ನಿಜಗುಣ ಶಿವಯೋಗಿ ಈ ಹೆಸರಿನ ಮೂರು ಕವಿಗಳು ಆಗಿ ಹೋದರು. ಮೊದಲನೆಯವರು ೧೨ನೆಯ ಶತಮಾನದವರು. ಮೂರನೆಯವರು ೧೭ನೆಯ ಶತಮಾನದವರು. ಅಧ್ಯಾತ್ಮ ರಾಮಾಯಣ ಎನ್ನುವ ಗ್ರಂಥವನ್ನು ಬರೆದಿದ್ದಾರೆ. ಎರಡನೆಯ ನಿಜಗುಣ ಶಿವಯೋಗಿ ಇವರು ಕ್ರಿ.ಶ.೧೫೦೦ರ ಸುಮಾರಿಗೆ ಜೀವಿಸಿದ್ದರು. ಇವರು ಕಾವೇರಿ ತೀರದ ಸಣ್ಣ ರಾಜ್ಯವೊಂದರ ರಾಜರಾಗಿದ್ದು, ವೈರಾಗ್ಯ ತಾಳಿ, ಶಂಭುಲಿಂಗನ ಬೆಟ್ಟದ ಗುಹೆಯೊಂದರಲ್ಲಿ ತಪಸ್ಸು ಮಾಡಿದನರೆಂದು ಹೇಳಲಾಗುತ್ತಿದೆ. ಕನ್ನಡ ನಾಡಿನ ಅಧ್ಯಾತ್ಮದ ಶಿಖರ ಶ್ರಿಮನ್ ನಿಜಗುಣ ಶಿವಯೋಗಿಗಳು ವೀರವೈರಾಗ್ಯ ತಾಳಿ ಶಂಭುಲಿಂಗನ ಬೆಟ್ಟದಲ್ಲಿ ವಾಸ ಮಾಡಿ ಅಲ್ಲಿ ಷಟ್ ಶಾಸ್ತ್ರ ರಚನೆ ಮಾಡಿದ್ದಾರೆ.ಕನ್ನಡದ ಮೊಟ್ಟ ಮೊದಲ ವಿಶ್ವಕೋಶ ವಿವೇಕ ಚಿಂತಾಮಣಿಯ ಕತೃ ನಿಜಗುಣ ಶಿವಯೋಗಿಗಳು ಎನ್ನುವದು ಗಮನಾರ್ಹ.
ಕೃತಿಗಳು:
ಇವರ ‘ಕೋಗಿಲೆ, ಚೆಲ್ವ ಕೋಗಿಲೆ, ಮುದ್ದು ಕೋಗಿಲೆ, ಜಾಣ ಕೋಗಿಲೆ’ ಎನ್ನುವದು ತುಂಬ ಜನಪ್ರಿಯವಾದ ತತ್ವಪದವಾಗಿದೆ.