ನಿಖರ ದಾಳಿ (ಕರಾರುವಾಕ್ ದಾಳಿ, ಸರ್ಜಿಕಲ್ ಸ್ಟ್ರೈಕ್) ಎಂದರೆ ಕೇವಲ ನೈಜವಾದ ಸೇನಾ ಗುರಿಗಳನ್ನು ಹಾನಿಮಾಡುವ ಉದ್ದೇಶ ಹೊಂದಿರುವ ಸೇನಾ ದಾಳಿ ಮತ್ತು ಸುತ್ತಮುತ್ತಲಿನ ರಚನೆಗಳು, ವಾಹನಗಳು, ಕಟ್ಟಡಗಳು ಅಥವಾ ಸಾಮಾನ್ಯ ಸಾರ್ವಜನಿಕ ಮೂಲಸೌಕರ್ಯಗಳಿಗೆ ಯಾವುದೇ ಹಾನಿಯಾಗದಂತೆ ಅಥವಾ ಕನಿಷ್ಠತಮ ಪೂರಕ ಹಾನಿಯಾಗುವಂತೆ ನಡೆಸಲಾಗುತ್ತದೆ.[೧]
ಈ ದಾಳಿಯು ತ್ವರಿತವಾಗಿರುತ್ತದೆ. ನಿಖರ ದಾಳಿಗಳಿಂದ ಗುರಿಗಳ ತಟಸ್ಥೀಕರಣವು ಪೂರ್ಣ ಪ್ರಮಾಣದ ಯುದ್ಧವಾಗಿ ಉಲ್ಬಗೊಳ್ಳುವುದನ್ನೂ ತಡೆಯುತ್ತದೆ. ನಿಖರ ದಾಳಿಗಳನ್ನು ವೈಮಾನಿಕ ದಾಳಿಗಳ ಮೂಲಕ, ವಿಶೇಷ ಕಾರ್ಯಾಚರಣಾ ತಂಡಗಳನ್ನು ವಾಯುನೌಕೆಯಿಂದ ಕೆಳಗಿಳಿಸುವ ಮೂಲಕ, ಅಥವಾ ತ್ವರಿತ ಭೂ ಕಾರ್ಯಾಚರಣೆಯ ಮೂಲಕ ಅಥವಾ ವಿಶೇಷ ಪಡೆಗಳನ್ನು ಕಳಿಸುವ ಮೂಲಕ ನಡೆಸಬಹುದು.
ನಿಖರ ದಾಳಿಯ ಮತ್ತೊಂದು ಉದಾಹರಣೆಯೆಂದರೆ ವಾಯುನೌಕೆಗಳಿಂದ ಕೈಗೊಳ್ಳಲಾಗುವ ನಿಖರ ಬಾಂಬ್ ದಾಳಿ – ಇದು ಒಂದು ಪ್ರಭಾವಿತ ಪ್ರದೇಶದಲ್ಲಿ ಸಾಮಾನ್ಯ ಜನರಿಗೆ ಗಾಯ ಅಥವಾ ಅವರ ಸಾವನ್ನು ಒಳಗೊಂಡಿರಬಹುದಾದ ಅಥವಾ ಒಳಗೊಳ್ಳದಿರಬಹುದಾದ ಹೆಚ್ಚಿನ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮತ್ತು ವ್ಯಾಪಕ ವಿನಾಶವನ್ನು ಉಂಟುಮಾಡುವ ತೀವ್ರ ಬಾಂಬು ದಾಳಿಯಿಂದ ಭಿನ್ನವಾಗಿದೆ.