ನಾರಿಮನ್ ಪಾಯಿಂಟ್, (नरिमन पॉईंट) [೧] ಎಂದು ಸುಪ್ರಸಿದ್ಧವಾದ ದಕ್ಷಿಣ ಮುಂಬಯಿನ ಕಡಲಿನ ಕೊನೆಯ ಭೂಭಾಗವನ್ನು ಖುರ್ ಶಿದ್ ಫ್ರಾಮ್ ಜಿ ನಾರಿಮನ್ ಎಂಬ ಪ್ರಾಜ್ಞರು ಕಡಲನ್ನು ಒತ್ತಿಪಡೆದ, ಭೂ-ಪ್ರದೇಶದ ನಿರ್ಮಾಣಮಾಡಿದರು. ಹಾಗಾಗಿ ಆ ಜಿಲ್ಲೆಗೆ ಆತನ ಹೆಸರನ್ನು ಇಡಲಾಗಿದೆ. ದಕ್ಷಿಣ ಮುಂಬಯಿ ಜಿಲ್ಲೆಯಲ್ಲಿ, ನ ಅತಿ ದಕ್ಷಿಣಭಾಗದ ಅರಬ್ಬೀ ಕಡಲಿನ ಸಮೀಪದಲ್ಲಿರುವ ಭೂಭಾಗದ, ನಾರಿಮನ್ ಪಾಯಿಂಟ್ ನಲ್ಲಿ, ದಕ್ಷಿಣ ಮುಂಬಯಿ, ಭಾರತದ ಅತಿ ಭಾರಿ ಉದ್ಯಮಗಾರರ ಪ್ರಮುಖ ಕಛೇರಿಗಳು, ಶೋರೂಂಗಳು, ವಾಣಿಜ್ಯಬ್ಯಾಂಕ್ ಗಳು, ನಳಿನಳಿಸುತ್ತಿವೆ. ಇವೆಲ್ಲಾ ಅತ್ಯಾಧುನಿಕ ಕಟ್ಟಡಗಳಲ್ಲಿ, ಬೆಡಗಿರೂಪದರ್ಶಿಗಳ ಸಂಭ್ರಮದ ಓಡಾಟಗಳ ಮಧ್ಯೆ ಕಂಗೊಳಿಸುತ್ತಿವೆ. ಇಂದು ಮುಂಬಯಿನ ಅತ್ಯುತ್ತಮ ವಿಹಾರ ಸ್ಥಳ, ವಾಣಿಜ್ಯ ಕೇಂದ್ರ, ಮತ್ತು ಮುಂಬಯಿನಗರದ ಮ್ಯಾನ್ ಹಟನ್ ಎಂದು ಕರೆಯಲ್ಪಡುವ 'ನಾರಿಮನ್ ಪಾಯಿಂಟ್'[೨] ನ ಉಗಮಕ್ಕೆ ಕಾರಣರಾದ ವ್ಯಕ್ತಿ, ಪಾರ್ಸಿ ಮತಸ್ಥ, ರಾಜಕಾರಣಿ, ದಾರ್ಶನಿಕ, ಶ್ರೀ. ಖುರ್ ಶಿದ್ ಫ್ರಾಮ್ ಜಿ ನಾರಿಮನ್ ರವರಿಂದಾಗಿ.
ಸನ್, ೧೯೪೦ ಕ್ಕಿಂತ ಹಿಂದೆ, ದಕ್ಷಿಣ ಬೊಂಬಾಯಿನ ಆ ಸ್ಥಳವೆಲ್ಲಾ ಜಲಾವೃತವಾಗಿತ್ತು. ಆಗ ಕಾಂಗ್ರೆಸ್ ಪಕ್ಷದಲ್ಲಿದ್ದ ಒಬ್ಬ ಜನಾನುರಾಗಿ ನೇತ, 'ಶ್ರೀ. ಖುರ್ ಶಿದ್' ರವರು, ಅರಬ್ಬೀಸಮುದ್ರದ ಹತ್ತಿರದ ಭೂಭಾಗವನ್ನು ಆಕ್ರಮಿಸಿಕೊಂಡರೆ, ಅಲ್ಲಿ ನಿವೇಶಗಳನ್ನು ಕಟ್ಟಬಹುದು ಎಂದು ಸದನಕ್ಕೆ ಮನವಿಯನ್ನು ಮಂಡಿಸಿದರು. ಆಲ್ಲಿನ ಗುಂಡಿಯಲ್ಲಿ ಕಲ್ಲು ಮಣ್ಣು, ಬಂಡೆಗಳು, ಕಾಂಕ್ರೀಟ್ ಚಪ್ಪಡಿಗಳನ್ನೂ, ಹಲಿಗೆಗಳನ್ನು ಡೆಬ್ರಿಯನ್ನು ತಂದು ಸುರಿದರು. ಹೆಚ್ಚು ಆರ್.ಸಿ.ಸಿ.ಯ ಭಾಗಗಳು ಸರಿಯಾದ ಬಿಗಿ ಮತ್ತು ಭದ್ರತೆಯನ್ನು ಕೊಡುವುದನ್ನು ಮನಗಂಡ ಇಂಜಿನಿಯರ್ ಗಳು ಕಾಂಕ್ರೀಟ್ ನಲ್ಲಿ ಮಾಡಿದ ಬೃಹತ್ ನಮೂನೆಗಳನ್ನು ನೀರಿನಲ್ಲಿ ಮುಳುಗಿಸಲು ಭಾರಿಪ್ರಮಾಣದಲ್ಲಿ ತಂದು ಸುರಿಯಲು ಅಭಿಮತವನ್ನು ಸೂಚಿಸಿದರು. ಆಗ ಎರಡನೆಯ ವಿಶ್ವಯುದ್ಧದ ಸಮಯ. 'ಸ್ಟೀಲ್ ರಾಡ್' ಗಳ ಸಾಮಗ್ರಿಗಳಬೆಲೆ ಅತಿ ಹೆಚ್ಚಾಗಿತ್ತು, ಮತ್ತು ಸುಲಭವಾಗಿ ದೊರೆಯುತ್ತಿರಲಿಲ್ಲ. ಅವನ್ನು ವಿದೇಶದಿಂದ ಆಮದುಮಾಡಿಕೊಳ್ಳಬೇಕಾಗಿತ್ತು. ಇದರಿಂದ, ಅವರ ಲೆಕ್ಕಾಚಾರ ಬುಡಮೇಲಾಯಿತು ; ಸರಿಹೋಗಲಿಲ್ಲ. ಇಂತಹ ಅನಿರ್ದಿಷ್ಟಿತ ಪ್ರಾಜೆಕ್ಟ್ ಗೆ ನಿಗದಿಮಾಡಿದ್ದ ಹಣ, ೩ ಲಕ್ಷರೂಪಾಯಿಗಳು. ಆದರೆ ವ್ಯಯವಾದದ್ದು, ೧೦ ಕೋಟಿ ರೂಪಾಯಿಗಳು. ನಾರಿಮನ್ ರವರನ್ನು ಕೆಲಸದಿಂದ ವಜಮಾಡಲಾಯಿತು. ೧೯೭೦ ರಲ್ಲಿ ಪುನಃ ಕೆಲಸ ಮರುಪ್ರಾರಂಬಿಸಿದರು. ಸಮುದ್ರದನೀರು ಹಿಂದೆ ಸರಿದು, ಗಮನಾರ್ಹವಾದ ಭೂ ಪ್ರದೇಶ ದಕ್ಕಿತು.
ಈ ಭಾಗದಲ್ಲಿ ಪ್ರಪ್ರಥಮವಾಗಿ, ಹೆಚ್ಚು ಹಣ ಸುರಿದು ಟಾಟ ಕಂಪೆನಿ, ತಮ್ಮ, ಎನ್.ಸಿ.ಪಿ.ಎ ಸಂಸ್ಥೆ, ಯನ್ನು ತೆರೆದರು. ಅದಕ್ಕೆ ಹೊಂದಿಕೊಂಡಂತೆ ಇರುವ ಜಾಗದಲ್ಲಿ, ಅಲ್ಲಿ ಕೆಲಸಮಾಡುವ ಕಲಾವಿದರಿಗೆ, ಮತ್ತು ಸಿಬ್ಬಂದಿವರ್ಗಕ್ಕೆ, ಗೃಹವಸತಿಯನ್ನು ಕಲ್ಪಿಸಿಕೊಡಲು, ಯೋಜನೆ ಸಿದ್ಧವಾಯಿತು. ಅದರಂತೆ ೨೨ ಅಂತಸ್ತಿನ ಅತಿ ದೊಡ್ಡ, ಹೌಸಿಂಗ್ ಕೋ. ಆಪ್. ಸೊಸೈಟಿ, ಅಲ್ಲಿ ನೆಲೆಮಾಡಿತು. ಹೀಗೆ. ನಾರಿಮನ್ ಪಾಯಿಂಟ್ ನಿರ್ಮಾಣದ ಹಿಂದೆ, 'ಶ್ರೀ ನಾರಿಮನ್' ರ ಕಠಿಣ ಪರಿಶ್ರಮವಿದೆ.
ದಕ್ಷಿಣ ಮುಂಬಯಿನ ಮೆರಿನ್ ಡ್ರೈವ್ ಹತ್ತಿರದ 'ನಾರಿಮನ್ ಪಾಯಿಂಟ್' ನ ಸ್ಥಿರಆಸ್ತಿಯಬೆಲೆಗಳು, ವಿಶ್ವದಲ್ಲೇ ಅತಿಹೆಚ್ಚಿನದೆಂದು ತಜ್ಞರ ಅಂಬೋಣ. ಈ ಪ್ರದೇಶವನ್ನು ಮುಂಬಯಿ, ನ " ಮ್ಯಾನ್ ಹಟ್ಟನ್", ಎಂದು ಕರೆಯುತ್ತಾರೆ.[೩]
ಅಲ್ಲಿನ ಹೆಚ್ಚು ಆಳವಿಲ್ಲದ ಸಮುದ್ರದ ನೀರನ್ನು, ಮುಂದಕ್ಕೆ, ಅಕ್ಕ-ಪಕ್ಕಕ್ಕೆ ತಳ್ಳಿದರೆ, ಸ್ವಲ್ಪ ಭೂಮಿಯನ್ನು ದಕ್ಕಿಸಿಕೊಳ್ಳಬಹುದೆಂದು ನಾರಿಮನ್ ಹೇಳುತ್ತಲೇ ಇದ್ದರು. ಆದರೆ, ಇದರ ನೈಜತೆಯನ್ನು, ಅರಿಯುವುದು ಕಷ್ಟವಾಗಿತ್ತು. ಮೊದಲೇ ನಿಯೋಜಿಸಿದ್ದಂತೆ, ನಾರಿಮನ್ ತಮ್ಮ ಕಾರ್ಯವನ್ನು ಪ್ರಾರಂಭಿಸಿಯೇ ಬಿಟ್ಟರು. ಅವರು ಬಿ. ಎಮ್. ಸಿ ಗೆ ಸೂಚಿಸಿದ ಪ್ರಕಾರ, ಅವರ ಯೋಜನೆ ಸಫಲವಾಗಿ, ಕೊನೆಗೆ ಅಲ್ಲಿ ಸಾಕದಷ್ಟು ಜಾಗ ದೊರೆಯಿತು. ಇಂತಹ ಭಾರಿ ಕಾರ್ಯವನ್ನು ಕೈಗೊಂಡದ್ದಾಗಿ ಅವರ ಗೆಳೆಯರು, ಅವರ ಹೆಸರಿನಲ್ಲಿ ವೀರ್, ಎಂದು ಸೇರಿಸಿದರು. ಹೀಗೆ, ಅವರು ವೀರ್ ನಾರಿಮನ್, ಆದರು.
ನಾರಿಮನ್ ಪಾಯಿಂಟ್ ನಲ್ಲಿ, ವಿಸ್ತರಿಸಿರುವ ಪ್ರದೇಶದ, ಭಾರತದೇಶದ, ಬೃಹತ್, ಹಾಗೂ ಅತಿಪ್ರಮುಖ, ವಾಣಿಜ್ಯ ಸಂಸ್ಥೆಗಳು ಹಲವಾರು. ಎನ್.ಪಿ.ಸಿ.ಎ. ಹೌಸಿಂಗ್ ಕೊ.ಆಪರೇಟೀವ್ ಸೊಸೈಟಿ, ಅವುಗಳನ್ನು ಕೆಳಗೆ ದಾಖಲಿಸಲಾಗಿದೆ. ಮುಂಬಯಿನಗರದ ನಿರ್ಮಾಣದಲ್ಲಿ ಟಾಟ ಕಂಪೆನಿಯವರ ಆಸಕ್ತಿ ಹಾಗೂ ಸಹಕಾರ, ಅನನ್ಯವಾದದ್ದು. ಭಾರಿ ಭಾರಿ ಉದ್ಯಮಗಳ ತಾಣವನ್ನು ವೀಕ್ಷಿಸಿ