ತ್ರಿಪುಂಡ್ರವು (ಸಂಸ್ಕೃತ: त्रिपुण्ड्र ತ್ರಿಪುಂಡ್ರ "ಮೂರು ಗುರುತುಗಳು") ಶೈವರ ತಿಲಕವಾಗಿದೆ, ಮತ್ತು ದಕ್ಷಿಣ ಭಾರತದಲ್ಲಿ ತನ್ನ ಮೂಲಗಳನ್ನು ಹೊಂದಿರುವ ಒಂದು ದೈಹಿಕ ಕಲೆಯಾಗಿದೆ. ಇದು ಹಣೆಯ ಮೇಲೆ ಅಡ್ಡಡ್ಡವಾದ ಮೂರು ರೇಖೆಗಳನ್ನು, ಸಾಮಾನ್ಯವಾಗಿ ಪವಿತ್ರ ಭಸ್ಮದಿಂದ ಮಾಡಿದ ಒಂದು ಚುಕ್ಕೆಯನ್ನು ಹೊಂದಿರುತ್ತದೆ. ಹಿಂದೂ ಧರ್ಮದೊಳಗಿನ ಶೈವ ಸಂಪ್ರದಾಯದಲ್ಲಿ ಇದು ಆಧ್ಯಾತ್ಮಿಕ ಅರ್ಥವನ್ನು ಹೊಂದಿದೆ.
ಹಣೆಯ ಜೊತೆಗೆ ತ್ರಿಪುಂಡ್ರವನ್ನು ದೇಹದ ಇತರ ಭಾಗಗಳಲ್ಲೂ ಧರಿಸಬಹುದು. ಇವು ಅಂಗೀಕಾರದ ವಿಧಿಗಳ ಸಂದರ್ಭದಲ್ಲಿನ ಸಂಕೇತಗಳಾಗಿವೆ, ಮತ್ತು ಕೆಲವರಿಗೆ ದೈನಂದಿನ ಅಭ್ಯಾಸವಾಗಿವೆ. ಈ ರೇಖೆಗಳು ಶಿವನ ಮೂರು ಶಕ್ತಿಗಳಾದ ಇಚ್ಚಾಶಕ್ತಿ, ಜ್ಞಾನಶಕ್ತಿ ಹಾಗೂ ಕ್ರಿಯಾಶಕ್ತಿಗಳನ್ನು ಪ್ರತಿನಿಧಿಸುತ್ತವೆ. ಇದರಲ್ಲಿ ಮತ್ತು ಇತರ ಶೈವ ಪಠ್ಯಗಳಲ್ಲಿ ವಿವರಿಸಲಾಗಿರುವ ತ್ರಿಪುಂಡ್ರವು ಶಿವನ ತ್ರಿಶೂಲವನ್ನು ಮತ್ತು ದೇವತ್ರಯರಾದ ಬ್ರಹ್ಮ, ವಿಷ್ಣು, ಮತ್ತು ಶಿವರನ್ನು ಕೂಡ ಸಂಕೇತಿಸುತ್ತದೆ.
{{cite book}}
: Invalid |ref=harv
(help){{cite web}}
: Invalid |ref=harv
(help)CS1 maint: unrecognized language (link)