ನಾತಿಚರಾಮಿ | |
---|---|
ನಿರ್ದೇಶನ | ಮಂಸೋರೆ |
ನಿರ್ಮಾಪಕ | ಎಂ ರಮೇಶ್ |
ಚಿತ್ರಕಥೆ | ಮಂಸೋರೆ |
ಕಥೆ | ಸಂಧ್ಯಾ ರಾಣಿ |
ಪಾತ್ರವರ್ಗ | ಶೃತಿ ಹರಿಹರನ್ ಸಂಚಾರಿ ವಿಜಯ್ ಶರಣ್ಯ ಪೂರ್ಣಚಂದ್ರ ಮೈಸೂರು ಬಾಲಾಜಿ ಮನೋಹರ್ ಗೋಪಾಲ್ ದೇಶಪಾಂಡೆ |
ಸಂಗೀತ | ಬಿಂದುಮಾಲಿನಿ |
ಛಾಯಾಗ್ರಹಣ | ಗುರುಪ್ರಸಾದ್ ನಾರ್ನಾಡ್ |
ಸಂಕಲನ | ನಾಗೇಂದ್ರ ಕೆ ಉಜ್ಜಾನಿ |
ಸ್ಟುಡಿಯೋ | ತೇಜಸ್ವಿನಿ ಎಂಟರ್‌ಪ್ರೈಸಸ್ |
ಬಿಡುಗಡೆಯಾಗಿದ್ದು |
|
ದೇಶ | ಭಾರತ |
ಭಾಷೆ | ಕನ್ನಡ |
ನಾತಿಚರಾಮಿ ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರ. ಇದನ್ನು ಸಂಧ್ಯಾ ರಾಣಿ ಬರೆದಿದ್ದಾರೆ,[೧][೨][೩][೪] ಮಂಸೋರೆ ನಿರ್ದೇಶಿಸಿದ್ದಾರೆ[೫] ಮತ್ತು ತೇಜಸ್ವಿನಿ ಎಂಟರ್‌ಪ್ರೈಸಸ್ ಲಾಂಛನದಡಿ ಎಂ. ರಮೇಶ್ ನಿರ್ಮಿಸಿದ್ದಾರೆ.[೬][೭][೮] ಇತರ ನಿರ್ಮಾಪಕರೆಂದರೆ ಜಗನ್‍ಮೋಹನ್ ರೆಡ್ಡಿ ಮತ್ತು ಶಿವಕುಮಾರ್ ರೆಡ್ಡಿ. ಚಿತ್ರದ ಸಂಗೀತವನ್ನು ಬಿಂದುಮಾಲಿನಿ ಸಂಯೋಜಿಸಿದ್ದಾರೆ.[೯][೧೦][೧೧] ಮುಖ್ಯ ಪಾತ್ರಗಳಲ್ಲಿ ಶೃತಿ ಹರಿಹರನ್[೧೨] ಹಾಗೂ ಸಂಚಾರಿ ವಿಜಯ್ ನಟಿಸಿದ್ದಾರೆ ಮತ್ತು ಶರಣ್ಯ,[೧೩] ಪೂರ್ಣಚಂದ್ರ ಮೈಸೂರು ಹಾಗೂ ಗೋಪಾಲ್ ದೇಶಪಾಂಡೆ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.[೧೪] ಧ್ವನಿ ವಿನ್ಯಾಸವನ್ನು ಮಹಾವೀರ್ ಸಬ್ಬಣವರ್ ಮಾಡಿದ್ದಾರೆ ಹಾಗೂ ಛಾಯಾಗ್ರಹಣವನ್ನು ಗುರುಪ್ರಸಾದ್ ನಾರ್ನಾಡ್ ಮಾಡಿದ್ದಾರೆ. ಚಿತ್ರಕ್ಕಾಗಿ ಮಾನಸಾ ಮುಸ್ತಫ಼ಾ ವಸ್ತ್ರವಿನ್ಯಾಸ ಮಾಡಿದ್ದಾರೆ.
ಈ ಚಲನಚಿತ್ರವು ೨೦ನೇ ಜಿಯೊ ಮಾಮಿ ಮುಂಬಯಿ ಚಲನಚಿತ್ರೋತ್ಸವದಲ್ಲಿ ಆಕ್ಸ್‌ಫ಼್ಯಾಮ್ ಲಿಂಗ ಸಮಾನತೆ ಮೇಲಿನ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡಿತ್ತು.[೧೫][೧೬][೧೭]
೨೦೧೯ರ ೬೬ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ನಾತಿಚರಾಮಿ ಐದು ಪ್ರಶಸ್ತಿಗಳನ್ನು ಗೆದ್ದಿತು. ಮಾಯಾವಿ ಮನವೇ ಹಾಡಿಗಾಗಿ ಬಿಂದುಮಾಲಿನಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ರಾಷ್ಟ್ರಪ್ರಶಸ್ತಿ, ಮಂಜುನಾಥ್ ಎಸ್‌ಗೆ ಇದೇ ಹಾಡಿಗಾಗಿ ಅತ್ಯುತ್ತಮ ಗೀತಕಾರ ರಾಷ್ಟ್ರಪ್ರಶಸ್ತಿ ಮತ್ತು ನಾಗೇಂದ್ರ ಕೆ ಉಜ್ಜಾನಿಗೆ ಅತ್ಯುತ್ತಮ ಸಂಕಲನದ ರಾಷ್ಟ್ರಪ್ರಶಸ್ತಿ. ಈ ಚಲನಚಿತ್ರವು ವರ್ಷದ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿಯನ್ನು ಕೂಡ ಗೆದ್ದಿತು. ತಮ್ಮ ಅಭಿನಯಕ್ಕಾಗಿ ಶೃತಿ ಹರಿಹರನ್ ವಿಶೇಷ ಉಲ್ಲೇಖ ತೀರ್ಪುಗಾರರ ಪ್ರಶಸ್ತಿಯನ್ನು ಪಡೆದರು.
ನಾತಿಚರಾಮಿ ಗೌರಿಯ ಬಗ್ಗೆ ಆಗಿದೆ. ಇವಳ ಜೀವನವು ತನ್ನ ದೈಹಿಕ ಬಯಕೆಗಳು ಮತ್ತು ಭಾವನಾತ್ಮಕ ನಂಬಿಕೆಗಳ ನಡುವೆ ಗೋಜಲಾಗಿರುತ್ತದೆ. ಈ ಚಿತ್ರವು ದೈಹಿಕ ಬಯಕೆಗಳನ್ನು ಕೇವಲ ಮದುವೆಯು ಅನುಸರಿಸಬಹುದು ಎಂದು ನಂಬಿರುವ ಸಮಾಜದಲ್ಲಿ ಮುಖ್ಯಪಾತ್ರದ ಹೋರಾಟಗಳನ್ನು ಹೇಳುತ್ತದೆ. ಅವಳು ತನ್ನ ಸಾಮಾನ್ಯ ಜೀವನದಲ್ಲಿ ಒಂದಕ್ಕೊಂದಕ್ಕೆ ವಿರುದ್ಧವಾದ ತಮ್ಮ ಭಾವನೆಗಳ ಬಗ್ಗೆ ಹೇಳಿಕೊಳ್ಳುವ ತನ್ನ ದೈನಂದಿನ ಜೀವನದ ಮಾದರಿಯ ಜನರೊಂದಿಗೆ ಸಿಲುಕಿಕೊಂಡಿರುತ್ತಾಳೆ. ಅಂತಿಮವಾಗಿ, ತಾನು ತನ್ನ ಅಸ್ಪಷ್ಟತೆಯನ್ನು ಜಯಿಸಿದ್ದೇನೆಂದು ಅವಳಿಗೆ ಅನಿಸಿದಾಗ, ಹೊಸ ಸಂದರ್ಭಕ್ಕೆ ಕಾಲಿಡುತ್ತಾಳೆ. ಚಲನಚಿತ್ರವು ಪ್ರೇಕ್ಷಕರ ಗಮನವನ್ನು ವಿವಿಧ ವೃತ್ತಿಗಳ ಮಹಿಳೆಯರು ಎದುರಿಸುವ ಸೂಕ್ಷ್ಮಾತಿಸೂಕ್ಷ್ಮಗಳ ಕಡೆಗೂ ತರುತ್ತದೆ.