ದಿಬಿಂಡು ಬರುವಾ | |
---|---|
೨೦೧೨ ರಲ್ಲಿ ಬರುವಾ | |
Country | ಭಾರತ |
Born | ಚಿತ್ತಗಾಂಗ್, ಬಾಂಗ್ಲಾದೇಶ | 27 October 1966
Title | ಗ್ರ್ಯಾಂಡ್‌ಮಾಸ್ಟರ್ (೧೯೯೧) |
Peak rating | ೨೫೬೧ (ಜುಲೈ ೨೦೦೩) |
Spouse | ಸಹೇಲಿ ಧರ್-ಬರುವಾ ೧೯೯೭ |
ದಿಬಿಂಡು ಬರುವಾ (ಜನನ ೨೭ ಅಕ್ಟೋಬರ್ ೧೯೬೬) ಭಾರತೀಯ ಚೆಸ್ ಗ್ರ್ಯಾಂಡ್‌ಮಾಸ್ಟರ್. ಅವರು ಮೂರು ಬಾರಿ ಭಾರತೀಯ ಚೆಸ್ ಚಾಂಪಿಯನ್. ವಿಶ್ವನಾಥನ್ ಆನಂದ್ ನಂತರ ಗ್ರ್ಯಾಂಡ್‌ಮಾಸ್ಟರ್ ಶೀರ್ಷಿಕೆ ಪಡೆದ ಎರಡನೇ ಭಾರತೀಯ ಚೆಸ್ ಆಟಗಾರ, ನಿಯಾಜ್ ಮುರ್ಶೇದ್ ನಂತರ ಎರಡನೇ ಬಂಗಾಳಿಗ, ಮತ್ತು ನಿಯಾಜ್ ಮತ್ತು ಆನಂದ್ ನಂತರ ಈ ಶೀರ್ಷಿಕೆ ಪಡೆದ ಮೂರನೇ ದಕ್ಷಿಣ ಏಷ್ಯಾ ಆಟಗಾರ.
ಡಿಬ್ಯೆಂದು ಬರುವಾ ಬಾಂಗ್ಲಾದೇಶದ ಚಿಟಗಾಂಗ್‌ನಲ್ಲಿ ಜನಿಸಿದರು, ಅಲ್ಲಿಂದ ಅವರ ಕುಟುಂಬವು ಪಶ್ಚಿಮ ಬಂಗಾಳದ ಭಾರತೀಯ ರಾಜ್ಯದ ಕೊಲ್ಕತ್ತಾಗೆ ವಲಸ ಹರಿದಿತು.[೧] ೧೯೭೮ರಲ್ಲಿ, ೧೨ ವರ್ಷದ ಬರುವಾ, ಭಾರತೀಯ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಯುವಕನಾಗಿ ಪಾಲ್ಗೊಂಡರು.[೨] ೧೯೮೨ ರಲ್ಲಿ, ಲಂಡನ್‌ನ ಲಾಯ್ಡ್ ಬ್ಯಾಂಕ್ ಟೂರ್ನಮೆಂಟ್‌ನಲ್ಲಿ, ಆಗಿನ ಜಾಗತಿಕ ಎರಡನೇ ಕ್ರಮಾಂಕದ ಆಟಗಾರ ವಿಕ್ಟರ್ ಕಾರ್ಚ್ನೋವನ್ನು ಬರುವಾ ಸೋಲಿಸಿದರು. [೩][೪]
೧೯೮೩ ರಲ್ಲಿ, ಅವನು ದೇಶದ ಕಿರಿಯ ಚಾಂಪಿಯನ್ ಆಗಿ ಆಯ್ಕೆಯಾದನು, ಆದರೆ ೧೯೮೬ರಲ್ಲಿ ವಿಸ್ವನಾಥನ್ ಆನಂದ್ ಇವರು ಕೆಲ ತಿಂಗಳಲ್ಲೇ ಈ ದಾಖಲೆಯನ್ನು ಮುರಿದರು.[೫] ಅವರು ೧೯೯೮ ಮತ್ತು ೧೦೦೧ ರಲ್ಲಿ ಮತ್ತೆರಡು ಬಾರಿ ಗೆದ್ದಿದ್ದಾರೆ. ಅವರು ರಾಷ್ಟ್ರೀಯ ಚಾಂಪಿಯನ್‌ಶಿಪ್ ಗೆದ್ದ ನಂತರ ೧೯೮೩ ರಲ್ಲಿ ಅರ್ಜುನಾ ಪ್ರಶಸ್ತಿ ಪಡೆದರು.[೫]
ಬರುವಾ ಅವರು ಸೆಪ್ಟೆಂಬರ್ ೧೯೮೯ರಲ್ಲಿ ಲಂಡನ್‌ನ ನಾಟ್‌ವೆಸ್ಟ್ ಟ್ರೋಫಿಯಲ್ಲಿ ತಮ್ಮ ಮೊದಲ ಗ್ರ್ಯಾಂಡ್‌ಮಾಸ್ಟರ್ ನಾರ್ಮ್ ಅನ್ನು ಗೆದ್ದರು.[೫] ೧೯೯೦ರಲ್ಲಿ ನೋವಿ ಸೇಡ್‌ನಲ್ಲಿ ನಡೆದ ೨೯ನೇ ಚೆಸ್ ಒಲಿಂಪಿಯಾಡ್‌ನಲ್ಲಿ, ಬರುವಾ ಎರಡನೇ ಬೋರ್ಡಿನಲ್ಲಿ ೨೬೪೪ ಇಲೋ ಪಾಯಿಂಟ್ ಪ್ರದರ್ಶನದೊಂದಿಗೆ ಚಿನ್ನದ ಪದಕ ಗೆದ್ದು ತಮ್ಮ ಎರಡನೇ ನಾರ್ಮ್ ಗಳಿಸಿದರು.[೫]ಅವರು ೧೯೯೧ರಲ್ಲಿ ಕೊಲ್ಕತ್ತಾದಲ್ಲಿ ನಡೆದ ಡಂಕನ್ ಗ್ರ್ಯಾಂಡ್‌ಮಾಸ್ಟರ್ ಟೂರ್ನಮೆಂಟ್‌ನಲ್ಲಿ ತಮ್ಮ ಮೂರನೇ ಮತ್ತು ಅಂತಿಮ ಗ್ರ್ಯಾಂಡ್‌ಮಾಸ್ಟರ್ ನಾರ್ಮ್ ಗಳಿಸಿದರು.[೫] ಬರುವಾ ೧೯೭೯ರಲ್ಲಿ ಮೆಕ್ಸಿಕೊದಲ್ಲಿ ನಡೆದ ವಿಶ್ವ ೧೪ ವರ್ಷದೊಳಗಿನವರ ಚಾಂಪಿಯನ್‌ಶಿಪ್‌ನಲ್ಲಿ ತೃತೀಯ ಸ್ಥಾನ ಪಡೆದುಕೊಂಡು, ೧೯೮೦ರಲ್ಲಿ ವಿಶ್ವ ಉಪ-ಜೂನಿಯರ್‌ನಲ್ಲಿ ನಾಲ್ಕನೇ ಸ್ಥಾನ ಪಡೆದರು.ಬರುವಾ, ಮೂರು ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದ ಎರಡನೇ ಭಾರತೀಯ.[೬]
ಬರುವಾ ೧೯೯೭ರಲ್ಲಿ ವುಮೆನ್ ಇಂಟರ್ನ್ಯಾಶನಲ್ ಮಾಸ್ಟರ್ ಸಹೇಲಿ ಧರ್ ಅವರನ್ನು ವಿವಾಹಾದರು. [೭]