ನವನೀತ ದೇವ ಸೇನ್

ನವನೀತ ದೇವ ಸೇನ್
ನವನೀತ ದೇವ ಸೇನ್‌‌‌ರ ಭಾವಚಿತ್ರ
ಜನನ೧೩ ಜನವರಿ ೧೯೩೮
ಕೊಲ್ಕತ್ತ, ಬಂಗಾಳ, ಭಾರತ
ವೃತ್ತಿಕಾದಂಬರಿಕಾರ, ಮಕ್ಕಳ ಲೇಖಕಿ, ಕವಿಯತ್ರಿ,
ರಾಷ್ಟ್ರೀಯತೆಭಾರತೀತ
ಜನಾಂಗೀಯತೆಬಂಗಾಳ ಹಿಂದು
ಬಾಳ ಸಂಗಾತಿಡಾ. ಅಮರ್ತ್ಯ ಸೇನ್(ವಿಚ್ಛೇದನ ವ್ಯಕ್ತಿ)
ಮಕ್ಕಳುಅಂತರ ದೇವ ಸೇನ್(ಮಗಳು)
ನಂದನ ಸೇನ್(ಮಗಳು)

ನವನೀತ ದೇವ ಸೇನ್,ಬಂಗಾಳಿ ಕವಿಯತ್ರಿ ೧೯೩೮ ಜನವರಿ ೧೩ರಂದು ಜನಿಸಿದರು. ಒಬ್ಬ ಪ್ರಶಸ್ತಿ ವಿಜೇತ ಭಾರತೀಯ ಕವಿಯತ್ರಿ ಹಾಗು ಕಾದಂಬರಿಕಾರರು.[]

ವೈಯಕ್ತಿಕ ಜೀವನ

[ಬದಲಾಯಿಸಿ]

ನವನೀತ ದೇವ ಸೇನ್ ಕೊಲ್ಕತ್ತದಲ್ಲಿ ನರೇಂದ್ರ ದೇವ್ ಮತ್ತು ರಾಧಾರಾಣೀ ದೇವಿ ದಂಪತಿಗಳ ಮಗಳು . ಬಂಗಾಳಿ ಮತ್ತು ಇಂಗ್ಲೀಷ್ ಓದುವುದರ ಜೊತೆಗೆ, ಅವರು ಹಿಂದಿ, ಒರಿಯಾ, ಅಸ್ಸಾಮಿ, ಫ್ರೆಂಚ್, ಜರ್ಮನ್, ಸಂಸ್ಕೃತ, ಮತ್ತು ಹೀಬ್ರೂ ಭಾಷೆಗಳನ್ನೂ ಓದುತ್ತಾರೆ. ೧೯೫೮ ರಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು, ಅದರ ಮುಂದಿನ ವರ್ಷ ಅಮರ್ತ್ಯ ಸೇನ್ರವರನ್ನು ವಿವಾಹವಾದರು. ೧೯೭೬ರಲ್ಲಿ ಇವರಿಬ್ಬರು ವಿಚ್ಛೇದನ ಪಡೆದರು, ಇದರ ನಂತರ ಅವರ ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋದರು.[] ನಭನೀತ ದೇವ ಸೇನ್‌ರವರು ಕೋಲ್ಕತ್ತಾದಲ್ಲಿಯ ಅವಳ ಪೋಷಕರ ಮನೆ, ಭಾಲೊ-ಬಸಾಯಲ್ಲಿ ವಾಸವಿದ್ದರು, ಈಗ ಅದು ಒಂದು ಪರಂಪರೆಯ ಕಟ್ಟಡವೆಂದು ಘೋಷಿಸಲಾಗಿದೆ. ಅವರ ಮಾಜಿ ಪತಿ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರಿಂದ ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಅಮರ್ತ್ಯ ಸೇನ್ ಹಾಗೂ ನಂದನ ಸೇಸ್. ಒಬ್ಬಳು ದತ್ತುಪುತ್ರಿ ಸ್ರಬಸ್ತಿ ಬಸು.

ಶೈಕ್ಷಣಿಕ ಹಿನ್ನೆಲೆ

[ಬದಲಾಯಿಸಿ]

ಅವರು ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಓದಿದರು ಮತ್ತು ಜಾದವ್‌ಪುರ ವಿಶ್ವವಿದ್ಯಾಲಯ, ಕಲ್ಕತ್ತಾದಿಂದ ತನ್ನ ಸ್ನಾತಕೋತ್ತರ ಪದವಿಯನ್ನು ಪಡೆದರು. ಹಾರ್ವರ್ಡ್ ವಿಶ್ವವಿದ್ಯಾನಿಲಯದಿಂದ ಅತೀ ಹೆಚ್ಚು ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಪಡೆದರು. ಅವರು ಇಂಡಿಯಾನಾ ವಿಶ್ವವಿದ್ಯಾಲಯದಲ್ಲಿ ತನ್ನ ಪಿ.ಎಚ್‌ಡಿ ಪಡೆದರು.[]

ನವನೀತ ದೇವ ಸೇನ್ ಬರ್ಕ್ಲಿಯದ ಕ್ಯಾಲಿಫೊರ್ನಿಯ ವಿಶ್ವವಿದ್ಯಾಲಯ ಮತ್ತು ನ್ಯೂಹಮ್ ಕಾಲೇಜ್, ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ತನ್ನ ಸ್ನಾತಕೋತ್ತರ ವೈದ್ಯಕೀಯ ಸಂಶೋಧನೆಯನ್ನು ಸಂಪೂರ್ಣಗೊಳಿಸಿದರು. ಅವರು ದೆಹಲಿ ವಿಶ್ವವಿದ್ಯಾಲಯ ಧನಸಹಾಯ ಆಯೋಗದಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು .

ವೃತ್ತಿಪರ ಹಿನ್ನೆಲೆ

[ಬದಲಾಯಿಸಿ]

ನವನೀತ ದೇವ ಸೇನ್ ಅನೇಕ ಅಂತರಾಷ್ಟ್ರೀಯ ಕಲಾವಿದರ ವಸಾಹತುಗಳ ನಿವಾಸದಲ್ಲಿ ಬರಹಗಾರರಾಗಿದ್ದಾರೆ, ಇವುಗಳಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿಯ, ಯಡ್ಡೋ ಮತ್ತು ಮೇಕ್ಡಾವೆಲ್ ಕಾಲೋನೀ ಸೇರಿದಂತೆ ; ಇಟಲಿಯಲ್ಲಿ ಬೆಲ್ಲಾಜ್ಜಿಯೊ ಒಂದು. ಅವರು ಅತಿಥಿ ಪ್ರಾಧ್ಯಾಪಕರಾಗಿ ಹಾರ್ವರ್ಡ್, ಕಾರ್ನೆಲ್, ರುಟ್ಜರ್ಸ್,ಯೆರೂಸಲೇಮಿನಲ್ಲಿ ಮಿಶ್ಕೆನಾಟ್ ಶಾ'ಅನಮಿನ್, ಕೊಲಂಬಿಯಾ, ಸ್ಮಿತ್ ಕಾಲೇಜ್ ಚಿಕಾಗೊ ಸೇರಿದಂತೆ ಯುನೈಟೆಡ್ ಸ್ಟೇಟ್ಸ್ನನ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಕಾರ್ಯ ನಿರ್ವಹಿಸಿದರು. ಇವರು ಸಂದರ್ಶಕ ಸೃಜನಶೀಲ ಬರಹಗಾರರು. ಕೆನಡಾದಲ್ಲಿ, ಟೊರೊಂಟೊ, ಯಾರ್ಕ್ ಮತ್ತು ಬ್ರಿಟಿಷ್ ಕೊಲಂಬಿಯಾದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ಅವರು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಇತರ ದೇಶಗಳೆಂದರೆ ಮೆಕ್ಸಿಕೋ, ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್ ಮತ್ತು ಜಪಾನ್. ನವನೀತ ದೇವ ಸೇನ್ ಮಹಾಕಾವ್ಯ ಕುರಿತು ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ರಾಧಾಕೃಷ್ಣನ್‌ರ ಸ್ಮಾರಕ ಉಪನ್ಯಾಸ ಸರಣಿಗಳನ್ನು (೧೯೯೬-೧೯೯೭) ಭೊದನೆ ಮಾಡಿದ್ದರೆ.

ಅವರು ಕೊಲೊರೆಡೊ ಕಾಲೇಜಿನಲ್ಲಿ ೧೯೮೮-೧೯೮೯ ಕ್ರಿಯಾಶೀಲ ಬರವಣಿಗೆ ಮತ್ತು ತುಲನಾತ್ಮಕ ಸಾಹಿತ್ಯದ ಮೇತ್ಯಾಗ್ ಚೇರ್ ಆಯೋಜಿಸಿದ್ದಾರೆ. ಅವರು ಶೈಕ್ಷಣಿಕ ಮತ್ತು ಸಾಹಿತ್ಯ ಎರಡರಲ್ಲೂ ಅನೇಕ ಅಂತಾರಾಷ್ಟ್ರೀಯ ಸಮ್ಮೇಳನಗಳಿಗೆ ಸ್ವತಃ ತಮ್ಮನ್ನು ಮತ್ತು ಭಾರತವನ್ನು ಪ್ರತಿನಿಧಿಸಿದ್ದರು.

ಅವರು ಅಂತರರಾಷ್ಟ್ರೀಯ ತುಲನಾತ್ಮಕ ಸಾಹಿತ್ಯ ಅಸೋಸಿಯೇಷನ್ (೧೯೭೩-೧೯೭೮), ಸೀಮಿಯಾಟಿಕ್ ಮತ್ತು ರಚನಾತ್ಮಕ ಅಧ್ಯಯನಗಳ ಅಂತರಾಷ್ಟ್ರೀಯ ಸಂಸ್ಥೆ (೧೯೮೯-೧೯೯೪) ನಂತರ ಅಂತರರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರಮುಖ ಕಾರ್ಯನಿರ್ವಾಹಕಿ ಸ್ಥಾನಗಳನ್ನು ಹೊಂದಿದ್ದರು. ಅವರು ಭಾರತೀಯ ರಾಷ್ಟ್ರೀಯ ತುಲನಾತ್ಮಕ ಸಾಹಿತ್ಯ ಸಂಘದ ಉಪಾಧ್ಯಕ್ಷರಾಗಿದ್ದರು; ಮೆಕ್ಮಿಲನ್ ಆಧುನಿಕ ಭಾರತೀಯ ಕಾದಂಬರಿ ಸರಣಿಯಲ್ಲಿನ ಬಂಗಾಳಿಯ ಮುಖ್ಯ ಸಂಪಾದಕಿಯಾಹಿದ್ದರು. ಅವರು ಜ್ಞಾನಪೀಠ ಪ್ರಶಸ್ತಿ, ಸರಸ್ವತಿ ಸಮ್ಮಾನ್, ಕಬೀರ್ ಸಮ್ಮಾನ್ ಮತ್ತು ರವೀಂದ್ರ ಪುರಸ್ಕಾರ ಸೇರಿದಂತೆ ಪ್ರಮುಖ ಸಾಹಿತ್ಯಿಕ ಪ್ರಶಸ್ತಿಗಳ ಸದಸ್ಯರನ್ನು ಆಯ್ಕೆ ಮಾಡುವ ತೀರ್ಪುಗಾರಗಿಯೂ ಸೇವೆ ಸಲ್ಲಿಸಿದ್ದಾರೆ. ನವನೀತ ದೇವ ಸೇನ್ ಬಂಗಿಯ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿದ್ದಾರೆ.

ಅವರು ಪಶ್ಚಿಮ ಬಂಗಾಳ ಮಹಿಳಾ ಬರಹಗಾರ ಸಂಘದ ಸ್ಥಾಪಕರು ಮತ್ತು ಅಧ್ಯಕ್ಷರಾಗಿದ್ದಾರೆ. ೨೦೦೨ ರಲ್ಲಿ, ನವನೀತ ದೇವ ಸೇನ್ ಜಾದವ್ಪುರ ವಿಶ್ವವಿದ್ಯಾಲಯ, ಕಲ್ಕತ್ತಾದಲ್ಲಿ ತುಲನಾತ್ಮಕ ಸಾಹಿತ್ಯ ಪ್ರಾಧ್ಯಾಪಕರಾಗಿ ನಿವೃತ್ತಿಯಾದರು. ಅವರು ಪ್ರಪಂಚದ ಮಹಾಕಾವ್ಯಗಳಲ್ಲಿ ಮಹಿಳೆಯರ ಸ್ಥಾನವನ್ನು ಹಾಗು ಪುರಾಣ ಕಾವ್ಯಗಳ ಬಗ್ಗೆ ಭಾರತದ ಗ್ರಾಮೀಣ ಮಹಿಳೆಯರಿಗೆ ಇದ್ದಂತಹ ಪಭಿಪ್ರಾಯದ ಬಗ್ಗೆ ಅಧ್ಯಯನಗಳನ್ನು ಮಾಡಿದ್ದಾರೆ. ನವನೀತ ದೇವ ಸೇನ್‌‌ರವರು ಮಹಿಳಾ ಅಭಿವೃದ್ಧಿ ಅಧ್ಯಯನ ಕೇಂದ್ರ, ದಹಲಿ(೨೦೦೩-೨೦೦೫)ರಲ್ಲಿ ಜೆಪಿ ನಾಯಕ್‌ನ ಗಣ್ಯ ವೆಕ್ತಿಯಾಗಿ ನೇಮಕಗೊಂಡರು. ಅಲ್ಲಿ ಅವರು ಚಂದ್ರಬತಿಯವರು ಬರೆದ ೧೬ನೇಯ ಶತಮಾನದ ರಾಮಾಯಣವನ್ನು ಆಂಗ್ಲಾ ಭಾಷೆಗೆ ಅನುವಾದಿಸುತ್ತಿದ್ದರು. ಒಳ್ಳೆಯ ಮುನ್ನುಡಿ ಮತ್ತು ವಿವರಣೆಯನ್ನು ನೀಡಿದರು.


ಪ್ರಶಸ್ತಿಗಳು

[ಬದಲಾಯಿಸಿ]
ನವನೀತ ದೇವ ಸೆನ್ - ಕೋಲ್ಕತ್ತ ೨೦೧೩ ಫೆಬ್ರವರಿ ೦೩

ನವನೀತ ದೇವ ಸೇನ್ ಅವರು ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಮತ್ತು ಗೌರವಗಳನ್ನು ಸ್ವೀಕರಿಸಿದ್ದಾರೆ,ಸೇರಿದಂತೆ

  • ಗೌರಿದೇವಿ ಸ್ಮಾರಕ ಪ್ರಶಸ್ತಿ
  • ಮಹಾದೇವಿ ವರ್ಮ ಪ್ರಶಸ್ತಿ (೧೯೯೨)
  • ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ
  • ಹಾರ್ಮನಿ ಪ್ರಶಸ್ತಿ
  • ಪದ್ಮಶ್ರೀ (೨೦೦೦)[]
  • ರಾಕ್ಫೆಲ್ಲರ್ ಪ್ರತಿಷ್ಠಾನ ಸೆಲ್ಲಿ ಪ್ರಶಸ್ತಿ, (೧೯೯೩)
  • ಬಿಹಾರದ ಬಾಗಲ್‌ಪುರ್ ವಿಶ್ವವಿದ್ಯಾಲಯದಿಂದ ಶರತ್ ಪ್ರಶಸ್ತಿ (೧೯೯೪)[]
  • ಪ್ರಸಾದ್ ಪುರಸ್ಕಾರ
  • ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೯೯).[]

ಪ್ರಕಟಿತ ಕೃತಿಗಳು

[ಬದಲಾಯಿಸಿ]

ನವನೀತ ದೇವ ಸೇನ್ ಬಂಗಾಳಿಯಲ್ಲಿ ೮೦ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ: ಇದರಲ್ಲಿ ಕಾವ್ಯ, ಕಾದಂಬರಿಗಳು, ಸಣ್ಣ ಕಥೆಗಳು, ನಾಟಕಗಳು, ಸಾಹಿತ್ಯ ವಿಮರ್ಶೆ, ವೈಯಕ್ತಿಕ ಪ್ರಬಂಧಗಳು, ಪ್ರವಾಸ, ಹಾಸ್ಯ ಬರಹ, ಭಾಷಾಂತರ, ಕವನ ಮತ್ತು ಮಕ್ಕಳ ಸಾಹಿತ್ಯಗಳು ಇವೆ.ಅವಳ ಮೊದಲ ಕವನ ಸಂಕಲನ ಪ್ರಥಮ್ ಪ್ರತ್ಯಯ್ ೧೯೫೯ರಲ್ಲಿ ಪ್ರಕಟಿಸಲಾಯಿತು.

ನವನೀತ ದೇವ ಸೇನ್ ನಕ್ಸಲೈಟ್ ಮೂವ್‌ಮೆಂಟ್ (ಅಮಿ ಅನುಪಮ್, ೧೯೭೬), ಐಡೆನ್‌ಟಿಟಿ ಕ್ರಿಸಿಸ್ ಆಫ್ ದಿ ಇಂಡಿಯನ್ ರೈಟಿಂಗ್ ಇನ್ ಇಂಗ್ಲಿಷ್ (೧೯೭೭), ದಟ್ ಆಫ್ ದಿ ಸೆಕೆಂಡ್ ಜೆನೆರೇಶನ್ ಎನ್‌.ಆರ್‌.ಐ(೧೯೮೫), ಬ್ರೆಕ್ ಡೌನ್ ಆಫ್ ದಿ ಜಾಹಿನ್ಟ್ ಫ಼ಾಮಿಲಿ, ಲೈಫ್ ಇನ್ ಒಲ್ಡ್ ಎಜ್ ಹೋಮ್ಸ್(೧೯೮೮), ಹೋಮೊಸೆಕ್ಷುವಾಲಿಟಿ(೧೯೯೫), ಫ಼ೆಸಿಂಗ್ ಎಡ್ಸ್(೧೯೯೯,೨೦೦೨),ಮಕ್ಕಳ ದುರುಪಯೋಗ, ಮತ್ತು ಗೀಳು, ವಲಸೆ ಹಾಗೂ ದೇಶಭ್ರಷ್ಟತೆ ಇವರ ಪುಸ್ತಕದಲ್ಲಿ ಮುಖ್ಯ ವಿಷಯವಾಗಿತ್ತು. ಅದರಲ್ಲಿಯೂ ಮಹಿಳೆಗೆ ಪ್ರಮುಖ ಪಾತ್ರದಾರಿ ಆಗಿರುತ್ತಿದ್ದಳು.

ನವನೀತ ದೇವ ಸೇನ್‌‌ರ ಸಣ್ಣಕತೆಗಳು ಮತ್ತು ಪ್ರವಾಸ ಕಥೆಗಳು ಅವಳನ್ನು ಬಾಂಗ್ಲಾ ಸಾಹಿತ್ಯ ದೃಷ್ಠಿಯಲ್ಲಿ ಒಂದು ಅನನ್ಯ ವ್ಯಕ್ತಿಯನ್ನಾಗಿ ಮಾಡಿತು. ಉತ್ತಮ ಹಾಸ್ಯ, ಆಳವಾದ ಮಾನವ ಕಾಳಜಿ, ಮತ್ತು ಹೆಚ್ಚು ಬುದ್ಧಿಶಕ್ತಿ ಇಂತಹ ಅಪರೂಪದ ಸಂಯೋಗವನ್ನು ಈ ಕಥೆಗಳಲ್ಲಿ ಕಾಣಬಹುದು. ತನ್ನ ಮೊದಲ ಸಣ್ಣ ಕಥಾ ಸಂಕಲನ ಮಾನ್ಸಿಯೇರ್ ಹುಲೊರ್ ಹಾಲಿಡೇ (೧೯೮೦). ಕರುಣಾ ತೋಮರ್ ಕೊನ್ ಪತ್ ದಿಯೆ ಮತ್ತು ಟ್ರಕ್‌ಬಹಾನೆ ಮ್ಯಕ್‌ಮಹನೆ ಬಂಗಾಳಿ ಸಾಹಿತ್ಯದಲ್ಲಿ ಶ್ರೇಷ್ಠ ಕೃತಿಗಳಾಗಿವೆ. ಬೇರೆ ಪ್ರಖ್ಯಾತ ಕೃತಿಗಳಲ್ಲಿ ಬಾಮ-ಭೊದಿನಿ; ನಟಿ ನಭನೀತ; ಶ್ರೆಷ್ಠ ಕಬಿತ; ಸೀತಾ ಥೆಕೆ ಸುರು ಸೇರಿದೆ.

ಇವರು ಬರೆದ ಕಾಲ್ಪನಿಕ ಕಥೆಗಲು ಮತ್ತು ಸಾಹಸ ಕಥೆಗಳಿಂದ, ಬಂಗಾಳದ ಮಕ್ಕಳ ಸಾಹಿತ್ಯದ ಪ್ರಸಿದ್ಧ ಲೇಖಕಿಯಾಗಿದ್ದಾರೆ, ಹುಡುಗಿಯರನ್ನೇ ಮುಖ್ಯ ಪ್ರಾತಗಳಾಗಿ ಬಳಸಿದ್ದಾರೆ.ಅವರು ಪ್ರಶಸ್ತಿ ಮಡೆದ ಏಕಾಂಕ-ನಾಟಕಗಳನ್ನು ಬರೆದಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]
  1. "ನಭನೀತ ದೇವ ಸೇನ್".
  2. "ನವನೀತರ ವೈಯಕ್ತಿಕ ಜೀವನ".
  3. "ನಭನೀತ ದೇವ್ ಸೇನ್‌ರವರ ಸಾದನೆ".
  4. "ನಭನೀತ್‌ರವರಿಗೆ ಪದ್ಮಶ್ರೀ ಪ್ರಶಸ್ತಿ".
  5. "ಬಾಗಲ್‌ಪುರ್ ವಿಶ್ವವಿದ್ಯಾಲಯ-ಶರತ್ ಪ್ರಶಸ್ತಿ".
  6. "ಬೆಂಗಾಳಿ ಸಾಹಿತ್ಯ ಅಕಾಡಮಿ ಪ್ರಶಸ್ತಿಯ ಪಟ್ಟಿ". Archived from the original on 2016-03-04. Retrieved 2015-11-01.

ಹೊರಗಿನ ಕೊಂಡಿಗಳು

[ಬದಲಾಯಿಸಿ]

"ಸ್ರೀವಾದ ಎಂದರೆ ಘೋಷಣೆಗಳನ್ನು ಕೂಗುವುದಲ್ಲ- ನವನೀತ ದೇವ ಸೇನ್".