ದೇವೇಂದ್ರ ಗಂಗಾಧರ್ ರಾವ್ ಫಡ್ನವಿಸ್(ಮರಾಠಿ : देवेंद्र गंगाधरराव फडणवीस, (ಜ : ೨೨, ಜುಲೈ, ೧೯೭೦) ಮಹಾರಾಷ್ಟ್ರದ ೧೭ ನೆಯ ಉಪ ಖ್ಯಮಂತ್ರಿಯಾಗಿ 2022 ರ ಚುನಾವಣೆಯಲ್ಲಿ ಚುನಾಯಿತರಾಗಿದ್ದಾರೆ.[೧] ೪೪ ವರ್ಷದ 'ಫಡ್ನವಿಸ್', ೩೧, ಅಕ್ಟೋಬರ್, ೨೦೧೪ ರಂದು ಮುಂಬಯಿನ, ವಾಂಖಡೆ ಸ್ಟೇಡಿಯಮ್ ನಲ್ಲಿ ಸುಮಾರು ೩೦ ಸಾವಿರಕ್ಕೂ ಹೆಚ್ಚು ಆಹ್ವಾನಿತ ಸಭಿಕರ ಸಮ್ಮುಖದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯ ಪದಗ್ರಹಣ ಮಾಡಿದರು.[೨] ಬಿ.ಜೆ.ಪಿ. ಪಕ್ಷದ ಹಿರಿಯ ಗಣ್ಯರು, ಪಕ್ಷದ ಅಧ್ಯಕ್ಷ, ಅಮಿತ್ ಶಾ, ಹಾಗೂ ಪ್ರಧಾನಿ, 'ನರೇಂದ್ರ ಮೋದಿ'ಯವರ ಸಮ್ಮುಖದಲ್ಲಿ ಮುಖ್ಯಮಂತ್ರಿಯಾದರು.[೩] ಫಡ್ನವಿಸ್, ಭಾರತೀಯ ಜನತಾ ಪಕ್ಷದ ಸದಸ್ಯ, ಮಹಾರಾಷ್ಟ್ರ ರಾಜ್ಯ ಭಾರತೀಯ ಜನತಾ ಪಕ್ಷದ ಅಧ್ಯಕ್ಷ. ನಾಗಪುರದ ಎಮ್.ಎಲ್.ಎ ಆಗಿದ್ದರು. (Nagpur South West Vidhan Sabha constituency). ನಾಗಪುರದ ಮೇಯರ್ ಆಗಿಸೇವೆ ಸಲ್ಲಿಸಿದ್ದಾರೆ. ೯೦ ರ ದಶಕದಲ್ಲಿ ಅವರು ರಾಜಕೀಯ ರಂಗಕ್ಕೆ ಪಾದಾರ್ಪಣೆಮಾಡಿದರು.
ಮಹಾರಾಷ್ಟ್ರ ರಾಜ್ಯದ ಬಿ.ಜೆ.ಪಿ.ಶಾಖಾ ಅಧ್ಯಕ್ಷರಾಗಿ, ತಮ್ಮ ೨೧ ನೇ ವಯಸ್ಸಿನಲ್ಲಿ ಅತಿ ಕಿರಿಯ ನಾಗ್ಪುರದ ಮುನಿಸಿಪಲ್ ಕಾರ್ಪೊರೇಟರ್, ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು, ೧೯೯೨-ಮತ್ತು ೯೭ ಸಮಯದಲ್ಲಿ ಕಾರ್ಪೊರೇಟರ್ ಆಗಿ ಕಾರ್ಯನಿರ್ವಹಿಸಿದ್ದರು. ೧೯೯೭ ನಲ್ಲಿ ತಮ್ಮ, ೨೭ ನೇ ವಯಸ್ಸಿನಲ್ಲಿ 'ಭಾರತದಲ್ಲೇ ಎರಡನೆಯ ಅತಿ ಚಿಕ್ಕ ಪ್ರಾಯದ ಮೇಯರ್' ಎಂದು ಹೆಸರಾಗಿದ್ದರು. ಮಹಾರಾಷ್ಟ್ರ ಸ್ಟೇಟ್ ಲೆಜಿಸ್ಲೇಟೀವ್ ಕೌನ್ಸಿಲ್ ನಲ್ಲಿ ಎರಡನೆಯ ಬಾರಿಗೆ ಮರು ಚುನಾಯಿತರಾದ ಪ್ರಥಮ ವ್ಯಕ್ತಿ. ೧೯೯೩ ರಲ್ಲಿ ಮೆಂಬರ್ ಆಫ್ ಲೆಜಿಸ್ಲೇಟೀವ್ ಅಸೆಂಬ್ಲಿಗೆ ಚುನಾಯಿತರಾದರು. ೧೯೯೯ ರಿಂದ ಸತತವಾಗಿ ನಾಗಪುರವನ್ನು ಪ್ರತಿನಿಧಿಸಿ ಮಹಾರಾಷ್ಟ್ರ ರಾಜ್ಯದ ಲೆಜಿಸ್ಲೇಟೀವ್ ಅಸೆಂಬ್ಲಿಯ ಸದಸ್ಯರಾಗಿ ಚುನಾಯಿಸಲ್ಪಟ್ಟು ಕಾರ್ಯರಥರಾಗಿದ್ದಾರೆ.
'ದೇವೇಂದ್ರ', ಮಹಾರಾಷ್ಟ್ರ ರಾಜ್ಯದ 'ದೇಶಸ್ಥ ಬ್ರಾಹ್ಮಣರ ಮನೆತನ'ದಲ್ಲಿ ೨೨, ಜುಲೈ,೧೯೭೦ ರಲ್ಲಿ ಜನಿಸಿದರು. ತಂದೆ 'ಗಂಗಾಧರ್ ಫಡ್ನವಿಸ್'. ಮಹಾರಾಷ್ಟ್ರದ ನಾಗಪುರ ಲೆಜಿಸ್ಲೇಟೀವ್ ಕೌನ್ಸಿಲ್ ಗೆ ೨ ಬಾರಿ ಆರಿಸಿಬಂದಿದ್ದರು. (ಮೊದಲು ಜನಸಂಘದಿಂದ, ನಂತರ ಜನತ ಪಕ್ಷ, ಹಾಗೂ ಮುಂದೆ, ಬಿಜೆಪಿ ಪಕ್ಷದಿಂದ) ತಾಯಿ, 'ಸರಿತ ಫಡ್ನವಿಸ್', ಗೃಹಸ್ತೆ. 'ವಿಧರ್ಭ ಹೌಸಿಂಗ್ ಕ್ರೆಡಿಟ್ ಸೊಸೈಟಿಯ ನಿರ್ದೇಶಕಿ'. ಅಣ್ಣ, 'ಅಶಿಶ್ ಫಡ್ನವಿಸ್', ಅಖಿಲಭಾರತೀಯ ವಿದ್ಯಾರ್ಥಿ ಪರಿಶದ್ (ABVP) ನಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಕೆಲಸಮಾಡುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಫಡ್ನವಿಸ್ ಬೆಳೆದರು. ದೇವೇಂದ್ರನ ಚಿಕ್ಕಮ್ಮ, 'ಶೋಭಾತಾಯಿ ಫಡ್ನವಿಸ್' ಈಗಿನ 'ಸ್ಟೇಟ್ ಲೆಜಿಸ್ಲೇಟೀವ್ ಸದಸ್ಯೆ' ; ಹಿಂದೆ ೧೯೯೫ ರಲ್ಲಿ ಶಿವಸೇನೆ-ಬಿಜೆಪಿ ಸಹಯೋಗದ ಸರಕಾರದಲ್ಲಿ ಮಂತ್ರಿಯಾಗಿದ್ದರು. ನಾಗಪುರದಿಂದ ೧೪೩ ಕಿ.ಮೀ ದೂರದ ಚಂದ್ರಪುರ ಜಿಲ್ಲೆಯ 'ಮೂಲ್ ಟೌನ್' ನಲ್ಲಿ ಫಡ್ನಿವಿಸ್ ಮನೆತನದ ಪೂರ್ವಜರು ವಾಸಿಸುತ್ತಿದ್ದಾರೆ. ಅವರೆಲ್ಲಾ ಮೂಲತಃ ಜಮೀನುದಾರರು ಮತ್ತು ಕೃಷಿಕರು. ಕಾಲಾನುಕ್ರಮದಲ್ಲಿ ರಾಜಕೀಯದಲ್ಲಿ ಆಸಕ್ತಿವಹಿಸಿದರು. ಬಹಳ ಹಿಂದೆ ಪೂರ್ವಜರು 'ಸತಾರ ಜಿಲ್ಲೆ'ಯ 'ವೈ'ನಲ್ಲಿ ವಾಸಿಸುತ್ತಿದ್ದು, ಪೇಷ್ವೆಗಳ ಆಡಳಿತಾವಧಿಯಲ್ಲಿ, ಚಂದ್ರಪುರದ 'ಸಾವಲಿ'ಯಲ್ಲಿ ಜಹಗೀರು ದೊರೆಯಿತು. ಹಾಗೆಯೇ ಮುಂದುವರೆದ ಅವರ ವಂಶಜರಿಗೆ 'ಮೂಲ್ ಗ್ರಾಮ'ದಲ್ಲಿ 'ವಾತಂದರಿ' ದೊರೆತಮೇಲೆ ಅಲ್ಲಿ ನೆಲೆಸಲು ಪ್ರಾರಂಭಿಸಿದರು. ಬಾಲಕ, ದೇವೇಂದ್ರ, ಮಾಜಿ ಪ್ರಧಾನಿ, ಇಂದಿರಾ ಗಾಂಧಿಯವರ ಹೆಸರಿನ ’ಇಂದಿರಾ ಕಾನ್ವೆಂಟ್’ ಗೆ ಕಲಿಯಲು ಹೋಗುತ್ತಿದ್ದರು. ಜನಸಂಘದ ಕಾರ್ಯಕರ್ತರಾಗಿದ್ದ ದೇವೇಂದ್ರನ ತಂದೆ, ಗಂಗಾಧರ ಫಡ್ನವಿಸ್ ರನ್ನು, ’ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರ ಜೈಲಿಗೆ ಕಳಿಸಿದರು.[೪] ಇದರಿಂದಾಗಿ ದೇವೇಂದ್ರನನ್ನು 'ಸರಸ್ವತಿ ವಿದ್ಯಾಲಯ'ಕ್ಕೆ ಸೇರಿಸಲಾಯಿತು. ಅಲ್ಲಿ ಪ್ರಾಥಮಿಕ, ಮತ್ತು ಮಾಧ್ಯಮಿಕ, ಹಾಗೂ ಪ್ರೌಢ ಶಿಕ್ಷಣವನ್ನು ಗಳಿಸಿದರು.೧೯೮೬-೮೭ ರಲ್ಲಿ 'ಧರಮ್ ಪೆಟ್ ಜೂನಿಯರ್ ಕಾಲೇಜ್', ಗೆ ಸೇರಿ, ಮುಂದೆ 'ಲಾ ಕಾಲೇಜ್ ನಾಗ್ಪುರ್' ನಿಂದ 'ಕಾನೂನು ಪದವಿ' ಗಳಿಸಿದರು. ಮೊದಲಿನಿಂದಲೂ (ABVP) ಯ, ಸಕ್ರಿಯ ಕಾರ್ಯಕರ್ತನಾಗಿ ದುಡಿದಿದ್ದರು. ಪರಿಷತ್ತಿನ ಎಲ್ಲಾ ಕೆಲಸಗಳನ್ನೂ ನಿಷ್ಠೆಯಿಂದ ಮಾಡುತ್ತಿದ್ದರು. ಗೋಡೆಗೆ ಬಣ್ಣ ಬಳಿಯುವುದು, ರಾಜಕೀಯಪಟುಗಳ ಬಗ್ಗೆ ಮುದ್ರಿಸಲಾದ ಭಿತ್ತಿಪತ್ರಗಳನ್ನು ನಗರದ ಗೋಡೆಗಳ ಮೇಲೆ ಅಂಟಿಸುವ ಕೆಲಸ, ಇತ್ಯಾದಿ. 'ಬರ್ಲಿನ್ ಜರ್ಮನ್ ಫೌಂಡೇಶನ್ ಫಾರ್ ಇಂಟರ್ನ್ಯಾಷನಲ್ ಡೆವೆಲೊಪ್ಮೆಂಟ್' (DSE) ನ ವತಿಯಿಂದ, 'ಬಿಜಿನೆಸ್ ಮ್ಯಾನೇಜ್ಮೆಂಟ್' ನಲ್ಲಿ ಸ್ನಾತಕೋತ್ತರ ಪದವಿ, ಹಾಗೂ 'ಡಿಪ್ಲೊಮಾ ಇನ್ ಮೆಥಡ್ಸ್ ಅಂಡ್ ಟೆಕ್ನಿಕ್ಸ್ ಆಫ್ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್' ಗಳಿಸಿದರು. ದೇವೇಂದ್ರ ಫಡ್ನವಿಸ್ ತಮ್ಮ ಸರಕಾರದ ಕಾನ್ಫಿಡೆನ್ಸ್ ಮತಗಣನೆಯಲ್ಲಿ ೨೦೧೪ ರ, ನವೆಂಬರ್ ೧೨ ರಂದು 'ವಾಯ್ಸ್ ಓಟಿನ ಮೂಲಕ' ಗಳಿಸಿದರು. [೫]
'ದೇವೇಂದ್ರ,' ೨೦೦೬ ರಲ್ಲಿ 'ಅಮೃತ ರಾನಡೆ'ಯನ್ನು ಮದುವೆಯಾದರು. 'ಅಮೃತ', 'ನಾಗ್ಪುರ್ ಶಾಖೆಯ ಆಕ್ಸಿಸ್ ಬ್ಯಾಂಕಿನ ಉಪ ಅಧ್ಯಕ್ಷೆ'ಯಾಗಿ ಕೆಲಸಮಾಡುತ್ತಿದ್ದಾರೆ. ಅಮೃತ ಫಡ್ನವಿಸ್, ತಂದೆ ತಾಯಿಗಳಿಬ್ಬರೂ ವೈದ್ಯರು. ಅಮೃತಾರವರ ತವರು ಮನೆಯ ಯಾವ ಸದಸ್ಯರೂ ರಾಜಕೀಯದಲ್ಲಿಲ್ಲ. ದೇವೇಂದ್ರ, ಅಮೃತ ದಂಪತಿಗಳಿಗೆ 'ದಿವಿಜ' ಎಂಬ ೫ ವರ್ಷದ ಮಗಳಿದ್ದಾಳೆ. ದಿವಿಜ 'ಭವನ್ಸ್ ನ ಭಗವಾನ್ ದಾಸ್ ಪುರೋಹಿತ್ ವಿದ್ಯಾ ಮಂದಿರ್' ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾಳೆ. 'ದೇವೇಂದ್ರ ಫಡ್ನವಿಸ್', ತಂತ್ರಜ್ಞಾನದ ಪುಸ್ತಕ ಪ್ರಿಯ, ಎನರ್ಜಿ, ಟ್ಯಾಕ್ಸ್, ಎಕೊನೊಮಿಕ್ಸ್ ಮುಂತಾದ ವಿಶಯಗಳ ಬಗ್ಗೆ ವಿಶೇಷ ಆಸಕ್ತಿ.[೬] 'ಐ ಫೋನ್' ಮತ್ತ್ 'ಐ ಪ್ಯಾಡ್' ಹೋದೆಡೆಯಲ್ಲೆಲ್ಲಾ ಒಯ್ಯುತ್ತಾರೆ. ಹಳೆಯ ಹಿಂದಿ ಸಿನೆಮಾದ ಹಾಡುಗಳು, ಮತ್ತು ಹಿಂದಿ ಚಿತ್ರಗಳ ಸಂಭಾಷಣೆಗಳು ಅವರಿಗೆ ಬಲು ಪ್ರಿಯ.
೨೦೦೬ ರಲ್ಲಿ 'ಫಡ್ನವಿಸ್' ನಾಗ್ಪುರದ 'ಅಂಬಿಕ ಪುರುಷರ ಉಡುಪಿನ ಜಾಹಿರಾತಿಗೆ ಮಾಡೆಲ್' ಆಗಿ ಕೆಲಸಮಾಡಿದ್ದರು. ಫೋಟೋಗ್ರಾಫರ್ ಗೆಳೆಯ, 'ವಿವೇಕ್ ರಾನಡೆ'ಗೆ ಉಚಿತವಾಗಿ, ಪಶ್ಚಿಮ ನಾಗ್ಪುರದ ಮಾರುಕಟ್ಟೆ ವಲಯದಲ್ಲಿ ೫ ಭಾರಿ ಹೋರ್ಡಿಂಗ್ ಗಳನ್ನು ನಿರ್ಮಿಸಿ ಸ್ಥಾಪಿಸಲು ಸಹಾಯಮಾಡಿದರು.