ನಟಸಾರ್ವಭೌಮ | |
---|---|
ನಿರ್ದೇಶನ | ಪವನ್ ಒಡೆಯರ್ |
ನಿರ್ಮಾಪಕ | ರಾಕ್ಲೈನ್ ವೆಂಕಟೇಶ್ |
ಪಾತ್ರವರ್ಗ | ಪುನೀತ್ ರಾಜಕುಮಾರ್ ಅನುಪಮ ಪರಮೇಶ್ವರನ್ ರಚಿತ ರಾಮ್ ಬಿ ಸರೋಜ ದೇವಿ ಚಿಕ್ಕಣ್ಣ ಪಿ ರವಿಶಂಕರ್ |
ಸಂಗೀತ | ಡಿ ಇಮ್ಮಾನ್ |
ಛಾಯಾಗ್ರಹಣ | ವೈದಿ ಎಸ್ |
ಸಂಕಲನ | ಮಹೇಶ್ ರೆಡ್ಡಿ |
ಸ್ಟುಡಿಯೋ | ರಾಕ್ಲೈನ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ |
ಬಿಡುಗಡೆಯಾಗಿದ್ದು |
|
ಅವಧಿ | 157 ನಿಮಿಷಗಳು |
ದೇಶ | ಭಾರತ |
ಭಾಷೆ | ಕನ್ನಡ |
ನಟಸಾರ್ವಭೌಮ ಪವನ್ ಒಡೆಯರ್ ನಿರ್ದೇಶನದ ಮತ್ತು ರಾಕ್ಲೈನ್ ವೆಂಕಟೇಶ್ ನಿರ್ಮಿಸಿರುವ ೨೦೧೯ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ.[೧] ಪುನೀತ್ ರಾಜಕುಮಾರ್, ಅನುಪಮಾ ಪರಮೇಶ್ವರನ್ ಮತ್ತು ರಚಿತಾ ರಾಮ್ ಮುಖ್ಯ ಪಾತ್ರಗಳಲ್ಲಿ ಮತ್ತು ಬಿ. ಸರೋಜಾ ದೇವಿ, ಪಿ. ರವಿಶಂಕರ್ ,ಚಿಕ್ಕಣ್ಣ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.[೨] ಇದಕ್ಕೆ ಡಿ. ಇಮ್ಮಾನ್ ಅವರ ಸಂಗೀತ ಸಂಯೋಜನೆಯಿದ್ದು ಮತ್ತು ವೈದಿ.ಎಸ್ ಅವರ ಛಾಯಾಗ್ರಹಣವಿದೆ. ಬಿಡುಗಡೆಯ ಮೊದಲ ದಿನವೇ ಕರ್ನಾಟಕದಲ್ಲಿ ಈ ಚಿತ್ರವು 1,394 ಪ್ರದರ್ಶನಗಳನ್ನು ಹೊಂದಿತ್ತು. [೩]
ಕೊಲ್ಕತ್ತದಿಂದ ಬೆಂಗಳೂರಿಗೆ ಬರುತ್ತಿದ್ದ ಗಗನ್ ದೀಕ್ಷಿತ ದಾಳಿಯಿಂದ ಘನಶ್ಯಾಮ ಯಾದವ ನನ್ನು ರಕ್ಷಿಸುತ್ತಾನೆ. ಅದು ಯಾದವ್ ಮತಕ್ಕಾಗಿ ಮಾಡಿಸಿದ ನಕಲಿ ದಾಳಿ ತಿಳಿದು ತನ್ನ ಪತ್ರಿಕಾ ಸಂಪಾದಕ ಅವಿನಾಶ ಸುದ್ದಿ ಪ್ರಕಟಿಸುತ್ತಾನೆ. ತಾನು ನಕಲಿ ದಾಳಿ ಮಾಡಿಸಿದ ಸುದ್ದಿ ಕಂಡು ಯಾದವ ಕೋಪಗೊಳ್ಳುತ್ತನೆ. ಗಗನ್ ತನ್ನ ಸ್ನೇಹಿತ ಕೇಶವ ನನ್ನು ಭೇಟಿಯಾಗಿ ಯಾರೊ ಒಬ್ಬರ ಫೋನಿಗೆ ಕರೆ ಮಾಡಲು ಪ್ರಯತ್ನಿಸಿದಾಗ ವಿಫಲಗೊಳ್ಳುವನು.
ಸಂ. | ಹಾಡು | ಸಾಹಿತ್ಯ | ಗಾಯಕರು | ಸಮಯ |
---|---|---|---|---|
1. | "ಒಪನ್ ದಿ ಬಾಟಲ್" | ಯೋಗರಾಜ್ ಭಟ್ | ವಿಜಯ್ ಪ್ರಕಾಶ್ | 05:15 |
2. | "ನಟಸಾರ್ವಭೌಮ ಶೀರ್ಷಿಕೆ ಹಾಡು / ಡಾನ್ಸ್ ವಿತ್ ಅಪ್ಪು" | ಪವನ್ ಒಡೆಯರ್ | ಸ೦ಜೀತ್ ಹೆಗ್ಡೆ, ಆಂಟೊನಿ ದಾಸನ್, ಜಿತಿನ್ ರಾಜ್ | 04:45 |
3. | "ಯಾರೊ ನಾನು" | ಕವಿರಾಜ್ | ಶ್ರೇಯಾ ಘೋಷಾಲ್ | 04:25 |
4. | "ತಾಜಾ ಸಮಾಚಾರ (ಪು)" | ಜಯಂತ್ ಕಾಯ್ಕಿಣಿ | ಜಿತಿನ್ ರಾಜ್ | 04:50 |
5. | "ತಾಜಾ ಸಮಾಚಾರ (ಹೆ)" | ಜಯಂತ್ ಕಾಯ್ಕಿಣಿ | ವಂದನ ಶ್ರೀನಿವಾಸನ್ | 04:50 |
6. | "ಪಾರನಾರ್ಮಲ್ ಆಕ್ಶನ್" | 02:35 | ||
7. | "ಪವರ್ ಪ್ಲೇ" | 00:55 |
ಚಲನಚಿತ್ರದ ಮೊದಲ ಚಿತ್ರವನ್ನು ಪುನಿತ್ ಅವರ ಹುಟ್ಟುಹಬ್ಬದ ಪ್ರಯುಕ್ತ ೧೭ಮಾರ್ಚ್ ೨೦೧೮ರಂದು ಬಿಡುಗಡೆ ಮಾಡಲಾಯಿತು. ಸಿನಿಮಾ ಟೀಸರ್ ೨೧ ಡಿಸಂಬರಂದು ಬಿಡುಗಡೆ ಮಾಡಲಾಯಿತು. ಟ್ರೇಲರ್ ೨೫ ಜನವರಿ ೨೦೧೯ ಬಿಡುಗಡೆ ಮಾಡಲಾಯಿತು. [೮] [೯] [೧೦] [೧೧] [೧೨] [೧೩]
{{cite news}}
: Unknown parameter |dead-url=
ignored (help)
{{cite web}}
: Unknown parameter |dead-url=
ignored (help)
{{cite web}}
: Unknown parameter |dead-url=
ignored (help)
{{cite web}}
: Unknown parameter |dead-url=
ignored (help)
{{cite web}}
: Unknown parameter |dead-url=
ignored (help)