ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (July 2007) |
ಪ್ರಕಾರ | ಸಾರ್ವಜನಿಕ |
---|---|
ಸ್ಥಾಪನೆ | ೧೯೯೭ |
ಕುಲಪತಿಗಳು | ನರಸಿಂಹನ್, ರಾಜ್ಯಪಾಲರು ಆಂಧ್ರಪ್ರದೇಶ |
ಉಪ-ಕುಲಪತಿಗಳು | Prof.E. Sathyanarayana |
ಸ್ಥಳ | ಕುಪ್ಪಂ, ಆಂಧ್ರಪ್ರದೇಶ, ಭಾರತ |
ಆವರಣ | Urban |
ಮಾನ್ಯತೆಗಳು | UGC |
ಜಾಲತಾಣ | Official website |
ದ್ರಾವಿಡ ವಿಶ್ವವಿದ್ಯಾಲಯವು ದ್ರಾವಿಡ ಭಾಷಾ ಅಧ್ಯಯನಕ್ಕಾಗಿ ಹುಟ್ಟಿಕೊಂಡ ವಿಶ್ವವಿದ್ಯಾಲಯ. ಇದನ್ನು ೧೯೯೭ರಲ್ಲಿ ಸ್ಥಾಪಿಸಲಾಯಿತು. ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಆಶ್ರಯದಲ್ಲಿರುವ ಈ ವಿಶ್ವವಿದ್ಯಾಲಯಕ್ಕೆ ತನ್ನದೇ ಆದ ಮಹತ್ವವಿದೆ. ಈ ವಿಶ್ವವಿದ್ಯಾಲಯದಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ತುಳು ಭಾಷಾ ಅಧ್ಯಯನ ವಿಭಾಗಗಳಿವೆ. ಪ್ರತಿಯೊಂದು ಭಾಷಾ ವಿಭಾಗವನ್ನು ಅನುವಾದ ಅಧ್ಯಯನ ವಿಭಾಗವನ್ನಾಗಿ ಮಾರ್ಪಡಿಸಿ ಒಂದು ದ್ರಾವಿಡ ಭಾಷೆಯಲ್ಲಿನ ಕೃತಿಯನ್ನು ಮತ್ತೊಂದು ದ್ರಾವಿಡ ಭಾಷೆಗೆ ಅನುವಾದಿಸಲಾಗುತ್ತಿದೆ. ಅನುವಾದ ಕಾರ್ಯವನ್ನು ಕೈಗೊಳ್ಳಲು ಹುಟ್ಟಿಕೊಂಡಿರುವ ಇನ್ನೊಂದು ವಿಭಾಗ "ಅನುಸೃಜನ". ಈ ಮುದ್ದಾದ ಹೆಸರಿನಿಂದ ಅನುಸೃಜನ ವಿಭಾಗವು ವಿಶ್ವವಿದ್ಯಾಲಯದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ. ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪಾಂಡಿಚೇರಿಗಳ ಸಹಾಯ ಸಹಕಾರದೊಂದಿಗೆ ಆಂಧ್ರಪ್ರದೇಶದ ಮುಂದಾಳತ್ವದಲ್ಲಿ ಈ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು. ಕುಪ್ಪಂ ಭೌಗೋಳಿಕವಾಗಿ ಆಂಧ್ರಪ್ರದೇಶದಲ್ಲಿದ್ದರೂ ಇದು ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ಸರಹದ್ದಿನಲ್ಲಿದ್ದು. ಈ ಪ್ರಾಂತವು ತ್ರಿವೇಣಿ ಭಾಷಾ ಸಂಗಮವಾಗಿದೆ. ಇಂತಹ ವಿಶಿಷ್ಟ ಪ್ರದೇಶದಲ್ಲಿ ಸ್ಥಾಪನೆಯಾದ ಈ ವಿಶ್ವವಿದ್ಯಾಲಯ ಧ್ಯೇಯ ಉನ್ನತ ಮೌಲ್ಯಗಳನ್ನು ಹೊಂದಿದ್ದ ದ್ರಾವಿಡರ ಸಾಂಸ್ಕøತಿಕ ಹಿರಿಮೆಯನ್ನು ಜಗದಗಲ ಪರಸಿರುವುದಾಗಿದೆ. ದ್ರಾವಿಡ ಭಾಷೆ, ಸಂಸ್ಕೃತಿ, ಸಾಹಿತ್ಯಗಳ ಕುರಿತ ಸಂಶೋಧನೆಯನ್ನು ಮುಖ್ಯ ಉದ್ದೇಶವಾಗಿಟ್ಟುಕೊಂಡು ಆರಂಭಿಸಲಾದ ಈ ವಿಶ್ವವಿದ್ಯಾಲಯವು ಇಂದು ದಕ್ಷಿಣ ಭಾರತದ ಹೆಮ್ಮೆಯ ವಿಶ್ವವಿದ್ಯಾಲಯವಾಗಿ ಬೆಳೆದು ನಿಂತಿದೆ. ಇಲ್ಲಿ ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ತುಳು ಭಾಷಾ ಅಧ್ಯಯನ ವಿಭಾಗಗಳಿದ್ದು, ಇವು ಭಾಷೆ ಹಾಗೂ ಅನುವಾದ ಅಧ್ಯಯನದಲ್ಲಿ ತೊಡಗಿಸಿಕೊಂಡಿವೆ. ಹಾಗೆಯೇ ಇಲ್ಲಿ ದ್ರಾವಿಡ ಭಾಷೆ, ಸಂಸ್ಕೃತಿ, ಸಾಹಿತ್ಯಗಳ ಪ್ರಚಾರ ಹಾಗು ಪ್ರಕಟಣೆಗಾಗಿ ಪ್ರಸಾರಾಂಗವನ್ನು 2005ರಲ್ಲಿ ಸ್ಥಾಪಿಸಲಾಗಿದೆ. ಇಲ್ಲಿ ಕನ್ನಡ, ತೆಲುಗು, ತಮಿಳು, ಮಲೆಯಾಳಂ, ತುಳು ಹಾಗೂ ಆಂಗ್ಲ ಭಾಷೆಗಳಲ್ಲಿ ಪುಸ್ತಕಗಳನ್ನು ಪ್ರಕಟಿಸಲಾಗುತ್ತಿದೆ. ಇದುವರೆಗೆ 286 ಪುಸ್ತಕಗಳನ್ನು ಆರು ಭಾಷೆಗಳಲ್ಲಿ ಪ್ರಕಟಿಸಲಾಗಿದ್ದು. ಇವುಗಳಲ್ಲಿ ಕೆಲವು ದ್ರಾವಿಡ ಭಾಷೆ, ಸಂಸ್ಕøತಿ, ಸಾಹಿತ್ಯಕ್ಕೆ ಸಂಬಂಧಿಸಿದವುಗಳಾಗಿದ್ದು, ಇನ್ನು ಕೆಲವು ದ್ರಾವಿಡದ ಸೋದರ ಭಾಷೆಗಳಲ್ಲಿನ ಅತ್ಯುತ್ತಮ ಗ್ರಂಥಗಳನ್ನು ಇತರ ಭಾಷೆಗಳಿಗೆ ಅನುವಾದಿಸಲಾಗಿದೆ. ಆ ಮೂಲಕ ದಕ್ಷಿಣದ ರಾಜ್ಯಗಳ ಸಾಂಸ್ಕøತಿಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ.
ದ್ರಾವಿಡ ವಿಶ್ವವಿದ್ಯಾಲಯ ಇರುವ ಸ್ಥಳ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ಯ ಕುಪ್ಪಂನಿಂದ ೮ ಕಿ.ಮೀ. ದೂರದಲ್ಲಿದೆ. ದ್ರಾವಿಡ ವಿಶ್ವವಿದ್ಯಾಲಯದ ಪ್ರಾಂಗಣವನ್ನು ಶ್ರೀನಿವಾಸವನಂ ಎಂದು ಕರೆಯಲಾಗುತ್ತದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ೧೦೦ ಕಿ.ಮೀ. ದೂರದಲ್ಲಿದ್ದು ಚೆನೈಗೆ ತೆರಳುವ ರೈಲುಗಳು ಇದೇ ಮಾರ್ಗದಲ್ಲಿ ಹೋಗುತ್ತವೆ. ದೂರವಾಣಿ ಸಂಖ್ಯೆ : ೦೮೫೭೦-೨೭೮೨೨೦, ೨೭೮೨೩೬, ೨೦೨೫೯೮