ಈ ಲೇಖನವು ಆಂಗ್ಲೋ-ಭಾರತೀಯರ ದುಂಡು ಮೇಜಿನ ಸಭೆಯನ್ನು ಕುರಿತದ್ದಾಗಿದೆ. ಡಚ್-ಇಂಡೋನೇಷ್ಯನ್ ದುಂಡು ಮೇಜಿನ ಸಭೆಗಾಗಿ ಡಚ್-ಇಂಡೋನೇಷ್ಯನ್ ದುಂಡು ಮೇಜಿನ ಸಭೆಯನ್ನು ನೋಡಿ. ದುಂಡು ಮೇಜಿನ ಇತರ ಉಪಯೋಗಕ್ಕಾಗಿ,ದುಂಡು ಮೇಜನ್ನು ನೋಡಿ(ಅಸ್ಪಷ್ಟತೆಯ ನಿವಾರಣೆ).
೧೯೩೦-೩೨ ರ ಮೂರು ದುಂಡು ಮೇಜಿನ ಸಭೆ ಯು, ಭಾರತದಲ್ಲಿ ಸಂವಿಧಾನಾತ್ಮಕ ತಿದ್ದುಪಡಿಗಳನ್ನು ಚರ್ಚಿಸಲು ಬ್ರಿಟಿಷ್ ಸರ್ಕಾರ ಏರ್ಪಡಿಸಿದಂತಹ ಸಮಾಲೋಚನೆಗಳ ಸರಣಿಯಾಗಿದೆ. ೧೯೩೦ ರ ಮೇ ಯಲ್ಲಿ ಸೈಮನ್ ಆಯೋಗ ಮಂಡಿಸಿದಂತಹ ವರದಿಯ ಶಿಫಾರಸ್ಸಿನಿಂದಾಗಿ ಇವುಗಳನ್ನು ನಡೆಸಲಾಗಿತ್ತು. ಭಾರತದಲ್ಲಿ ಸ್ವರಾಜ್ ಅಥವಾ ಸ್ವಯಂ-ಆಡಳಿತಕ್ಕೆ ಬೇಡಿಕೆಯು ದಿನದಿಂದ ದಿನಕ್ಕೆ ಪ್ರಬಲವಾಗತೊಡಗಿತ್ತು. ೧೯೩೦ರ ಹೊತ್ತಿಗೆ, ಭಾರತ ಸ್ವತಂತ್ರ ರಾಷ್ಟ್ರ ಸ್ಥಾನಮಾನವನ್ನು ಗಳಿಸುವ ಕಡೆಗೆ ಸಾಗಬೇಕಾದ ಅಗತ್ಯವಿದೆ ಎಂದು ಅನೇಕ ಬ್ರಿಟಿಷ್ ರಾಜಕಾರಣಿಗಳು ನಂಬಿದ್ದರು. ಅದೇನೇ ಆದರೂ ಭಾರತೀಯ ಮತ್ತು ಬ್ರಿಟಿಷ್ ರಾಜಕೀಯ ಪಕ್ಷಗಳ ನಡುವೆ ಸಭೆಯು ಪರಿಹರಿಸದಂತಹ ಅನೇಕ ಗಮನಾರ್ಹ ಭಿನ್ನಾಭಿಪ್ರಾಯಗಳಿದ್ದವು.
ದುಂಡು ಮೇಜಿನ ಸಭೆಯನ್ನು ಅಧಿಕೃತವಾಗಿ ಕಿಂಗ್ ಜಾರ್ಜ್-೫ ರವರು ೧೯೩೦ ರ ನವೆಂಬರ್ ೧೨ ರಂದು ಉದ್ಘಾಟಿಸಿದ್ದರು, ಹಾಗು ಬ್ರಿಟಿಷ್ ಪ್ರಧಾನ ಮಂತ್ರಿ ರಾಂಸೆ ಮ್ಯಾಕ್ ಡೊನಾಲ್ಡ್ ಇದರ ಅಧ್ಯಕ್ಷರಾಗಿದ್ದರು. ಹದಿನಾರು ಪ್ರತಿನಿಧಿಗಳು ಮೂರು ಬ್ರಿಟಿಷ್ ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸಿದ್ದರು. ಬ್ರಿಟಿಷ್ ಭಾರತದಿಂದ ಐವತ್ತೇಳು ರಾಜಕೀಯ ನಾಯಕರಿದ್ದರು ಹಾಗು ರಾಜರ ಆಳ್ವಿಕೆಗೆ ಒಳಪಟ್ಟ ರಾಜ್ಯಗಳಿಂದ ಹದಿನಾರು ಪ್ರತಿನಿಧಿಗಳಿದ್ದರು. ಅದೇನೇ ಆದರೂ, ಭಾರತೀಯ ವಾಣಿಜ್ಯ ನಾಯಕರೊಂದಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಸಭೆಯಿಂದ ಹೊರಗುಳಿದಿತ್ತು. ಅವರುಗಳಲ್ಲಿ ಕೆಲವರನ್ನು ನಾಗರಿಕ ನಿಯಮೋಲ್ಲಂಘನೆಗಾಗಿ ಸೆರೆಮನೆಗೆ ತಳ್ಳಲಾಯಿತು.
ಅಖಿಲ ಭಾರತೀಯ ಒಕ್ಕೂಟದ ಆಲೋಚನೆಯು ಚರ್ಚೆಯ ಕೇಂದ್ರವಾಯಿತು. ಸಭೆಯಲ್ಲಿ ಪಾಲ್ಗೊಂಡಂತಹ ಎಲ್ಲಾ ಗುಂಪುಗಳು ಈ ಪರಿಕಲ್ಪನೆಗೆ ಬೆಂಬಲವನ್ನು ನೀಡಿದವು. ಶಾಸಕಾಂಗ ಜಾರಿಗೆ ತರುವ ಹೊಣೆಗಾರಿಕೆಯ ವಿಷಯವನ್ನು ಚರ್ಚಿಸಲಾಯಿತು ಹಾಗು ಬಿ.ಆರ್. ಅಂಬೇಡ್ಕರ್, ಅಸ್ಪೃಶ್ಯರಿಗಾಗಿ ಪ್ರತ್ಯೇಕವಾದ ಇಲೆಕ್ಟರನ್ ನ ಬೇಡಿಕೆಯಿಟ್ಟರು.
ಎರಡನೆ ಅಧಿವೇಶನವನ್ನು ೧೯೩೧ ರ ಸೆಪ್ಟೆಂಬರ್ ೭ ರಂದು ಉದ್ಘಾಟಿಸಲಾಯಿತು. ಮೊದಲ ಮತ್ತು ಎರಡನೆಯ ದುಂಡು ಮೇಜಿನ ಸಭೆಯ ನಡುವೆ ಮೂರು ಮುಖ್ಯ ಭಿನ್ನತೆಗಳಿವೆ. ಎರಡನೆಯದರಲ್ಲಿ:
ಸಭೆಯ ಸಮಯದಲ್ಲಿ ಗಾಂಧಿ, ಮುಸ್ಲಿಂ ಪ್ರಾತಿನಿಧ್ಯ ಮತ್ತು ವಿಶೇಷ ರಕ್ಷಣೆಗೆ ಸಂಬಂಧಿಸಿದಂತೆ ಮುಸ್ಲೀಮರೊಂದಿಗೆ ಒಪ್ಪಂದಕ್ಕೆ ಬರಲಾಗಲಿಲ್ಲ. ಸಭೆಯ ಕೊನೆಯಲ್ಲಿ ರಾಂಸೆ ಮ್ಯಾಕ್ ಡೊನಾಲ್ಡ್, ಅಲ್ಪ ಸಂಖ್ಯಾತರ ಪ್ರಾತಿನಿಧ್ಯಕ್ಕಾಗಿ ಕಮ್ಯೂನಲ್ ಅವಾರ್ಡ್(ಮತೀಯ ಸವಲತ್ತು) ಅನ್ನು ಹೊರಡಿಸಿದರು. ಇದರ ಜೊತೆಯಲ್ಲಿ ಪಕ್ಷಗಳ ನಡುವಿನ ಯಾವುದೇ ಸ್ವತಂತ್ರ ಒಪ್ಪಂದವನ್ನು ಅವರ ಸವಲತ್ತಿಗೆ ಪರ್ಯಾಯವಾಗಿಸುವ ಅವಕಾಶವನ್ನು ನೀಡಿದರು.
ಅಸ್ಪೃಶ್ಯರನ್ನು ಅಲ್ಪಸಂಖ್ಯಾತರಾಗಿ ಹಿಂದು ಸಮಾಜದಿಂದ ಪ್ರತ್ಯೇಕಿಸುವುದಕ್ಕೆ ಗಾಂಧಿ ತೀವ್ರವಾದ ಆಕ್ಷೇಪ ವ್ಯಕ್ತಪಡಿಸಿದರು. ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಅಸ್ಪೃಶ್ಯ ಸಮೂಹದ ನಾಯಕ ಬಿ. ಆರ್.ಅಂಬೇಡ್ಕರ್ ರವರೊಂದಿಗೆ ಹೋರಾಡಿದರು: ಅಂತಿಮವಾಗಿ ಇಬ್ಬರು ಈ ಪರಿಸ್ಥಿತಿಯನ್ನು ೧೯೩೨ ರ ಪುಣೆ ಒಪ್ಪಂದದೊಂದಿಗೆ ಪರಿಹರಿಸಿಕೊಂಡರು.
ಮೂರನೆಯ ಮತ್ತು ಅಂತಿನ ಸಭೆಯನ್ನು ೧೯೩೨ ರ ನವೆಂಬರ್ ೧೭ ರಂದು ಸೇರಿಸಲಾಯಿತು. ಭಾರತದ ಬಹುಪಾಲು ಪ್ರಮುಖ ರಾಜಕೀಯ ವ್ಯಕ್ತಿಗಳು ಇದರಲ್ಲಿ ಪಾಲ್ಗೊಳ್ಳಲಿಲ್ಲ. ಕೇವಲ ನಲ್ವತ್ತಾರು ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಬ್ರಿಟನ್ ನಿಂದ ಲೇಬರ್ ಪಕ್ಷ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಇದರಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದವು.
ಈ ಸಭೆಯಲ್ಲಿ, ಕಾಲೇಜು ವಿದ್ಯಾರ್ಥಿ ಚೌಧರಿ ರಹಮತ್ ಅಲಿ, "ಪಾಕಿಸ್ತಾನ"(ಇದು "ಪರಿಶುದ್ಧವಾದ ಭೂಮಿ" ಎಂಬ ಅರ್ಥವನ್ನು ನೀಡುತ್ತದೆ)ಎಂಬ ಹೆಸರನ್ನು ರಚಿಸಿದರು. ಇದು ವಿಭಜಿಸಲಾದ ಭಾರತದ ಮುಸ್ಲಿಂ ಭಾಗಕ್ಕಾಗಿ ರಚಿಸಿದಂತಹ ಹೆಸರಾಗಿದೆ. ಅವರು ಪಂಜಾಬ್ ನಿಂದ "ಪಿ"ಯನ್ನು, ಅಫ್ಘಾನ್ ನಿಂದ "ಎ"ಯನ್ನು, ಕಾಶ್ಮೀರದಿಂದ "ಕೀ"ಯನ್ನು ಸಿಂಧ್ ನಿಂದ "ಎಸ್" ಮತ್ತು "ತಾನ್"ಅನ್ನು ಬಲೂಚಿಸ್ಥಾನ್ ನಿಂದ ತೆಗೆದುಕೊಂಡರು.
೧೯೩೧ ರ ಸೆಪ್ಟೆಂಬರ್ ನಿಂದ ೧೯೩೩ ರ ಮಾರ್ಚ್ ವರೆಗೆ, ಸ್ಯಾಮ್ಯೂಲ್ ಹೋರೆಯವರ ಮೇಲ್ವಿಚಾರಣೆಯಡಿಯಲ್ಲಿ, ಪ್ರಸ್ತಾಪಿಸಲಾದ ಸುಧಾರಣೆಗಳು ೧೯೩೫ರ ಭಾರತ ಸರ್ಕಾರ ಕಾಯ್ದೆಯಲ್ಲಿ ಪ್ರತಿಫಲಿಸಿದವು.