ನಾಗಸಂಪಿಗೆ ಎಣ್ಣೆ

ನಾಗಸಂಪಿಗೆ ಮರ
ಹೂವು
ಫಲಪ್ರದವಾದ ಹೂವು
ಹಸಿ ಕಾಯಿ
ವಿತ್ತನಗಳು

ನಾಗಸಂಪಿಗೆ ಎಣ್ಣೆಯನ್ನು ನಾಗಸಂಪಿಗೆ ಬೀಜ/ವಿತ್ತನದಿಂದ ಉತ್ಪನ್ನ ಮಾಡಲಾಗುತ್ತದೆ. ನಾಗಸಂಪಿಗೆ ಮರ ಗಟ್ಟಿಫೆರ(Guttiferae)ಸಸ್ಯ ಕುಟುಂಬಕ್ಕೆ ಸೇರಿದ ಮರ. ಇದರ ಸಸ್ಯ ಶಾಸ್ತ್ರದ ಹೆಸರುಮೆಸುಯ ಫೆರ್ರೆಯೆ(masua ferreae). ಈ ಮರವನ್ನು ಆಂಗ್ಲಭಾಷೆಯಲ್ಲಿ ಐರನ್ ವುಡ್ ಆಫ್ ಅಸ್ಸಾಂ(Iron wood of Assam), ಮತ್ತು ಸಿಲೊನ್ ಐರನ್ ವುಡ್(cylon Iron wood)ಎಂದು ಕರೆಯಲಾಗುತ್ತದೆ.

ಭಾರತ ಭಾಷೆಗಳಲ್ಲಿ ನಾಗಸಂಪಿಗೆ ಹೆಸರು []

[ಬದಲಾಯಿಸಿ]

ನಾಗಸಂಪಿಗೆ ಮರ

[ಬದಲಾಯಿಸಿ]

ಈ ಮರದ ಉಗಮಸ್ಥಾನ ಏಷಿಯಾಖಂಡ. ಕಂಬೋಡಿಯ, ಭಾರತ, ಮಲೇಶಿಯ, ಫಿಲಿಪ್ಪೀನ್ಸ್, ಸಿಂಗಾಪುರ್. ಶ್ರೀಲಂಕಾ, ಥಾಯ್ಲಂಡ್,ಮತ್ತು ವಿಯತ್ನಾಂ ದೇಶಗಳಲ್ಲಿ ಬೆಳೆಯುತ್ತಿರುವ ಮರ []. ಈ ಮರ ಹಿಂದೂ ದೇಶದಲ್ಲಿ ಪೂರ್ವಹಿಮಾಲಯ, ಪಶ್ಚಿಮಕಣಿವೆ ಪ್ರದೇಶಗಳಲ್ಲಿ, ಕರ್ನಾಟಕ, ಕೇರಳ ಮಲೆನಾಡಿನ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಈ ಮರಗಳು ಬೆಳೆಯುತ್ತದೆ. ಅಸ್ಸಾಂ, ಬಂಗಾಲ, ಅಂಡಮಾನ್ ದ್ವೀಪಗಳಲ್ಲಿಯ ಕಾಡುಗಳಲ್ಲಿ ಈ ಮರದ ಬೆಳವಣಿಗೆ ನೋಡಬಹುದು. ದಕ್ಷಿಣಭಾರತ ಅರಣ್ಯಗಳಲ್ಲಿ ಈ ಮರಗಳು ಕಂಡು ಬರುತ್ತವೆ. ತಮಿಳುನಾಡಿನ ತಿರುವನ್ ಮಳೈ ಅರಣ್ಯದಲ್ಲಿ ಇದು ವ್ಯಾಪಕವಾಗಿ ಬೆಳೆದಿರುವ ಮರ. ಕೇರಳ ರಾಜ್ಯದಲ್ಲಿ ಪಾಲಘಾಟ್ ವನಪ್ರಾಂತ್ಯದಲ್ಲಿ ಈ ಮರಗಳು ದಪ್ಪವಾಗಿ ಬೆಳೆದಿದ್ದು ಕಂಡು ಬರುತ್ತದೆ. ಈ ಮರಗಳು ಸಮುದ್ರ ಮಟ್ಟ ದಿಂದ ೨೦೦ಮೀಟರುಗಳ ಎತ್ತರ ಪ್ರಾಂತ್ಯದಲ್ಲಿ ಬೆಳೆಯುತ್ತವೆ.[]

ಇದು ಮಧ್ಯಸ್ತ ಎತ್ತರವಾಗಿ ಬೆಳೆಯುವ ಮರ. ಇದರ ತೊಗಟೆ ಬೂದಿ ಬಣ್ಣದಲ್ಲಿ ಇರುತ್ತದೆ. ಎಲೆಗಳು ೮-೧೨ ಸೆಂ.ಮೀ. ಉದ್ದ, ೩-೪ ಸೆಂ,ಮೀ ಅಗಲವಾಗಿ ಇರುತ್ತವೆ. ಉದ್ದವಾದ ಈಟಿ ತಲೆಯಾಕಾರವನ್ನು ಎಲೆಗಳು ಹೊಂದಿರುತ್ತದೆ. ಹಣ್ಣು ಪರಿಮಾಣ ೨.೫-೩.೦ಸೆ.ಮೀ,ಗೋಲಾಕಾರವಾಗಿ, ಇಲ್ಲಂದರೆ ಅಂಡಾಕಾರವಾಗಿರುತ್ತದೆ .ಹಣ್ಣು ೫೦-೫೫ ಗ್ರಾಂ.ಗಳಷ್ಟು ತೂಕ/ಭಾರ ಇರುತ್ತದೆ. ಕಾಯಿ ಮೇಲೆ ದೃಢವಾದ ಸಿಪ್ಪೆ/ಹೊಟ್ಟು ಇರುತ್ತದೆ . ಒಂದು ಹಣ್ಣಿಗೆ ೧-೪ ಬೀಜಗಳು ಇರುತ್ತವೆ. ಬೀಜಗಳು ತಿತ್ತಿನ ತರಹ ಕಾಣಿಸುತ್ತವೆ. ಹೂವು ಬಿಡುವ ಸಮಯ ಒಂದೊಂದು ಪ್ರಾಂತದಲ್ಲಿ ಒಂದೊಂದು ರೀತಿಯಲ್ಲಿ ಇರುತ್ತದೆ .ಸಾಧಾರಣವಾಗಿ ಫೆಬ್ರವರಿ-ಮಾರ್ಚಿ ಇಲ್ಲಂದರೆ, ಏಪ್ರಿಲ್-ಮೇ ತಿಂಗಳುಗಳಲ್ಲಿ ಹೂವು ಬರುವುದು ಮೊದಲಾಗುತ್ತದೆ. ಹೂಗಳು ಬೆಳ್ಳಗೆ ಇದ್ದು ೬-೭ ಸೆಂ.ಮೀ ಉದ್ದ ಇರುತ್ತವೆ. ಹೂವು ಸಿಹಿಯಾಗಿದ್ದು, ಒಳ್ಳೇ ಸುವಾಸನೆ ಬೀರುತ್ತದೆ. ಹೂವು ಹಣ್ಣಾಗುವುದಕ್ಕೆ ಎರಡು-ಮೂರು ತಿಂಗಳು ಕಾಲ ಬೇಕಾಗುತ್ತದೆ[].

ವಿತ್ತನ/ಬೀಜ

[ಬದಲಾಯಿಸಿ]

ವಿತ್ತನದಲ್ಲಿ(seed) ಸಿಪ್ಪೆ(shell)೨೫-೩೦% ವರೆಗೆ ಇರುತ್ತದೆ. ಸಿಪ್ಪೆ ತೆಗೆದ ಬೀಜ/ತಿರುಳು(kernel)ಗೋಲಾಕಾರದಲ್ಲಿದ್ದು, ಅರಿಶಿನ ಬಣ್ಣದಲ್ಲಿ ಕಾಣಿಸುತ್ತದೆ. ಸಿಪ್ಪೆ ತೆಗೆದ ಬೀಜದಲ್ಲಿ ಎಣ್ಣೆ ೬೫-೭೫% ವರೆಗೆ ಇರುತ್ತದೆ. ಬೀಜದಲ್ಲಿ ಎರಡು ಬಿತ್ತಿನ ಎಲೆಗಳಿರುತ್ತವೆ(cotyledon). ಬೀಜದಲ್ಲಿ ೨೦% ವರಗೆ ಪ್ರೋಟಿನ್ ಇದ್ದರೂ ಆಹಾರ ಯೋಗ್ಯವಲ್ಲ. ಬೀಜದ ತೇವ ೫-೧೫% ತನಕ ಇರುವ ಸಂಭವವಿದೆ. ಬೀಜವನ್ನು ಚೆನ್ನಾಗಿ ಒಣಗಿಸಬೇಕಾಗಿದೆ. ಬೀಜದಲ್ಲಿ ತೇವ ೧೦.೦% ಕ್ಕಿಂತ ಕಡಿಮೆ ಇದ್ದಾಗ ದಾಸ್ತಾನು ಮಾಡಬೇಕು.

ಎಣ್ಣೆಯ ಉತ್ಪಾದನೆ

[ಬದಲಾಯಿಸಿ]

ಮಾಗಿ ಕೆಳಗೆ ಬಿದ್ದ ಹಣ್ಣುಗಳನ್ನು ಶೇಖರಣೆ ಮಾಡುತ್ತಾರೆ. ಶೇಖರಣೆ ಮಾಡಿದ ಹಣ್ಣುಗಳನ್ನು ಗುಡ್ಡೆ ಹಾಕಿ ದಪ್ಪ ಬಡಿಗೆ ತಗೊಂಡು ಒಡೆದು ಹಣ್ಣಿಂದ ವಿತ್ತನವನ್ನು ವಿಂಗಡಿಸಲಾಗುತ್ತದೆ. ವಿತ್ತನವನ್ನು ತೇವ ಕಡಿಮೆ ಆಗುವವರೆಗೆ ಒಣಗಿಸಲಾಗುತ್ತದೆ. ಒಣಗಿಸದ ವಿತ್ತನವನ್ನು ಆಯಿಲ್ ಮಿಲ್ಲಿಗೆ ಕಳುಹಿಸಲಾಗುತ್ತದೆ. ಆಯಿಲ್ ಕಾರ್ಖಾನೆಯಲ್ಲಿ ವಿತ್ತನ ಮೇಲ್ಭಾಗದಲ್ಲಿದ್ದ ಸಿಪ್ಪೆಯನ್ನು ಡಿಕಾರ್ಡಿಕೇಟರು ಯಂತ್ರಗಳನ್ನು ಬಳಸಿ ತೊಲಗಿಸಲಾಗುತ್ತದೆ. ಸಿಪ್ಪೆ ತೆಗೆದ ವಿತ್ತನದಿಂದ ಎಕ್ಸುಪೆಲ್ಲರು ಎಣ್ಣೆ ಯಂತ್ರಗಳ ಸಹಾಯದಿಂದ ಎಣ್ಣೆಯನ್ನು ತೆಗೆಯಲಾಗುತ್ತದೆ. ಹಿಂಡಿಯಲ್ಲಿ ಉಳಿದಿರುವ ೧೦-೧೨% ಎಣ್ಣೆಯನ್ನು ಸಾಲ್ವೆಂಟ್ ಪ್ಲಾಂಟ್ ನಲ್ಲಿ ತೆಗೆಯಲಾಗುತ್ತದೆ. ಪೂರ್ಣವಾಗಿ ಎಣ್ಣೆ ತೆಗೆದ ಹಿಟ್ಟು/ಹಿಂಡಿಯನ್ನು ಗೊಬ್ಬರ/ಎರುಬಾಗಿ ಉಪಯೋಗಿಸಲಾಗುತ್ತದೆ.

ಎಣ್ಣೆ-ಗುಣ ಗಣ ಮತ್ತು ಲಕ್ಷಣಗಳು

[ಬದಲಾಯಿಸಿ]

ನಾಗಸಂಪಿಗೆ ಎಣ್ಣೆ ಆಹಾರಯೋಗ್ಯವಲ್ಲ. ಇದು ಕೈಗಾರಿಕೆಯಲ್ಲಿ ಬೇರೆ ಪದಾರ್ಥಗಳನ್ನು ಉತ್ಪನ್ನ ಮಾಡುವುದಕ್ಕೆ ಬಳಸಲ್ಪಡುತ್ತದೆ. ಎಣ್ಣೆಯ ಸ್ನಿಗ್ದತೆ ಹೆಚ್ಚು. ಚಿಕ್ಕದಾಗಿ ಇರುತ್ತದೆ. ವಾಸನೆಯು ಹಿತವಾದುದು ಅಲ್ಲ. ಘಾಟಾಗಿ ಇರುತ್ತದೆ. ಇದು ಸೆಮಿ ಡ್ರಯಿಂಗ್ ಎಣ್ಣೆ(semi drying oil). ಡ್ರಯಿಂಗ್ ಎಣ್ಣೆಗಳನ್ನು ವಾರ್ನಿಷ್, ಪೇಯಿಂಟ್ ಗಳನ್ನು ತಯಾರು ಮಾಡುವುದರಲ್ಲಿ ಉಪಯೋಗಿಸುತ್ತಾರೆ.

ಎಣ್ಣೆಯ ಭೌತಿಕ ಗುಣಗಳು [][]

ಲಕ್ಷಣ ಮಿತಿ
ವಿಶಿಷ್ಟ ಗುರುತ್ವ 25C 0.910-.925
ವಕ್ರೀಭವನ ಸೂಚಿಕೆ 400Cಕಡೆ 1.465-1.475
ಅಯೋಡಿನ್ ಮೌಲ್ಯ 65-95
ಸಪೋನಿಫಿಕೇಸನ್ ಮೌಲ್ಯ 195-205
ತೇವ 1.0-1.5
ರಂಗು 1/4" సెల్(Y+5R) 25-35
ಅನ್ ಸಪೋನಿಫಿಯಬುಲ್ ಪದಾರ್ಥ 2.0-2.5

ಎಣ್ಣೆಯಲ್ಲಿ ಮಿರಿಸ್ಟಿಕ್, ಪಾಮಿಟಿಕ್ ಮತ್ತು ಸ್ಟಿಯರಿಕ್ ಪರ್ಯಾಪ್ತ ಕೊಬ್ಬಿನ ಆಮ್ಲಗಳು ೧೦-೩೦% ವರೆಗೆ ಇವೆ. ಮಿರಿಸ್ಟಿಕ್ ಸ್ವಲ್ಪ ಪ್ರಮಾಣದಲ್ಲಿ ೩.೦% ವರೆಗೆ ಇರುತ್ತದೆ. ಪಾಮಿಟಿಕ್ ಮತ್ತು ಸ್ಟಿಯರಿಕ್ ಕೊಬ್ಬಿನ ಆಮ್ಲಗಳು ಒಂದೊಂದು ೧೦-೧೬% ವರೆಗೆ ಇರುತ್ತವೆ. ನಾಗಸಂಪಿಗೆ ಎಣ್ಣೆಯಲ್ಲಿ ಒಲಿಕ್ ಕೊಬ್ಬಿನ ಆಮ್ಲ ಹೆಚ್ಚಿನ ಪ್ರತಿಶತದಲ್ಲಿ ಕಂಡುಬರುತ್ತದೆ. ಒಲಿಕ್ ಕೊಬ್ಬಿನ ಆಮ್ಲ ಏಕ ದ್ವಿಬಂಧವುಳ್ಳ ಅಸಂತೃಪ್ತ ಕೊಬ್ಬಿನ ಆಮ್ಲ. ಒಲಿಕಾಮ್ಲದಲ್ಲಿ ೧೮ ಕಾರ್ಬನ್ ಅಣುಗಳಿದ್ದು ೯ನೆ ಕಾರ್ಬನ್ ಹತ್ತಿರ ದ್ವಿಬಂಧವಿದೆ. ಒಲಿಕ್ ಆಮ್ಲ ಎಣ್ಣೆಯಲ್ಲಿ ೫೦-೭೦% ವರೆಗೆ ಇರುತ್ತದೆ. ಕೆಲವು ಎಣ್ಣೆಗಳಲ್ಲಿ ಸಂತೃಪ್ತ ಕೊಬ್ಬಿನ ಆಮ್ಲ ಅರಚಿಡಿಕ್ ಆಮ್ಲ ಕಂಡು ಹಿಡಿಯಲಾಗಿದೆ(೧.೮%). ಅರಚಿಡಿಕ್ ಆಮ್ಲದಲ್ಲಿ ೨೦ಕಾರ್ಬನ್(carbon) ಅಣುಗಳು ಇರುತ್ತವೆ [].

ಎಣ್ಣೆಯಲ್ಲಿದ್ದ ಕೊಬ್ಬಿನ ಆಮ್ಲಗಳ ಪಟ್ಟಿ[]

ಎಣ್ಣೆಯಲ್ಲಿದ್ದ ಕೊಬ್ಬು ಆಮ್ಲಗಳು
ಕೊಬ್ಬಿನ ಆಮ್ಲ ಶೇಕಡ
ಪಾಮಿಟಿಕ್ ಆಮ್ಲ(C16:0) 3.0-6.0
ಪಾಮಿಟಿಟೋಲಿಕ್ ಆಮ್ಲ(C16:1) 0-1.4
ಸ್ಟಿಯರಿಕ್ ಆಮ್ಲ(C18:0) 0-2.0
ಒಲಿಕ್ ಆಮ್ಲ(C18:1) 55-70
ಲಿನೋಲಿಕ್ ಆಮ್ಲ(C18:2) 20-35
ಎಯಿಕೊಸೆನೊಯಿಕ್ ಆಮ್ಲ(C20:1) 0-1.8

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ http://www.indianmedicinalplants.info/d4/
  2. http: //www. worldagroforestry. org/sea/ products/ afdbases/ af/asp/ SpeciesInfo. asp?SpID=1770
  3. ೩.೦ ೩.೧ ೩.೨ SEA Hand Book. 2009-by The solvent Extractors'Association of India
  4. http://www.essentialoil.in/apricot-oil.html
  5. "ಆರ್ಕೈವ್ ನಕಲು". Archived from the original on 2013-05-20. Retrieved 2013-10-11.