ನಿತಿನ್ ಗಡ್ಕರಿ | |
---|---|
![]() 2023 ರಲ್ಲಿ ಗಡ್ಕರಿ | |
Assumed office 26 May 2014 | |
President | ಪ್ರಣಬ್ ಮುಖರ್ಜಿ ರಾಮ್ ನಾಥ್ ಕೋವಿಂದ್ ದ್ರೌಪದಿ ಮುರ್ಮು |
Preceded by | ಆಸ್ಕರ್ ಫೆರ್ನಾಂಡಿಸ್ |
Preceded by | ಗಿರಿಜಾ ಸಿಂಗ್ |
Succeeded by | ನಾರಾಯಣ ರಾಣೆ |
In office 26 May 2014 – 30 May 2019 | |
Preceded by | ಜಿ.ಕೆ ವಾಸನ್ |
Succeeded by | ಮುನ್ಸುಕ್ ಎಲ್ ಮಾಂಡವೀಯ |
In office 3 September 2017 – 30 May 2019 | |
Preceded by | Uma Bharti |
Succeeded by | ಗಜೇಂದ್ರ ಸಿಂಗ್ ಶೇಖಾವತ್ |
In office 4 June 2014 – 9 November 2014 | |
Preceded by | ಗೊಪಿನಾಥ ಮುಂಡೆ |
Succeeded by | Birender Singh |
Personal details | |
Born | Nagpur, Bombay State (present Maharashtra), India | 27 May 1957
Political party | ಭಾರತೀಯ ಜನತಾ ಪಾರ್ಟಿ |
Spouse | ಕಾಂಚನ್ ಗಡ್ಕರಿ |
ನಿತಿನ್ ಜೈರಾಮ್ ಗಡ್ಕರಿ (ಜನನ 27 ಮೇ 1957) ಮಹಾರಾಷ್ಟ್ರದ ಒಬ್ಬ ಭಾರತೀಯ ರಾಜಕಾರಣಿ [೧] ಅವರು ಪ್ರಸ್ತುತ ಭಾರತ ಸರ್ಕಾರದಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.[೨] ಪ್ರಸ್ತುತ ಹತ್ತು ವರ್ಷಗಳ ಕಾಲ ತಮ್ಮ ಅಧಿಕಾರಾವಧಿಯನ್ನು ನಡೆಸುತ್ತಿರುವ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳಿಗೆ ಸುದೀರ್ಘ ಸೇವೆ ಸಲ್ಲಿಸಿದ ಸಚಿವರಾಗಿದ್ದಾರೆ.[೩] ಗಡ್ಕರಿ ಅವರು ಈ ಹಿಂದೆ 2009 ರಿಂದ 2013 ರವರೆಗೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷರಾಗಿಯು ಸಹ ಸೇವೆ ಸಲ್ಲಿಸಿದ್ದರು.[೪] ಅವರು ಮಹಾರಾಷ್ಟ್ರ ರಾಜ್ಯದ ಲೋಕೋಪಯೋಗಿ ಇಲಾಖೆ ಸಚಿವರಾಗಿ ಮಾಡಿದ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ರಸ್ತೆಗಳು, ಹೆದ್ದಾರಿಗಳು ಮತ್ತು ಸರಣಿ ಮೇಲ್ಸೇತುವೆಗಳನ್ನು ನಿರ್ಮಿಸಲಾಯಿತು.
ಅವರು ಪ್ರಸ್ತುತ ಲೋಕಸಭೆಯಲ್ಲಿ ನಾಗ್ಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ ವ್ರುತ್ತಿಯಲ್ಲಿ ವಕೀಲರು, ಜಲಸಂಪನ್ಮೂಲ, ನದಿ ಅಭಿವೃದ್ಧಿ, ಬಂದರು, ಗ್ರಾಮೀಣಾಭಿವೃದ್ಧಿ ಮತ್ತು ಮಧ್ಯಮ, ಸಣ್ಣ& ಅತಿ ಸಣ್ಣ ಕೈಗಾರಿಕೆ ಉದ್ಯಮಗಳು (ಎಮ್, ಎಸ್, ಎಮ್ ಇ)ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವವಿದೆ. 7 ಜುಲೈ 2021 ರಂದು ಕ್ಯಾಬಿನೆಟ್ ಪುನರ್ ರಚನೆಯ ಸಮಯದಲ್ಲಿ, ಅವರು ನಿರ್ವಹಿಸುತ್ತಿದ್ದ ಮಧ್ಯಮ, ಸಣ್ಣ& ಅತಿ ಸಣ್ಣ ಕೈಗಾರಿಕೆ ಉದ್ಯಮಗಳು ಸಚಿವಾಲಯದ ಖಾತೆಯನ್ನು ಸಂಪುಟ ವಿಸ್ತರಣೆಯ ಭಾಗವಾಗಿ ಮಹಾರಾಷ್ಟ್ರದ ಇನ್ನೊಬ್ಬ ಬಿಜೆಪಿ ಸಂಸದ ನಾರಾಯಣ ರಾಣೆಗೆ ವರ್ಗಾಯಿಸಲಾಯಿತು. ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಯ ಪ್ರಾರಂಭ ಮತ್ತು ಎಕ್ಸ್‌ಪ್ರೆಸ್‌ವೇಗಳು ಮತ್ತು ಇತರ ರಸ್ತೆ ಮೂಲಸೌಕರ್ಯಗಳ ಅಭಿವೃದ್ಧಿಗೆ ನೀಡಿದ ಕೊಡುಗೆಯಿಂದಾಗಿ ಅವರನ್ನು ಮಾಧ್ಯಮಗಳು ಹೆಚ್ಚಾಗಿ "ಎಕ್ಸ್‌ಪ್ರೆಸ್‌ವೇ ಮ್ಯಾನ್ ಆಫ್ ಇಂಡಿಯಾ" ಎಂದು ಕರೆಯತ್ತಾರೆ[೫][೬]. ವರ್ಲ್ಡ್ ಎಕನಾಮಿಕ್ ಫೋರಮ್ ಅವರನ್ನು "ಭಾರತದ ರಸ್ತೆ ವಲಯದಲ್ಲಿ ಸಾರ್ವಜನಿಕ-ಖಾಸಗಿ ಪಾಲುದಾರಿಕೆಯ (ಪಿಪಿಪಿ) ಪ್ರವರ್ತಕ" ಎಂದು ಗುರುತಿಸಿದೆ[೭]. ರಸ್ತೆ ಮತ್ತು ಸಾರಿಗೆ ಸಚಿವರಾಗಿದ್ದ ಅವರ ಅಧಿಕಾರಾವಧಿಯಲ್ಲಿ, ಭಾರತೀಯ ಹೆದ್ದಾರಿ ಜಾಲವು 9 ವರ್ಷಗಳಲ್ಲಿ 59% ರಷ್ಟು ಬೆಳೆದಿದೆ.[೮]
ಮಹಾರಾಷ್ಟ್ರದ ನಾಗ್ಪುರದಲ್ಲಿ ಮರಾಠಿ ಕುಟುಂಬವೂಂದರಲ್ಲಿ ಜನನ [೯][೧೦][೧೧][೧೨][೧೩]. 27 ಮೇ 1957 ರಂದು ಜೈರಾಮ್ ಗಡ್ಕರಿ ಮತ್ತು ಭಾನುತಾಯಿ ಗಡ್ಕರಿ [೧೪][೧೫] ಯ ಪುತ್ರನಾಗಿ ಜನಿಸಿದರು. ಅವರ ಹರೆಯದಲ್ಲಿ, ಅವರು ಭಾರತೀಯ ಜನತಾ ಯುವ ಮೋರ್ಚಾ ಮತ್ತು ವಿದ್ಯಾರ್ಥಿ ಒಕ್ಕೂಟ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ಗಾಗಿ ಕೆಲಸ ಮಾಡಿದರು. ಅವರು ಎಂ.ಕಾಂ. ಮತ್ತು ಎಲ್.ಎಲ್.ಬಿ ಯನ್ನು ನಾಗ್ಪುರ ವಿಶ್ವವಿದ್ಯಾಲಯದಿಂದ ಪಡೆದರು.[೧೬]
ಗಡ್ಕರಿ ಅವರು 1995 ರಿಂದ 1999 ರವರೆಗೆ ಮಹಾರಾಷ್ಟ್ರ ಸರ್ಕಾರದ ಲೋಕೋಪಯೋಗಿ ಇಲಾಖೆಯ (ಪಿ.ಡಬ್ಲು.ಡಿ)ಸಚಿವರಾಗಿ ಸೇವೆ ಸಲ್ಲಿಸಿದರು. ಇಲಾಖೆಯನ್ನು ಪ್ರತಿಯೊಂದು ವಿಭಗವನ್ನು ಪುನರ್ ರಚಿಸಿದರು.[೧೭] ಅವರು ಬಿಜೆಪಿಯ ಮಹಾರಾಷ್ಟ್ರ ರಾಜ್ಯ ಘಟಕದ ಅಧ್ಯಕ್ಷರಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ.[೧೮]
ಗಡ್ಕರಿ ಅವರು ಮೂಲಸೌಕರ್ಯ ಅಭಿವೃದ್ಧಿಗಾಗಿ ಖಾಸಗಿ ಸಂಸ್ಥೆಗಳಿಂದ ಹೂಡಿಕೆಯನ್ನು ಉತ್ತೀಜಿಸಿದರು. ಅವರು ಖಾಸಗೀಕರಣವನ್ನು ಬಲವಾಗಿ ಬೆಂಬಲಿಸುತ್ತಿದ್ದರು. ಈ ಕಾರ್ಯಕ್ಕೆ ಅವರು ಖಾಸಗಿ ಹೂಡಿಕೆದಾರರು, ಗುತ್ತಿಗೆದಾರರು, ಬಿಲ್ಡರ್‌ಗಳು ಮತ್ತು ವಿವಿಧ ವ್ಯಾಪಾರ ಸಂಸ್ಥೆಗಳ ನಡುವೆ ಹಲವಾರು ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ಬೃಹತ್ ಮೊತ್ತದ ಬಜೆಟ್ ಯೋಜನೆಗಳನ್ನು ಖಾಸಗೀಕರಣ ಮಾಡಿದರು. ತದನಂತರ ರಾಜ್ಯ ಸರ್ಕಾರ ₹700 ಕೊಟಿ ಹಣವನ್ನು ಗ್ರಾಮೀಣ ಸಂಪರ್ಕಕ್ಕಾಗಿ ಮಂಜೂರು ಮಾಡಿತು. ಮುಂದಿನ ನಾಲ್ಕು ವರ್ಷಗಳಲ್ಲಿ, ಮಹಾರಾಷ್ಟ್ರದಲ್ಲಿ ಎಲ್ಲಾ ಹವಾಮಾನ ಗಳಲ್ಲಿ ಚಲಿಸಬಹುದಾದ ರಸ್ತೆಗಳನ್ನ ನಿರ್ಮಿಸಿದರು. ಈ ಸಂಪರ್ಕವ್ಯವಸ್ತೆಯು ಜನಸಂಖ್ಯೆಯ ಅನುಪಾತದಲ್ಲಿ 98% ರಷ್ಟುತ್ತು. ಯೋಜನೆಯು ಸ್ವಾತಂತ್ರ್ಯದೋತ್ತರದ ರಸ್ತೆಯ ಮೂಲಕ ಸಂಪರ್ಕವಿಲ್ಲದ 13,736 ದೂರದ ಹಳ್ಳಿಗಳನ್ನು ಸಂಪರ್ಕಿಸುವ ಗುರಿಯನ್ನು ಹೊಂದಿದೆ.[೧೯][೨೦] ಈ ಯೋಜನೆಯ ದೂರದ ಮೆಲ್ಘಾಟ್ - ಅಮರಾವತಿ ಜಿಲ್ಲೆಯ ಧರಣಿ ಪ್ರದೇಶದಲ್ಲಿ ಅಪೌಷ್ಟಿಕತೆಯ ಕೊರತೆಯನ್ನು ನಿವಾರಿಸಲು ಸಹಾಯ ಮಾಡಿತು. ಈ ಹಿಂದೆ ವೈದ್ಯಕೀಯ ನೆರವು, ಪಡಿತರ ಅಥವಾ ಶೈಕ್ಷಣಿಕ ಸೌಲಭ್ಯಗಳು ಗ್ರಾಮಿಣ ಪ್ರದೇಶಗಳನ್ನು ಸಂಪರ್ಕಿಸಲು ಅವಕಾಶವಿರಲಿಲ್ಲ.
ಕೇಂದ್ರ ಸರ್ಕಾರವು ಅವರನ್ನು ರಾಷ್ಟ್ರೀಯ ಗ್ರಾಮೀಣ ರಸ್ತೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿತು. ಹಲವಾರು ಸಭೆಗಳು ಮತ್ತು ಅಧ್ಯಯನಗಳ ನಂತರ, ಗಡ್ಕರಿ ಅವರು ತಮ್ಮ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದರು. ಈ ಅದ್ಯಯನವನ್ನು ಭಾರತದ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ನೀಡಿದರು. ಅವರ ಈ ಹೊಸ ವರದಿಯನ್ನು ಅಂಗಿಕರಿಸಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಯಡಿಯಲ್ಲಿ₹600 ಬಿಲಿಯನ್ ಮೌಲ್ಯದ ಮಹತ್ವಾಕಾಂಕ್ಷೆಯ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆಯನ್ನು ಪ್ರಾರಂಭಿಸಲಾಯಿತು[೨೧]. ಅವರು 2020-21 ರ ಅತ್ಯಂತ ದಕ್ಷ ಸಂಸದರಿಗಾಗಿ ನೀಡಲಾಗುವ ದಿವಂಗತ ಮಾಧವರಾವ್ ಲಿಮಾಯೆ ಪ್ರಶಸ್ತಿಯನ್ನು ಸಾರ್ವಜನಿಕ ಗ್ರಂಥಾಲಯ ನಾಸಿಕ್‌ನಿಂದ ಸ್ವೀಕರಿಸಿದರು [೨೨][೨೩].
ಮಹಾರಾಷ್ಟ್ರದ ಪಿ.ಡಬ್ಲ್ಯೂ.ಡಿ ಸಚಿವರಾಗಿ, ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ತ್ವರಿತವಾಗಿ ನಿರ್ಮಾಸುವುದರಲ್ಲಿ ಗಡ್ಕರಿ ನಿರ್ಣಾಯಕ ಪಾತ್ರ ವಹಿಸಿದರು.[೨೮] 1990 ರಲ್ಲಿ, ಮಹಾರಾಷ್ಟ್ರ ಸರ್ಕಾರವು ಹೊಸ ಎಕ್ಸ್‌ಪ್ರೆಸ್‌ವೇಗೆ ಟೋಲ್ ಆಧಾರದ ಮೇಲೆ ಕಾರ್ಯಸಾಧ್ಯತೆಯ ಅಧ್ಯಯನವನ್ನು ನಡೆಸಿತು, ಆದಾಗ್ಯೂ, ಗಡ್ಕರಿ ಅವರು ಪಿ.ಡಬ್ಲ್ಯೂ.ಡಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರವೇ [೨೯] ಈ ಯೋಜನೆಯ ನಿರ್ಮಾಣವು ತ್ವರಿತಗತಿಯಲ್ಲಿ ಸಾಗಿತು. ಗಡ್ಕರಿ ಅವರು 30 ವರ್ಷಗಳ ಕಾಲ ಟೋಲ್ ಸಂಗ್ರಹಿಸಲು ಅನುಮತಿಯೊಂದಿಗೆ ಬಿಲ್ಡ್-ಆಪರೇಟ್-ವರ್ಗಾವಣೆ ಆಧಾರದ ಮೇಲೆ ಮಾರ್ಚ್ 1997 ರಲ್ಲಿ ಮುಂಬೈ - ಪುಣೆ ಎಕ್ಸ್‌ಪ್ರೆಸ್‌ವೇ ನಿರ್ಮಾಣದ ಕೆಲಸವನ್ನು ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ನಿಯಮಿತಕ್ಕೆ ವಹಿಸಿದರು. ಈ ಟೆಂಡರ್ ಪ್ರಕಟಣೆ [೩೦] ಭಾರತದಾದ್ಯಂತ ಪ್ರಮುಖ ಪತ್ರಿಕೆಗಳಲ್ಲಿ ಮತ್ತು ಇಂಟರ್ನೆಟ್‌ನಲ್ಲಿ ಪ್ರಕಟವಾಯಿತು. ವ್ಯಾಪಕ ಪ್ರಚಾರದಿಂದಾಗಿ, 133 ಟೆಂಡರ್‌ಗಳನ್ನು ಮಾರಾಟ ಮಾಡಲಾಯಿತು ಮತ್ತು 18 ಡಿಸೆಂಬರ್ 1997 ರಂದು, 55 ಟೆಂಡರ್‌ಗಳನ್ನು ಸ್ವೀಕರಿಸಲಾಯಿತು. ತಾಂತ್ರಿಕ ಮತ್ತು ಆರ್ಥಿಕ ಮೌಲ್ಯಮಾಪನದ ನಂತರ, ಟೆಂಡರ್‌ಗಳನ್ನು ಸ್ವೀಕರಿಸಲಾಯಿತು. 1 ಜನವರಿ 1998 ರಂದು ನಾಲ್ಕು ಗುತ್ತಿಗೆದಾರರಿಗೆ ಕೆಲಸದ ಆದೇಶಗಳನ್ನು ನೀಡಲಾಯಿತು. ನಂತರ ಖಂಡಾಲಾ ಮತ್ತು ಲೋನಾವಾಲಾ - ಖಂಡಾಲಾ ಬೈಪಾಸ್ ಕಾಮಗಾರಿಗಳ ಅಗಲೀಕರಣಕ್ಕೆ ಟೆಂಡರ್ ಆಹ್ವಾನಿಸಲಾಯಿತು. ಟೆಂಡರ್‌ಗಳನ್ನು 24 ಆಗಸ್ಟ್ 1998 ರಂದು ಸ್ವೀಕರಿಸಲಾಯಿತು ಮತ್ತು 4 ಸೆಪ್ಟೆಂಬರ್ 1998 ರಂದು ಆದೇಶಗಳನ್ನು ನೀಡಲಾಯಿತು. ಎಕ್ಸ್‌ಪ್ರೆಸ್‌ವೇಯ ಮೊದಲ ವಿಭಾಗಗಳನ್ನು 2000 ರಲ್ಲಿ ತೆರೆಯಲಾಯಿತು, ಮತ್ತು ಸಂಪೂರ್ಣ ಮಾರ್ಗವನ್ನು ಪೂರ್ಣಗೊಳಿಸಿ ಸಂಚಾರಕ್ಕೆ ತೆರೆಯಲಾಯಿತು. ಏಪ್ರಿಲ್ 2002 ರಿಂದ ಸಂಪೂರ್ಣವಾಗಿ ಕಾರ್ಯನಿರ್ವಹಿಸಲಾಯಿತು.
ಗಡ್ಕರಿ ಅವರು ರಾಜ್ಯ ಸಚಿವರಾಗಿ [೩೧] ಮಾಡಿದ ಇತರ ಪ್ರಮುಖ ಸಾಧನೆಯೆಂದರೆ ಮುಂಬೈನಲ್ಲಿ 55 ಮೇಲ್ಸೇತುವೆಗಳ ನಿರ್ಮಾಣ, ಇದು ನಗರದ ಟ್ರಾಫಿಕ್ ಸಮಸ್ಯೆಗಳನ್ನು ಗಣನೀಯವಾಗಿ ಕಡಿಮೆಗೊಳಿಸಿತು.
ಗಡ್ಕರಿ ಅವರನ್ನು ಡಿಸೆಂಬರ್ 2009 ರಲ್ಲಿ ಬಿಜೆಪಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಸತತವಾಗಿ ಎರಡು ಲೋಕಸಭಾ ಚುನಾವಣೆಗಳಲ್ಲಿ ಸೋತಿರುವ ಕಾರಣಕ್ಕೆ ಬಿಜೆಪಿಗೆ ಇದು ಕಠಿಣ ಹಂತವೆಂದು ಪರಿಗಣಿಸಿಲ್ಪಟ್ಟಿತ್ತು. ಹಗೂ ತ್ವರಿತವಾಗಿ ಪಕ್ಷದ ಪುನಶ್ಚೇತನದ ಅಗತ್ಯವಿತ್ತು.[೩೨]
ತುಹಿನ್ ಸಿನ್ಹಾ ಅವರ ಸಹ-ಲೇಖಕರಾದ ಇಂಡಿಯಾ ಆಸ್ಪೈರ್ಸ್ ಪುಸ್ತಕದಲ್ಲಿ ಗಡ್ಕರಿ [೩೩] ದೇಶಕ್ಕಾಗಿ ತಮ್ಮ ಅಭಿವೃದ್ಧಿ ವಿಚಾರಗಳನ್ನು ಬಹಳ ವಿವರವಾಗಿ ವಿವರಿಸಿದ್ದಾರೆ. ಹಸಿರು ಶಕ್ತಿ, ಪರ್ಯಾಯ ಇಂಧನ ಮತ್ತು ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆಗೆ ಹೆಚ್ಚಿದ ಸಾಂಸ್ಥಿಕ ಬೆಂಬಲವು ಗಡ್ಕರಿ ಅವರ ಅಭಿವೃದ್ಧಿ ಯೋಜನೆಯಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ.[೩೪]
ಬಿಜೆಪಿ ಪಕ್ಷದ ಅಧ್ಯಕ್ಷರಾಗಿ, ಗಡ್ಕರಿ ಅವರು ಜನಸಂಘದ ನಾಯಕರಾಗಿದ್ದ ದೀನ್ ದಯಾಳ್ ಉಪಾಧ್ಯ ಅವರ ಸಮಗ್ರ ಮಾನವತಾವಾದ ಮತ್ತು ಅಂತ್ಯೋದಯ (ಬಡವರ ಉನ್ನತಿ) ತತ್ವಗಳಿಗೆ ಮತ್ತೊಮ್ಮೆ ಒತ್ತು ನೀಡಿದರು. ಅದೇ ಸಮಯದಲ್ಲಿ, ವಿವಿಧ ಬಿಜೆಪಿ ರಾಜ್ಯ ಸರ್ಕಾರಗಳು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲು ಮತ್ತು ಹೊಸ ನೀತಿ ಒಳಹರಿವುಗಳೊಂದಿಗೆ ಬರಲು ಪಕ್ಷದೊಳಗೆ ವಿವಿಧ ಕೋಶಗಳನ್ನು ರಚಿಸಲಾಯಿತು[೩೫][೩೬].
ಗಡ್ಕರಿ ಜನವರಿ 2013 ರಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು [೩೭][೩೮]
ಗಡ್ಕರಿ ಅವರು 2014ರ ಲೋಕಸಭೆ ಚುನಾವಣೆಯಲ್ಲಿ ನಾಗ್ಪುರ ಕ್ಷೇತ್ರದಿಂದ ಯಶಸ್ವಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿಲಾಸ್ ಮುತ್ತೇಮ್ವಾರ್ ಅವರನ್ನು 2,85,000 ಅಂತರದಿಂದ ಸೋಲಿಸಿದರು. ಅವರು 2019 ರಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡು ಕಾಂಗ್ರೆಸ್ ಪಕ್ಷದ ನಾನಾ ಪಟೋಲೆ ಅವರನ್ನು 2,16,000 ಅಂತರದಿಂದ ಸೋಲಿಸಿದರು.[೧]
ಗಡ್ಕರಿ ಅವರು ಮೇ 2014 ರಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು ಮತ್ತು ಶಿಪ್ಪಿಂಗ್ ಸಚಿವರಾದರು. [೩೯] ಅವರು ಸ್ಥಗಿತಗೊಂಡದ್ದ ಯೋಜನೆಗಳಲ್ಲಿ ₹1 ಟ್ರಿಲಿಯನ್ ಯುಎಸ್$೨೨.೨ ಶತಕೋಟಿ) ಮೌಲ್ಯದ ಯೋಜನೆಗಳು ಮತ್ತು ಇತರವು ₹ ೩೫೦ ಶತಕೋಟಿ (ಯುಎಸ್$೭.೭೭ ಶತಕೋಟಿ) ಮರುಬಿಡ್ಡಿಂಗ್‌ಗೆ ಹಾಕಲಾಯಿತು[೪೦]. ದೇಶದಲ್ಲಿ ರಸ್ತೆ ನಿರ್ಮಾಣದ ವೇಗವನ್ನು ಹೆಚ್ಚಿಸಿದರು ದಿನಕ್ಕೆ 2ಕಿಮೀ ರಷ್ಟಿದ್ದ ಹೆದ್ದಾರಿ ನಿರ್ಮಣ ಅವರ ಮೊದಲ ವರ್ಷದಲ್ಲಿ ದಿನಕ್ಕೆ 16.5 ಕಿಮೀ. ಮುಂದಿನ ವರ್ಷಕ್ಕೆ ದಿನಕ್ಕೆ 21ಕಿ.ಮಿ ಮತ್ತು 2018 ರ ಅಂತ್ಯದಲ್ಲಿ 30ಕಿಮೀ/ದಿನ [೪೧]ರಷ್ಟುವೇಗಕ್ಕೆ ತಲುಪಿಸಿದರು. ಅವರು ಒಟ್ಟು ಯೊಜನೆಯ 1% ನಷ್ಟು ಭಾಗವನ್ನು ಅಂದರೆ ₹2 ಟ್ರಿಲಿಯನ್ ಯುಎಸ್$೪೪.೪ ಶತಕೋಟಿ) ಮರಗಳು ಮತ್ತು ರಸ್ತೆಗಳ ಅಂದವನ್ನು ಹೆಚ್ಛಿಸುವ ಸಲುವಾಗಿ ಕಯ್ದಿರಿಸಿದರು[೪೨].
ಎರಡನೇ ಬಾರಿ ಮೋದಿ ಸರ್ಕಾರದ ಸಚಿವಾಲಯದ ಅವಧಿಯಲ್ಲಿ, ಗಡ್ಕರಿ ಅವರು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವನ್ನು ಉಳಿಸಿಕೊಂಡು, 31 ಮೇ 2019 ರಂದು ಶಿಪ್ಪಿಂಗ್ ಮತ್ತು ಜಲಸಂಪನ್ಮೂಲ ಸಚಿವಾಲಯ, ನದಿಗಳ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಸಚಿವಾಲಗಳ ಬದಲು ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದೊಂದಿಗೆ ಬದಲಾಯಿಸಿಕೂಂಡರು[೪೩]. 2019 ರ ನಂತರದ ಹೆದ್ದಾರಿ ನಿರ್ಮಾಣದ ವೇಗವು 2020 ರಲ್ಲಿ ದಿನಕ್ಕೆ 36 ಕಿಮೀ ಆಗಿತ್ತು. ಗಡ್ಕರಿ ಅವರು 2022-23 ರಲ್ಲಿ 25,000 ಕಿಮೀಗಳ ಗುರಿಯೊಂದಿಗೆ ದಿನಕ್ಕೆ 68 ಕಿಮೀಗಳನ್ನು ಪೂರೈಸುವ ಗುರಿಯನ್ನು ಹೊಂದಿದ್ದಾರೆ.[೪೪][೪೫] ಆತ್ಮನಿರ್ಭರ್ ಭಾರತ ಹಸಿರು ಇಂಧನ ಅಳವಡಿಕೆ ಮತ್ತು ಇಂಧನ ಸ್ವಾವಲಂಬನೆಯ ದೃಷ್ಟಿಗೆ ಪ್ರೊತ್ಸಾಹ ಕೊಡುವ ನಿಟ್ಟಿನಲ್ಲಿಅವರು ಹೈಡ್ರೋಜನ್ ಚಾಲಿತ ಎಫ್.ಸಿ.ಇ.ವಿ ಟೊಯೊಟಾ ಮಿರಾಯ್ ಕಾರಿನ್ನು ಚಲಾಯಿಸಿಕೋಂಡು ಸಂಸತ್ತಿಗೆ ಬಂದರು. ಹಸಿರು ಇಂಧನ ವಾಹನಗಳನ್ನು ಬಳಸುವಂತೆ ಅವರು ಜನರಿಗೆ ಕರೆಕೋಟ್ಟರು[೪೬].
28 ಅಕ್ಟೋಬರ್ 2020 ರಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಏನ್. ಹೆಚ್.ಎ. ಐ ) ಪ್ರಧಾನ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಖುದ್ದು ಹಾಜರಿದ್ದ ಗಡ್ಕರಿಯವರು ಏನ್. ಹೆಚ್.ಎ. ಐ ಅಧಿಕಾರಿಗಳು ಮತ್ತು ಅಧಿಕಾರಶಾಹಿಯನ್ನು ಹೆಚ್ಚು ಟೀಕಿಸುವಂತ ಭಾಷಣವನ್ನು ಮಾಡಿದರು[೪೭][೪೮][೪೯].
ಗಡ್ಕರಿ ಅವರ ಮೂಂದಾಳತ್ವ ಮತ್ತು ಕಾರ್ಯವೈಖರಿಯನ್ನು ಬಿಜೆಪಿ, ಕಾಂಗ್ರೆಸ್ ನಾಯಕರು ಮತ್ತು ವಿಮರ್ಶಕರು ಶ್ಲಾಘಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಇಂದನದಲ್ಲಿ ಗ್ಯಾಸೋಲಿನ್‌ನಲ್ಲಿ ಎಥೆನಾಲ್ ಮಿಶ್ರಣವನ್ನು ಹೆಚ್ಚಿಸಿದ್ದು, ಡಾಂಬರು-ಬಿಟುಮೆನ್ ರಸ್ತೆಗಳಲ್ಲಿ ಪ್ಲಾಸ್ಟಿಕ್ ಮಿಶ್ರಣವನ್ನು ಬಳಸಲು ಉತ್ತೇಜಿಸಿದ್ದು ಮತ್ತು ಭಾರತ ಎನ್.ಸಿ.ಎ.ಪಿ ಅನ್ನು ಪ್ರಾರಂಭಿಸದ್ದು[೫೦][೫೧] ಸೇರಿದೆ. ಭಾರತ ಎನ್.ಸಿ.ಎ.ಪಿ ಯನ್ನು ಗ್ಲೋಬಲ್ ಎನ್.ಸಿ.ಎ.ಪಿ ಯ ಮಾದರಿಯಲ್ಲಿ ರಚಿಸಲಾಗಿದೆ,[೫೨][೫೩] ಇದು ಲ್ಯಾಟಿನ್ ಎನ್.ಸಿ.ಎ.ಪಿ 2016 ಅನ್ನು ಆಧರಿಸಿದೆ. 2014 ರಲ್ಲಿ ಕೆಲವು ಮಾಡೆಲ್‌ಗಳಲ್ಲಿ ಕ್ರ್ಯಾಶ್ ಟೆಸ್ಟಿಂಗ್ ಮಾಡಿದ ನಂತರ ಭಾರತಕ್ಕಾಗಿ ತಯಾರಿಸಿದ ಕಾರುಗಳಲ್ಲಿ ಸುರಕ್ಷತಾ ವೈಶಿಷ್ಟ್ಯಗಳಿಲ್ಲದ ಕಾರಣ ಗಡ್ಕರಿ ಅವರು ಭಾರತದಾದ್ಯಂತ ಮಾರಾಟವಾಗುವ ಕಾರುಗಳಿಗೆ ಎ.ಬಿ.ಎಸ್ ಮತ್ತು 6 ಏರ್‌ಬ್ಯಾಗ್‌ಗಳನ್ನ (ಹಿಂದೆ 2 ಏರ್‌ಬ್ಯಾಗ್‌ಗಳಿದ್ದವು) ಸುರಕ್ಷತಾ ದೃಷ್ಟಿಯಿಂದ ಕಡ್ಡಾಯಗೊಳಿಸಿದರು.[೫೪][೫೫] ರಸ್ತೆಗಳು ಮತ್ತು ಕಾರುಗಳನ್ನು ಸುರಕ್ಷಿತವಾಗಿಸಲು ಪ್ರಯತ್ನಿಸಿದ್ದಕ್ಕಾಗಿ ಅವರು ಪ್ರಶಂಸೆಯನ್ನು ಪಡೆದರೆ, ಕೆಲವು ವಾಹನ ತಯಾರಕರು ಈ ನಿರ್ಧಾರವನ್ನು ಟೀಕಿಸಿದರು, ಸುರಕ್ಷತಾ ವೈಶಿಷ್ಟ್ಯಗಳನ್ನು ಸೇರಿಸುವುದರಿಂದ ವಾಹನಗಳ ಬೆಲೆಗಳನ್ನು ಹೆಚ್ಚಿಸುತ್ತದೆ ಮತ್ತು ಅವುಗಳನ್ನು ಕೈಗೆಟುಕುವಂತಿಲ್ಲ ಎಂದು ಅರೋಪಿಸಿದರು.[೫೬]
ಗಡ್ಕರಿ, ನಾಗ್ಪುರದಲ್ಲಿ ಪ್ರತಿ ವರ್ಷ ಖಾಸ್ದರ್ ಸಾಂಸ್ಕೃತಿಕ ಮಹೋತ್ಸವವನ್ನು ಆಯೋಜಿಸುತ್ತಾರೆ. ಈ ಕಾರ್ಯಕ್ರಮಗಳು ಭಾರತದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ. ಸಾಂಪ್ರದಾಯಿಕ ಕಲೆಗಳು, ಸಂಗೀತ, ನೃತ್ಯ ಮತ್ತು ಸಾಹಿತ್ಯವನ್ನು ಒಳಗೊಂಡಿರುತ್ತವೆ. ಕಾರ್ಯಕ್ರಮವು ಹೇಮಾ ಮಾಲಿನಿ, ಮಿಲ್ಕಾ ಸಿಂಗ್, ಅಮಿತ್ ತ್ರಿವೇದಿ ಮತ್ತು ಅದ್ನಾನ್ ಸ್ವಾಮಿ ಸೇರಿದಂತೆ ವಿವಿಧ ಬಾಲಿವುಡ್ ಸೆಲೆಬ್ರಿಟಿಗಳು, ಗಾಯಕರು ಮತ್ತು ಪ್ರದರ್ಶಕರನ್ನು ಒಳಗೊಂಡಿರುತ್ತದೆ.[೫೭][೫೮]
ಮಾರ್ಚ್ 2024 ರಲ್ಲಿ, 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರ ತವರು ಕ್ಷೇತ್ರ ನಾಗ್ಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅವರನ್ನು ಘೋಷಿಸಲಾಯಿತು.[೫೯]
ರಾಜಕೀಯದಲ್ಲಿ ತಮ್ಮ ವೃತ್ತಿಜೀವನದ ಅವಧಿಯಲ್ಲಿ, ಗಡ್ಕರಿ ಅವರು ಹಲವಾರು ಖಾಸಗಿ ಕೈಗಾರಿಕೆಗಳು ಮತ್ತು ಕಂಪನಿಗಳನ್ನು ಸ್ಥಾಪಿಸಿದರು.[೬೦] ಇವುಗಳ ಸಹಿತ -
ಗಡ್ಕರಿ ಅವರು ತಾವು ಸ್ವತಃ ಕೃಷಿಕರು ಎಂದು ನೋಂದಾಯಿಸಿಕೊಂಡಿದ್ದಾರೆ. "ಕೇತಕಿ ಓವರೀಸ್ ಟ್ರೇಡಿಂಗ್ ಕಂಪನಿ" ಎಂಬ ಬ್ಯಾನರ್ ಅಡಿಯಲ್ಲಿ ಹಣ್ಣು ರಫ್ತು ಕಂಪನಿಯನ್ನು ಪ್ರಾರಂಭಿಸಿದರು.[೨೪] ಅವರು ವಿದರ್ಭದಲ್ಲಿ ಪೂರ್ಣಿ ಗುಂಪಿನ ಬ್ಯಾನರ್ ಅಡಿಯಲ್ಲಿ ಒಟ್ಟು 17 ಸಕ್ಕರೆ ತೋಟಗಳನ್ನು ಹೊಂದಿದ್ದಾರೆ. ಗಡ್ಕರಿ ಅವರು 1995 ರಲ್ಲಿ ಮಹಾರಾಷ್ಟ್ರದಲ್ಲಿ ಪಿ ಡಬ್ಲೂ ಡಿ ಮಂತ್ರಿಯಾಗಿದ್ದಾಗ ಪೂರ್ಣಿ ಪವರ್ ಅಂಡ್ ಶುಗರ್ ಲಿಮಿಟೆಡ್ (ಈಗ ಪೂರ್ಣಿ ಗ್ರೂಪ್) ಅನ್ನು ಪ್ರಾರಂಭಿಸಿದರು,[೬೨]. 2012 ರಲ್ಲಿ, ಆರ್‌ಟಿಐ ಕಾರ್ಯಕರ್ತೆ ಅಂಜಲಿ ದಮಾನಿಯಾ ಅವರು ಬಹಿರಂಗಪಡಿಸಿದ ಅಕ್ರಮಗಳಲ್ಲಿ, ಆದಾಯ ತೆರಿಗೆ ಇಲಾಖೆಯು ಪೂರ್ಣಿಯಲ್ಲಿ ಹೂಡಿಕೆ ಮಾಡಿದ ಹಲವಾರು ಸಂಸ್ಥೆಗಳನ್ನು ತನಿಖೆ ಮಾಡಿತು ಮತ್ತು ಇವುಗಳಲ್ಲಿ ಒಂದು ಡಜನ್‌ಗಿಂತಲೂ ಹೆಚ್ಚು ನಕಲಿ ವಿಳಾಸಗಳು ಕಂಡುಬಂದಿವೆ.[೬೩] ಮತ್ತೊಂದು ಮೂರು ಹೂಡಿಕೆ ಸಂಸ್ಥೆಗಳು ಸೋಮಾನಿ ಗ್ರೂಪ್‌ನೊಂದಿಗೆ ಸಹ-ಸ್ಥಳಗೊಂಡಿರುವುದು ಕಂಡುಬಂದಿದೆ, ಆದರೆ ಈ ಸಂಸ್ಥೆಗಳ ಬಗ್ಗೆ ಯಾರಿಗೂ ತಿಳಿದಿರಲಿಲ್ಲ.[೬೪] ಇದರ ಬೆನ್ನಲ್ಲೇ ದೆಹಲಿಯ ಸಿಎಂ ಅಗಿದ್ದ ಅರವಿಂದ್ ಕೇಜ್ರಿವಾಲ್ ಅವರು ಗಡ್ಕರಿ ಮೇಲೆ ಅಕ್ರಮಗಳ ಆರೋಪವನ್ನು ಹೂರಸಿದರು. ಇದಕ್ಕೆ ಪ್ರತಿಯಾಗಿ ಗಡ್ಕರಿ ಮಾನನಷ್ಟ ಮೊಕದ್ದಮೆ ದಾಖಲಿಸಿದ ನಂತರ ಕೇಜ್ರಿವಾಲ್ ಬೇಷರತ್ ಕ್ಷಮೆಯಾಚಿಸಿದರು.[೬೫]
2010 ರಲ್ಲಿ, ಪೂರ್ತಿ ಸಮೂಹವು 640 ಮಿಲಿಯನ್ ರೂಗಳಷ್ಟು ನಷ್ಟವನ್ನು ಅನುಭವಿಸಿದಾಗ,[೬೬] ಗಡ್ಕರಿಯವರು ಪಿ.ಡಬ್ಲೂ.ಡಿ ಸಚಿವರಾಗಿದ್ದ ಅವಧಿಯಲ್ಲಿ ಭಾರಿ ರಸ್ತೆ ಗುತ್ತಿಗೆಗಳನ್ನು ಪಡೆದ ಸಂಸ್ಥೆ IRB, ಪೂರ್ಣಿ ಸಮೂಹಕ್ಕೆ ರೂ. 1.64 ಬಿಲಿಯನ್ ನಷ್ಟು ಸಾಲವನ್ನು ಕೊಟ್ಟಿತು. ಈ ಮೊತ್ತ ಪೂರ್ಣಿ ಸಮೂಹದ ವಹಿವಾಟು ರೂ. 1.45 ಶತಕೋಟಿ ಗಿಂತ ಹೆಚ್ಛು. ಮರಾಠಿ ಚಾನೆಲ್ IBN-Lokmat ನಲ್ಲಿ, ಅವರು ಬ್ಯಾಂಕ್‌ಗಳಿಂದ ಏಕೆ ಸಾಲವನ್ನು ಪಡೆಯಲಿಲ್ಲ ಎಂದು ಪ್ರಶ್ನಿಸಿದಾಗ, ಗಡ್ಕರಿ ಅವರು ಕಂಪನಿಯ ಬ್ಯಾಲೆನ್ಸ್ ಶೀಟ್‌ಗಳು ಸೂಕ್ತ ಸ್ಥಿತಿಯಲ್ಲಿಲ್ಲ, ಆದ್ದರಿಂದ ತನಗೆ ಸಹಾಯ ಮಾಡುವಂತೆ ಅವರು ತಮ್ಮ ಸ್ನೇಹಿತ ದತ್ತಾತ್ರೇಯವರಿಗೆ ವಿನಂತಿಸಿದ್ದಾರೆ ಎಂದು ವಿವರಿಸಿದರು.[೬೭] ಅಲ್ಲದೆ, ಆ ಸಮಯದಲ್ಲಿ ಗಡ್ಕರಿ ಅವರ ಪುತ್ರ ನಿಖಿಲ್ ಐಆರ್‌ಬಿಯಲ್ಲಿ ನಿರ್ದೇಶಕರಾಗಿದ್ದರು. ಒಬ್ಬರ ಸಂಸ್ಥೆಗಳಲ್ಲಿ ಗುತ್ತಿಗೆದಾರರು ಹೂಡಿಕೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಗಡ್ಕರಿ ವಾದಿಸಿದರು.[೬೮]
ಗಡ್ಕರಿ ಅವರು ಬಿಜೆಪಿ ಅಧ್ಯಕ್ಷರಾಗಿ ಮರು ಆಯ್ಕೆಯಾಗುವ ಕೆಲವು ತಿಂಗಳುಗಳ ಮೊದಲು ಈ ಆರೋಪಗಳ ಸುದ್ದಿ ಹೊರಬಿದ್ದಿದೆ. ಆ ಸಮಯದಲ್ಲಿ, ಗಡ್ಕರಿ ಅವರು 2012 ರ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗಾಗಿ ಹಲವಾರು ಸಭೆಗಳನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಗಡ್ಕರಿ ಅವರ ಉಪಸ್ಥಿತಿಯು ಬಿಜೆಪಿಯ ಭ್ರಷ್ಟಾಚಾರ ವಿರೋಧಿ ಅಭಿಯಾನದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಬಿಜೆಪಿ ನಾಯಕ ಶಾಂತ ಕುಮಾರ್ ಸೂಚಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿತು.[೬೯] ತರುವಾಯ, ಗಡ್ಕರಿ ಅವರು ಅಕ್ಟೋಬರ್ 30 ರಂದು ಬಿಲಾಸ್‌ಪುರ ಮತ್ತು ಸೋಲನ್‌ನಲ್ಲಿ ತಮ್ಮ ನಿಗದಿಯಾಗಿದ್ದ ಸಭೆಗಳನ್ನು ರದ್ದುಗೊಳಿಸಿದರು.
2013 ರ ಆರಂಭದಲ್ಲಿ, ಬಿಜೆಪಿ ಅಧ್ಯಕ್ಷರ ಚುನಾವಣೆಯಲ್ಲಿಗಡ್ಕರಿ ಅವರು " ಎರಡನೇ ಬಾರಿಗೆ ಮರು ಅಯ್ಕೆಗೆ ತಯಾರಾಗಿದ್ದರು" [೭೦] ಆದರೆ 'ಪುರ್ತಿ' ಗುಂಪುಗಳ ಮೇಲಿನ ಹೂಡಿಕೆಗಳ ಮೇಲೆ ಆದಾಯ ತೆರಿಗೆ ಇಲಾಖೆಯ ದೋಷಾರೋಪಣೆಯು ಪಟ್ಟಿಯು ಅವರ ವ್ಯಕ್ತಿತ್ವಕ್ಕೆ ಹಾನಿ ಮಾಡಿದೆ ಎಂದು ಹಲವಾರು ಹಿರಿಯ ನಾಯಕರು ಆಕ್ಷೇಪಿಸಿದರು[೭೧]. ಹಾಗಾಗಿ ಗಡ್ಕರಿ ಮರು ಆಯ್ಕೆಯಾಗಲಿಲ್ಲ.[೭೨] ತನಿಖೆಯಲ್ಲಿ ತಾನು ನಿರಪರಾಧಿ ಎಂದು ಸಾಬೀತು ಪಡಿಸುವವರೆಗೆ ಹುದ್ದೆಯಿಂದ ಕೆಳಗಿಳಿಯುವುದಾಗಿ ಗಡ್ಕರಿ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದರು.[೭೩] ಕೆಲವು ಆರ್‌ಎಸ್‌ಎಸ್ ಕಾರ್ಯಕರ್ತರು ಅವರ ನಿರ್ಗಮನವು ಪಕ್ಶದ ಆಂತರಿಕ ಕಲಹದಿಂದಾಗಿದೆ ಎಂದಿದ್ದಾರೆ.[೭೪] ತರುವಾಯ, ಗಡ್ಕರಿ ಐಟಿ ಅಧಿಕಾರಿಗಳಿಗೆ ಬೆದರಿಕೆ ಹಾಕಿದರು, "ನಮ್ಮ ಪಕ್ಷ ಅಧಿಕಾರಕ್ಕೆ ಬಂದಾಗ ಅವರನ್ನು (ಐಟಿ ಅಧಿಕಾರಿಗಳು) ಉಳಿಸಲು ಚಿದಂಬರಂ ಅಥವಾ ಸೋನಿಯಾ ಇರುವುದಿಲ್ಲ"; ಈ ಹಿಂದೆ ಸಿಬಿಐ ಕಾಂಗ್ರೆಸ್‌ನ ಹರಾಜನ್ನು ಮಾಡುತ್ತಿತ್ತು ಮತ್ತು ಈಗ ಐಟಿ ಜನರು ಅದನ್ನು ಅನುಸರಿಸುತ್ತಿದ್ದಾರೆ ಎಂದು ಗಡ್ಕರಿ ಹೇಳಿದರು.[೭೫] ಐಟಿ ಅಧಿಕಾರಿಗಳ ಸಂಘವು ಈ ಟೀಕೆಗಳನ್ನು ಖಂಡಿಸಿತು ಮತ್ತು ಕ್ಷಮೆಯಾಚಿಸಲು ಒತ್ತಾಯಿಸಿತು.[೭೬]
ಅಂತಿಮವಾಗಿ, ಮೇ 2013 ರಲ್ಲಿ, ಆದಾಯ ತೆರಿಗೆ ಇಲಾಖೆಯು ಗಡ್ಕರಿ ಅವರ ಸಂಸ್ಥೆಗಳು 700 ಕೋಟಿ ರೂಗಳ ಬೇನಾಮಿ ಹೂಡಿಕೆಗಳು ಮತ್ತು ಇತರ ದಾರಿಗಳ ಮೂಲಕ ಅಗಿದೆ ಎನ್ನುವ ಅರೋಪವನ್ನು ಪರಾಮರ್ಶಿಸಿ ಗಡ್ಕರಿಯವರನ್ನು ಅರೋಪದಿಂದ ಮುಕ್ತಗೋಳಿಸಿತು. ಏಪ್ರಿಲ್ 30 ರಂದು. 2014 ರಲ್ಲಿ, ಆಗಿನ ಕಾಂಗ್ರೆಸ್ ಕೇಂದ್ರ ಸಚಿವ ಮನೀಶ್ ತಿವಾರಿ ಅವರು ಗಡ್ಕರಿಯವರು ಹಾಕಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಕ್ಷಮೆಯಾಚಿಸಿದರು. ಈ ಕ್ಷಮೆಯಾಚನೆಯು ಗಡ್ಕರಿ ಯಾವುದೇ ಪಾತ್ರವನ್ನು ವಹಿಸಿಲ್ಲ ಅಥವಾ ಹಗರಣದಲ್ಲಿ ಯಾವುದೇ ಪಾತ್ರವನ್ನು ಹೊಂದಿಲ್ಲ ಎಂದು ನ್ಯಾಯಾಂಗ ಆಯೋಗದ ಉಲ್ಲೇಖವನ್ನು ಆಧರಿಸಿದೆ.[೭೭] 13 ಮೇ 2014 ರಂದು, ಮಹಾರಾಷ್ಟ್ರ ರಾಜ್ಯದ ಆದಾಯ ತೆರಿಗೆ ಇಲಾಖೆ ಗಡ್ಕರಿ ಅವರ ಹೆಸರನ್ನು ತೆರವುಗೊಳಿಸಿತು ಮತ್ತು ಪ್ರಸ್ತುತ ಯಾವುದೇ ತನಿಖೆ ಬಾಕಿ ಉಳಿದಿಲ್ಲ ಎಂದು ಅವರಿಗೆ ಕ್ಲೀನ್ ಚಿಟ್ ನೀಡಿತು.[೬೭][೭೮][೭೯]
ನಿತಿನ್ ಗಡ್ಕರಿ ಅವರು ಕಾಂಚನ್ ಗಡ್ಕರಿ ಅವರನ್ನು ವಿವಾಹವಾಗಿದ್ದಾರೆ ಮತ್ತು ಅವರಿಗೆ ನಿಖಿಲ್, ಸಾರಂಗ್ ಮತ್ತು ಕೇತ್ಕಿ ಎಂಬ ಮೂವರು ಮಕ್ಕಳಿದ್ದಾರೆ.[೮೦][೮೧] ಅವರ ಹಿರಿಯ ಮಗ ನಿಖಿಲ್ ರುತುಜಾ ಪಾಠಕ್ [೮೨] ಅವರನ್ನು ವಿವಾಹವಾದರು ಮತ್ತು ಸಾರಂಗ್ ಗಡ್ಕರಿ ಮಧುರಾ ರೋಡಿ ಅವರನ್ನು ವಿವಾಹವಾದರು.[೮೩] ಗಡ್ಕರಿ ಮತ್ತು ಅವರ ಕುಟುಂಬದವರು ಸಸ್ಯಾಹಾರಿಗಳು[೧೨].
2019 ರ ಆಗಸ್ಟ್‌ನಲ್ಲಿ ಗಡ್ಕರಿ ಅವರು ಆರ್‌ಬಿಐ ಗವರ್ನರ್ ಅವರನ್ನು ವಜಾ ಮಾಡುವಂತೆ ಅಂದಿನ ಕೇಂದ್ರ ಹಣಕಾಸು ಸಚಿವರಿಗೆ ಸಲಹೆ ನೀಡಿದ್ದರು ಎಂಬ ಹೇಳಿಕೆ ವಿವಾದವನ್ನು ಸೃಷ್ಟಿಸಿತು. ಆರ್‌ಬಿಐ ಗವರ್ನರ್ ಹೊಂದಿಕೊಂಡು ಕೆಲಸ ಮಾಡುವುದಿಲ್ಲ ಮತ್ತು ಹಠವಾದಿ ಎಂಬುದು ಅವರ ಅರೋಪವಾಗಿತ್ತು[೮೪].
2009 ರಲ್ಲಿ, ಏಳು ವರ್ಷದ ಯೋಗಿತಾ ಠಾಕ್ರೆ ಅವರು ಗಡ್ಕರಿ ಒಡೆತನದ ಕಾರಿನಲ್ಲಿ ಅವರ ಮನೆಯ ಬಳಿ ದೇಹದಾದ್ಯಂತ ಮೂಗೇಟುಗಳೊಂದಿಗೆ ಶವವಾಗಿ ಪತ್ತೆಯಾಗಿದ್ದರು. ಮಹಾರಾಷ್ಟ್ರದ ಕ್ರಿಮಿನಲ್ ಇನ್ವೆಸ್ಟಿಗೇಶನ್ ಡಿಪಾರ್ಟ್ಮೆಂಟ್ (ಸಿಐಡಿ) ಪ್ರಕರಣವನ್ನು ಮುಚ್ಚಲು ಎರಡು ಬಾರಿ ಪ್ರಯತ್ನಿಸಿತು, ಆದರೆ ಸ್ಥಳೀಯ ನ್ಯಾಯಾಲಯಗಳು ತಿರಸ್ಕರಿಸಿದವು. ಬಾಲಕಿ ಆಕಸ್ಮಿಕವಾಗಿ ಕಾರಿನ ಬೂಟ್‌ಗೆ ಲಾಕ್ ಆಗಿದ್ದಾಳೆ ಮತ್ತು ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ ಎಂದು ಗಡ್ಕರಿ ಅವರ ಉದ್ಯೋಗಿಗಳು ಹೇಳಿದ್ದಾರೆ. ಆದರೆ ಬಾಲಕಿಯ ತಾಯಿ ಆಕೆಯನ್ನು ಕೊಲೆ ಮಾಡಿರುವುದಾಗಿ ಹೇಳಿದ್ದಾರೆ. ಯೋಗಿತಾಳ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಆಕೆಯನ್ನು ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ.[೮೫]
27 ಅಕ್ಟೋಬರ್ 2023 ರಲ್ಲಿ, ಗಡ್ಕರಿ ಎಂಬ ಮರಾಠಿ ಭಾಷೆಯ ಜೀವನಚರಿತ್ರೆ ಮಹಾರಾಷ್ಟ್ರದಲ್ಲಿ ಬಿಡುಗಡೆಯಾಯಿತು.[೮೬]
The Mhaiskars are Chitpavan, while Gadkari is a Deshastha Brahmin
In another mail of Friday, July 5, 2013, a detailed plan from Vaibhav Dange is forwarded to the captain by Sunil Bajaj, from Essar Services. This mail lists Nikhil and Sarang Gadkari as contact persons, and lists their mobile numbers. The planner adds, "Everybody is Vegetarian and prefers Asian vegetarian that is Indian Veg, Chinese Veg etc."
Mr Gadkari is full of ideas about development and food. Had it not been politics, he perhaps could have been one of the best food critics. His stout and rather over-nourished figure though stands testimony to his fondness for food, it actually doesn't tell a complete story. An authority on pure vegetarian and Maharashtrian food, Nitin equally loves to take his friends on culinary trips