Thomas Killigrew | |
---|---|
ಜನನ | ಇಂಗ್ಲೆಂಡ್ | ೭ ಫೆಬ್ರವರಿ ೧೬೧೨
ಮರಣ | 19 March 1683 Whitehall, ಲಂಡನ್, ಇಂಗ್ಲೆಂಡ್ | (aged 71)
ವೃತ್ತಿ | Dramatist |
ರಾಷ್ಟ್ರೀಯತೆ | British |
ಥಾಮಸ್ ಕಿಲಿಗ್ರೂ (೭ ಫೆಬ್ರವರಿ ೧೬೧೨ – ೧೯ ಮಾರ್ಚ್ ೧೬೮೩) ಇಂಗ್ಲಂಡಿನ ಎರಡನೆಯ ಚಾರ್ಲ್ಸ್ ನ ಆಸ್ಥಾನದಲ್ಲಿದ್ದ ನಾಟಕಕಾರ ಹಾಗೂ ರಂಗಭೂಮಿ ವ್ಯವಸ್ಥಾಪಕ.ಇವನೊಬ್ಬ ಹಾಸ್ಯ ಪ್ರವೃತ್ತಿಯ ವ್ಯಕ್ತಿಯಾಗಿದ್ದನು.
ಫೆಬ್ರವರಿ ೭, ೧೬೧೨ ರಲ್ಲಿ ಲಂಡನಿನಲ್ಲಿ ಜನಿಸಿದ.ಒಂದನೆಯ ಚಾಲ್ರ್ಸ್ ದೊರೆಗೆ ಪರಿಚತನಾಗಿದ್ದ ಈತ, ನಾಟಕ ಕಲೆಯಲ್ಲಿ ಬಹುವಾದ ಆಸಕ್ತಿ ತೋರಿದ. ನಾಟಕ ಪ್ರದರ್ಶನ ಇವನ ಪ್ರಮುಖ ಹವ್ಯಾಸವಾಯಿತು. ರಚಿಸಿರುವ ಅನೇಕ ನಾಟಕಗಳಲ್ಲಿ ಪಾರ್‍ಸನ್ಸ್ ವೆಡ್ಡಿಂಗ್ ತುಂಬ ಪ್ರಸಿದ್ಧವಾದುದು. ಎರಡನೆಯ ಚಾಲ್ರ್ಸ್ ದೊರೆಯ ಕಾಲದಲ್ಲಿ ಅರಮನೆಯ ಪ್ರಮುಖ ಇಲಾಖೆಯ ಹಿರಿಯ ಅಧಿಕಾರಿಯಾಗಿದ್ದ ಈತ ರಾಜಕುಂಟುಂಬಕ್ಕೆ ಪ್ರಿಯವ್ಯಕ್ತಿಯಾಗಿದ್ದ.
ಡ್ರೂರಿಲೇನ್ ಎಂಬಲ್ಲಿ ಥಿಯೇಟರ್ ರಾಯಲ್ ಎಂಬ ನಾಟಕ ಸಂಸ್ಥೆಯೊಂದನ್ನು ಸ್ಥಾಪಿಸಿ, ಅನೇಕ ನಾಟಕಗಳನ್ನೀತ ಪ್ರದರ್ಶಿಸಿದ. ಇಂಗ್ಲೆಂಡಿನ ಚಾರಿತ್ರಿಕ ವಿಷಯಗಳಿಗೆ ಸಂಬಂಧಿಸಿದಂತೆ ನಾಟಕಗಳನ್ನು ಪ್ರದರ್ಶಿಸಿದ್ದು ಈತನ ವೈಶಿಷ್ಟ್ಯ. ಸ್ವತಃ ಇವನೇ ಅನೇಕ ನಾಟಕಗಳನ್ನು ಬರೆದಿದ್ದಾನೆ ; ನಾಟಕ ಕಲೆಯಲ್ಲಿ ಕಾಳಜಿ ಇದ್ದುದರಿಂದ ತಾನು ಸಾಯುವವರೆಗೂ ಥಿಯೇಟರ್ ಸಂಸ್ಥೆಯನ್ನು ವಹಿಸಿಕೊಂಡು ಬಂದ. ಪ್ರಮುಖ ನಾಟಕಕಾರನಾಗಿದ್ದ ಥಾಮಸ್, ತನ್ನ ಚತುರೋಕ್ತಿ ಮತ್ತು ಹಾಸ್ಯೋಕ್ತಿಗಳಿಂದ ಇಂಗ್ಲೆಂಡಿನ ಜನತೆಗೆ ಪ್ರಿಯನಾಗಿದ್ದ. ಈತ ಮಾತನಾಡಲು ಪ್ರಾರಂಭಿಸಿದನೆಂದರೆ, ಶ್ರೋತೃಗಳು ನಗೆಗಡಲಿನಲ್ಲಿ ಮುಳುಗುತ್ತಿದ್ದರಂತೆ.
ಈತನ ಎಲ್ಲ ಕೃತಿಗಳನ್ನೂ ಸಂಕಲಿಸಿ ಒಂದು ಸಂಪುಟದಲ್ಲಿ ಪ್ರಕಟಿಸಲಾಗಿದೆ (೧೬೬೪).