ನಾರಿಲತಾ

"ನಾರಿಲತಾ"[][] ಹೆಸರಿಗೆ ತಕ್ಕಂತೆ ನಾರಿಯ ಅಥವಾ ಸ್ತ್ರೀಯ ರೂಪವನ್ನು ಹೋಲುವ ಹೂವು ಇದಾಗಿದೆ. ಭಾರತದ ಹಿಮಾಲಯ ಮತ್ತು ಶ್ರೀಲಂಕಾದಲ್ಲಿ ಕಂಡು ಬರುವ ನಾರಿಲತಾ ಹೂವನ್ನು ಅಲ್ಲಿನ ಜನ "ಲಿಯಾತಾಬರಾ" ಎಂದು ಕರೆದರೆ, ಥಾಯ್ಲೆಂಡಿನಲ್ಲಿ "ನಾರೀಫೂಲ್" ಎಂದು ಕರೆಯುತ್ತಾರೆ. ನಾರಿಲತಾ ಪ್ರತಿ ೨೦ ವರ್ಷಗಳ ಅಂತರದಲ್ಲಿ ಅರಳುತ್ತದೆ.

ಪರಿಚಯ

[ಬದಲಾಯಿಸಿ]
  • "ನಾರಿಲತಾ" ಭಾರತದ ಹಿಮಾಲಯ, ಶ್ರೀಲಂಕಾ ಮತ್ತು ಥಾಯ್ಲೆಂಡಿನಲ್ಲಿ ಕಂಡು ಬರುತ್ತದೆ. ಬೆತ್ತಲೆ ಮಹಿಳೆಯ ಆಕಾರವನ್ನು ಹೋಲುವ ನಾರಿಲತಾ ಹೂವು ಬಹಳ ಅಪರೂಪದ್ದಾಗಿದೆ. ನಾರಿಲತಾ ಪ್ರತಿ ೨೦ ವರ್ಷಗಳ ಅಂತರದಲ್ಲಿ ಅರಳುತ್ತದೆ. ಸಂನ್ಯಾಸಿಗಳಂತೆ ಕಾಣುವ ಈ ಹೂವುಗಳನ್ನು ನೋಡುವಾಗ ದೃಷ್ಟಿಯು ಬದಲಾಗುವುದಿಲ್ಲ. ಮನಸ್ಸಿಗೆ ಒಂದು ಕ್ಷಣ ಮುದವೆನಿಸುತ್ತದೆ. ವಾವ್! ಎನಿಸುತ್ತಾ ಹೂ ಬಗ್ಗೆ ರೋಚಕತೆ ಮೂಡುತ್ತದೆ.
  • ಎರಡು ದಶಕಗಳಿಗೊಮ್ಮೆ ಅರಳುವ ಈ ಹೂವು ಆರ್ಕಿಡ್ ಕುಟುಂಬಕ್ಕೆ ಸೇರಿದೆ. ಇದು ಹಬೇನೆರಿಯಾ ಎಂಬ ಸಣ್ಣ ಸಂಕುಲದ ಅಡಿಯಲ್ಲಿ ಬರುತ್ತದೆ. ಅಲ್ಲದೆ ಸುಮಾರು ಹತ್ತು ಹಬೇನೇರಿಯಾ ಜಾತಿಯ ಸಸ್ಯ ಗಡ್ಡೆಗಳು ಎಲ್ಲಾ ಹಬೇನೆರಿಯಾ ಮತ್ತು ಟೆರೆಸ್ಟ್ರೀಯಲ್ ಆರ್ಕಿಡ್ಗಳು ಆಗಿವೆ. ಶ್ರೀಲಂಕಾದಲ್ಲಿ ಕಂಡು ಬರುವ ನಾರಿಲತಾ ಹೂವನ್ನು ಅಲ್ಲಿನ ಜನ "ಲಿಯಾತಾಬರಾ" ಎಂದು ಕರೆದರೆ, ಥಾಯ್ಲೆಂಡಿನಲ್ಲಿ "ನಾರೀಫೂಲ್" ಎಂದು ಕರೆಯುತ್ತಾರೆ.

ಅಪರೂಪವೆನಿಸುವ ಹೂವು

[ಬದಲಾಯಿಸಿ]
  • ಅಪರೂಪವೆನಿಸುವ ಈ ಹೂವು ಯಾವುದೋ ಕಥೆಗಳಲ್ಲಿ ಕೇಳಿದಂತೆ ಭಾಸವಾಗುತ್ತದೆ. ಕೆಲವು ನಂಬಿಕೆಗಳ ಪ್ರಕಾರ ಹಿಮಾಲಯದಲ್ಲಿ ಕಂಡು ಬರುವ ಈ ಹೂವು ಅಲ್ಲಿ ತಪಸ್ಸನ್ನಾಚರಿಸುವ ಸಂನ್ಯಾಸಿಗಳು ಮತ್ತು ಋಷಿಗಳ ಸಾಂದ್ರತೆಯ ದೃಷ್ಟಿಯಿಂದ ಈ ಮಹಿಳೆ ಆಕಾರದ ಹೂಗಳು ಉಳಿಯುವುದಿಲ್ಲ ಎಂದು ನಂಬಲಾಗುತ್ತದೆ. ಸಾಕ್ಷಾತ್ ಸ್ತ್ರೀ ಸ್ವರೂಪವನ್ನೆ ಹೊಂದಿರುವ ಈ ಹೂವನ್ನು ನೋಡಿದಾಗ ಆಶ್ಚರ್ಯವೆನಿಸುತ್ತದೆ.ಇಂಥದ್ದೊಂದು ಹೂವಿದೆಯಾ? ಎಂಬ ಅನುಮಾನವು ಮೂಡುತ್ತದೆ.
  • ಅದೇನೆ ಇದ್ದರೂ ನಾರಿಲತಾ ನಿಜಕ್ಕೂ ಒಂದು ಸುಂದರ ಪುಷ್ಪ. ಇದರ ಇರುವು-ತಿರುವುಗಳ ಬಗ್ಗೆ ಏನೇ ಇದ್ದರೂ ಇಂಥ ಅಪರೂಪದ ಹೂವನ್ನೊಮ್ಮೆ ನೋಡಬೇಕು ಎನಿಸುವುದಂತು ಸುಳ್ಳಲ್ಲ. ನೋಡಿದೊಡನೆ ವಾವ್! ಎಂದೆನಿಸುವಷ್ಟು ಸ್ತ್ರೀ ರೂಪದ ಸುಂದರ ಹೂ "ನಾರಿಲತಾ".

ಉಲ್ಲೇಖ

[ಬದಲಾಯಿಸಿ]