜೋಡಿಸಿ ಅವಳಿಗೆ ನಮಸ್ಕರಿಸಿದನು, ಹಾಗೂ ಗೌರವಿಸಿ ಅವಳನ್ನು ಸ್ತುತಿಸಿದನು. [. . . ] ಓ..ಬ್ರಹ್ಮಾಂಡದ ತಾಯಿಯೇ, ಭವಾನಿ, ಅಂಬಿಕಾ, ಜಗನ್ಮಾಯಿ ಮತ್ತು ದುರ್ಗಿಯ ಹೆಸರುಗಳಿಂದ ನಿನ್ನನ್ನು ಸ್ತುತಿಸುವವರು ಎಲ್ಲವನ್ನೂ ಹೊಂದುತ್ತಾರೆ. ದೇವಿಯು ತನ್ನ ವಿವಿಧ ರೂಪಗಳು, ಗುಣಲಕ್ಷಣಗಳು ಮತ್ತು ಕ್ರಿಯೆಗಳಿಗೆ ಉಲ್ಲೇಖಿಸಬಹುದಾದ ಹಲವು ಹೆಸರುಗಳನ್ನು ಹೊಂದಿದ್ದಾಳೆ ಆದರೆ ಈ ಹೆಸರುಗಳನ್ನು ಯಾವಾಗಲೂ ನಿಖರವಾಗಿ ಮತ್ತು ವಿಶಿಷ್ಟವಾಗಿ ಬಳಸಲಾಗುವುದಿಲ್ಲ. ಪ್ರಪಂಚದ ತಾಯಿಯಾಗಿ, ಅವಳು ಗೌರಿ, ಅಂಬಿಕಾ ಅಥವಾ ಜಗತ್ ಜನನಿಯಾಗಿದ್ದಾಳೆ. (ಜಗನ್ಮಾಯೆಗೆ ಜಗತ್ ಜನನಿ/ಜಗ ಜನನಿ ಎಂದು ಓದುವುದು ಯೋಗ್ಯವಾಗಿದೆ). ಅವಳ ಉಗ್ರ ರೂಪದಲ್ಲಿ, ಅವಳು ದುರ್ಗೆಯಾಗಿದ್ದಾಳೆ, ಅಂದರೆ ದುರ್ಗಮಳು.

ಭವಾನಿಯ ದೇವಾಲಯಗಳು

[ಬದಲಾಯಿಸಿ]

ಮಹಾರಾಷ್ಟ್ರದ ಉಸ್ಮನಾಬಾದ್ ಜಿಲ್ಲೆಯ ತುಳಜಾಪುರದಲ್ಲಿಯ ತುಳಜಾ ಭವಾನಿ ದೇವಸ್ಥಾನವು ೫೧ ಶಕ್ತಿ ಪೀಠಗಳಲ್ಲಿ (ತೀರ್ಥಯಾತ್ರಾ ಸ್ಥಳಗಳಲ್ಲಿ) ಒಂದು. ಈ ದೇವಸ್ಥಾನವನ್ನು ೧೨ನೇ ಶತಮಾನದ ಸಮೀಪದಲ್ಲಿ ನಿರ್ಮಿಸಲಾಗಿದೆ. ಚಿತ್ತೋಡಗಡದಲ್ಲಿ ಮತ್ತೊಂದು ತುಳಜಾ ಭವಾನಿ ದೇವಸ್ಥಾನವನ್ನು ಕ್ರಿ.ಶ ೧೫೩೭ ಮತ್ತು ೧೫೪೦ ನಡುವೆ ನಿರ್ಮಿಸಲಾಯಿತು. ಇದು ನಿರ್ದೇಶಾಂಕಗಳಲ್ಲಿ ಇದೆ [೧೮.೦೧೧೩೮೬ ಉ ೭೬.೧೨೫೬೪೧ ಪೂ]

ಇತಿಹಾಸ

[ಬದಲಾಯಿಸಿ]

ಆದಿಯುಗದ ಶಕ್ತಿಯ ಆರಾಧನೆಯ ಶಕ್ತಿ ದೇವಿಯ ರೂಪಗಳನ್ನು ಮಹಾರಾಷ್ಟ್ರದ ನಾಲ್ಕು ಶಕ್ತಿ ಪೀಠಗಳಲ್ಲಿ ಕಾಣಬಹುದು. ತುಳಜಾಪುರದಲ್ಲಿ ಭವಾನಿಯಾಗಿಯೂ ; ಕೊಲ್ಲಾಪುರದಲ್ಲಿ ಮಹಾಲಕ್ಷ್ಮಿ ; [[[ಮಹೂರ್, ಮಹಾರಾಷ್ಟ್ರ|ಮಾಹೂರಿ]ನಲ್ಲಿ]] ಮಹಾಮಾಯೆ ರೇಣುಕಾ ; ಮತ್ತು ಸಪ್ತಶೃಂಗಿಯಾಗಿ [https://nashik.gov.in/tourist-place/shree-saptshrungi-gad-vani/ ವಣಿಯಲ್ಲಿ . ಶ್ರೀ ಭವಾನಿ ಅಮ್ಮನನ್ನು ತಮಿಳುನಾಡು ರಾಜ್ಯದಲ್ಲಿಯೂ ಪೂಜಿಸಲಾಗುತ್ತದೆ

ಪೆರಿಯಪಾಳ್ಯಂ). ಮಹಾರಾಷ್ಟ್ರ ರಾಜ್ಯದ ಇತರ ಶಕ್ತಿ ದೇವಾಲಯಗಳು ಅಂಬೆಜೋಗಯಿ ಮತ್ತು [ಔಂಧ್] ನಲ್ಲಿವೆ.

ತುಳಜಾಪುರದಲ್ಲಿ ಶಿವಾಜಿಗೆ ಭವಾನಿ ದೇವಿಯು ಖಡ್ಗವನ್ನು ನೀಡುತ್ತಾಳೆ.

ಭವಾನಿ ದೇವಿಯನ್ನು ಮಹಾರಾಷ್ಟ್ರದಾದ್ಯಂತ ಬಹಳ ಗೌರವದಿಂದ ಪೂಜಿಸಲಾಗುತ್ತದೆ. ಅವಳನ್ನು ಉಗ್ರ ಅಥವಾ ಉಗ್ರತೆಯ ಮೂರ್ತರೂಪವೆಂದು ಹಾಗೂ ಕರುಣೆಯ ಸಾಕಾರ ರೂಪಳಾದ ಕರುಣಾಸ್ವರೂಪಿಣಿ ಎಂದು ಪರಿಗಣಿಸಲಾಗುತ್ತದೆ. ಮಹಾರಾಷ್ಟ್ರದ ಹಲವಾರು ಜಾತಿಗಳು, ಉಪಜಾತಿಗಳು ಮತ್ತು ಕುಟುಂಬಗಳು ಅವಳನ್ನು ತಮ್ಮ ಕುಲದೇವತೆ ಎಂದು ಪರಿಗಣಿಸುತ್ತಾರೆ. ತುಳಜಾಪುರದ ಭವಾನಿ ದೇವಸ್ಥಾನವು ಯಮುನಾಚಲ ಎಂದು ಕರೆಯಲ್ಪಡುವ ಬೆಟ್ಟದ ಮೇಲೆ, ಸೊಲ್ಲಾಪುರ ಸಮೀಪದ ಮಹಾರಾಷ್ಟ್ರದ ಸಹ್ಯಾದ್ರಿ ಶ್ರೇಣಿಯ ಇಳಿಜಾರಿನಲ್ಲಿದೆ. ದೇವಾಲಯದ ಪ್ರವೇಶದ್ವಾರವು ಎತ್ತರದಲ್ಲಿದ್ದು ಹಾಗೂ ಸಂದರ್ಶಕರು ದೇಗುಲವನ್ನು ತಲುಪಲು ಮೆಟ್ಟಿಲುಗಳನ್ನು ಹತ್ತುವರು. ಐತಿಹಾಸಿಕ ದಾಖಲೆಗಳು ೧೨ ನೇ ಶತಮಾನದ ಆರಂಭದಲ್ಲಿಯೇ ಈ ದೇವಾಲಯದ ಅಸ್ತಿತ್ವವಿತ್ತೆಂದು ದಾಖಲಿಸುತ್ತವೆ. ೩ ಅಡಿ (೦.೯೧ ಮೀ) ಎತ್ತರದ ಗ್ರಾನೈಟ್(ಬೆಣಚು ಕಲ್ಲು)ನಿಂದ ಕೆತ್ತಿದ ಮೂರ್ತಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಆಯುಧಗಳನ್ನು ಹಿಡಿದಿರುವ ಎಂಟು ತೋಳುಗಳು ಮತ್ತು ಅಭಯಮುದ್ರೆಯಲ್ಲಿ ಒಂದು ಕೈ (ಭಕ್ತರಿಗೆ ಆಶೀರ್ವಾದ), ಅವಳು [ಕಾತ್ಯಾಯನಿ] (೧೦-ಸಶಸ್ತ್ರ), ಮಹಾಲಕ್ಷ್ಮಿ (ದುರ್ಗಾ ಸಪ್ತಶತಿಯ ದೇವಿ ಕಂಡಿಕೆಯಲ್ಲಿ ಬಣ್ಣಿಸಿರುವಂತೆ ೧೮-ಸಶಸ್ತ್ರ/೧೦೦೦ ಸಶಸ್ತ್ರ ) , ಉಗ್ರಚಂದಾ (೧೮ ಸಶಸ್ತ್ರ) ಮತ್ತು [ಭದ್ರಕಾಳಿ] (೧೬-ಶಸ್ತ್ರಸಜ್ಜಿತ).ಹೀಗೆ ೪ ವಿವಿಧ ರೂಪಗಳಲ್ಲಿ ಮಹಿಷಾಸುರನನ್ನು ವಧಿಸುತ್ತಾಳೆ. ದಂತಕಥೆಯ ಪ್ರಕಾರ ಮಾತಂಗ್ ಎಂಬ ಹೆಸರಿನ ರಾಕ್ಷಸನು ದೇವತೆಗಳನ್ನು ಹಾಗೂ ಮಾನವರನ್ನು ಪೀಡಿಸುತ್ತಿದ್ದನು. ಆಗ ಸಹಾಯಕ್ಕಾಗಿ ದೇವತೆಗಳು ಬ್ರಹ್ಮನಿಗೆ ಮೊರೆ ಹೋದರು. ಆತನ ಸಲಹೆಯ ಮೇರೆಗೆ, ಅವರು ಮಾತೃ ಸ್ವರೂಪಳಾದ ಶಕ್ತಿಗೆ ಶರಣು ಹೋದರು. ಅವಳು ವಿಧ್ವಂಸಿನಿಯ ರೂಪವನ್ನು ಪಡೆದುಕೊಂಡಳು ಮತ್ತು ಇತರ ಸಪ್ತಮಾತೃಕೆಯ (ಬ್ರಾಹ್ಮೀ, ವೈಷ್ಣವಿ, ಮಾಹೇಶ್ವರಿ, ಇಂದ್ರಾಯಿ, ಕೌಮಾರಿ, ವರಾಹಿ, ಮತ್ತು ಚಾಮುಂಡಿ) ರಿಂದ ಅಧಿಕಾರ ಪಡೆದಳು, ರಾಕ್ಷಸನನ್ನು ಸೋಲಿಸಿದಳು ಮತ್ತು ಶಾಂತಿಯನ್ನು ಪುನಃಸ್ಥಾಪಿಸಿದಳು. ಮಹಿಷಾಸುರ ಎಂಬ ಕಾಡು ಎಮ್ಮೆಯ ರೂಪವನ್ನು ಪಡೆದಿದ್ದ ಇನ್ನೊಬ್ಬ ರಾಕ್ಷಸನನ್ನು ಭವಾನಿಯು ಹೇಗೆ ಸೋಲಿಸಿದಳೆಂದು ಪುರಾಣವು ವಿವರಿಸುತ್ತದೆ (ಆದ್ದರಿಂದ ಅವಳ ಹೆಸರು ಮಹಿಷಾಸುರ ಮರ್ಧಿನಿ ಅಥವಾ "ಮಹಿಷ ರಾಕ್ಷಸನ ಸಂಹಾರಕಿ"). ನಂತರ, ಅವಳು ಯಮುನಾಚಲ ಬೆಟ್ಟದಲ್ಲಿ ನೆಲೆಸಿದ್ದಳು ಎಂದು ಹೇಳಲಾಗುತ್ತದೆ, ಅದು ಈಗ ದೇವಸ್ಥಾನಕ್ಕೆ ನೆಲೆಯಾಗಿದೆ. ಕುಕುರ್ ಎಂದು ಕರೆಯಲ್ಪಡುವ ರಾಕ್ಷಸನಿಂದ ಅನುಭೂತಿಯನ್ನು ರಕ್ಷಿಸಲು ಭವಾನಿಯು ಇಲ್ಲಿಗೆ ಅಂದರೆ ತುಳಜಾಪುರಕ್ಕೆ ಬಂದಳೆಂದು ಹೇಳಲಾಗುತ್ತದೆ. ದೇವಿಯೊಂದಿಗಿನ ಯುದ್ಧದಲ್ಲಿ, ಕುಕೂರ್ ನು ಎಮ್ಮೆಯ ರೂಪವನ್ನು ಧರಿಸಿದ್ದನು; ಭವಾನಿಯು ಅವನ ತಲೆಯನ್ನು ಕತ್ತರಿಸಿದಳು, ಆಗ ಅವನು ತನ್ನ ಮೂಲ ರೂಪದಲ್ಲಿ ಬರಲಾರಂಭಿಸಿದನು. ಆ ಸಮಯದಲ್ಲಿ, ಅವಳು ತನ್ನ ತ್ರಿಶೂಲವನ್ನು ಅವನ ಎದೆಯೊಳಗೆ ತೂರಿಸಿದಳು. ಆದ್ದರಿಂದ, ಅವಳು ಮಹಿಷಾಸುರ ಮರ್ದಿನಿ ದುರ್ಗಾ ರೂಪದಲ್ಲಿದ್ದಾಳೆ. ದೇವಸ್ಥಾನದಲ್ಲಿ ಪ್ರತಿ ದಿನ ನಾಲ್ಕು ಪೂಜಾ ಸೇವೆಗಳನ್ನು ದೇವಿಗೆ ಸಲ್ಲಿಸಲಾಗುತ್ತದೆ. ಚೈತ್ರ ಮಾಸದ ಯುಗಾದಿ, ಶಿರಿಯಾಳ್ ಷಷ್ಟಿ, ಲಲಿತಾ ಪಂಚಮಿ, ಮಕರ ಸಂಕ್ರಾಂತಿ, ಮತ್ತು ರಥಸಪ್ತಮಿಗಳಲ್ಲಿ ವಿಶೇಷವಾಗಿ ಆಚರಿಸಲ್ಪಡುವ ಮಹತ್ವದ ಹಬ್ಬಗಳಾಗಿವೆ. ಮಂಗಳವಾರದಂದು ಮೆರವಣಿಗೆಗಾಗಿ ದೇವಿಯ ಪ್ರತಿಮೆಯನ್ನು ತೆಗೆಯಲಾಗುತ್ತದೆ. ನವರಾತ್ರಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಮತ್ತು ಇದು ವಿಜಯ ದಶಮಿಯಂದು ಮುಕ್ತಾಯಗೊಳ್ಳುತ್ತದೆ. ಶ್ರೀ ಭವಾನಿ ದೇವಿಯನ್ನು ಆದಿ ಪರಾಶಕ್ತಿ ಎಂದು ಹೇಳಲಾಗುತ್ತದೆ. ಲಲಿತಾ ಸಹಸ್ರನಾಮದ ಪ್ರಕಾರ, ಭವಾನಿಯು ಮಾನವರಿಗೆ ಮುಕ್ತಿ ಹೊಂದಲು ಸಹಾಯ ಮಾಡುವ ದೇವತೆ. ಆದಿ ಶಂಕರರು, " ಭವಾನಿ ಹೆಸರನ್ನು ಅನನ್ಯ ಭಕ್ತಿಯಿಂದ ಮೂರು ಬಾರಿ ಪಠಿಸುವ ವ್ಯಕ್ತಿಯು ದುಃಖ, ಪಾಪ, ಅನಾರೋಗ್ಯ ಮತ್ತು ಅನಿರೀಕ್ಷಿತ ಸಾವನ್ನು ಪಡೆಯುವುದಿಲ್ಲ" ಎಂದು ಹೇಳಿರುವರು. ಜನರು ಕೆಲವೊಮ್ಮೆ ಭವಾನಿ ದೇವಿಯನ್ನು ರೇಣುಕಾ ದೇವಿಯೆಂದು ತಪ್ಪಾಗಿ ತಿಳಿದು ಗೊಂದಲಕ್ಕಳಗಾಗುತ್ತಾರೆ; ಆದಾಗ್ಯೂ, ಅವರ ಕಥೆಗಳು ವಿಭಿನ್ನವಾಗಿವೆ. ಭವಾನಿ ಇವಳನ್ನು [ ಸದಾಶಿವನ ]ಪತ್ನಿ ಎಂದು ಉಲ್ಲೇಖಿಸುವ ಅನೇಕ ಗ್ರಂಥಗಳಿವೆ.

ತುಳಜಾ ಭವಾನಿಯ ಚಿತ್ರ

[ಬದಲಾಯಿಸಿ]
ಭವಾನಿ ದೇವಿಯ ದೇಗುಲ.

ಚಿತ್ರ ( ಮೂರ್ತಿ;) ತುಳಜಾ ಭವಾನಿಯ ಮೂರ್ತಿಯು ಕಪ್ಪು ಕಲ್ಲಿನಿಂದ ಮಾಡಲ್ಪಟ್ಟಿದೆ, ಸುಮಾರು ೩ ಅಡಿ (೦.೯೧ಮೀ) ಎತ್ತರ ಮತ್ತು ೨ಅಡಿ (೦.೬೧ಮೀ) ಅಗಲ ದೇವಿಯ ಮುಖವನ್ನು ಸುಂದರ ಮತ್ತು ನಗುತ್ತಿರುವಂತೆ ವಿವರಿಸಲಾಗಿದೆ. ದೇವಿಯು ಅಷ್ಟ-ಭುಜವುಳ್ಳ (೮ ಕೈಗಳಿಂದ) ದುರ್ಗೆಯಾಗಿದ್ದಾಳೆ. ಆಕೆಯ ಉದ್ದನೆಯ ಕೂದಲು ಕಿರೀಟದಿಂದ ಹೊರಗೆ ಹರಡಿದ್ದು ಕಾಣುತ್ತದೆ. ಅವಳ ಬೆನ್ನ ಮೇಲೆ ಬತ್ತಳಿಕೆ ಇದೆ. ಸೂರ್ಯ ಮತ್ತು ಚಂದ್ರ ಇದ್ದಾರೆ. ಅವಳ ಸಿಂಹವು ಅವಳ ಹತ್ತಿರ ನಿಂತಿದೆ. ಚಿತ್ರವು ಸ್ವಯಂ ಪ್ರಕಟವಾಗಿದ್ದು ಅದನ್ನು ಸ್ಥಳಾಂತರಿಸಬಹುದಾಗಿದೆ. ಇದನ್ನು ವರ್ಷಕ್ಕೆ ಮೂರು ಬಾರಿ ಇರುವ ಸ್ಥಳದಿಂದ ತಾಯಿ ಭವಾನಿಯ ಮಲಗುವ ಕೋಣೆಗೆ ಸ್ಥಳಾಂತರಿಸಲಾಗುತ್ತದೆ. ಸಿಂಹದ ಕೆಳಗೆ, ಮಾರ್ಕಂಡೇಯ ಮುನಿಯು ದುರ್ಗಾ-ಸಪ್ತಶತಿ ಶ್ಲೋಕಗಳನ್ನು ಪಠಿಸುತ್ತಿರುವ ಕೆತ್ತನೆ ಇದೆ. ತಪಸ್ವಿನಿಯಾದ ಅನುಭೂತಿಯು ದೇವಿಯ ಎಡಭಾಗದಲ್ಲಿದ್ದಾಳೆ; ಅವಳು ನೇತಾಡುವ ಸ್ಥಿತಿಯಲ್ಲಿದ್ದಾಳೆ ಮತ್ತು ದೇವಿಯನ್ನು ಧ್ಯಾನಿಸುತ್ತಿರುವಂತಿದೆ. ಇದು ಚಲಿಸುವ ಮೂರ್ತಿಯಾಗಿದ್ದು, ತಾಯಿ ಭವಾನಿಯ ದೀರ್ಘ ನಿದ್ರೆಯ ಅವಧಿಯಲ್ಲಿ ವರ್ಷಕ್ಕೆ ಮೂರು ಬಾರಿ ಚಲಿಸುತ್ತದೆ. ತುಳಜಾಪುರದಲ್ಲಿ ಸತಿಯ ಮುಖ ಬಿದ್ದಿತ್ತು, ಮತ್ತು ಈ ಕಾರಣದಿಂದ ಮುಖವನ್ನು ಸೀರೆ ಮತ್ತು ಆಭರಣಗಳಿಂದ ಅಲಂಕರಿಸಲಾಗಿದೆ. 

ಸಹ ನೋಡಿ

[ಬದಲಾಯಿಸಿ]

ಮತ್ತಷ್ಟು ಓದುವಿಕೆ

[ಬದಲಾಯಿಸಿ]
  • ಹಿಂದೂ ದೇವತೆಗಳು: ಹಿಂದೂ ಧಾರ್ಮಿಕ ಸಂಪ್ರದಾಯಗಳಲ್ಲಿ ದೈವಿಕ ಸ್ತ್ರೀಯರ ದೃಷ್ಟಿ (ಡೇವಿಡ್ ಕಿನ್ಸ್ಲೇ ಅವರಿಂದ)

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. [https://www.wisdomlib.org/definition/bhava}}
  2. Indian studies: past & present, Volume 11. Today & Tomorrow's Printers & Publishers. 1970. p. 385. The Gujars of Punjab, North Gujarat and Western Rajasthan worship Sitala and Bhavani