ನಾಮ್‍ದೇವ್ | |
---|---|
ಜನನ | c. 1270 CE ಮಹಾರಾಷ್ಟ್ರ,ಭಾರತ |
ಮರಣ | c. ೧೩೫೦ CE ಪದರ್‍ಪುರ |
ತತ್ವಶಾಸ್ತ್ರ | ಭಕ್ತಿ |
ನಾಮ್‍ದೇವ್ (ಸಾಂಪ್ರದಾಯಿಕವಾಗಿ, ಸುಮಾರು ಕ್ರಿ.ಶ. ೧೨೭೦-೧೩೫೦) ಹಿಂದೂ ಧರ್ಮದ ವಾರಕರಿ ಪಂಥಕ್ಕೆ ಪ್ರಧಾನವಾಗಿರುವ ಒಬ್ಬ ಕವಿ-ಸಂತನಾಗಿದ್ದನು. ಅವನು ಸಿಖ್ ಧರ್ಮದಲ್ಲೂ ಪರಮಪೂಜ್ಯನಾಗಿದ್ದಾನೆ.
ಸಾಂಪ್ರದಾಯಿಕವಾಗಿ ಅವನು ಕ್ರಿ.ಶ. ೧೨೭೦ರಲ್ಲಿ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ನರ್ಸಿ ಬಾಹ್ಮನಿ ಎಂಬ ಹಳ್ಳಿಯಲ್ಲಿ ಜನಿಸಿದನು ಎಂದು ನಂಬಲಾಗಿದೆ.
೧೮ ನೇ ಶತಮಾನದ ಒಂದು ಸಂತಚರಿತಕಾರ ಮಹಿಪತಿಯಾ ಪ್ರಕಾರ ನಾಮದೇವನ ಪೋಷಕರು ದಮಶೆತ್ (Damashet) ಮತ್ತು ಗೊನೈ(Gonai). ನಾಮದೇವ, ರಾಜೈ (Rajai)ಯವರನ್ನು ಮದುವೆಯಾದರು.ನಾಮದೇವರವರ ಮಗ ವಿಥ(Vitha). ಆತನ ತಾಯಿ ಗೊನೈ, ಮಗ ವಿಥ ಮತ್ತು ಹೆಂಡತಿ ರಾಜೈ ಆತನ ಕುರಿತು ಬರೆದಿದ್ದಾರೆ.