ದಮಯಂತಿ ಜೋಶಿ | |
---|---|
ಜನನ | ಮುಂಬೈ, ಭಾರತ | ೫ ಸೆಪ್ಟೆಂಬರ್ ೧೯೨೮
ಸಾವು | 19 September 2004 ಮುಂಬೈ, ಭಾರತ | (aged 76)
ಶಿಕ್ಷಣ(s) | ನೃತ್ಯಗಾರ್ತಿ, ನೃತ್ಯ ಸಂಯೋಜಕ, ನೃತ್ಯ ಬೋಧಕಿ |
Dances | ಕಥಕ್ |
ದಮಯಂತಿ ಜೋಶಿ ( ೫ ಸೆಪ್ಟೆಂಬರ್ ೧೯೨೮ - ೧೯ ಸೆಪ್ಟೆಂಬರ್ ೨೦೦೪) [೧] ಅವರು ಕಥಕ್ ನೃತ್ಯ ಪ್ರಕಾರದ ಹೆಸರಾಂತ ನೃತ್ಯಗಾರ್ತಿಯಾಗಿದ್ದರು. [೨] ಕಥಕ್ ಎಂಬುದು ಕಥೆ ಹೇಳುವ ಕಲೆ ಎಂದು ಅವರು ನಂಬಿದ್ದರು. [೩] ಅವರು ೧೯೩೦ ರ ದಶಕದಲ್ಲಿ ಅವರು ಮೇಡಮ್ ಮೇನಕಾ ಅವರ ತಂಡದಲ್ಲಿ ನೃತ್ಯ ಮಾಡಲು ಪ್ರಾರಂಭಿಸಿದರು. ಇದು ಪ್ರಪಂಚದ ಅನೇಕ ಭಾಗಗಳಿಗೆ ಅವರನ್ನು ಕೊಂಡೊಯ್ಯಿತು. ಅವರು ಜೈಪುರ ಘರಾನಾದ ಸೀತಾರಾಮ್ ಪ್ರಸಾದ್ ಅವರಿಂದ ಕಥಕ್ ನೃತ್ಯ ಕಲಿತರು ಮತ್ತು ಚಿಕ್ಕ ವಯಸ್ಸಿನಲ್ಲೇ ಪ್ರವೀಣ ನರ್ತಕಿಯಾದರು. ನಂತರ ಲಕ್ನೋ ಘರಾನಾದ ಅಚ್ಚನ್ ಮಹಾರಾಜ್, ಲಚ್ಚು ಮಹಾರಾಜ್ ಮತ್ತು ಶಂಭು ಮಹಾರಾಜ್ ಅವರಿಂದ ತರಬೇತಿ ಪಡೆದರು. ಹೀಗೆ ಎರಡೂ ಸಂಪ್ರದಾಯಗಳಿಂದ ಸೂಕ್ಷ್ಮ ವ್ಯತ್ಯಾಸಗಳನ್ನು ಅಳವಡಿಸಿಕೊಂಡರು. ಅವರು ೧೯೫೦ ರ ದಶಕದಲ್ಲಿ ಸ್ವತಂತ್ರ ನೃತ್ಯಗಾರ್ತಿಯಾದರು ಮತ್ತು ೧೯೬೦ ರ ದಶಕದಲ್ಲಿ ಪ್ರಾಮುಖ್ಯತೆಯನ್ನು ಗಳಿಸಿದರು. ಮೊದಲು ಮುಂಬೈನಲ್ಲಿ ಅವರು ನೃತ್ಯ ಶಾಲೆಯಲ್ಲಿ ಗುರುವಾಗಿದ್ದರು. [೪] [೫] [೬]
ಅವರು ೧೯೭೦ ರಲ್ಲಿ ಪದ್ಮಶ್ರೀ, ೧೯೬೮ ರಲ್ಲಿ ನೃತ್ಯಕ್ಕಾಗಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು ಮತ್ತು ಲಕ್ನೋದ ಯುಪಿ ಕಥಕ್ ಕೇಂದ್ರದ ನಿರ್ದೇಶಕರಾಗಿ ಉಳಿದಿದ್ದರು. [೭]
ಇವರು ೧೯೨೮ ರಲ್ಲಿ ಮುಂಬೈನಲ್ಲಿ ಹಿಂದೂ ಕುಟುಂಬದಲ್ಲಿ ಜನಿಸಿದರು. [೮] ಅವರು ಜನರಲ್ ಡಾ ಸಾಹಿಬ್ ಸಿಂಗ್ ಸೋಖೆ ಮತ್ತು ಮೇಡಮ್ ಮೇನಕಾ ಎಂದು ಪ್ರಸಿದ್ಧರಾದ, ಅವರ ಪತ್ನಿ ಲೀಲಾ ಸೋಖೆ (ಜನನ ರಾಯ್) ಅವರ ಮನೆಯಲ್ಲಿ ಬೆಳೆದರು.[೯] ಮೇನಕಾ ತಮ್ಮ ಸ್ವಂತ ಮಗುವನ್ನು ಕಳೆದುಕೊಂಡಿದ್ದರು ಮತ್ತು ಅವರು ಜೋಶಿಯವರನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದ್ದರು. ಜೋಶಿಯವರ ತಾಯಿ ವತ್ಸಲಾ ಜೋಶಿಯವರು ತಮ್ಮ ಮಗಳನ್ನು ಬಿಟ್ಟುಕೊಡಲಿಲ್ಲ. ನಂತರ ಅವರು ಜಂಟಿ ಪೋಷಕರಾಗಲು ಒಪ್ಪಿಕೊಂಡರು. [೧೦] ಆರಂಭದಲ್ಲಿ ದೇವಾಲಯಗಳಲ್ಲಿ ಪ್ರದರ್ಶನ ನೀಡಲಾಯಿತು. [೩] ಮೇನಕಾ ಅವರ ತಂಡದಲ್ಲಿ ಅವರು ಪಂಡಿತ್ ಸೀತಾರಾಮ್ ಪ್ರಸಾದ್ ಅವರಿಂದ ಕಥಕ್ ಬಗ್ಗೆ ಕಲಿತರು. ಅವರು ಮೇನಕಾ ಅವರ ತಂಡದಲ್ಲಿ ಪ್ರವಾಸ ಮಾಡಿದರು. ಹತ್ತು ವರ್ಷಗಳ ನಂತರ, ಅವರು ೧೫ ವರ್ಷದವರಿದ್ದಾಗ ಅವರು ಯುರೋಪಿಯನ್ ಪ್ರಮುಖ ನಗರಗಳಲ್ಲಿ ಪ್ರದರ್ಶನ ನೀಡಿದರು. ಸೋಖೇಯರು ದಮಯಂತಿಯ ತಾಯಿಯನ್ನು ನೇಮಿಸಿಕೊಂಡರು ಮತ್ತು ಜೋಶಿಯವರು ಶಿಕ್ಷಣವನ್ನು ಪಡೆದರು. [೧೧] [೧೨] [೧೦][೧೩]
ಅವರು ಮುಂಬೈನ ಶ್ರೀ ರಾಜರಾಜೇಶ್ವರಿ ಭರತ ನಾಟ್ಯ ಕಲಾ ಮಂದಿರದಲ್ಲಿ ಮೊದಲ ವಿದ್ಯಾರ್ಥಿಯಾಗಿದ್ದರು. ಅಲ್ಲಿ ಅವರು ಗುರು ಟಿಕೆ ಮಹಾಲಿಂಗಂ ಪಿಳ್ಳೈ ಅವರಿಂದ ಭರತ ನಾಟ್ಯವನ್ನು ಕಲಿತರು. [೧೪]
೧೯೫೦ ರ ದಶಕದ ಮಧ್ಯಭಾಗದ ನಂತರ ದಮಯಂತಿ ಲಕ್ನೋ ಘರಾನಾದ ಪಂಡಿತರು, ಅಚ್ಚನ್ ಮಹಾರಾಜ್, ಲಚ್ಚು ಮಹಾರಾಜ್ ಮತ್ತು ಶಂಭು ಮಹಾರಾಜ್ ಮತ್ತು ಜೈಪುರ ಘರಾನಾದ ಗುರು ಹೀರಾಲಾಲ್ ಅವರಿಂದ ತರಬೇತಿ ಪಡೆದು ಯಶಸ್ವಿಯಾದ ಏಕ್ಕೆಕ ವ್ಯಕ್ತಿಯಾಗಿದ್ದರು. ಕಥಕ್ ನೃತ್ಯಗಾರ್ತಿಯಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡರು. ವಿಶೇಷವಾಗಿ ಕಥಕ್ ನೃತ್ಯದಲ್ಲಿ " ಸೀರೆ " ಅನ್ನು ವೇಷಭೂಷಣವಾಗಿ ಪರಿಚಯಿಸಿದ ಮೊದಲ ವ್ಯಕ್ತಿಯಾದ ದೆಹಲಿಯ ಕಥಕ್ ಕೇಂದ್ರದ ಶಂಭು ಮಹಾರಾಜರ ಬಳಿ ತರಬೇತಿ ಪಡೆದರು. [೧೫] ಅವರು ಇಂದಿರಾ ಕಲಾ ವಿಶ್ವವಿದ್ಯಾಲಯ, ಖೈರಾಘರ್ ಮತ್ತು ಲಕ್ನೋದ ಕಥಕ್ ಕೇಂದ್ರದಲ್ಲಿ ಕಥಕ್ ಕಲಿಸಿದರು. ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (೧೯೬೮) ಮತ್ತು ಪದ್ಮಶ್ರೀ (೧೯೭೦) ನೀಡಿ ಗೌರವಿಸಲಾಗಿದೆ. [೧೬] ಅವರು ಬೀರೇಶ್ವರ ಗೌತಮನಿಗೆ ಗುರುವೂ ಆಗಿದ್ದರು.
೧೯೭೧ ರಲ್ಲಿ ಭಾರತ ಸರ್ಕಾರದ ಚಲನಚಿತ್ರ ವಿಭಾಗದಿಂದ ಕಥಕ್‌ನ ಸಾಕ್ಷ್ಯಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಹುಕುಮತ್ ಸರಿನ್ ನಿರ್ದೇಶಿಸಿದ "ದಮಯಂತಿ ಜೋಶಿ" ಎಂಬ ಇನ್ನೊಂದು ಚಲನಚಿತ್ರವನ್ನು ೧೯೭೩ ರಲ್ಲಿ ನಿರ್ಮಿಸಲಾಯಿತು.
ದಮಯಂತಿ ಜೋಶಿ ಅವರು ಮುಂಬೈನಲ್ಲಿ ಸೆಪ್ಟೆಂಬರ್ ೧೯, ೨೦೦೪ ರಂದು ಭಾನುವಾರದಂದು ತಮ್ಮ ಮನೆಯಲ್ಲಿ ನಿಧನರಾದರು. ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಪಾರ್ಶ್ವವಾಯು ದಾಳಿಗೆ ಒಳಗಾದ ನಂತರ ಸುಮಾರು ಒಂದು ವರ್ಷದಿಂದ ಹಾಸಿಗೆ ಹಿಡಿದಿದ್ದರು.[೧೭]
{{cite news}}
: CS1 maint: unfit URL (link)