ದ್ರಷ್ಟಿ ಧಾಮೀ | |
---|---|
ಜನನ | |
ರಾಷ್ಟ್ರೀಯತೆ | ಭಾರತೀಯ |
ವಿದ್ಯಾಭ್ಯಾಸ | ಸಮಾಜಶಾಸ್ತ್ರದಲ್ಲಿ ಪದವಿ |
ವೃತ್ತಿs |
|
ಸಕ್ರಿಯ ವರ್ಷಗಳು | ೨೦೦೭ – ಪ್ರಸ್ತುತ |
ಗಮನಾರ್ಹ ಕೆಲಸಗಳು | ಮಧುಬಾಲ ಏಕ್ ಇಶ್ಕ್ ಏಕ್ ಜುನೂನ್ ಗೀತ್ - ಹುಯಿ ಸಬ್ಸೇ ಪರಾಯಿ |
ಸಂಗಾತಿ | ನೀರಜ್ ಕೇಮ್ಕಾ |
ಸಂಬಂಧಿಕರು | ಸುಹಾಸಿ ಧಾಮೀ (ಅತ್ತಿಗೆ) |
ದ್ರಷ್ಟಿ ಧಾಮೀ ಯವರು ಒಬ್ಬ ಭಾರತೀಯ ನಟಿ, ರೂಪದರ್ಶಿ ಮತ್ತು ನರ್ತಕಿ[೧].ಅವರು ಮೊದಲಿಗೆ 'ದಿಲ್ ಮಿಲ್ ಗಯೇ' ಎಂಬ ಧಾರವಾಹಿಯಲ್ಲಿ ಮುಸ್ಕಾನ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡರು.ನಂತರ ಅವರು ಗೀತ್-ಹುಯಿ ಸಬ್ಸೇ ಪರಾಯಿಧಾರವಾಹಿಯಲ್ಲಿ ಗೀತ್ ಎಂಬ ಪ್ರಮುಖ ಪಾತ್ರವನ್ನು ಪಡೆದುಕೊಂಡರು.ಅದಲ್ಲದೇ, ಅವರು ಮಧುಬಾಲಾ-ಏಕ್ ಇಷ್ಕ್ ಏಕ್ ಜುನೂನ್, ಏಕ್ ಥಾ ರಾಜ ಏಕ್ ಥಿ ರಾಣಿ, ಪರ್ದೇಸ್ ಮೇ ಹೇ ಮೇರಾ ದಿಲ್ ಮತ್ತು ಸಿಲ್ಸಿಲಾ ಬದಲ್ತೇ ರಿಶ್ತೋಂ ಕಾದರುಸತಿ ದಹಅಮಿ ಇನ ಪಅರದೆಸ ಮೆಇನ ಹಅಇನ ಮೆರಅ ದಿಲ [೨] ಧಾರವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದರು.ಧಾಮೀ ಯವರು ಭಾರತೀಯ ಟೆಲಿವಿಷನ್ ನ ಅಗ್ರ ನಟಿಯರಲ್ಲಿ ಒಬ್ಬರಾಗಿದ್ದಾರೆ.
ದ್ರಷ್ಟಿ ಧಾಮೀ ಯವರು ೧೯೮೫ ರ ಜನವರಿ ೧೦ ರಂದು ಮುಂಬೈನ ಗುಜರಾತಿ ಕುಟುಂಬದಲ್ಲಿ ಜನಿಸಿದರು. ಮೇರಿ ಇಮ್ಮಾಕ್ಯುಲೇಟ್ ಗರ್ಲ್ಸ್ ಹೈಸ್ಕೂಲ್ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿ ನಂತರ ಮುಂಬೈನ ಮಿಥಿಬಾಯ್ ಕಾಲೇಜಿನಲ್ಲಿ ಸಮಾಜಶಾಸ್ತ್ರದಲ್ಲಿ ಪದವಿ ಪಡೆದುಕೊಂಡರು[೩]. ಮಾಡೆಲಿಂಗ್ ಗೆ ಪ್ರವೇಶಿಸುವ ಮೊದಲು ಧಾಮೀ ಯವರು ನೃತ್ಯ ಬೋಧಕರಾಗಿದ್ದರು.
ದ್ರಷ್ಟಿ ಧಾಮೀ ಯವರು ಮನರಂಜನಾ ಉದ್ಯಮದಲ್ಲಿ ಪ್ರಥಮ ಬಾರಿಗೆ ಮುದ್ರಣ ಮತ್ತು ದೂರದರ್ಶನ ಜಾಹೀರಾತುಗಳೊಂದಿಗೆ ಮಾಡೆಲಿಂಗ್ನಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ನಂತರ ಅವರು 'ಸೈಯಾಂ ದಿಲ್ ಮೇಂ ಆನಾ ರೇ', 'ಹಮ್ಕೋ ಆಜ್ ಕಲ್ ಹೇ', 'ತೇರಿ ಮೇರಿ ನಝರ್ ಕೀ ಡೋರಿ', 'ನಚ್ಲೇ ಸೋನಿಯೋ ತೂ' ಸಂಗೀತ ವೀಡಿಯೋಗಳಲ್ಲಿ ಕಾಣಿಸಿಕೊಂಡರು. ಅದಲ್ಲದೇ ಅವರು ಕೊಲ್ಗೇಟ್,ಲಯನ್ ಹನಿ, ಆರ್.ಕೆ.ಎಸ್ ಗ್ರ್ಯಾಂಡ್(ಶಾಪಿಂಗ್ ಮಾಲ್), ಅಮೂಲ್, ವಿಐಪಿ ಬ್ಯಾಗ್ಸ್, ರಿಲಾಯನ್ಸ್ ಮೊಬೈಲ್, ಜ್ಯುವೆಲ್ಲರಿ ನಂತಹ ಹಲವು ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ.[೪]
೨೧ ಫೆಬ್ರವರಿ ೨೦೧೫ ರಂದು, ಧಾಮಿ ಸಾಂಪ್ರದಾಯಿಕ ಹಿಂದೂ ಸಮಾರಂಭದಲ್ಲಿ ಉದ್ಯಮಿ ನೀರಜ್ ಖೇಮ್ಕಾ ಅವರನ್ನು ವಿವಾಹವಾದರು. [೫][೬][೭]
ಮಾಧ್ಯಮಗಳು ದ್ರಷ್ಟಿ ಧಾಮೀ ಯವರಿಗೆ 'ಕ್ವೀನ್ ಆಫ್ ಎಕ್ಸ್ಪ್ರೆಶನ್' ಎಂಬ ಬಿರುದನ್ನು ನೀಡುವ ಮೂಲಕ ಅವರ ನಟನಾ ಕೌಶಲ್ಯವನ್ನು ಶ್ಲಾಘಿಸಿವೆ. ದ್ರಷ್ಟಿ ಯವರು ಭಾರತದಲ್ಲೇ ಅತೀ ಹೆಚ್ಚು ಸಂಭಾವನೆ ಗಳಿಸಿರುವ ಕಿರುತೆರೆ ನಟಿಯರಲ್ಲಿ ಒಬ್ಬರಾಗಿದ್ದಾರೆ.
ವರ್ಷ | ಪ್ರದರ್ಶನ | ಪಾತ್ರ | ಟಿಪ್ಪಣಿ | Ref |
---|---|---|---|---|
೨೦೦೭-೦೯ | ದಿಲ್ ಮಿಲ್ ಗಯೇ | ಡಾ. ಮುಸ್ಕಾನ್ ಚಡ್ಡಾ | ಚೊಚ್ಚಲ | |
೨೦೧೦ | ಬಿಗ್ ಮನೀ: ಚೋಟಾ ಪರ್ದಾ ಬಡಾ ಗೇಮ್ | ಅತಿಥಿ ಸ್ಪರ್ಧಿ | ರಾಗಿಣಿ ಖನ್ನಾ ವಿರುದ್ಧ | |
ನಚ್ಲೇ ವೇ ವಿದ್ ಸರೋಜ್ ಖಾನ್ | ಸ್ಪರ್ಧಿ | |||
೨೦೧೦-೧೧ | ಗೀತ್–ಹುಯಿ ಸಬ್ಸೇ ಪರಾಯಿ | ಗೀತ್ ಹಂಡಾ | ಗುರ್ಮೀತ್ ಚೌದರಿ ವಿರುದ್ಧ | |
೨೦೧೨-೧೪ | ಮಧುಬಾಲಾ – ಏಕ್ ಇಷ್ಕ್ ಏಕ್ ಜುನೂನ್ | ಮಧುಬಾಲಾ ಚೌದರಿ/ ಮಧುಬಾಲಾ ಕುಂದ್ರಾ | ವಿವಿಯನ್ ದ್ಸೇನಾ ವಿರುದ್ಧ | |
೨೦೧೩ | ನಚ್ ಬಲಿಯೇ ೫ | ಅತಿಥಿ | ತನ್ನ ಸಹೋದರ ಹಾಗು ಅವರ ಪತ್ನಿ ಸುಹಾಸಿ ಧಾಮೀ ರವರನ್ನು ಬೆಂಬಲಿಸಲು | |
ಝಲಕ್ ದಿಖ್ಲಾ ಝಾ ೬ | ಸ್ಪರ್ಧಿ | ವಿಜೇತರು | ||
೨೦೧೪ | ಕಾಮಿಡಿ ನೈಟ್ಸ್ ವಿದ್ ಕಪಿಲ್ | ಅತಿಥಿ | 'ಝಲಕ್' ನ ಪ್ರಚಾರಕ್ಕಾಗಿ | [೮] |
ಮಿಷನ್ ಸಪ್ನೇ | ಸ್ಪರ್ಧಿ | ಕಾರ್ಯಕ್ರಮದ ಹೋಸ್ಟ್ ಆಗಿ ಸೊನಾಲಿ ಬೇಂದ್ರೆ | [೯] | |
ಝಲಕ್ ದಿಖ್ಲಾ ಝಾ ೭ | ಹೋಸ್ಟ್ | ರಣ್ವೀರ್ ಶೋರೆ ಜೊತೆ | ||
೨೦೧೪-೧೫ | ಬಾಕ್ಸ್ ಕ್ರಿಕೆಟ್ ಲೀಗ್ | ಸ್ಪರ್ಧಿ | ಮುಂಬೈ ವಾರಿಯರ್ಸ್ ನ ಆಟಗಾರ್ತಿಯಾಗಿ | [೧೦] |
೨೦೧೫-೧೬ | ಏಕ್ ಥಾ ರಾಜ ಏಕ್ ಥಿ ರಾಣಿ | ಗಾಯತ್ರಿ ಸೇಥ್/ರಾಣಿ ಗಾಯತ್ರಿ ದೇವಿ/ಸಾವಿತ್ರಿ | ಸಿದ್ಧಾಂತ್ ಕಾರ್ನಿಕ್ ವಿರುದ್ಧ | [೧೧] |
೨೦೧೫ | ಝಲಕ್ ದಿಖ್ಲಾ ಝಾ ೮ | ಅತಿಥಿ ಸ್ಪರ್ಧಿ | ಟೀನ್ ಕಾ ಟಡ್ಕಾ ಸನಾಯಾ ಇರಾನಿ ಜೊತೆ | [೧೨] |
೨೦೧೬ | ಐ ಡೋಂಟ್ ವಾಚ್ ಟಿವಿ | ಸ್ವತಃ | ಸನಾಯಾ, ನಕೂಲ್ ಮತ್ತು ಕರಣ್ ಪಟೇಲ್ ರವರ ಜೊತೆ | [೧೩] |
೨೦೧೬-೧೭ | ಪರ್ದೇಸ್ ಮೇ ಹೇ ಮೇರಾ ದಿಲ್ | ನೈನಾ ಬಟ್ರಾ | ಅರ್ಜುನ್ ಬಿಜ್ಲಾನಿ ವಿರುದ್ಧ | [೧೪] |
೨೦೧೭ | ನಚ್ ಬಲಿಯೇ ೮ | ಅತಿಥಿ | ಸನಾಯಾ ಮತ್ತು ಮೋಹಿತ್ ರವರನ್ನು ಬೆಂಬಲಿಸಲು | [೧೫] |
೨೦೧೮ | ಎ ಟೇಬಲ್ ಫಾರ್ ಟೂ | ಅತಿಥಿ | ನಕೂಲ್ ರವರ ಜೊತೆ | [೧೬] |
ಸಿಲ್ಸಿಲಾ ಬದಲ್ತೇ ರಿಶ್ತೋಂ ಕಾ | ನಂದಿನಿ ಮಲ್ಹೋತ್ರಾ | ಶಕ್ತಿ ಅರೋರಾ ವಿರುದ್ಧ | [೧೭] | |
ಡಾನ್ಸ್ ದಿವಾನೆ | ಅತಿಥಿ | ಸ್ಪರ್ಧಿಗಳನ್ನು ಬೆಂಬಲಿಸಲು | ||
ಬಿಗ್ ಬಾಸ್ ೧೨ | ಅತಿಥಿ | ಕರಣ್ವೀರ್ ರವರನ್ನು ಬೆಂಬಲಿಸಲು |
ವರ್ಷ | ಟಿವಿ ಪ್ರದರ್ಶನ | ಚಾನಲ್ | ಟಿಪ್ಪಣಿ |
---|---|---|---|
೨೦೧೦ | ಸಪ್ನಾ ಬಾಬುಲ್ ಕಾ...ಬಿದಾಯಿ | ಸ್ಟಾರ್ ಪ್ಲಸ್ | (ಕೊನೆಯ ಎಪಿಸೋಡ್ನಲ್ಲಿ ಹೀನಾ ಖಾನ್ ರೊಂದಿಗೆ ಪ್ರದರ್ಶನ ನೀಡಿದರು) |
೨೦೧೧ | ಚೋಟಿ ಬಹೂ - ಸವರ್ ಕೆ ರಂಗ್ ರಚಿ | ಝೀ ಟಿವಿ | (ಗುರ್ಮೀತ್ ಚೌದರಿ ಯೊಂದಿಗೆ ಪ್ರದರ್ಶನ ನೀಡಿದರು) |
ಪ್ಯಾರ್ ಕೀ ಯೆ ಏಕ್ ಕಹಾನಿ | ಸ್ಟಾರ್ ವನ್ | (ನಿಶಾಂತ್ ಮಲ್ಕಾನಿ ಯೊಂದಿಗೆ ಪ್ರದರ್ಶನ ನೀಡಿದರು) | |
ಸಾಜನ್ ರೆ ಜೂಟ್ ಮತ್ ಬೋಲೋ | ಸ್ಯಾಬ್ ಟಿವಿ | ನೃತ್ಯ ಪ್ರದರ್ಶನ | |
೨೦೧೨ | ನಾ ಬೋಲೆ ತುಮ್ ನಾ ಮೈನೆ ಕುಚ್ ಕಹಾ | ಕಲರ್ಸ್ | 'ಮಧುಬಾಲಾ' ದ ಪ್ರಚಾರಕ್ಕಾಗಿ |
೨೦೧೩ | ಇಸ್ಸ್ ಪ್ಯಾರ್ ಕೊ ಕ್ಯಾ ನಾಮ್ ದೂಂ?...ಏಕ್ ಬಾರ್ ಫಿರ್ | ಸ್ಟಾರ್ ಪ್ಲಸ್ | ಅತಿಥಿ |
೨೦೧೪ | ಬೇಯಿಂತಹಾ - ಜಝ್ಬಾತ್ ಕೆ ರಂಗ್ | ಕಲರ್ಸ್ | ಹೋಳಿ ವಿಶೇಷ |
೨೦೧೫ | ಕುಮ್ಕುಮ್ ಭಾಗ್ಯ | ಝೀ ಟಿವಿ | ಕ್ರಾಸ್ಓವರ್ ವಿಶೇಷ |
೨೦೧೬ | ಯೆ ಹೇ ಮೊಹಬ್ಬತೇಂ | ಸ್ಟಾರ್ ಪ್ಲಸ್ | ನೈನಾ |
ಸಾಥ್ ನಿಭಾನಾ ಸಾಥಿಯಾ | |||
೨೦೧೭ | ಯೆ ರಿಶ್ತಾ ಕ್ಯಾ ಕಹ್ಲಾತಾ ಹೈ | ||
೨೦೧೮ | ಶಕ್ತಿ - ಅಸ್ತಿತ್ವ ಕೆ ಎಹಸಾಸ್ ಕೀ | ಕಲರ್ಸ್ ಟಿವಿ | ನಂದಿನಿ [೧೮] |
ನಾಗಿನ್ ೩ | ರವಿ ದುಬೇ ಜೊತೆ | ||
೨೦೧೯ | ಗಟ್ಬಂಧನ್ | ಸ್ವತಃ/ಅತಿಥಿ [೧೯] |
ದ್ರಷ್ಟಿ ಯವರು ಕನ್ವಿರಾನ್ಮೆಂಟ್ ವೀಕ್ ೨೦೧೧ ಮತ್ತು ೨೦೧೩ ರ ಬ್ರಾಂಡ್ ಅಂಬಾಸಿಡರ್ ಆಗಿದ್ದರು.೨೦೧೬ ರಲ್ಲಿ ಅವರು ಸ್ವಚ್ಛ್ ಸರ್ವೇಕ್ಷಣ್ ೨೦೧೭ ರ ಭಾಗಿಯಾಗಿದ್ದರು[೨೦].ಧಾಮೀಯವರು ಟೀಮ್ 'ಡಿ' ಸೆಲೆಬ್ರಿಟಿ ಚಾಂಪಿಯನ್ ಶಿಪ್ ೨೦೧೬ ರ ನಾಯಕಿಯಾಗಿದ್ದರು.ಅವರು 'ಐ ಹೆಲ್ಪ್ ಎ ಕಿಡ್.ಕಾಮ್' ಸೆಲೆಬ್ರಿಟಿ ಚಾಂಪಿಯನ್ ಶಿಪ್ ನಿಂದ ಪ್ರಶಸ್ತಿಯನ್ನೂ ಪಡೆದಿದ್ದರು[೨೧].೨೦೧೭ ರಲ್ಲಿ ಅವರು 'ಬಜಾಜ್ ಬ್ರಾಹ್ಮೀ ಆಮ್ಲಾ ಆಯುರ್ವೇದಿಕ್ ಹೇರ್ ಆಯ್ಲ್' ನ ಬ್ರಾಂಡ್ ಅಂಬಾಸಿಡರ್ ಆದರು[೨೨].
೨೦೧೬ | ದಿ ಚೇಂಜ್ | ಕಿರು ಚಿತ್ರ | |
೨೦೧೭ | ಗೋಡ್ರೆಜ್ ಸೋಪ್ (ಕಮರ್ಷಿಯಲ್ ವಿಡಿಯೊ) | ಧಾಮೀಯವರು ರಾಗಿಣಿ ಖನ್ನಾ ಮತ್ತು ಏಕ್ತಾ ಕೌಲ್ ರೊಂದಿಗೆ ಬಾತ್ ಸೋಪ್ ಜಾಹೀರಾತನ್ನು ನೀಡಿದರು | [೨೩] |
೨೦೧೦ ರಲ್ಲಿ ಇಮ್ಯಾಜಿನ್ ಟಿವಿಯ ರಿಯಾಲಿಟಿ ಶೋ ಬಿಗ್ ಮನಿ: ಚೋಟಾ ಪಾರ್ದಾ ಬಡಾ ಗೇಮ್‌ನಲ್ಲಿ ಧಾಮಿ ಕಾಣಿಸಿಕೊಂಡರು. [೨೪] ಅದೇ ವರ್ಷದಲ್ಲಿ ಅವರು ಮತ್ತೊಂದು ರಿಯಾಲಿಟಿ ಶೋ, ನ್ಯಾಚ್ಲ್ ವೆ ವಿತ್ ಸರೋಜ್ ಖಾನ್ ನ ಭಾಗವಾಗಿದ್ದರು . ೨೦೧೧ ರಲ್ಲಿ, ಧಾಮಿ (ಅವರ ಗೀತ್ ಸಹನಟ ಗುರ್ಮೀತ್ ಚೌಧರಿ ಅವರೊಂದಿಗೆ) ವಿಶೇಷ ಹೋಳಿ ಸಂಚಿಕೆಗಾಗಿ ರುಬಿನಾ ದಿಲೈಕ್ ಮತ್ತು ಅವಿನಾಶ್ ಸಚ್‌ದೇವ್ ಅವರ ಚೋಟಿ ಬಹು - ಸಾವರ್ ಕೆ ರಂಗ್[೨೫] ರಾಚಿ ಅವರ ಅತಿಥಿ ನೃತ್ಯ ಪ್ರದರ್ಶನ ನೀಡಿದರು. ನಂತರ ಜುಲೈ ೨೦೧೧ ರಲ್ಲಿ, ಅವರು ಸಾಜನ್ ರೇ ಜೂಟ್ ಮತ್ ಬೋಲ್ ನಲ್ಲಿ ನೃತ್ಯ ಪ್ರದರ್ಶನ ನೀಡಿದರು ಮತ್ತು ನಂತರ ಡಿಸೆಂಬರ್ ೨೦೧೧ ರಲ್ಲಿ, ಧಾಮಿ ಪ್ಯಾರ್ ಕಿ ಯೆ ಏಕ್ ಕಹಾನಿಯಲ್ಲಿ ಕಾಣಿಸಿಕೊಂಡರು ಮತ್ತು ಅಭಯ್ ಮತ್ತು ಪಿಯಾ ಅವರ ವಿವಾಹವನ್ನು ಪ್ರಸಾರ ಮಾಡಿದ ಕೊನೆಯ ಕಂತಿನಲ್ಲಿ ಗುರ್ಮೀತ್ ಚೌದರಿ ಅವರೊಂದಿಗೆ ನೃತ್ಯ ಮಾಡಿದರು. ಜುಲೈ ೨೦೧೨ ರಲ್ಲಿ, ಧಾಮಿ ತನ್ನ ಧಾರವಾಹಿ ಮಧುಬಾಲಾದ ಪ್ರಚಾರಕ್ಕಾಗಿ ಕಲರ್ಸ್ ಟಿವಿಯ ನಾ ಬೋಲೆ ತುಮ್ ನಾ ಮೈನೆ ಕುಚ್ ಕಹಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು.
ವರ್ಷ | ಪ್ರಶಸ್ತಿ | ವರ್ಗ | ಪ್ರದರ್ಶನ | ಫಲಿತಾಂಶ |
---|---|---|---|---|
೨೦೧೧ | ಗೋಲ್ಡ್ ಪ್ರಶಸ್ತಿ | ಅತ್ಯಂತ ಪ್ರಸಿದ್ಧವಾದ ಜೋಡಿ
(ಗುರ್ಮೀತ್ ಚೌದರಿ ಜೊತೆ) |
ಗೀತ್ - ಹುಯೀ ಸಬ್ಸೇ ಪರಾಯಿ | ಗೆಲುವು[೨೬] |
ಬಿಗ್ ಟೆಲಿವಿಷನ್ ಪ್ರಶಸ್ತಿ | ಶ್ರೇಣಿಯ ಪಾತ್ರ | ನಾಮನಿರ್ದೇಶನ | ||
೨೦೧೨ | ಇಂಡಿಯನ್ ಟೆಲ್ಲಿ ಪ್ರಶಸ್ತಿ | ಅತ್ಯುತ್ತಮ ತೆರೆಯ ಜೋಡಿ
(ಗುರ್ಮೀತ್ ಚೌದರಿ ಜೊತೆ) |
ನಾಮನಿರ್ದೇಶನ | |
೨೦೧೩ | ಇಂಡಿಯನ್ ಟೆಲ್ಲಿ ಪ್ರಶಸ್ತಿ | ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ | ಮಧುಬಾಲಾ-ಏಕ್ ಇಷ್ಕ್ ಏಕ್ ಜುನೂನ್ | ನಾಮನಿರ್ದೇಶನ |
ಅತ್ಯುತ್ತಮ ಜೋಡಿ
(ವಿವಿಯನ್ ದ್ಸೇನಾ ಜೊತೆ) |
ಗೆಲುವು | |||
ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಪ್ರಶಸ್ತಿ | ಬಿಗ್ ಸ್ಟಾರ್ ಅತ್ಯಂತ ಮನರಂಜನೆಯ ಟೆಲಿವಿಷನ್ ನಟಿ | ನಾಮನಿರ್ದೇಶನ | ||
೨೦೧೪ | ಸ್ಟಾರ್ ಗಿಲ್ಡ್ ಪ್ರಶಸ್ತಿ | ಡ್ರಾಮಾ ಸರಣಿಯಲ್ಲಿ ಅತ್ಯುತ್ತಮ ನಟಿ | ಗೆಲುವು[೨೭] | |
ಗೋಲ್ಡ್ ಪ್ರಶಸ್ತಿ | ಅತ್ಯುತ್ತಮ ನಟಿ (ವಿಮರ್ಶಕರು) | ಗೆಲುವು[೨೮] | ||
ಇಂಡಿಯನ್ ಟೆಲ್ಲಿ ಪ್ರಶಸ್ತಿ | ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ | ನಾಮನಿರ್ದೇಶನ | ||
ಅತ್ಯುತ್ತಮ ತೆರೆಯ ಜೋಡಿ
(ವಿವಿಯನ್ ದ್ಸೇನಾ ಜೊತೆ) |
ನಾಮನಿರ್ದೇಶನ | |||
೨೦೧೮ | ಇಂಡಿಯನ್ ಟೆಲಿವಿಷನ್ ಅಕಾಡೆಮಿ ಪ್ರಶಸ್ತಿ | ಅತ್ಯುತ್ತಮ ನಟಿ (ಜನಪ್ರಿಯ) | ಸಿಲ್ಸಿಲಾ ಬದಲ್ತೇ ರಿಶ್ತೋಂ ಕಾ | ನಾಮನಿರ್ದೇಶನ |
೨೦೧೯ | ಲಯನ್ಸ್ ಗೋಲ್ಡ್ ಪ್ರಶಸ್ತಿ | ನಾಮನಿರ್ದೇಶನ |
{{cite news}}
: CS1 maint: numeric names: authors list (link)
{{cite web}}
: Italic or bold markup not allowed in: |publisher=
(help)
{{cite web}}
: Cite has empty unknown parameter: |dead-url=
(help)
{{citation}}
: Unknown parameter |deadurl=
ignored (help)