ಥಾವರ್ ಚಂದ್ ಗೆಹ್ಲೋಟ್ | |
---|---|
ಕರ್ನಾಟಕದ 19ನೇ ರಾಜ್ಯಪಾಲ
| |
ಹಾಲಿ | |
ಅಧಿಕಾರ ಸ್ವೀಕಾರ 11 July 2021 | |
ಪೂರ್ವಾಧಿಕಾರಿ | ವಜುಭಾಯಿ ರುದಭಾಯಿ ವಾಲಾ |
ವೈಯಕ್ತಿಕ ಮಾಹಿತಿ | |
ಜನನ | ರೂಪೇಟಾ, ನಾಗ್ಡಾ, ಮಧ್ಯಪ್ರದೇಶ, ಭಾರತ | ೧೮ ಮೇ ೧೯೮೪
ರಾಜಕೀಯ ಪಕ್ಷ | ಬಿಜೆಪಿ |
ಸಂಗಾತಿ(ಗಳು) | ಅನಿತಾ ಗೆಹ್ಲೋಟ್ |
ಅಭ್ಯಸಿಸಿದ ವಿದ್ಯಾಪೀಠ | ವಿಕ್ರಮ್ ವಿಶ್ವವಿದ್ಯಾಲಯ, ಉಜ್ಜಯಿನಿ, ಮಧ್ಯಪ್ರದೇಶ |
ಧರ್ಮ | ಹಿಂದು |
ಥಾವರ್ ಚಂದ್ ಗೆಹ್ಲೋಟ್ ಕರ್ನಾಟಕದ ಪ್ರಸ್ತುತ ರಾಜ್ಯಪಾಲರಾಗಿದ್ದಾರೆ. ಅವರು ಮಧ್ಯಪ್ರದೇಶದಿಂದ ಕರ್ನಾಟಕದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿರುವ ಮೊದಲ ವ್ಯಕ್ತಿ. ಜುಲೈ 6, 2021 ರಂದು ಕರ್ನಾಟಕದ ರಾಜ್ಯಪಾಲರಾಗಿ ನೇಮಕಗೊಂಡು ೨೦೨೧ ರ ಜುಲೈ ೧೧ ರಂದು ಅಧಿಕಾರ ವಹಿಸಿಕೊಂಡರು.[೧][೨][೩]ಅವರು 2014 ರಿಂದ 2021 ರವರೆಗೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಭಾರತೀಯ ಸಂಸತ್ತಿನ ಮೇಲ್ಮನೆಯಲ್ಲಿ ಸದನದ ನಾಯಕರಾಗಿದ್ದರು. ಅವರು ಸಂಸದೀಯ ಮಂಡಳಿ ಮತ್ತು ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರಾಗಿದ್ದರು.
ಗೆಹ್ಲೋಟ್ ರವರು ಜನಿಸಿದ್ದು ಭಾರತದ ಮಧ್ಯಪ್ರದೇಶದ ನಾಗ್ಡಾದ ರುಪೆಟಾ ಗ್ರಾಮದಲ್ಲಿ. ಅವರದ್ದು ದಲಿತ ಕುಟುಂಬ. ಅವರು ಭಾರತೀಯ ಜನತಾ ಪಕ್ಷದ ಹಿರಿಯ ಸದಸ್ಯರಾಗಿದ್ದಾರೆ ಹಾಗೂ ಅವರು ಕೇಂದ್ರ ಸರ್ಕಾರದಲ್ಲಿ ಹಲವಾರು ಬಾರಿ ಮಂತ್ರಿ ಸ್ಥಾನ ಪಡೆದರು.