ದೇವನೂರು ಮಹಾದೇವ | |
---|---|
ಜನನ | 10 ಜೂನ್ 1948 ದೇವನೂರು ನಂಜನಗೂಡು ತಾಲ್ಲೂಕು ಮೈಸೂರು ಜಿಲ್ಲೆ ಕರ್ನಾಟಕ |
ವೃತ್ತಿ | ಅಧ್ಯಾಪಕ, ಬರಹಗಾರ |
ರಾಷ್ಟ್ರೀಯತೆ | ಭಾರತೀಯ |
ವಿಷಯ | ಕನ್ನಡ ಸಾಹಿತ್ಯ |
ಸಾಹಿತ್ಯ ಚಳುವಳಿ | ಬಂಡಾಯ ಚಳುವಳಿ, ದಲಿತ ಸಂಘರ್ಷ ಸಮಿತಿ |
ಪ್ರಭಾವಗಳು
| |
ಪ್ರಭಾವಿತರು
|
`
ದೇವನೂರು ಮಹಾದೇವ ಇವರು ಕನ್ನಡದ ಸಾಹಿತಿ.
ದೇವನೂರು ಮಹದೇವರವರು 1948ರಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರಿನಲ್ಲಿ ಜನಿಸಿದರು. ದೇವನೂರು, ನಂಜನಗೂಡು ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸವನ್ನು ಪಡೆದರು. ಮೈಸೂರು ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿ ಪಡೆದ ಇವರು, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ಪಡೆದಿದ್ದಾರೆ. ಕೆಲಕಾಲ ಮೈಸೂರಿನ ಸಿ.ಐ.ಐ.ಎಲ್.ನಲ್ಲಿ ಕೆಲಸ ಮಾಡಿ ಅಲ್ಲಿಯ ವೃತ್ತಿಗೆ ರಾಜೀನಾಮೆ ನೀಡಿ ವ್ಯವಸಾಯದಲ್ಲಿ ತೊಡಗಿದರು. ಇವರ ‘ಒಡಲಾಳ ‘ ಕೃತಿಯನ್ನು ಕಲ್ಕತ್ತಾದ ಭಾರತೀಯ ಪರಿಷತ್ 1984ರ ಉತ್ತಮ ಸೃಜನಶೀಲ ಕೃತಿಯೆಂದು ಗೌರವಿಸಿತು. 1991ರಲ್ಲಿ ಇವರ ‘ಕುಸುಮಬಾಲೆ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ನೀಡಿತು. ಕರ್ನಾಟಕದ ರಾಜ್ಯೋತ್ಸವ ಪ್ರಶಸ್ತಿಯನ್ನೂ ಪಡೆದಿರುವ ದೇವನೂರ ಮಹಾದೇವ 1989ರಲ್ಲಿ ಅಮೆರಿಕಾದಲ್ಲಿ ನಡೆದ ‘ಇಂಟರ್ನ್ಯಾಶನಲ್ ರೈಟಿಂಗ್ ಪ್ರೋಗ್ರಾಂ(International writting Programme)’ನಲ್ಲಿ ಭಾಗವಹಿಸಿದ್ದರು. ವರ್ಷದ ಹಿಂದೆ ದೇವನೂರು ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಹ ಲಭಿಸಿತು.[೧] ಇವರ ಕೃತಿಗಳು ‘ದ್ಯಾವನೂರು’, ‘ಒಡಲಾಳ’ ಮತ್ತು ‘ಕುಸುಮಬಾಲೆ’.
ದೇವನೂರು ಮಹಾದೇವ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರಿನವರು. ಜನನ ೧೯೪೮ರಲ್ಲಿ. ತಂದೆ ಸಿ.ನಂಜಯ್ಯ (ಪೋಲಿಸ್ ಕಾನ್ಸ್ ಟೇಬಲ್), ತಾಯಿ ನಂಜಮ್ಮ. ನಂಜನಗೂಡು, ಹುಣಸೂರು ಹಾಗು ಮೈಸೂರಿನಲ್ಲಿ ವಿದ್ಯಾಭ್ಯಾಸ ಪೂರೈಸಿದ ಬಳಿಕ ಮೈಸೂರಿನ ಭಾರತೀಯ ಭಾಷಾ ಸಂಸ್ಥೆ ಯಲ್ಲಿ ಕೆಲಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿ, ಆ ಬಳಿಕ ವ್ಯವಸಾಯದಲ್ಲಿ ತೊಡಗಿ ಮೈಸೂರಿನಲ್ಲಿ ನೆಲೆಸಿದರು. ಪತ್ನಿ ಕೆ.ಸುಮಿತ್ರಬಾಯಿ, ಇಬ್ಬರು ಮಕ್ಕಳು-ಉಜ್ವಲ ಮತ್ತು ಮಿತಾ. ಫೋರ್ಡ ಫೌಂಡೇಶನ್ ಕೊಡಮಾಡಿದ ಸಂಶೋಧನವೇತನವನ್ನು, ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಅನ್ನು, ಹಾಸನದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯನ್ನು,[೨] .
==ಸಾಹಿತ್ಯ ಕೃತಿಗಳು==ನರ ಬಂಡಾಯ (panchama)ಇವರ ಪತ್ರಿಕೆ
ಡಾಂಬರುಬಂದರು, ಅಮಾಸ,ಮೂಡಲಸಿಮೆಯಲ್ಲಿ ಕೊಲೆ ಗಿಲೆ,ಗ್ರಾಸ್ಥರು)
ದೇವನೂರು ಮಹಾದೇವ ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸ್ಥಾಪಕರಲ್ಲಿ ಒಬ್ಬರು. ಇವರು ಪ್ರಸ್ತುತ ಕರ್ನಾಟಕ ಸರ್ವೋದಯ ಪಕ್ಷದ ಅಧ್ಯಕ್ಷರಾಗಿದ್ದಾರೆ.