ದೇವಿಕಾ ವೈದ್ಯಾ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ್ತಿ. ಇವರು ಎಡಗೈ ಬ್ಯಾಟ್ಸ್‍ಉಮನ ಹಾಗೂ ಎಡಗೈ ಲೆಗ್ ಬ್ರೆಕ್ ಗೂಗ್ಲಿ ಬೌಲರ್. ದೇಶಿ ಕ್ರಿಕೆಟ್‍ನಲ್ಲಿ ಮುಂಬೈ ಕ್ರಿಕೆಟ್ ತಂಡಕ್ಕೆ ಆಡುತ್ತಾರೆ.
ದೇವಿಕಾ ವೈದ್ಯಾ ರವರು ಅಗಸ್ಟ್ ೨೩, ೧೯೯೭ರಂದು ಪುಣೆ, ಮಹಾರಾಷ್ಟ್ರದಲ್ಲಿ ಜನಿಸಿದರು.
ದೇಶಿ ಕ್ರಿಕೆಟ್‍ನಲ್ಲಿ ಮುಂಬೈ ಕ್ರಿಕೆಟ್ ತಂಡಕ್ಕೆ ಆಡುತ್ತಾರೆ. ಇವರು ೨೦೧೦ರಿಂದ ಇಲ್ಲಿಯವರೆಗೆ ತಮ್ಮ ತವರಾದ ಮಹಾರಾಷ್ಟ್ರ ಕ್ರಿಕೆಟ ತಂಡಕ್ಕೆ ಆಡುತಿದ್ದಾರೆ. ತಂಡದಲ್ಲಿ ಆಲ್‍ರೌಂಡರ್ ಆಗಿ ತಮ್ಮ ವೃತ್ತಿ ಜೀವನವನ್ನ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.[೧]
ನವಂಬರ ೩೦, ೨೦೧೪ರಲ್ಲಿ ಬೆಂಗಳೂರಿನಲ್ಲಿ ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡದ ವಿರುದ್ದ ನಡೆದ ಏಕೈಕ ಟಿ-೨೦ ಪಂದ್ಯದ ಮೂಲಕ ದೇವಿಕಾ ವೈದ್ಯಾ ರವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ನವಂಬರ ೧೬, ೨೦೧೬ರಲ್ಲಿ ವಿಜಯವಾಡದಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ವಿರುದ್ದ ನಡೆದ ಮೂರನೇ ಏಕದಿನ ಪಂದ್ಯದ ಮೂಲಕ ದೇವಿಕಾ ವೈದ್ಯಾ ರವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೨][೩]