ಧುವ್ಞಾಧಾರ್ ಜಲಪಾತವು (धुआंधार) ಭಾರತದ ಮಧ್ಯ ಪ್ರದೇಶ ರಾಜ್ಯದ ಜಬಲ್ಪುರ್ ಜಿಲ್ಲೆಯಲ್ಲಿರುವ ಒಂದು ಜಲಪಾತವಾಗಿದೆ.[೧]
ಧುವ್ಞಾಧಾರ್ ಶಬ್ದವು ಎರಡು ಹಿಂದಿ ಶಬ್ದಗಳಿಂದ ವ್ಯುತ್ಪನ್ನವಾಗಿದೆ - ಧುವ್ಞಾ (ಹೊಗೆ) + ಧಾರ್ (ಹರಿವು) ಅಂದರೆ ಹೊಗೆಯಂತಹ ಭಾವನೆ ಬರಿಸುವ ಜಲಪಾತ (ನೀರಿನ ಆವಿ ಅಥವಾ ಹೊಗೆ ಇಳಿತದಿಂದ ಈ ಹೊಗೆ ರೂಪಗೊಳ್ಳುತ್ತದೆ).
ಧುವ್ಞಾಧಾರ್ ಜಲಪಾತವು ನರ್ಮದಾ ನದಿಯ ಮೇಲೆ ಭೇಡಾಘಾಟ್‍ನಲ್ಲಿ ಸ್ಥಿತವಾಗಿದೆ ಮತ್ತು ಇದು ೩೦ ಮೀಟರ್ ಎತ್ತರವಿದೆ. ವಿಶ್ವಪ್ರಸಿದ್ಧ ಮಾರ್ಬಲ್ ರಾಕ್ಸ್ ಮೂಲಕ ದಾರಿ ಮಾಡಿಕೊಳ್ಳುವ ನರ್ಮದಾ ನದಿಯು ಕಿರಿದಾಗಿ ನಂತರ ಧುವ್ಞಾಧಾರ್ ಎಂದು ಕರೆಯಲ್ಪಡುವ ಜಲಪಾತದಲ್ಲಿ ಧುಮುಕುತ್ತದೆ. ಪುಟಿಯುವ ಮಂಜಿನ ರಾಶಿಯನ್ನು ಸೃಷ್ಟಿಸುವ ಈ ಧುಮುಕು ಎಷ್ಟು ಪ್ರಬಲವಾಗಿದೆಯೆಂದರೆ ಇದರ ಗರ್ಜನೆ ಬಹಳ ದೂರದಿಂದ ಕೇಳುತ್ತದೆ.