ವೈಯುಕ್ತಿಕ ಮಾಹಿತಿ | ||||||||||||||
---|---|---|---|---|---|---|---|---|---|---|---|---|---|---|
ಪುರ್ಣ ಹೆಸರು | ನವಜೀತ್ ಕೌರ್ ಧಿಲ್ಲೋನ್ | |||||||||||||
ರಾಷ್ರೀಯತೆ | ಭಾರತೀಯರು | |||||||||||||
ಜನನ | ಅಮೃತಸರ, ಭಾರತ[೧] | ೬ ಮಾರ್ಚ್ ೧೯೯೫|||||||||||||
Sport | ||||||||||||||
ದೇಶ | ಭಾರತ | |||||||||||||
ಕ್ರೀಡೆ | ಅಥ್ಲೆಟಿಕ್ಸ್ | |||||||||||||
ಸ್ಪರ್ಧೆಗಳು(ಗಳು) | ಚಕ್ರ ಎಸೆತ | |||||||||||||
Achievements and titles | ||||||||||||||
ವೈಯಕ್ತಿಕ ಪರಮಶ್ರೇಷ್ಠ | ಚಕ್ರ ಎಸೆತ: ೫೯.೧೮ ಮೀ (೨೦೧೮) | |||||||||||||
ಪದಕ ದಾಖಲೆ
|
ನವಜೀತ್ ಕೌರ್ ಧಿಲ್ಲೋನ್ (ಜನನ ೬ ಮಾರ್ಚ್ ೧೯೯೫) ಒಬ್ಬ ಭಾರತೀಯ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಆಗಿದ್ದು ಇವರು ಚಕ್ರ ಎಸೆತಗಾರರಾಗಿ ಸ್ಪರ್ಧಿಸುತ್ತಾರೆ. ಮಹಿಳೆಯರ ಡಿಸ್ಕಸ್ ಥ್ರೋ ವಿಭಾಗದಲ್ಲಿ ಮಹಿಳೆಯರ ೪೧೬೫ ಒಟ್ಟಾರೆ ಶ್ರೇಯಾಂಕದಲ್ಲಿ ಅವರ ಪ್ರಸ್ತುತ ವಿಶ್ವ ಶ್ರೇಯಾಂಕವು ೪೬ ಆಗಿದೆ. [೨] ಅವರು ೨೦೧೮ ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ, ಅಂತಿಮ ೫೭.೪೩ ಮೀ ಎಸೆತದೊಂದಿಗೆ ಕಂಚಿನ ಪದಕ ವಿಜೇತರಾಗಿದ್ದರು ಮತ್ತು ೨೦೧೪ ರಲ್ಲಿ ಅಥ್ಲೆಟಿಕ್ಸ್ನಲ್ಲಿ ವಿಶ್ವ ಜೂನಿಯರ್ ಚಾಂಪಿಯನ್ಶಿಪ್ನಲ್ಲಿ ಪದಕ ಗೆದ್ದ ಎರಡನೇ ಭಾರತೀಯರಾದರು. ಅವರು ೫೯.೧೮ ರ ವೈಯಕ್ತಿಕ ಶ್ರೇಷ್ಠತೆಯನ್ನು ಹೊಂದಿದ್ದಾರೆ.
ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ನ ಕಂಚಿನ ಪದಕಕ್ಕಾಗಿ ತಮ್ಮ ನಗದು ಪ್ರಶಸ್ತಿಯನ್ನು ಸ್ವೀಕರಿಸಲು ಧಿಲ್ಲೋನ್ ಅವರು ಎರಡು ವರ್ಷಗಳಿಗೂ ಹೆಚ್ಚು ಕಾಲ ಕಾಯಬೇಕಾಯಿತು. ಅವರು ಪಂಜಾಬ್ ಸರ್ಕಾರದಿಂದ ಉದ್ಯೋಗದ ಪ್ರಸ್ತಾಪವನ್ನು ಸ್ವೀಕರಿಸುವ ಭರವಸೆಯನ್ನು ಹೊಂದಿದ್ದರು. [೩] ಅವರು ಪ್ರಸ್ತುತ ಆದಾಯ ತೆರಿಗೆ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. [೪]
ಜೂನ್ ೨೦೨೨ ರಲ್ಲಿ ಡೋಪಿಂಗ್ ಉಲ್ಲಂಘನೆಯ ನಂತರ, ಅವರನ್ನು ಮೂರು ವರ್ಷಗಳ ಅವಧಿಯವರೆಗೆ ನಿಷೇಧಿಸಲಾಯಿತು. [೫]
ಅಮೃತಸರದಲ್ಲಿ ಜನಿಸಿದ ಧಿಲ್ಲೋನ್ ೨೦೧೦ ರಲ್ಲಿ ಚಕ್ರ ಎಸೆತದಲ್ಲಿ ಭಾರತೀಯ ಜೂನಿಯರ್ ಪ್ರಶಸ್ತಿಯನ್ನು ಮತ್ತು ೨೦೧೧ ರಲ್ಲಿ ರಾಷ್ಟ್ರೀಯ ಯುವ ಪ್ರಶಸ್ತಿಯನ್ನು ಗೆದ್ದರು. ಅವರು ೨೦೧೧ ರ ವಿಶ್ವ ಯುವ ಚಾಂಪಿಯನ್ಶಿಪ್ನಲ್ಲಿ ಅಥ್ಲೆಟಿಕ್ಸ್ನಲ್ಲಿ ತಮ್ಮ ಅಂತರಾಷ್ಟ್ರೀಯ ಚೊಚ್ಚಲ ಅರ್ಹತೆಯಲ್ಲಿ ಸ್ಪರ್ಧಿಸಿ ಪ್ರವೇಶ ಪಡೆದರು. [೬]೨೦೧೧ ರ ಕಾಮನ್ವೆಲ್ತ್ ಯೂತ್ ಗೇಮ್ಸ್ನಲ್ಲಿ ತಮ್ಮ ಮೊದಲ ಪದಕವನ್ನು (ಕಂಚಿನ) ಗೆದ್ದರು. [೭] ಧಿಲ್ಲೋನ್ ೨೦೧೨ ರ ಭಾರತೀಯ ಜೂನಿಯರ್ ಚಾಂಪಿಯನ್ಶಿಪ್ನಲ್ಲಿ ಶಾಟ್ಪುಟ್ / ಡಿಸ್ಕಸ್ ಡಬಲ್ನಲ್ಲಿ ಗೆದ್ದರು. ೨೦೧೨ ರ ಏಷ್ಯನ್ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕವನ್ನು ಪಡೆದರು. [೮]
೨೦೧೩ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಶಾಟ್ಪುಟ್ ಮತ್ತು ಡಿಸ್ಕಸ್ ಎರಡರಲ್ಲೂ ಸ್ಪರ್ಧಿಸುವ ಮೂಲಕ ಧಿಲ್ಲೋನ್ ೨೦೧೩ ರ ಸೀಸನ್ನಲ್ಲಿ ಸೀನಿಯರ್ ಶ್ರೇಣಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು. [೬] ೨೦೧೪ ರ ಏಷ್ಯನ್ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ವಿವಿಧ ವಯಸ್ಸಿನ ವಿಭಾಗದಲ್ಲಿ ಪದಕಗಳು ಬಂದವು. ಅಲ್ಲಿ ಅವರು ಶಾಟ್ಪುಟ್ನಲ್ಲಿ ಮೂರನೇ ಸ್ಥಾನ ಮತ್ತು ಡಿಸ್ಕಸ್ನಲ್ಲಿ ಎರಡನೇ ಸ್ಥಾನ ಪಡೆದರು. [೯] ಅವರು ೨೦೧೪ ರ ಅಥ್ಲೆಟಿಕ್ಸ್ನಲ್ಲಿ ವಿಶ್ವ ಜೂನಿಯರ್ ಚಾಂಪಿಯನ್ಶಿಪ್ನಲ್ಲಿ ೫೬.೩೬ ರ ವೈಯಕ್ತಿಕ ಅತ್ಯುತ್ತಮ ಚಕ್ರ ಎಸೆತದೊಂದಿಗೆ ಕಂಚಿನ ಪದಕವನ್ನು ಪಡೆದು ಪ್ರಗತಿ ಸಾಧಿಸಿದರು.
೨೦೧೪ ಮತ್ತು ೨೦೧೫ ರಲ್ಲಿ ಡಿಸ್ಕಸ್ನ ರಾಷ್ಟ್ರೀಯ ವೇದಿಕೆಯಲ್ಲಿ ಧಿಲ್ಲೋನ್ ರವರು ಅಗ್ರಸ್ಥಾನದಲ್ಲಿದ್ದರು. ಅವರು ಹಿರಿಯರ ಶ್ರೇಣಿಗೆ ಸೇರಿದರು, ಜೊತೆಗೆ ೨೦೧೫ ರ ಭಾರತದ ರಾಷ್ಟ್ರೀಯ ಕ್ರೀಡಾಕೂಟದ ಶಾಟ್ಪುಟ್ ಹಾಗೂ ಚಕ್ರ ಎಸೆತ ಎರಡರಲ್ಲಿಯೂ ಭಾಗವಹಿಸಿದ್ದಾರೆ. ೨೦೧೫ ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ ಡಿಸ್ಕಸ್ನಲ್ಲಿ ಆರನೇ ಸ್ಥಾನ ಪಡೆದಿದ್ದರು. ಅವರು ೨೦೧೬ ಮತ್ತು ೨೦೧೭ ರಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲಿಲ್ಲ. ಆದರೂ ಅವರು ಆ ವರ್ಷಗಳಲ್ಲಿ ಶಾಟ್ಪುಟ್ ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದರು ಮತ್ತು ರಾಷ್ಟ್ರೀಯ ಡಿಸ್ಕಸ್ನಲ್ಲಿ ರನ್ನರ್ ಅಪ್ ಆಗಿದ್ದರು. [೬] ಧಿಲ್ಲೋನ್ ೨೦೧೮ ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಕ್ರ ಎಸೆತದಲ್ಲಿ ಕಂಚಿನ ಪದಕವನ್ನು ಗೆದ್ದರು - ಇದು ಅವರ ಮೊದಲ ಅಂತರರಾಷ್ಟ್ರೀಯ ಪದಕ. [೧೦] [೧೧]