ದೊಡ್ಡ ಗಣೇಶನ ಗುಡಿ

ಗಣೇಶ ದೇವಾಲಯದ ಪ್ರವೇಶ
ಬುಲ್ ಟೆಂಪಲ್ ನೋಟ

ದೊಡ್ಡ ಗಣೇಶನ ಗುಡಿ ಬೆಂಗಳೂರಿನ ಬಸವನಗುಡಿ ಯಲ್ಲಿರುವ ದೇವಸ್ಥಾನ . ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಶ್ರೀಮಂತವಾದ ಈ ಪ್ರದೇಶ ಧಾರ್ಮಿಕತೆಯ ನೆಲೆವೀಡೂ ಹೌದು.ಬೆಂಗಳೂರಿನಲ್ಲಿರುವ ಹಲವು ಪುರಾತನ ದೇವಾಲಯಗಳ ಪೈಕಿ ಬಸವನಗುಡಿಯ ದೊಡ್ಡ ಗಣೇಶನ ದೇವಾಲಯ ಪ್ರಮುಖವಾದದ್ದು.ಕಹಳೆ ಬಂಡೆ ಅಥವಾ ಬ್ಯೂಗಲ್ ರಾಕ್ ಉದ್ಯಾನಕ್ಕೆ ಹೊಂದಿಕೊಂಡಿರುವ ವಿಶಾಲ ಪ್ರದೇಶದಲ್ಲಿ ದೊಡ್ಡ ಗಣೇಶನ ಸುಂದರ ದೇವಾಲಯವಿದೆ. ಗರ್ಭಗುಡಿಯಲ್ಲಿ ಏಕಶಿಲೆಯಲ್ಲಿ ಕಡೆದ 8 ಅಡಿ ಎತ್ತರ ಹಾಗೂ 12 ಅಡಿ ಅಗಲ ಇರುವ ಸುಂದರವಾದ ಗಣೇಶನ ವಿಗ್ರಹವಿದೆ. ಈ ಗಣಪ ಸ್ವಯಂಭು, ಉದ್ಭವ ಗಣಪ ಎಂತಲೂ ಹೇಳುತ್ತಾರೆ.

ಇತಿಹಾಸ

[ಬದಲಾಯಿಸಿ]
Bull Temple, Bangalore - Wiele's Studio
The temple entrance
Temple interior with Nandi idol
One of the biggest Nandi idols in the world

ಸುಮಾರು 450 ವರ್ಷಗಳಷ್ಟು ಹಳೆಯದಾದ ಈ ದೇವಾಲಯವನ್ನು 1537 ರಲ್ಲಿ ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ಕೆಂಪೇ ಗೌಡರು ನಿರ್ಮಿಸಿದರು, ಅವರು ಬೆಂಗಳೂರಿನ ನಗರವನ್ನು ಸ್ಥಾಪಿಸಿದರು. . ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಈ ದೇವಾಲಯವನ್ನು ತನ್ನ ಬೆಂಗಳೂರು ದರ್ಶನ ಪಟ್ಟಿಯಲ್ಲಿ ಸೇರಿಸಿದೆ.ಈ ದೇವಾಲಯವು ಚಿಕ್ಕದಾಗಿದೆ, ಇದು ವಿಜಯನಗರ ಶೈಲಿಯಲ್ಲಿ ಮುಖಮಂಟಪದಿಂದ ಮುಂಭಾಗದಲ್ಲಿದೆ

ಗ್ಯಾಲರಿ

[ಬದಲಾಯಿಸಿ]

ಬಾಹ್ಯ ಸಂಪರ್ಕ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  • A., Raman (1994). Bangalore - Mysore. Orient Blackswan. p. 9. ISBN 9780863114311.
  • Sharma, Dr. Shiv (2008). India - A Travel Guide. Diamond Pocket Books (P) Ltd. p. 651. ISBN 9788128400674.